ಆ್ಯಪ್ನಗರ

ಯಾವ ರೀತಿಯ ಬಾಳೆಹಣ್ಣು ತಿಂದರೆ ಒಳ್ಳೆಯದು?

ಯಾವುದೇ ಹಣ್ಣಾದರೂ ಅದರಲ್ಲಿ ಹಲವಾರು ಪೋಷಕಾಂಶಗಳು ಇವೆ. ಬಾಳೆಹಣ್ಣು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಯಾವ ರೀತಿಯ ಬಾಳೆಹಣ್ಣು ತಿನ್ನಬೇಕು ಎಂದು ತಿಳಿಯಿರಿ.

Agencies 15 Jun 2020, 7:26 pm
ಬಾಳೆಹಣ್ಣಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆ ಹಣ್ಣುಗಳು ಸರಿಸಾಟಿ ಆಗಲಾರದು. ತುಂಬಾ ಬಳಲಿರುವ ವೇಳೆ ಒಂದು ಬಾಳೆಹಣ್ಣು ತಿಂದರೆ ಅದು ನಮಗೆ ಶಕ್ತಿ ನೀಡುವುದು. ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿದ್ದು, ಇದರಲ್ಲಿನ ಪೋಷಕಾಂಶಗಳು ಅತ್ಯಧಿಕವಾಗಿದೆ.
Vijaya Karnataka Web Ripe Banana


ಬಾಳೆಹಣ್ಣು ಎಲ್ಲರ ಕೈಗೆಟಕುವಂತಹ ಹಣ್ಣಾಗಿದ್ದು, ಪ್ರತಿನಿತ್ಯವೂ ಒಂದು ಬಾಳೆಹಣ್ಣು ಸೇವಿಸಿದರೆ ಅದರಿಂದ ಆರೋಗ್ಯವು ಚೆನ್ನಾಗಿರುವುದು ಎಂದು ಹೇಳಲಾಗುತ್ತದೆ. ನಾವು ಸಾಮಾನ್ಯವಾಗಿ ಮಾರುಕಟ್ಟೆಗೆ ಹೋದ ವೇಳೆ ಹಲವಾರು ರೀತಿಯ ಬಾಳೆಹಣ್ಣುಗಳು ಇರುವುದು. ನಮಗೆ ಇದರಲ್ಲಿ ಯಾವುದನ್ನು ಖರೀದಿ ಮಾಡಬೇಕು ಎನ್ನುವ ಗೊಂದಲವು ನಿರ್ಮಾಣ ವಾಗುವುದು. ಇಂತಹ ಸಮಯದಲ್ಲಿ ನಾವು ನಿಮಗೆ ಯಾವ ಬಾಳೆಹಣ್ಣು ಸೂಕ್ತ ಎಂದು ಹೇಳಿಕೊಡಲಿದ್ದೇವೆ.

ಹಸಿರು ಬಾಳೆಕಾಯಿ ಅಂದರೆ ಕಾಯಿಯಾಗಿರುವಂತಹದ್ದು, ಇನ್ನು ಹಣ್ಣಾಗಿರುವ ಹಳದಿ ಬಾಳೆಹಣ್ಣು ಮತ್ತು ಮತ್ತೊಂದು ತುಂಬಾ ಹಣ್ಣಾಗಿ ಕಂದು ಬಣ್ಣದ ಬಿಂದುಗಳು ಬಿದ್ದಿರುವಂತಹದ್ದು. ಇವುಗಳಲ್ಲಿ ಯಾವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಿಳಿಯಬೇಕಾಗಿದೆ. ಈ ಮೂರು ಹಣ್ಣುಗಳು ತುಂಬಾ ಭಿನ್ನ ರುಚಿ ಹೊಂದಿರುತ್ತದೆ ಮತ್ತು ಅದೇ ರೀತಿಯಾಗಿ ಇದರಲ್ಲಿ ಇರುವಂತಹ ಪೋಷಕಾಂಶಗಳು ಕೂಡ ಭಿನ್ನವಾಗಿದೆ. ಈ ಲೇಖನವನ್ನು ಓದಿಕೊಂಡು ಯಾವ ಬಾಳೆಹಣ್ಣು ನಿಮಗೆ ಒಳ್ಳೆಯದು ಎಂದು ತಿಳಿಯಿರಿ.

ದಿನಕ್ಕೊಂದು ಬಾಳೆಹಣ್ಣು ತಿನ್ನಿ, ಯಾವ ಕಾಯಿಲೆಯೂ ಹತ್ತಿರಬರಲ್ಲ!

ಬಾಳೆಕಾಯಿ(ಹಸಿರು ಬಾಳೆಹಣ್ಣು)
ಹಸಿ ಬಾಳೆಹಣ್ಣಿನಲ್ಲಿ ನಿರೋಧಕ ಪಿಷ್ಠವಿದ್ದು, ಇದನ್ನು ಜೀರ್ಣಕ್ರಿಯೆ ವ್ಯವಸ್ಥೆಗೆ ವಿಘಟಿಸಲು ತುಂಬಾ ಕಷ್ಪಪಡಬೇಕಾಗುತ್ತದೆ. ಹಸಿ ಬಾಳೆಹಣ್ಣನ್ನು ತಿನ್ನುವುದು ಅಷ್ಟು ಸುಲಭವಲ್ಲ. ಆದರೆ ಕೆಲವೊಂದು ಖಾದ್ಯ ಮತ್ತು ಬೇರೆ ವಿಧಾನಗಳಿಂದ ಇದನ್ನು ತಿನ್ನಬಹುದು. ಹಸಿ ಬಾಳೆಹಣ್ಣು ತಿಂದರೆ ಆಗ ಹೊಟ್ಟೆ ತುಂಬಿದಂತೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಕಾಣಿಸಿಕೊಳ್ಳಬಹುದು. ಆದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ. ಗ್ಲೂಕೋಸ್ ಆಗಿ ಪರಿವರ್ತನೆ ಆಗುವಂತಹ ಪಿಷ್ಠವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವುದು. ಇದನ್ನು ಹೆಚ್ಚಾಗಿ ಚಿಪ್ಸ್ ಮಾಡಲು ಮತ್ತು ಖಾದ್ಯಗಳಿಗೆ ಬಳಕೆ ಮಾಡುವರು.

ಹಳದಿ ಬಾಳೆಹಣ್ಣು
ಹಸಿ ಬಾಳೆಹಣ್ಣಿನಲ್ಲಿ ಹೆಚ್ಚಿನ ಪಿಷ್ಠ ಮತ್ತು ಸಕ್ಕರೆ ಅಂಶವು ಕಡಿಮೆ ಇದೆ. ಆದರೆ ಹಳದಿ ಬಾಳೆಹಣ್ಣು ಇದಕ್ಕೆ ತದ್ವಿರುದ್ಧವಾಗಿದೆ. ಹಳದಿ ಬಾಳೆಹಣ್ಣು ತುಂಬಾ ನಯ ಹಾಗೂ ಸಿಹಿ ಆಗಿರುತ್ತದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಾಗಿದ್ದರೂ ಹೊಟ್ಟೆಗೆ ಒಳ್ಳೆಯದು. ಪಿಷ್ಠವು ಕಡಿಮೆ ಇರುವ ಕಾರಣದಿಂದಾಗಿ ಇದರಲ್ಲಿರುವಂತಹ ಪೋಷಕಾಂಶಗಳನ್ನು ದೇಹವು ಬೇಗನೆ ಹೀರಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಇರುವ ಕಾರಣದಿಂದಾಗಿ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಬಾಳೆಹಣ್ಣಿಗೆ ವಯಸ್ಸಾದಂತೆ ಹೋದಂತೆ ಅದರಲ್ಲಿನ ಪೋಷಕಾಂಶಗಳು ಕುಗ್ಗುತ್ತಾ ಹೋಗುತ್ತದೆ. ಇದರಿಂದ ಹಸಿ ಬಾಳೆಹಣ್ಣು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ.

ಕಂದು ಬಿಂದುಗಳಿರುವ ಬಾಳೆಹಣ್ಣು
ಕಂದು ಬಿಂದುಗಳು ಮೂಡಿರುವ ಬಾಳೆಹಣ್ಣು ತುಂಬಾ ಸಿಹಿ, ಹಳೆಯದ್ದು ಮತ್ತು ರುಚಿಕರ. ಇದರ ಮೇಲೆ ಮೂಡುತ್ತಿರುವ ಕಲೆಗಳನ್ನು ಅದಕ್ಕೆ ವಯಸ್ಸಾಗಿದೆ ಎಂದು ತೋರಿಸುತ್ತದೆ ಮತ್ತು ಅದರಲ್ಲಿನ ಪಿಷ್ಠವು ಸಕ್ಕರೆ ಆಗಿ ಪರಿವರ್ತನೆಗೊಳ್ಳುವುದು. ಇದರ ಸಿಪ್ಪೆಯಲ್ಲಿ ಎಷ್ಟು ಹೆಚ್ಚು ಕಲೆಗಳು ಇರುತ್ತದೆಯಾ ಅಷ್ಟು ಹೆಚ್ಚು ಸಿಹಿಯಾಗಿ ಇರುವುದು. ಇದರಲ್ಲಿ ಅತ್ಯಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದಾಗಿ ಇದು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಕಂದು ಬಿಂದು ಹೊಂದಿರುವಂತಹ ಬಾಳೆಹಣ್ಣಿನಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್(ಟಿಎನ್ ಎಫ್) ಇದೆ ಮತ್ತು ಇದು ಕ್ಯಾನ್ಸರ್ ಗೆ ಕಾರಣವಾಗುವಂತಹ ಗಡ್ಡೆಗಳನ್ನು ಕೊಲ್ಲುವುದು.

ಕಂದು ಬಾಳೆಹಣ್ಣು
ಇದು ಬಾಳೆಹಣ್ಣಿನ ಅಂತಿಮ ಘಟ್ಟವಾಗಿದ್ದು, ಇದರ ಬಳಿಕ ಇದನ್ನು ಬಳಸಬಾರದು. ಇದರಲ್ಲಿ ಅತಿಯಾಗಿ ಸಕ್ಕರೆ ಅಂಶವು ಇರುವ ಕಾರಣದಿಂಧಾಗಿ ಹೀಗೆ ಆಗುವುದು. ಕಾಯಿ ಬಾಳೆಹಣ್ಣಿನಲ್ಲಿ ಇರುವಂತಹ ಪಿಷ್ಠವು ಇಲ್ಲಿ ಸಕ್ಕರೆ ಆಗಿ ಪರಿವರ್ತನೆಗೊಂಡಿರುವುದು. ಬೇರೆ ಬಾಳೆಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಅತೀ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ ಇದೆ. ಬೇರೆ ಬಾಳೆಹಣ್ಣಿನಂತೆ ಇದನ್ನು ತಿನ್ನುವುದು ಸ್ವಲ್ಪ ಕಷ್ಟವಾದರೂ ಇದು ಕೇಕ್ ಬೇಕಿಂಗ್ ಗೆ ಒಳ್ಳೆಯದು.

ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು

ಕೊನೇ ಮಾತುನಿಮಗೆ ಯಾವ ಪೋಷಕಾಂಶಗಳು ಬೇಕು ಎನ್ನುವುದರ ಮೇಲೆ ಬಾಳೆ ಹಣ್ಣು ತಿನ್ನುವುದು ಅವಲಂಬಿಸಿರುವುದು. ನಿಮಗೆ ಮಧುಮೇಹವಿದ್ದರೆ ಆಗ ನೀವು ಹಸಿ ಬಾಳೆಹಣ್ಣು ತಿನ್ನಿ. ರುಚಿ ಮತ್ತು ಆರೋಗ್ಯಕ್ಕೆ ಬೇಕಿದ್ದರೆ ಆಗ ನೀವು ಹಳದಿ ಮತ್ತು ಕಂದು ಬಿಂದು ಇರುವ ಬಾಳೆಹಣ್ಣು ತಿನ್ನಿ. ಆಂಟಿಆಕ್ಸಿಡೆಂಟ್ ಬೇಕಿದ್ದರೆ ಆಗ ನೀವು ಕಂದು ಬಾಳೆಹಣ್ಣು ತಿನ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ