ಆ್ಯಪ್ನಗರ

ರಾತ್ರಿಯಲ್ಲಿ ಕಾಲುಗಳ ಸೆಳೆತ ಉಂಟಾಗಲು ಕಾರಣಗಳೇನು ಮತ್ತು ಚಿಕಿತ್ಸೆ ಹೇಗೆ?

ಕೆಲವೊಂದು ಕಾರಣಗಳಿಂದ ನಮ್ಮ ಕಾಲುಗಳಲ್ಲಿ ರಾತ್ರಿ ಮಲಗಿ ನಿದ್ರಿಸುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಹಿಡಿದುಕೊಂಡಂತೆ ಭಾಸವಾಗಿ ನಮ್ಮನ್ನು ನಿದ್ರೆಯಿಂದ ಎಚ್ಚರಗೊಳಿಸುತ್ತದೆ.

Vijaya Karnataka Web 26 Oct 2020, 10:14 am
ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ನಾವು ಮಲಗಿ ಗಾಢವಾದ ನಿದ್ರೆ ಮಾಡುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಮ್ಮ ಕಾಲುಗಳಲ್ಲಿ ಮಂಡಿಗಳ ಹಿಂಭಾಗದ ಜಾಗದಲ್ಲಿ ಹಾವಿನ ರೀತಿ ನರಗಳು ಚರ್ಮದ ಮೇಲ್ಭಾಗಕ್ಕೆ ಬಂದಂತೆ ಭಾಸವಾಗಿ ವಿಪರೀತ ನೋವು ಕಂಡುಬಂದು ನಮ್ಮನ್ನು ನಿದ್ರೆಯಿಂದ ಎಚ್ಚರ ಗೊಳಿಸುತ್ತದೆ.
Vijaya Karnataka Web what causes leg cramps at night and how to prevent them
ರಾತ್ರಿಯಲ್ಲಿ ಕಾಲುಗಳ ಸೆಳೆತ ಉಂಟಾಗಲು ಕಾರಣಗಳೇನು ಮತ್ತು ಚಿಕಿತ್ಸೆ ಹೇಗೆ?


ಕೆಲವರಿಗೆ ವರ್ಷಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಈ ರೀತಿ ಆದರೆ ಇನ್ನು ಕೆಲವರಿಗೆ ಪದೇಪದೇ ಅಂದರೆ ಒಂದು ತಿಂಗಳಿನಲ್ಲಿ ಹಲವು ಬಾರಿ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಯುವಕ ಮತ್ತು ಯುವತಿಯರಿಗೆ ಹೋಲಿಸಿದರೆ ವಯಸ್ಸಾದವರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ.
  • ಕಾಲುಗಳ ಸೆಳೆತ ಉಂಟಾಗಲು ಕಾರಣಗಳನ್ನು ನೋಡುವುದಾದರೆ...
  • ಹೆಚ್ಚು ಹೊತ್ತು ಕುಳಿತುಕೊಂಡೆ ಕಾಲಕಳೆಯುವುದು
  • ಸರಿಯಾದ ಕ್ರಮದಲ್ಲಿ ಕುಳಿತುಕೊಳ್ಳದೆ ಇರುವುದು
  • ಕಾಲುಗಳ ಭಾಗದಲ್ಲಿ ಹೆಚ್ಚು ಒತ್ತಡ ಉಂಟಾಗುವಂತೆ ನಡೆದುಕೊಳ್ಳುವುದು
  • ದಿನದಲ್ಲಿ ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದು
  • ಕಾಂಕ್ರೀಟ್ ಅಥವಾ ಸಿಮೆಂಟ್ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಸ್ಯೆ ಸಾಮಾನ್ಯ.
  • ಇದರ ಜೊತೆಗೆ ಬೇರೆ ಕಾರಣಗಳನ್ನು ಗಮನಿಸುವುದಾದರೆ

ಕೆಲವೊಂದು ಔಷಧಿಗಳ ಅಡ್ಡ ಪರಿಣಾಮಗಳು

ನಾವು ತೆಗೆದುಕೊಳ್ಳುವ ಹಲವಾರು ಔಷಧಿಗಳು ನಮಗೆ ಗೊತ್ತಿಲ್ಲದೆ ಪರೋಕ್ಷವಾಗಿ ನಮ್ಮ ಆರೋಗ್ಯದ ಮೇಲೆ ವಿವಿಧ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ.

ಅವುಗಳಲ್ಲಿ ಕಾಲುಗಳ ಸೆಳೆತ ಕೂಡ ಒಂದಾಗಿರುತ್ತದೆ. ಕೆಲವು ಬಾರಿ ವೈದ್ಯರು ಔಷಧಿ ಕೊಡುವ ಮುಂಚೆ ಈ ವಿಚಾರವನ್ನು ರೋಗಿಯ ಜೊತೆ ಪ್ರಸ್ಥಾಪಿಸಿರುತ್ತಾರೆ.

ಸಮಾಧಾನಕರ ವಿಷಯ ಎಂದರೆ ಎಲ್ಲಾ ಔಷಧಿಗಳು ಅಡ್ಡ ಪರಿಣಾಮ ಬೀರುತ್ತವೆ ಎಂದು ಹೇಳಲು ಬರುವುದಿಲ್ಲ.

ಟೆಂಡನ್ ಭಾಗ ಚಿಕ್ಕದಾಗಲು ಮುಂದಾದರೆ

ನಮ್ಮ ಮೂಳೆಗಳಿಗೆ ಹಾಗೂ ಮಾಂಸಖಂಡಗಳಿಗೆ ಮಧ್ಯಭಾಗದಲ್ಲಿ ಇರುವ ಸಂಪರ್ಕ ಸೇತುವೆಯೇ ಟೆಂಡನ್. ನಮಗೆ ವಯಸ್ಸಾದಂತೆ ಇದು ತನ್ನ ಗಾತ್ರದಲ್ಲಿ ಚಿಕ್ಕದಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ ಮೂಳೆಗಳ ಹಾಗೂ ಮಾಂಸಖಂಡಗಳ ನಡುವೆ ಘರ್ಷಣೆ ಉಂಟಾಗಿ ಕಾಲುಗಳಲ್ಲಿ ಸೆಳೆತ ಕಂಡುಬರಬಹುದು.

ಗರ್ಭಾವಸ್ಥೆ

ಗರ್ಭಾವಸ್ಥೆಯಲ್ಲಿ ಒಬ್ಬ ಮಹಿಳೆಯು ತನ್ನ ದೇಹದ ತೂಕದ ಜೊತೆಗೆ ತನ್ನ ಮಗುವಿನ ತೂಕವನ್ನು ಹೊತ್ತಿರುತ್ತಾಳೆ.

ಇದು ಸಹಜವಾಗಿ ಆಕೆಯ ಕಾಲುಗಳ ಮೇಲೆ ಅತಿವವಾದ ಒತ್ತಡ ಉಂಟುಮಾಡುವ ಕಾರಣದಿಂದ ರಾತ್ರಿಯ ಸಮಯದಲ್ಲಿ ಮಲಗಿ ನಿದ್ರಿಸುತ್ತಿರಬೇಕಾದರೆ ಕಾಲುಗಳ ಭಾಗದಲ್ಲಿ ತುಂಬಿಕೊಂಡ ನೀರಿನ ಅಂಶ ಬೇರೆಡೆಗೆ ಹರಿಯಲು ಪ್ರಯತ್ನ ಪಡುವ ಸಂದರ್ಭದಲ್ಲಿ ಕಾಲುಗಳ ಭಾಗದಲ್ಲಿ ಸೆಳೆತ ಕಂಡು ಬರುವ ಸಾಧ್ಯತೆ ಇದೆ.

ಗರ್ಭಿಣಿಯರಿಗೆ ಕಾಡುವ ಪಾದಗಳ ಊತ ಸಮಸ್ಯೆಗೆ ಈ ಟಿಪ್ಸ್ ಅನುಸರಿಸಿ

ಕಾಲುಗಳ ಸೆಳೆತ ಪದೇ ಪದೇ ಉಂಟಾಗುತ್ತಿದ್ದರೆ ಅದಕ್ಕೆ ಚಿಕಿತ್ಸೆ ಹೇಗೆ?

ಕಾಲುಗಳ ಸೆಳೆತ ಅಷ್ಟೇನು ಗಂಭೀರ ಸಮಸ್ಯೆ ಅನಿಸದಿದ್ದರೂ ಇದನ್ನು ಸರಿಯಾದ ಸಮಯದಲ್ಲಿ ಪರಿಹಾರ ಮಾಡಿಕೊಳ್ಳದೆ ಹಾಗೆ ಬಿಟ್ಟರೆ ಮುಂಬರುವ ದಿನಗಳಲ್ಲಿ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ ಕಾಲುಗಳ ಸೆಳೆತವನ್ನು ಪರಿಹಾರ ಮಾಡಿಕೊಳ್ಳಲು ನಮಗೆ ಹಲವಾರು ಮಾರ್ಗಗಳಿವೆ.

ದೇಹಕ್ಕೆ ಹೆಚ್ಚು ನೀರಿನ ಅಂಶವನ್ನು ಒದಗಿಸಿ

ನಮ್ಮ ದೇಹವನ್ನು ಎಲ್ಲ ಸಂದರ್ಭದಲ್ಲೂ ನಿರ್ಜಲೀಕರಣ ಸಮಸ್ಯೆಯಿಂದ ಪಾರು ಮಾಡಿಕೊಳ್ಳುವುದು ನಮ್ಮ ದೇಹದಲ್ಲಿ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ ಎಂದು ತೋರುತ್ತದೆ. ಏಕೆಂದರೆ ನಮ್ಮ ದೇಹ ಮುಕ್ಕಾಲು ಪಾಲು ನೀರಿನ ಅಂಶದಿಂದಲೇ ತುಂಬಿದೆ.

ಉದಾಹರಣೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತ ದ್ರವದ ರೂಪದಲ್ಲಿರುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ದ್ರವದ ಅಂಶ ಹೆಚ್ಚಾಗಿದ್ದರೆ ಮಾಂಸಖಂಡಗಳ ಕಾರ್ಯಕ್ಷಮತೆ ಉತ್ತಮವಾಗಿ ನಡೆಯುತ್ತದೆ. ಇದರಿಂದ ನೋವು ನಿವಾರಣೆ ಮತ್ತು ಕಾಲುಗಳ ಸೆಳೆತ ದೂರವಾಗುತ್ತದೆ.

ಕಾಲುಗಳನ್ನು ಹೆಚ್ಚು ವಿಸ್ತಾರ ಮಾಡಿ

ಇದು ಕಾಲುಗಳಿಗೆ ಸಂಬಂಧಪಟ್ಟ ಒಂದು ವ್ಯಾಯಾಮ ಎಂದು ನೀವು ತಿಳಿದುಕೊಳ್ಳಬಹುದು. ನಿಮಗೆ ರಾತ್ರಿಯ ಸಮಯದಲ್ಲಿ ಪದೇಪದೇ ಕಾಲುಗಳ ಸೆಳೆತ ಕಂಡುಬರುವ ಸಾಧ್ಯತೆ ಇದ್ದರೆ, ನೀವು ಮಲಗಲು ಹೋಗುವ ಮುಂಚೆ ನಿಮ್ಮ ಕಾಲುಗಳು ಹಾಗೂ ತೊಡೆಯ ಭಾಗವನ್ನು ಸ್ವಲ್ಪ ವಿಸ್ತರಿಸಿ ವ್ಯಾಯಾಮದ ರೀತಿ ಸುಮಾರು 15 ನಿಮಿಷಗಳ ಕಾಲ ಮಾಡಿ. ಇದು ನಿಮ್ಮ ಕಾಲುಗಳ ಸೆಳೆತದ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಒಂದು ವೇಳೆ ಸೆಳೆತ ಉಂಟಾದ ಸಂದರ್ಭದಲ್ಲಿ ನಿಮಗೆ ಅಷ್ಟು ನೋವು ಇರುವುದಿಲ್ಲ.

ನಿಮ್ಮ ಚಪ್ಪಲಿಗಳನ್ನು ಬದಲಿಸಿ

ನೀವು ಒಂದು ವೇಳೆ ಬಹಳ ಹಳೆಯದಾದ ಚಪ್ಪಲಿಗಳನ್ನು ಅಥವಾ ಬೂಟುಗಳನ್ನು ಧರಿಸುತ್ತಿದ್ದರೆ, ನೀವು ನಡೆಯುವ ಸಂದರ್ಭದಲ್ಲಿ ನಿಮ್ಮ ಕಾಲುಗಳಿಗೆ ಮತ್ತು ಕಾಲಿನ ಭಾಗದ ಮಾಂಸಖಂಡಗಳಿಗೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಇದೆ.

ಇದರಿಂದ ರಾತ್ರಿಯ ಸಮಯದಲ್ಲಿ ಕಾಲುಗಳ ಸೆಳೆತ ಕಂಡುಬರುತ್ತದೆ. ಹಾಗಾಗಿ ಮೊದಲು ನೀವು ಬಳಕೆಮಾಡುವ ಚಪ್ಪಲಿ ಅಥವಾ ಬೂಟುಗಳನ್ನು ಬದಲಿಸುವ ಪ್ರಯತ್ನ ಮಾಡಿ.

ಉಪ್ಪಿನಕಾಯಿ ರಸ ಸೇವಿಸಿ

ನಿಮಗೆ ಕಾಲುಗಳ ಸೆಳೆತ ಆಗಾಗ ಕಂಡು ಬಂದು ನಿಮಗೆ ರಾತ್ರಿಯ ಸಮಯದಲ್ಲಿ ನಿದ್ರೆ ಮಾಡಲು ಬಿಡುತ್ತಿಲ್ಲ ಎನ್ನುವ ಪರಿಸ್ಥಿತಿ ಇದ್ದರೆ ನಿಮ್ಮ ದೇಹದ ರಕ್ತದ ಒತ್ತಡ ನಿಯಂತ್ರಣದಿಂದ ಕೂಡಿದ್ದರೆ, ನಿಮ್ಮ ಮನೆಯಲ್ಲಿ ಯಾವುದೇ ಉಪ್ಪಿನಕಾಯಿ ಇದ್ದರೂ ಅದರಿಂದ ಸ್ವಲ್ಪ ಜೂಸ್ ತಯಾರು ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಕೆಲವು ಸಂಶೋಧನೆಗಳ ಮೂಲಗಳು ಹೇಳುವ ಪ್ರಕಾರ ಉಪ್ಪಿನಕಾಯಿ ರಸ ಕಾಲುಗಳ ಭಾಗದಲ್ಲಿರುವ ಮಾಂಸಖಂಡಗಳಿಗೆ ಮತ್ತು ನರನಾಡಿಗಳಿಗೆ ತನ್ನ ಪ್ರತಿರೋಧದಿಂದ ಸೆಳೆತ ಉಂಟಾಗುವುದನ್ನು ತಪ್ಪಿಸುತ್ತದೆ.

ಊಟಕ್ಕೆ, ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಬಳಸಿ ಉಪ್ಪಿನಕಾಯಿ

ಬೇರೆ ಆಯಾಮದಲ್ಲಿ ಮಲಗಿಕೊಳ್ಳುವ ಪ್ರಯತ್ನ ಮಾಡಿ

ಕೆಲವರಿಗೆ ಪ್ರತಿದಿನ ಒಂದೇ ಕಡೆ ಅಂದರೆ ಒಂದೇ ಮಗ್ಗಲಿನಲ್ಲಿ ಮಲಗಿಕೊಳ್ಳುವ ಅಭ್ಯಾಸವಿರುತ್ತದೆ ಮತ್ತು ಇದರಿಂದಲೂ ಕಾಲುಗಳ ಸೆಳೆತ ಕಂಡುಬರುವ ಸಾಧ್ಯತೆ ಇರಬಹುದು.

ಈ ಸಂದರ್ಭದಲ್ಲಿ ನೀವು ಮಾಡಬೇಕಾದ ಒಂದು ಅಗತ್ಯ ಕೆಲಸ ಎಂದರೆ ನಿಮ್ಮ ಯಾವ ಕಾಲಿನಲ್ಲಿ ಹೆಚ್ಚು ಸೆಳೆತ ಕಂಡುಬರುತ್ತದೆ ಆ ಕಾಲಿನ ಭಾಗದ ಹಿಂದೆ ಒಂದು ದಿಂಬನ್ನು ಇಟ್ಟುಕೊಂಡು ಮಲಗಿ ನಿದ್ರಿಸಲು ಪ್ರಯತ್ನ ಮಾಡಿ. ಇದರಿಂದ ಕಾಲುಗಳ ಸೆಳೆತದ ಪ್ರಭಾವದಿಂದ ಸುಲಭವಾಗಿ ಪಾರಾಗಬಹುದು

ಕಾಲುಗಳಿಗೆ ಮಸಾಜ್ ಮಾಡಿ

ಈಗಂತೂ ಹಲವು ಗಿಡಮೂಲಿಕೆಯ ಎಣ್ಣೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ. ದೇಹಕ್ಕೆ ಯಾವ ಬಗೆಯ ಗಿಡಮೂಲಿಕೆ ಎಣ್ಣೆ ಸೂಕ್ತವಾಗುತ್ತದೆ ಅದನ್ನು ತಂದು ರಾತ್ರಿ ಮಲಗಿಕೊಳ್ಳುವ ಮುಂಚೆ ಸ್ವಲ್ಪ ಹೊತ್ತು ಮಸಾಜ್ ಮಾಡಿ 20 ನಿಮಿಷಗಳ ಕಾಲ ವಾಕಿಂಗ್ ಮಾಡಿ ಮಲಗಿ ನಿದ್ರಿಸುವ ಪ್ರಯತ್ನ ಮಾಡಿ.

ಹೀಗೆ ಮಾಡುವುದರಿಂದ ಕಾಲುಗಳ ಭಾಗದಲ್ಲಿನ ಮಾಂಸಖಂಡಗಳು ಮತ್ತು ನರಗಳು ವಿಶ್ರಾಂತ ಸ್ಥಿತಿಗೆ ಬಂದು ಕಾಲುಗಳ ಸೆಳೆತ ಉಂಟಾಗುವುದು ತಪ್ಪುತ್ತದೆ.

ಆಯುರ್ವೇದ ಮಸಾಜ್‌ನ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾದ್ರೆ ಅಚ್ಚರಿಪಡುವಿರಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ