ಆ್ಯಪ್ನಗರ

ಡಯಟ್‌ ಪ್ಲಾನ್‌: ಐಸ್‌ಕ್ರೀಂ ತಿಂದರೆ ತೂಕ ಹೆಚ್ಚಲ್ಲ!

ಡಯಟ್‌ ಪ್ಲಾನಿಂಗ್‌ ವೇಳೆ ಈ ನಿರ್ಧಾರ ಅನವಶ್ಯಕ. ಸತ್ಯ ಹೇಳಬೇಕೆಂದರೆ, ನಿಯಮಿತವಾಗಿ ಐಸ್‌ಕ್ರೀಂ ತಿನ್ನುವುದು ತೂಕ ಇಳಿಸಲು ಸಹಕಾರಿಯಂತೆ!

TIMESOFINDIA.COM 22 Apr 2019, 9:30 pm
ತೂಕ ಇಳಿಸುವ ಡಯಟ್‌ ಪ್ಲಾನ್‌ನಲ್ಲಿರುವವರು ಅನೇಕ ಕಟ್ಟ ಕಟ್ಟುಪಾಡುಗಳ ಜೀವನ ನಡೆಸುತ್ತಾರೆ. ತೂಕ ಇಳಿಯುವ ವರೆಗೆ ನಾನು ಎಣ್ಣೆ ಪದಾರ್ಥ ತಿನ್ನಲ್ಲ, ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳನ್ನು ಮುಟ್ಟುವುದಿಲ್ಲ ಇತ್ಯಾದಿ ಇತ್ಯಾದಿ..
Vijaya Karnataka Web Icecream


ಅದರಂತೆಯೇ ಈ ತಿನ್ನಬಾರದೆಂಬ ಆಹಾರಗಳ ಪಟ್ಟಿಯಲ್ಲಿ ಬಹುತೇಕರ ಫೇವರೆಟ್‌ ಐಸ್‌ಕ್ರೀಂನ್ನೂ ಸೇರಿಸುವುದಿದೆ!
ಡಯಟ್‌ ಪ್ಲಾನಿಂಗ್‌ ವೇಳೆ ಈ ನಿರ್ಧಾರ ಅನವಶ್ಯಕ. ಸತ್ಯ ಹೇಳಬೇಕೆಂದರೆ, ನಿಯಮಿತವಾಗಿ ಐಸ್‌ಕ್ರೀಂ ತಿನ್ನುವುದು ತೂಕ ಇಳಿಸಲು ಸಹಕಾರಿಯಂತೆ!

ನ್ಯಾಚುರಲ್‌ ಐಸ್‌ಕ್ರೀಂಗಳು ಈ ನಿಟ್ಟಿನಲ್ಲಿ ಹೆಚ್ಚು ಉಪಕಾರಿ ಎನ್ನಲಾಗಿದ್ದು, ಆಹಾರ ಪದಾರ್ಥಗಳಲ್ಲಿ ಸಂಯಮ ಇರಿಸಿಕೊಂಡು ಐಸ್‌ ಕ್ರೀಂ ತಿಂದಲ್ಲಿ, ತೂಕ ಇಳಿಕೆಯಲ್ಲಿ ಸಹಕಾರಿಯೇ ಆಗುತ್ತದೆ ಎಂದು ತಿಳಿದು ಬಂದಿದೆ.

ಹೇಗೆ ಸಾಧ್ಯ!
ಐಸ್‌ ಕ್ರೀಂನಲ್ಲಿರುವ ಅಂಶ, ನಿಮ್ಮಲ್ಲಿರುವ ಕೊಬ್ಬಿನಾಂಶವನ್ನು ಕರಗಿಸಲು ಸಹಕರಿಸುತ್ತದೆ. ಅಧಿಕ ಕ್ಯಾಲೋರಿಗಳನ್ನು ಕರಗಿಸುವಲ್ಲಿ ಐಸ್‌ಕ್ರೀಂ ಉತ್ತಮ ಸಾಥ್‌ ನೀಡುತ್ತದೆ. ಇಷ್ಟೇ ಅಲ್ಲ, ನಿಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲೂ ಇವು ಸಹಕಾರಿ ಎನ್ನಲಾಗಿದೆ. ಆದರೆ ಶಿಸ್ತು ಬದ್ಧ ಆಹಾರ ಹಾಗೂ ಜೀವನ ಪದ್ಧತಿ ರೂಪಿಸಿಕೊಳ್ಳುವುದು ಮಾತ್ರ ನಿಮ್ಮದೇ ಜವಾಬ್ದಾರಿ! ಲೊ-ಫ್ಯಾಟ್‌, ಹೈ ಫೈಬರ್‌ ಡಯಟ್‌ ಪ್ಲಾನ್‌ಗಳಲ್ಲಿ ಐಸ್‌ಕ್ರೀಂ ಬೆಸ್ಟ್‌ ಸಾಥ್‌ ನೀಡುತ್ತದೆ.

ಸ್ವೀಟ್‌ಗಳು ಡಯಟ್‌ ವೇಳೆ ಬೇಕೇ?
ಐಸ್‌ಕ್ರೀಂನ್ನು ಒಂದು ವಿಧವಾದ ಸ್ವೀಟ್‌ಗೆ ಹೋಲಿಸಲಾಗುತ್ತದೆ. ಕ್ರೀಂ ಜತೆಗೆ ಯಮ್ಮಿ ಐಸ್‌ಕ್ರೀಂ ಊಟದ ಬಳಿಕ ತೆಗೆದುಕೊಳ್ಳುವುದು ಹೆಚ್ಚು ಜನರ ಅಭ್ಯಾಸ. ಇದು ಉತ್ತಮ ಪದ್ದತಿ. ಉಳಿದ ಆಹಾರದ ವೇಳೆ ಕಟ್ಟುನಿಟ್ಟಿನ ಡಯಟ್‌ ಅನುಸರಿಸಿದರೆ, ಐಸ್‌ಕ್ರೀಂ ಇನ್ನುಳಿದ ಹೆಚ್ಚುವರಿ ಕೊಬ್ಬಿನಾಂಶವನ್ನು ಕೊರಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ಹಾಗೆಂದು ಇದು ವೈದ್ಯರ ಸಲಹೆಯಲ್ಲ. ತೂಕ ಇಳಿಸುವ ವೇಳೆ ವೈದ್ಯರ ಸಲಹೆ ಹಾಗೂ ವ್ಯಾಯಾಮ ತುಂಬಾ ಅಗತ್ಯ ಎಂಬುದನ್ನು ಮರೆಯಬಾರದು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ