ಆ್ಯಪ್ನಗರ

ಮೂಲಂಗಿ ಹಾಗೂ ಟರ್ನಿಪ್: ಒಂದೇ ರೀತಿ ಕಾಣುವ ಈ ತರಕಾರಿಗಳಲ್ಲಿ ಎಷ್ಟೆಲ್ಲಾ ಪ್ರಯೋಜನವಿದೆ

ತರಕಾರಿ ಕೊಳ್ಳಲು ಮಾರ್ಕೆಟ್’ಗೆ ತೆರಳಿದಾಗ ಅಂಗಡಿಯಲ್ಲಿ ನೀವು ಕೆಲವು ತರಕಾರಿಗಳನ್ನು ನೋಡುತ್ತೀರಿ. ಆದರೆ ಟರ್ನಿಪ್ ಮತ್ತು ಮೂಲಂಗಿ ಕೊಳ್ಳುವಾಗ ನಿಮಗೆ ಸ್ವಲ್ಪ ಗೊಂದಲವಾಗುವುದು ಗ್ಯಾರಂಟಿ. ಏಕೆಂದರೆ ಈ ಎರಡು ತರಕಾರಿಗಳು ನೋಡಲು ಒಂದಕ್ಕೊಂದು ಬಹಳ ಹೋಲುತ್ತವೆ.

Vijaya Karnataka Web 27 Feb 2021, 3:33 pm
ನಮಗೆ ಅನೇಕ ತರಕಾರಿಗಳು ನೋಡಲು ಒಂದೇ ರೀತಿ ಕಾಣುತ್ತವೆ. ಅದೆಷ್ಟೋ ಬಾರಿ ಮಾರುಕಟ್ಟೆಗೆ ಹೋದಾಗ ಕನ್ ಫ್ಯೂಸ್ ಆಗಿ,ಯಾವುದೋ ತರಕಾರಿಯ ಬದಲು ಇನ್ಯಾವುದೋ ತರಕಾರಿಯನ್ನು ತೆಗೆದುಕೊಂಡುಬಂದಿರುತ್ತೇವೆ. ಹೀಗಾಗುವುದು ಸಹಜ. ಸಾಮಾನ್ಯವಾಗಿ ಮೂಲಂಗಿಯನ್ನು ಎಲ್ಲರ ಮನೆಯಲ್ಲಿಯೂ ಬಳಸುತ್ತೇವೆ. ಹಾಗಾಗಿ ಹೆಚ್ಚೇನು ಅದರ ಪರಿಚಯ ಮಾಡಿಕೊಡುವ ಅವಶ್ಯಕತೆಯಿಲ್ಲ. ಆದರೆ ಮೂಲಂಗಿ ತರಹದ್ದೇ ಇನ್ನೊಂದು ತರಕಾರಿಯಿದೆ ಅದೇ ಟರ್ನಿಪ್.
Vijaya Karnataka Web ways in which radish and turnip are different
ಮೂಲಂಗಿ ಹಾಗೂ ಟರ್ನಿಪ್: ಒಂದೇ ರೀತಿ ಕಾಣುವ ಈ ತರಕಾರಿಗಳಲ್ಲಿ ಎಷ್ಟೆಲ್ಲಾ ಪ್ರಯೋಜನವಿದೆ


ಈ ಮೂಲಂಗಿ ಮತ್ತು ಟರ್ನಿಪ್‌’ಗಳು ಒಂದೇ ರೀತಿ ಕಾಣುವ ತರಕಾರಿಗಳು. ಆದರೆ ಎರಡು ತರಕಾರಿಗಳ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ಮೂಲಂಗಿಗಳು ರಾಫಾನಸ್ ಕುಲಕ್ಕೆ ಸೇರಿದವು, ಟರ್ನಿಪ್‌ಗಳು ಬ್ರಾಸಿಕಾ ಕುಲಕ್ಕೆ ಸೇರಿವೆ. ಅವಳಿ-ಜವಳಿ ತರಹ ಕಾಣುವ ಈ ತರಕಾರಿಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಮೂಲಂಗಿಗಳು ಟರ್ನಿಪ್‌’ಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಈ ಎರಡು ತರಕಾರಿಗಳ ನಡುವೆ ಇನ್ನೂ ಕೆಲವು ವ್ಯತ್ಯಾಸಗಳಿವೆ. ಅದೇನೆಂದು ನೋಡೋಣ ಬನ್ನಿ…

​ಗಾತ್ರದಲ್ಲಿ ವ್ಯತ್ಯಾಸ ಕಾಣಬಹುದು

ಈ ಎರಡು ತರಕಾರಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಟರ್ನಿಪ್ ಒಂದು ಬೇರು ತರಕಾರಿ. ಆದರೆ ಮೂಲಂಗಿಯು ಸಸ್ಯ ಪ್ರಭೇದವಾಗಿದೆ. ಮೂಲಂಗಿಗಳು ಅನೇಕ ಆಕಾರ ಮತ್ತು ಗಾತ್ರಗಳಲ್ಲಿ ಬರುತ್ತವೆ. ಹಾಗೆಯೇ ದೊಡ್ಡ ಪ್ರಭೇದಗಳ ಟರ್ನಿಪ್ ಅನ್ನು ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತದೆ.

ಇದನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಆದರೆ ವರ್ಷದುದ್ದಕ್ಕೂ ಸಂರಕ್ಷಿಸಬಹುದು. ಮೂಲಂಗಿಗಳು ಟರ್ನಿಪ್‌ಗಳಿಗಿಂತ ಚಿಕ್ಕದಾಗಿರುತ್ತವೆ. ಸಾಮಾನ್ಯವಾಗಿ ಗಾಢವಾದ, ಕಡುಗೆಂಪು ಚರ್ಮದ ಬಣ್ಣವನ್ನು ಹೊಂದಿರುತ್ತವೆ.

​ಯಾವುದರ ಪರಿಮಳ ಜಾಸ್ತಿ?

ಮೂಲಂಗಿ ಕುರುಕುಲಾಗಿರುತ್ತದೆ. ಟರ್ನಿಪ್ ಒಳ್ಳೆಯ ಪರಿಮಳವನ್ನು ಹೊಂದಿರುತ್ತದೆ. ಮೂಲಂಗಿಗಳಿಗಿಂತ ಟರ್ನಿಪ್‌ಗಳು ರುಚಿಯಲ್ಲಿ ಹೆಚ್ಚು ಘಾಟು ಇರುವುದಿಲ್ಲ. ಒಟ್ಟಾರೆಯಾಗಿ ಹೆಚ್ಚು ವ್ಯತ್ಯಾಸ ಕಾಣಿಸದಿದ್ದರೂ ಟರ್ನಿಪ್‌ಗಳು ಮತ್ತು ಮೂಲಂಗಿಗಳು ಭಿನ್ನವಾಗಿವೆ.

ಹೌದು, ಇವೆರಡರ ರುಚಿ, ಬೆಳೆಯುವ ರೀತಿ ಎರಡೂ ಬೇರೆ ಬೇರೆ. ಟರ್ನಿಪ್‌ಗಳು ಮತ್ತು ಮೂಲಂಗಿಗಳು ನೋಡಲು ಮತ್ತು ಆಕಾರದಲ್ಲಿ ಸಾಕಷ್ಟು ಹೋಲುತ್ತವೆ. ಆದರೆ ಈ ಎರಡೂ ಅವುಗಳ ರುಚಿ ಮತ್ತು ಪರಿಮಳದ ವಿಷಯ ಬಂದಾಗ ಸ್ವಲ್ಪ ವ್ಯತಿರಿಕ್ತತೆಯನ್ನು ಹೊಂದಿರುತ್ತವೆ.

ಪುದೀನಾವನ್ನು ಆಹಾರದ ಜೊತೆ ಸೇವಿಸುವುದರ ಲಾಭಗಳೇನು?


​ಅಡುಗೆಗೆ ಹೀಗೆ ಬಳಸುತ್ತಾರೆ

ಮೂಲಂಗಿಗಳನ್ನು ಹೆಚ್ಚಾಗಿ ಹಸಿಯಾಗಿ ಸೇವಿಸಲಾಗುತ್ತದೆ ಮತ್ತು ವಿವಿಧ ರೀತಿಯ ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಬೇಯಿಸಿದಾಗ, ಮೂಲಂಗಿಯ ಪರಿಮಳವು ಹೆಚ್ಚುತ್ತದೆ. ಅವು ಮೃದುವಾಗುತ್ತವೆ. ಮೂಲಂಗಿಗಳು ಹಸಿಯಾಗಿ ತಿಂದಾಗ ಉತ್ತಮ ರುಚಿಯನ್ನು ಹೊಂದಿದ್ದರೂ, ವಿವಿಧ ರೀತಿಯ ಖಾದ್ಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಇನ್ನೊಂದು ಮುಖ್ಯವಾದ ವಿಚಾರವೆಂದರೆ ಮೂಲಂಗಿಗಳನ್ನು ಅಡುಗೆ ಮಾಡುವುದರಿಂದ ಮೂಲಂಗಿಗಳ ರುಚಿ ಮತ್ತು ವಿನ್ಯಾಸ ಎರಡೂ ಗಮನಾರ್ಹವಾಗಿ ಬದಲಾಗುತ್ತದೆ.

ಮತ್ತೊಂದೆಡೆ, ಟರ್ನಿಪ್‌ಗಳನ್ನು ಹೆಚ್ಚಾಗಿ ರೋಸ್ಟ್ ಮಾಡಿ ಸೇವಿಸಲಾಗುತ್ತದೆ. ರೋಸ್ಟ್ ಮಾಡಿದ ಟರ್ನಿಪ್‌ಗಳು ಆರೋಗ್ಯಕರ. ಹಸಿಯಾಗಿ ಸೇವಿಸಿದಾಗ, ಟರ್ನಿಪ್‌’ಗಳು ಎಲೆಕೋಸುಗಳ ಸ್ವಾದ ಬರುತ್ತದೆ.

ಆದರೆ ಪರಿಮಳ ಮತ್ತು ರುಚಿ ಘಾಟು ಇರುವುದಿಲ್ಲ. ಒಟ್ಟಾರೆಯಾಗಿ, ಮೂಲಂಗಿಗೆ ಹೋಲಿಸಿದರೆ ಟರ್ನಿಪ್‌ಗಳು ಕಡಿಮೆ ರುಚಿಯಾಗಿ ಕಂಡುಬಂದರೂ, ಸರಿಯಾದ ಮಸಾಲೆ ಬಳಸಿ ಒಳ್ಳೆಯ ಭಕ್ಷ್ಯ ತಯಾರಿಸಬಹುದು.

​ಬೇಗ ಬೆಳೆಯುವುದು ಇದೇ

ಮೂಲಂಗಿಗಳನ್ನು ಕೇವಲ 20-22 ದಿನಗಳಲ್ಲಿ ಕೊಯ್ಲು ಮಾಡಬಹುದು. ಆದ್ದರಿಂದ ಇದನ್ನು ಹೆಚ್ಚು ಜನರು ಬೆಳೆಯಲು ಇಷ್ಟಪಡುವ ಜನಪ್ರಿಯ ಬೆಳೆಯಾಗಿದೆ. ಟರ್ನಿಪ್‌ಗಳು ಮೂಲಂಗಿಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಬೆಳೆಯಲು ಸುಮಾರು 60 ದಿನ ತೆಗೆದುಕೊಳ್ಳುತ್ತದೆ.

ನೋಡಲು ಒಂದೇ ತರಹ ಹೋಲುತ್ತವೆಯಾದರೂ, ಈ ಬೇರು ತರಕಾರಿಗಳನ್ನು ತೋಟದಲ್ಲಿ ಬೆಳೆಯುವಾಗ ಕೆಲವು ವಿಭಿನ್ನ ವ್ಯತ್ಯಾಸಗಳಿವೆ. ಆದರೆ ಮೂಲಂಗಿಗಳಿಗಿಂತ ಟರ್ನಿಪ್‌ಗಳು ರೋಗಕ್ಕೆ ಬೇಗ ತುತ್ತಾಗುತ್ತವೆ.

ತಾಜ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮವೇ?


​ಟರ್ನಿಪ್‌ನಲ್ಲಿರುವ ಆರೋಗ್ಯ ಪ್ರಯೋಜನಗಳು

ಟರ್ನಿಪ್‌ನಲ್ಲಿ ಬಹಳಷ್ಟು ಆಂಟಿಆಕ್ಸಿಡೆಂಟ್‌ಗಳು, ಖನಿಜ, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಎ, ಇ, ಸಿ, ಬಿ 3, ಬಿ 5 ಮತ್ತು ಬಿ 6 ನಂತಹ ಪೋಷಕಾಂಶಗಳಿಂದ ಕೂಡಿದೆ. ಟರ್ನಿಪ್ ಅನೇಕ ಪೋಷಕಾಂಶಗಳಿಂದ ಕೂಡಿದ್ದು, ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.

ನಿಮಗೆ ಜೀರ್ಣಕಾರಿ ಸಮಸ್ಯೆ ಇದ್ದರೆ ಟರ್ನಿಪ್ ತೆಗೆದುಕೊಳ್ಳಿ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಚಳಿಗಾಲದಲ್ಲಿ ನಿಮಗೆ ಶೀತ ಮತ್ತು ಕೆಮ್ಮಿನ ಸಮಸ್ಯೆ ಇದ್ದರೆ, ಟರ್ನಿಪ್ ಕತ್ತರಿಸಿ ಹುರಿದು ಸೇರಿಸಿ ಸೇವಿಸಿ. ಟರ್ನಿಪ್ ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.

​ಮೂಲಂಗಿಯಲ್ಲಿರುವ ಆರೋಗ್ಯ ಪ್ರಯೋಜನಗಳು

ಮತ್ತೊಂದೆಡೆ ಮೂಲಂಗಿ, ಫೈಬರ್, ಆಂಟಿಆಕ್ಸಿಡೆಂಟ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಅವು ಚಯಾಪಚಯ ಕ್ರಿಯೆ ಹೆಚ್ಚಿಸುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮೂಲಂಗಿ ಮಧುಮೇಹ, ರಕ್ತದೊತ್ತಡ, ಹೊಟ್ಟೆಯ ತೊಂದರೆ, ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳನ್ನು ದೂರವಿರಿಸುತ್ತದೆ. ಅಷ್ಟೇ ಅಲ್ಲ, ತಾಜಾ ಮೂಲಂಗಿಯನ್ನು ಸೇವಿಸುವುದರಿಂದ ಜೀರ್ಣಕಾರಿ ಶಕ್ತಿ ಹೆಚ್ಚುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ