ಆ್ಯಪ್ನಗರ

ಯಾವ ಹಣ್ಣಿನ ಸೇವನೆ ಯಾವ ಸಂದರ್ಭದಲ್ಲಿ ಉತ್ತಮ?

ತಳಮಳ, ಸಂಕಟ, ಅಸಮಾಧಾನವಾಗುತ್ತಿದ್ದರೆ ಕಲ್ಲಂಗಡಿ ಹಣ್ಣು, ಕರ್ಬೂಜ, ಬಾಳೆ ಹಣ್ಣು, ನಿಂಬೆ, ದಾಳಿಂಬೆ ಮುಂತಾದ ತಂಪು ಹಣ್ಣುಗಳನ್ನು ಸೇವಿಸಿದರೆ ಮನಸ್ಸು ಶಾಂತವಾಗುತ್ತದೆ.

Agencies 11 May 2019, 3:09 pm
ವಿವಿಧ ಹಣ್ಣುಗಳ ಸೇವನೆ ದೇಹಕ್ಕೆ ಅತಿ ಮುಖ್ಯ. ವಿಟಮಿನ್‌ಗಳ ಆಗರವಾಗಿರುವ ಹಣ್ಣುಗಳು ಪಚನ ಕ್ರಿಯೆಯನ್ನು ಸರಳಗೊಳಿಸುತ್ತವೆ. ಚರ್ಮದ ಬಣ್ಣವನ್ನು ತಿಳಿಗೊಳಿಸುವ ಹಾಗೂ ವಯೋ ಸಹಜ ನೆರಿಗೆಗಳನ್ನು ತಡೆಯುವ ಶಕ್ತಿ ಕೂಡ ಕೆಲವು ಹಣ್ಣಿಗಿವೆ. ಯಾವ ಹಣ್ಣಿನ ಸೇವನೆ ಯಾವ ಸಂದರ್ಭದಲ್ಲಿ ಉತ್ತಮ ಎಂದು ತಿಳಿದುಕೊಂಡರೆ ಆಯಾ ಹಣ್ಣುಗಳ ಪ್ರಯೋಜನವನ್ನು ಸೂಕ್ತ ರೀತಿಯಲ್ಲಿ ಪಡೆದುಕೊಳ್ಳಬಹುದು.
Vijaya Karnataka Web Fruit


-ತಳಮಳ, ಸಂಕಟ, ಅಸಮಾಧಾನವಾಗುತ್ತಿದ್ದರೆ ಕಲ್ಲಂಗಡಿ ಹಣ್ಣು, ಕರ್ಬೂಜ, ಬಾಳೆ ಹಣ್ಣು, ನಿಂಬೆ, ದಾಳಿಂಬೆ ಮುಂತಾದ ತಂಪು ಹಣ್ಣುಗಳನ್ನು ಸೇವಿಸಿದರೆ ಮನಸ್ಸು ಶಾಂತವಾಗುತ್ತದೆ.

-ಸಕ್ಕರೆ ಕಾಯಿಲೆಯವರಿಗೆ ಎಲ್ಲಾ ಹಣ್ಣುಗಳ ಸೇವನೆ ಸೂಕ್ತವಲ್ಲ. ವೈದ್ಯರು ಸೂಚಿಸಿದ ಹಣ್ಣುಗಳನ್ನು ಮಾತ್ರ ಅವರು ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಬೇಕು.

-ಹಣ್ಣುಗಳನ್ನು ದ್ರವ ರೂಪದಲ್ಲಿ ಸೇವಿಸುವ ಬದಲು ಅದು ಇರುವ ರೂಪದಲ್ಲಿಯೇ ಸೇವಿಸಿ.

-ಬೇಸಿಗೆಯಲ್ಲಿ ಐಸ್‌ ಕ್ಯೂಬ್‌ಗಳ ಮೇಲೆ ಹಣ್ಣಿನ ಹೋಳುಗಳನ್ನು ಹರಿಡಿಸಿಟ್ಟು ತಿಂದರೆ ತಂಪಾಗಿರುತ್ತದೆ.

-ದಾಳಿಂಬೆ, ಕಲ್ಲಂಗಡಿ, ನೇರಳೆ, ಕವಳೆ ಮುಂತಾದ ಹಣ್ಣುಗಳಿಗೆ ಉಪ್ಪು ಸವರಿ ತಿಂದರೆ ವಿಶೇಷ ರುಚಿ ಸಿಗುತ್ತದೆ.

-ಪೈನಾಪಲ್‌, ಪೇರಳೆ ಹಣ್ಣುಗಳಿಗೆ ಉಪ್ಪು ಹಾಗೂ ಖಾರ ಪುಡಿ ಉದುರಿಸಿ ತಿಂದರೆ ರುಚಿ ಜಾಸ್ತಿ.

-ಆಯಾ ಕಾಲಕ್ಕೆ ಬರುವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ