ಆ್ಯಪ್ನಗರ

World Heart Day: ವಾಕಥಾನ್‌ ಕೂಡ ಅಪಾಯಕಾರಿ!

ವಾಕ್‌ಥಾನ್ ಕೂಡ ಕೆಲವೊಮ್ಮೆ ಹೃದಯಕ್ಕೆ ಅಪಾಯಕಾರಿಯಾಗುವ ಸಾಧ್ಯತೆಗಳಿವೆ.

Vijaya Karnataka 29 Sep 2018, 10:36 am
'ವಾರ್ಮ್‌ ಅಪ್‌'ನಿಂದ ರಕ್ತ ಸಂಚಾರದ ವೇಗವನ್ನು ಹೆಚ್ಚಿಸದೆ ಒಂದೇ ಬಾರಿಗೆ ವ್ಯಾಯಾಮ ಮಾಡಿದಾಗ ಹೃದಯಾಘಾತವಾಗುವ ಸಂಭವ ಹೆಚ್ಚು ಎನ್ನುತ್ತಾರೆ ಡಾ.ಶ್ರೀವತ್ಸ ನಾಡಿಗ್‌.
Vijaya Karnataka Web wALKATHAN


ವಿಶ್ವ ಹೃದಯ ದಿನಾಚರಣೆ ಅಂಗವಾಗಿ 'ವಿಜಯ ಕರ್ನಾಟಕ' ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನ್ನಾಡುತ್ತಿದ್ದ ಹೃದ್ರೋಗ ತಜ್ಞ ವಾತ್ಸವ್, ''ಯಕ್ಷಗಾನದಲ್ಲಿ ಕುಣಿಯುವವರು ಕೂಡ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ಪ್ರತಿ ದಿನ ನಿಯಮಿತ ವ್ಯಾಯಾಮ ಮಾಡದೆ ಒಂದೇ ಬಾರಿಗೆ ಹೆಚ್ಚಿನ ಚಟುವಟಿಕೆಗಳಿಗೆ ದೇಹವನ್ನು ಒಳಪಡಿಸಿದಾಗ ಹೃದಯಕ್ಕೆ ಹಾನಿಯಾಗುತ್ತದೆ. ಬೆಂಗಳೂರಿನಲ್ಲಿ ಆಗಾಗ್ಗೆ ವಾಕಥಾನ್‌, ಮ್ಯಾರಥಾನ್‌ ನಡೆಸಲಾಗುತ್ತದೆ. ಯಾವಾಗಲೂ ಓಡದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದೇ ಬಾರಿಗೆ ಓಡಿದರೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಬ್ಯಾಡ್ಮಿಂಟನ್‌, ಫುಟ್‌ಬಾಲ್‌ ಕ್ರೀಡೆಗಳಿಗೂ ಇದು ಅನ್ವಯಿಸುತ್ತದೆ. ಇಂತಹ ಯಾವುದೇ ಚಟುವಟಿಕೆ ಮಾಡುವ ಮುನ್ನ ಸಣ್ಣ ವ್ಯಾಯಾಮ ಮಾಡಿ ದೇಹವನ್ನು ವಾರ್ಮ್‌ ಅಪ್‌ ಮಾಡಬೇಕು. ಆಗ ಯಾವುದೇ ಸಮಸ್ಯೆಯಾಗುವುದಿಲ್ಲ,'' ಎಂದರು.

''ಕೆಲಸದ ಒತ್ತಡ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಅದರಲ್ಲೂ ಐಟಿ, ಬಿಟಿ ಉದ್ಯೋಗಿಗಳು ಹಗಲು ರಾತ್ರಿ ಎನ್ನದೆ ದುಡಿದಾಗ ಅತಿಯಾದ ಒತ್ತಡಕ್ಕೊಳಗಾಗುತ್ತಾರೆ. ಇಂತಹ ಸಮಯದಲ್ಲಿ ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳಬೇಕು,'' ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ