ಆ್ಯಪ್ನಗರ

ನೀರು ಜಾಸ್ತಿ ಕುಡಿದರೆ ಈ ಸಮಸ್ಯೆ ಕಾಡುವುದು

ನೀರು ಕಡಿಮೆ ಕುಡಿದರೆ ಮಾತ್ರವಲ್ಲ ಅತೀ ಹೆಚ್ಚು ಕುಡಿದರು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ, ನೀರು ಕಡಿಮೆ ಕುಡಿದರೆ ನಿರ್ಜಲೀಕರಣ ಉಂಟಾದರೆ ನೀರು ಅಧಿಕ ಕುಡಿಯುವುದರಿಂದ ಕೂಡ ಆರೋಗ್ಯ ಸಮಸ್ಯೆ ಉಂಟಾಗುವುದು.

TIMESOFINDIA.COM 10 May 2019, 3:10 pm
ನಮ್ಮ ತೂಕಕ್ಕೆ ಸರಿಹೊಂದುವಂತೆ ನೀರು ಕುಡಿಯಬೇಕೆಂದು ತಜ್ಞರು ಹೇಳುತ್ತಾರೆ, ನೀರು ಅತ್ಯಧಿಕ ಕುಡಿಯುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆಯಾಗಿ ಆರೋಗ್ಯ ಸಮಸ್ಯೆ ಉಂಟಾಗುವುದು. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಾಗುವ ಈ ಬದಲಾವಣೆಯನ್ನು ಗಮನಿಸಿ.
Vijaya Karnataka Web water


ಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಉಂಟಾಗುವುದು
ಮೂತ್ರದ ಬಣ್ಣ ಸ್ವಲ್ಪವೂ ಹಳದಿ ಇರದಿದ್ದರೆ ನಿಮ್ಮ ದೇಹಕ್ಕೆ ನೀರಿನಂಶ ಸಾಕು ಎಂದರ್ಥ. ನೀರು ಅಗತ್ಯ ಮೀರಿ ಕುಡಿದರೆ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ.

ತಲೆಸುತ್ತು, ವಾಂತಿ
ಅಗತ್ಯ ಮೀರಿ ನೀರು ಕುಡಿದರೆ ತಲೆಸುತ್ತು, ವಾಂತಿ ಉಂಟಾಗುವುದು.

ತಲೆನೋವು
ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಮೆದುಳಿನ ನರಕ್ಕೆ ಒತ್ತಡ ಬಿದ್ದು ತಲೆನೋವು ಕಾಣಿಸಿಕೊಳ್ಳುವುದು.

ತುಟಿ, ಕೈಯಲ್ಲಿ ಊತ
ದೇಹದಲ್ಲಿ ನೀರಿನಂಶ ಅಧಿಕವಾದರೆ ಮುಖ ಊದಿಕೊಳ್ಳುವುದು.

ಸ್ನಾಯು ಸೆಳೆತ
ಅತ್ಯಧಿಕ ನೀರು ಕುಡಿಯುವುದರಿಂದ ಸ್ನಾಯು ಸೆಳೆತ ಸಮಸ್ಯೆ ಕಾಣಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ