ಆ್ಯಪ್ನಗರ

ಪಪ್ಪಾಯಿ ಹಾಲು ಎಂದರೇನು? ಅದರಿಂದ ಲಾಭಗಳು ಇದೆಯಾ?

ದನದ ಹಾಲಿನ ಹೊರತಾಗಿ ಸೋಯಾ ಹಾಲು ಹೀಗೆ ಇತರ ಕೆಲವೊಂದು ಹಾಲಿನ ಬಗ್ಗೆ ಕೇಳಿರಬಹುದು. ಈಗ ಪಪ್ಪಾಯಿ ಹಾಲು ಇಂದಿನ ದಿನಗಳಲ್ಲಿ ಜನಪ್ರಿಯವಾಗುತ್ತಿದೆ.

Authored byರಜತಾ | Vijaya Karnataka Web 23 Feb 2024, 11:01 am
ವಿದೇಶಗಳಲ್ಲಿ ಕೆಲವು ಕಡೆಗಳಲ್ಲಿ ಹಸಿ ಪಪ್ಪಾಯಿಯನ್ನು ಸಲಾಡ್ ಮಾಡಿಕೊಂಡು ತಿನ್ನುವರು. ಇದು ಅಲ್ಲಿ ತುಂಬಾ ಜನಪ್ರಿಯ ಕೂಡ. ನಮ್ಮ ದೇಶದಲ್ಲಿ ಕೂಡ ಹಸಿ ಪಪ್ಪಾಯಿಯನ್ನು ಬಳಸಿಕೊಂಡು ಕೆಲವೊಂದು ಬಗೆಯ ಖಾದ್ಯಗಳನ್ನು ತಯಾರಿಸುವರು. ಹಸಿ ಪಪ್ಪಾಯಿಯಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ಆದರೆ ಇದನ್ನು ಗರ್ಭಿಣಿಯರು ಖಂಡಿತವಾಗಿಯೂ ಬಳಕೆ ಮಾಡಬಾರದು. ಗರ್ಭಪಾತವಾಗುವ ಸಾಧ್ಯತೆಗಳು ಇರುವುದು. ಆದರೆ ಇಂದಿನ ದಿನಗಳಲ್ಲಿ ಹಸಿ ಪಪ್ಪಾಯಿ ಹಾಲಿನ ಬಳಕೆ ಬಗ್ಗೆ ವೈರಲ್ ವಿಡಿಯೋಗಳು ಹಾಗೂ ಸುದ್ದಿಗಳಿವೆ. ಇದರ ಬಗ್ಗೆ ಕೆಲವು ಗೊಂದಲಗಳು ಕೂಡ ಇವೆ.
Vijaya Karnataka Web what is raw papaya milkwhat are the benefits of it
ಪಪ್ಪಾಯಿ ಹಾಲು ಎಂದರೇನು? ಅದರಿಂದ ಲಾಭಗಳು ಇದೆಯಾ?


​ಹಾಗಾದರೆ ಹಸಿ ಪಪ್ಪಾಯಿ ಹಾಲು ಎಂದರೇನು?​

ಹಸಿ ಪಪ್ಪಾಯಿಯಿಂದ ಪಡೆಯುವಂತ ಹಾಲನ್ನು ಲ್ಯಾಟೆಕ್ಸ್ ಎಂದು ಕರೆಯಲಾಗುತ್ತದೆ. ಇದನ್ನು ಪ್ರೋಟಿಯೋಲೈಟಿಕ್ ಕಿಣ್ವ ಪಪೈನ್ ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವಂತಹ ಈ ಕಿಣ್ವವು ಉರಿಯೂ, ಜೀರ್ಣಕ್ರಿಯೆ ಇತ್ಯಾದಿಗಳಿಗೆ ಬಳಕೆ ಮಾಡಲಾಗುತ್ತದೆ.

​ಹಾಲನ್ನು ಹೇಗೆ ಪಡೆಯಲಾಗುತ್ತದೆ?​

ಗಿಡದಲ್ಲಿ ಇರುವಂತಹ ಹಸಿ ಪಪ್ಪಾಯಿಗಳಿಗೆ ಉದ್ದವಾಗಿ ಗೆರೆಗಳನ್ನು ಎಳೆದು, ಅಲ್ಯೂಮಿನಿಯಂ ಟ್ರೇ ಮೂಲಕ ಹಾಲನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಸಂಗ್ರಹಿಸಿದ ಬಳಿಕ ಅದನ್ನು ಸಮರ್ಪಕ ರೀತಿಯಲ್ಲಿ ಸಂಸ್ಕರಿಸಿಕೊಂಡು ಬಳಿಕ ಹಲವಾರು ಚಿಕಿತ್ಸೆಗೆ ಬಳಸಲಾಗುತ್ತದೆ.

ಇದನ್ನೂ ಓದಿ: ಹೆಸರು ಕಾಳು ಸೇವಿಸೋದ್ರಿಂದ ಶುಗರ್‌, ಕೊಲೆಸ್ಟ್ರಾಲ್, ತೂಕ ಕಂಟ್ರೋಲ್‌ನಲ್ಲಿರುತ್ತೆ

​ಪಪ್ಪಾಯಿ ಹಾಲಿನಲ್ಲಿರುವ ಪೋಷಕಾಂಶಗಳು​

ಪಪ್ಪಾಯಿ ಹಣ್ಣಿನಲ್ಲಿ ಇರುವಂತೆ ಇದರ ಹಾಲಿನಲ್ಲಿ ಕೂಡ ಹಲವಾರು ಬಗೆಯ ಪೋಷಕಾಂಶಗಳು ಇವೆ. ವಿಟಮಿನ್ ಸಿ ಇದರಲ್ಲಿ ಪ್ರಮುಖವಾಗಿದ್ದು, ಇದು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವುದು. ಅದೇ ರೀತಿಯಲ್ಲಿ ವಿಟಮಿನ್ ಎ ಅಂಶವು ದೃಷ್ಟಿಯನ್ನು ಸುಧಾರಿಸುವುದು.

ಪಪ್ಪಾಯದಲ್ಲಿ ವಿಟಮಿನ್ ಎ, ಸಿ ಮಾತ್ರವಲ್ಲದೆ, ಇ, ಫಾಲಟೆ, ಪೊಟಾಶಿಯಂ ಮತ್ತು ಡಯಟರಿ ಫೈಬರ್ ಅಂಶವು ಇದೆ. ಡಯಟರಿ ಫೈಬರ್ ಜೀರ್ಣಕ್ರಿಯೆ ಆರೋಗ್ಯವನ್ನು ಸುಧಾರಣೆ ಮಾಡುವುದು. ಪೊಟಾಶಿಯಂ ದೇಹದಲ್ಲಿ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು ಮತ್ತು ಪಪೈನ್ ಕಿಣ್ವವು ಜೀರ್ಣಕ್ರಿಯೆ ಸುಧಾರಣೆ ಮಾಡುವುದು ಮತ್ತು ಸಂಪೂರ್ಣ ಆರೋಗ್ಯವನ್ನು ಕಾಪಾಡುವುದು.

​ಜೀರ್ಣಕ್ರಿಯೆ ಗುಣಗಳು​

ಪಪ್ಪಾಯಿಯಲ್ಲಿ ಇರುವ ಪಪೈನ್ ಎನ್ನುವ ಅಂಶವು ಜೀರ್ಣಕ್ರಿಯೆ ವೃದ್ಧಿ ಮಾಡುವುದು. ಪಪ್ಪಾಯಿ ಹಾಲನ್ನು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸಮಸ್ಯೆಗಳಾಗಿರುವ ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆ ದೂರ ಮಾಡಬಹುದು

​ಪ್ರತಿರೋಧಕ ಶಕ್ತಿ​

ರೋಗಗಳ ವಿರುದ್ಧ ಹೋರಾಡಲು ಪ್ರತಿರೋಧಕ ಶಕ್ತಿಯು ಪ್ರಬಲವಾಗಿರಬೇಕು. ಪಪ್ಪಾಯಿಯಲ್ಲಿ ಇರುವ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ವೃದ್ಧಿ ಮಾಡುವುದು. ಇದು ಸೋಂಕು ನಿವಾರಣೆಗೆ ಸಹಕಾರಿ.

ಇದನ್ನೂ ಓದಿ: ನೀವು ಮೊಸರಿಗೆ ಉಪ್ಪು ಸೇರಿಸಿ ತಿನ್ತೀರಾ? ಸಕ್ಕರೆ ಸೇರಿಸಿ ತಿನ್ತೀರಾ?

​ಅಲರ್ಜಿ ಅಥವಾ ಅಸಹಿಷ್ಣುತೆ​

ಕೆಲವರಿಗೆ ಪಪ್ಪಾಯಿ ಮತ್ತು ಲ್ಯಾಕ್ಟೋಸ್ ನಿಂದ ಅಸಹಿಷ್ಣುತೆ ಉಂಟಾಗುವುದು ಇದೆ. ಇದರಿಂದ ಪಪ್ಪಾಯಿ ಹಾಲನ್ನು ಸೇವನೆ ಮಾಡುವ ಮೊದಲು ಅದರ ಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅಲರ್ಜಿ ಅಥವಾ ಅಸಹಿಷ್ಣುತೆ ಇದ್ದರೆ ಆಗ ಇದನ್ನು ಸೇವನೆ ಮಾಡದೆ ಇದ್ದರೆ ಒಳ್ಳೆಯದು.

​ಮಿತವಾಗಿ ಸೇವನೆ​

ಯಾವುದೇ ಮನೆಮದ್ದು ಅಥವಾ ಆಹಾರವಾದರೂ ಅದನ್ನು ಮಿತವಾಗಿ ಸೇವನೆ ಮಾಡಿದರೆ ಒಳ್ಳೆಯದು. ಪಪ್ಪಾಯಿ ಹಾಲನ್ನು ಕೂಡ ಸಮತೋಲಿತ ಆಹಾರ ಕ್ರಮದಲ್ಲಿ ಮಿತ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಹೆಚ್ಚಿನ ಕ್ಯಾಲರಿ ಮತ್ತು ಪೋಷಕಾಂಶಗಳು ಸೇವನೆ ಮಾಡಿದಂತೆ ಆಗುವುದು.

ಲೇಖಕರ ಬಗ್ಗೆ
ರಜತಾ
ರಜತ ಬಂಗೇರ ಅವರು ಒಂದು ದಶಕದ ಅನುಭವ ಹೊಂದಿರುವ ಅನುಭವಿ ಪತ್ರಕರ್ತರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಲೈಫ್‌ಸ್ಟೈಲ್ ಪತ್ರಕರ್ತರಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಆರೋಗ್ಯ , ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿರುವ ಇವರು ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ, ರಜತ ಅವರು ನಮ್ಮ ಲೈಫ್‌ಸ್ಟೈಲ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸ್ಥಾನದಲ್ಲಿ, ಉನ್ನತ-ಗುಣಮಟ್ಟದ ವಿಷಯವನ್ನು ಓದುಗರಿಗೆ ಒದಗಿಸುತ್ತಿದ್ದಾರೆ. ಉದಯೋನ್ಮುಖ ಪ್ರವೃತ್ತಿಗಳನ್ನು ಗುರುತಿಸುವ ಮತ್ತು ಉತ್ತಮ ಲೇಖನಗಳನ್ನು ರಚಿಸುವ ಇವರು ನಮ್ಮ ಸಂಸ್ಥೆಯ ಪ್ರಮುಖ ಲೈಫ್‌ಸ್ಟೈಲ್ ಪತ್ರಕರ್ತರಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಕೆಲಸವನ್ನು ಹೊರತುಪಡಿಸಿ, ರಜತ ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ತನ್ನ ಪ್ರಯಾಣದ ಮೂಲಕ ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವುದನ್ನು ಆನಂದಿಸುತ್ತಾರೆ. ಅವರು ಅತ್ಯಾಸಕ್ತಿಯ ನೃತ್ಯಗಾರ್ತಿಯೂ ಆಗಿದ್ದು, ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಆಸಕ್ತಿಯನ್ನು ಹೊಂದಿದ್ದಾರೆ. ಈ ಹವ್ಯಾಸಗಳು ಅವರ ಬರವಣಿಗೆಯನ್ನು ಪ್ರೇರೇಪಿಸುತ್ತವೆ... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ