ಆ್ಯಪ್ನಗರ

ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವ ಸಿಟ್ರಸ್ ಜ್ಯೂಸ್ ಆರೋಗ್ಯಕ್ಕೆ ಬೆಸ್ಟ್!

ಕೇವಲ ರೋಗ ನಿರೋಧಕ ಶಕ್ತಿಯ ದೃಷ್ಟಿಯಿಂದ ಮಾತ್ರವಲ್ಲದೆ ಹಲವಾರು ಆಯಾಮಗಳಲ್ಲಿ ಸಿಟ್ರಸ್ ಹಣ್ಣುಗಳು ನಮಗೆ ಪ್ರಯೋಜನಕಾರಿ.

Vijaya Karnataka Web 29 Oct 2021, 9:54 am
ಕೋವಿಡ್ 19 ಸಂಕಷ್ಟ ಕಾಲ ಇರುವ ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾದದ್ದು, ಪ್ರತಿಯೊಬ್ಬರ ಕರ್ತವ್ಯ. ಇದಕ್ಕಾಗಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಯಾವುದೇ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡಬೇಕು.
Vijaya Karnataka Web try citrus foods to have strong immunity
ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುವ ಸಿಟ್ರಸ್ ಜ್ಯೂಸ್ ಆರೋಗ್ಯಕ್ಕೆ ಬೆಸ್ಟ್!


ವಿಟಮಿನ್ ಸಿ ಅಂಶ ನಮ್ಮ ದೇಹದಲ್ಲಿ ಆಂಟಿಆಕ್ಸಿಡೆಂಟ್ ರೂಪದಲ್ಲಿ ಕೆಲಸ ಮಾಡುತ್ತದೆ. ಇದರಿಂದ ಫ್ರೀ ರಾಡಿಕಲ್ ಅಂಶಗಳು ನಮ್ಮ ದೇಹದ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ.

ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದರೆ ಕಾಯಿಲೆಗಳು ದೂರ

ಇಂತಹ ಸಂದರ್ಭದಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕೂಡ ತನ್ನಿಂತಾನೇ ಹೆಚ್ಚಾಗುತ್ತದೆ. ಸಾಧ್ಯವಾದರೆ ನಾವು ಆಗಾಗ ನಿಂಬೆ ಹಣ್ಣಿನ ಜ್ಯೂಸ್, ಮೋಸಂಬಿ ಹಾಗೂ ಕಿತ್ತಳೆ ಹಣ್ಣಿನ ಜ್ಯೂಸ್ ಇತ್ಯಾದಿಗಳನ್ನು ಸೇವನೆ ಮಾಡಬೇಕು.

ಆರೋಗ್ಯ ತಜ್ಞರು ಹೇಳುವ ಪ್ರಕಾರ

  • ಆರೋಗ್ಯ ತಜ್ಞರು ಹೇಳುವ ಹಾಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿದ್ದರೆ, ಸಣ್ಣ ಪುಟ್ಟ ಯಾವುದೇ ಕಾಯಿಲೆಗಳು ನಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ.
  • ನೈಸರ್ಗಿಕ ರೂಪದ ಕಿತ್ತಳೆ ಹಣ್ಣು, ನಮ್ಮ ದೇಹಕ್ಕೆ ಈ ವಿಷಯದಲ್ಲಿ ಹೆಚ್ಚು ಪ್ರಯೋಜನಕಾರಿ. ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳು

ದೇಹದಲ್ಲಿ ನೀರಿನ ಅಂಶದ ಕೊರತೆ ಇರುವುದಿಲ್ಲ

  • ಹೆಚ್ಚಿನ ಪ್ರಮಾಣದ ನೀರಿನ ಅಂಶವನ್ನು ಒಳಗೊಂಡ ಆಹಾರ ಪದಾರ್ಥಗಳನ್ನು ನಾವು ಸೇವನೆ ಮಾಡಲು ಮುಂದಾದಾಗ ನಮ್ಮ ದೇಹದಲ್ಲಿ ನೀರಿನಂಶದ ಸಮತೋಲನತೆ ಕಾಯ್ದುಕೊಳ್ಳುತ್ತದೆ.
  • ಇದರಿಂದ ಅಪಾರ ಪ್ರಮಾಣದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ನಮ್ಮ ದೇಹದಲ್ಲಿ ಆರೋಗ್ಯಕರವಾಗಿ ಕೆಲಸ ಮಾಡುತ್ತವೆ. ನಿರ್ಜಲೀಕರಣ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

  • ವಿಟಮಿನ್ ಸಿ ಅಂಶ ಹೆಚ್ಚಾಗಿ ಒಳಗೊಂಡಿರುವ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದರಿಂದ ಅಥವಾ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಹಲವು ವಿಧದ ಸೋಂಕುಗಳಿಂದ ನಮ್ಮನ್ನು ರಕ್ಷಣೆ ಮಾಡಲು ಮುಂದಾಗುತ್ತದೆ. ಇದರಿಂದ ಪದೇ ಪದೇ ಹುಷಾರು ತಪ್ಪುವ ಸಾಧ್ಯತೆ ಇರುವುದಿಲ್ಲ.
  • ಅದರಲ್ಲೂ ಈಗಿನ ಮಳೆಗಾಲ ಹಾಗೂ ಚಳಿಗಾಲದ ಆರಂಭದ ಹೊಸ್ತಿಲಿನಲ್ಲಿ ಇರುವ ನಮಗೆ ಇವುಗಳು ತುಂಬಾ ಅವಶ್ಯಕವಾಗಿವೆ ಕೂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ