ಬಿಝಿ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲಿಕ್ಕೆ ಸಮಯ ಸಿಗುತ್ತಿಲ್ಲ ಎನ್ನುತ್ತೀರ? ಸದಾ ಫಿಟ್ನೆಸ್ನತ್ತ ಗಮನ ನೀಡುವ ಸಿಲೆಬ್ರಿಟಿಗಳಿಗೆ ಅದಕ್ಕೆಲ್ಲ ಸಮಯವಿದೆ ಎಂದುಕೊಳ್ಳಬೇಡಿ. ಅವರು ವಾರದ ಎಲ್ಲಾ ದಿನಗಳಲ್ಲಿ ವ್ಯಾಯಾಮಕ್ಕæ ಸಮಯ ಮೀಸಲಿಡುವುದಿಲ್ಲ. ಸುಮಾರು ನಾಲ್ಕು ದಿನ ವ್ಯಾಯಾಮ ಮಾಡುತ್ತಾರೆ. ಉಳಿದ ದಿನ ಏನೂ ಮಾಡಲಿಕ್ಕೆ ಆಗಿಲ್ಲವೆಂದರೆ ವಾಕಿಂಗ್ ಮಾಡುತ್ತಾರೆ. ಕತ್ರಿನಾ ಕೈಫ್, ಆಲಿಯಾ ಭಟ್, ಕರೀನಾ ಕಪೂರ್, ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಎಲ್ಲರೂ ಜಿಮ್ಗೆ ಹೋಗಲಿಕ್ಕೆ ಆಗದ್ದಾಗ ಅಥವಾ ವ್ಯಾಯಾಮ ಮಾಡಲು ಆಗದೆ ಹೋದಾಗ ಇರುವ ಸಮಯವನ್ನು ವಾಕಿಂಗ್ಗೆ ಮೀಸಲಿಡುತ್ತಾರಂತೆ. ಹೌದು ವಾಕ್ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಪ್ರಯೋಜನ: ನಿಮ್ಮ ಹೃದಯದ ಆರೋಗ್ಯ ಹೆಚ್ಚುತ್ತದೆ. ತೂಕ ಇಳಿಸಲು ಸಹಕಾರಿ. ಮಿದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ವಿಟಮಿನ್ ಡಿ ಸಿಗುತ್ತದೆ. ಒತ್ತಡ ನಿವಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಯಮಿತವಾಗಿ ವಾಕ್ ಮಾಡಿ
ಬಿಝಿ ಜೀವನಶೈಲಿಯಲ್ಲಿ ವ್ಯಾಯಾಮ ಮಾಡಲಿಕ್ಕೆ ಸಮಯ ಸಿಗುತ್ತಿಲ್ಲ ಎನ್ನುತ್ತೀರ?
Vijaya Karnataka 8 Feb 2018, 5:00 am