ಆ್ಯಪ್ನಗರ

ಕಲ್ಲಂಗಡಿ ಹಾಗೂ ಕರ್ಬೂಜ ಹಣ್ಣುಗಳಲ್ಲಿ ತೂಕ ಇಳಿಕೆಗೆ ಯಾವುದು ಸಹಕಾರಿ?

ಕಲ್ಲಂಗಡಿ ರಕ್ತದೊತ್ತಡ ಇರುವವರಿಗೆ ಅತ್ಯುತ್ತಮವಾದ ಹಣ್ಣಾಗಿದೆ. ಕರ್ಬೂಜದಲ್ಲಿ ವಿಟಮಿನ್‌ ಸಿ, ನಾರಿನಂಶ, ಸೋಡಿಯಂ ಇರುವುದರಿಂದ ಬೇಸಿಗೆಯಲ್ಲಿ ತಿನ್ನಲು ಸೂಕ್ತವಾದ ಹಣ್ಣಾಗಿದೆ' ಎಂದಿದ್ದಾರೆ.

TIMESOFINDIA.COM 17 May 2019, 10:33 am
ಕಲ್ಲಂಗಡಿ ಹಾಗೂ ಕರ್ಬೂಜ ಬೇಸಿಗೆಯಲ್ಲಿ ಸಿಗುವ ಸೀಸನ್‌ ಹಣ್ಣುಗಳಾಗಿವೆ. ಈ ಎರಡೂ ಹಣ್ಣುಗಳಲ್ಲಿ ಸಾಕಷ್ಟು ಆರೋಗ್ಯಕರ ಗುಣಗಳಿವೆ.
Vijaya Karnataka Web water melon


ತೂಕ ಇಳಿಕೆಗೆ ಯಾವ ಹಣ್ಣು ತಿನ್ನುವುದು ಒಳ್ಳೆಯದು ಎಂಬ ಪ್ರಶ್ನೆ ಅನೇಕರಲ್ಲಿದೆ. ಅಪೋಲೋ ಆಸ್ಪತ್ರೆಯ ನ್ಯೂಟ್ರಿಷಿಯನಿಸ್ಟ್‌ ಡಾ. ಪ್ರಿಯಾಂಕಾ ರೋಹ್ಟಗಿ 'ಕಲ್ಲಂಗಡಿಯಲ್ಲಿ ಲೈಕೋಪೆನೆ ಅಂಶ ಅಧಿಕವಿರುವುದರಿಂದ ಕಲ್ಲಂಗಡಿ ಕೆಂಪು ಬಣ್ಣದಲ್ಲಿರುತ್ತದೆ, ಲೈಕೋಪೆನೆ ಅತ್ಯುತ್ತಮವಾದ ಆ್ಯಂಟಿಆಕ್ಸಿಡೆಂಟ್‌ ಆಗಿದ್ದು ಈ ಅಂಶ ಕರ್ಬೂಜದಲ್ಲಿರುವುದಿಲ್ಲ. ಕಲ್ಲಂಗಡಿ ರಕ್ತದೊತ್ತಡ ಇರುವವರಿಗೆ ಅತ್ಯುತ್ತಮವಾದ ಹಣ್ಣಾಗಿದೆ. ಕರ್ಬೂಜದಲ್ಲಿ ವಿಟಮಿನ್‌ ಸಿ, ನಾರಿನಂಶ, ಸೋಡಿಯಂ ಇರುವುದರಿಂದ ಬೇಸಿಗೆಯಲ್ಲಿ ತಿನ್ನಲು ಸೂಕ್ತವಾದ ಹಣ್ಣಾಗಿದೆ' ಎಂದಿದ್ದಾರೆ.

ಈ ಎರಡೂ ಹಣ್ಣುಗಳನ್ನು ತೂಕ ಇಳಿಕೆಯ ಡಯಟ್‌ನಲ್ಲಿ ಸೇರಿಸಬಹುದೆಂದು ಡಾ. ಪ್ರಿಯಾಂಕಾ ರೋಹ್ಟಗಿ ಹೇಳಿದ್ದಾರೆ.

ಕಲ್ಲಂಗಡಿ ಹಾಗೂ ಕರ್ಬೂಜದಲ್ಲಿ 90% ನೀರಿನಂಶವಿದ್ದು ಎರಡೂ ಹಣ್ಣುಗಳು ತೂಕ ಇಳಿಕೆಗೆ ಸಹಕಾರಿ, ಬೇಸಿಗೆಯಲ್ಲಿ ಈ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ