ಆ್ಯಪ್ನಗರ

ನಾಲಿಗೆ ಸ್ವಚ್ಛತೆಯ ಬಗ್ಗೆ ನಿಮಗೆ ಕಾಳಜಿ ಇಲ್ಲವಾದರೆ ಈ ಸಮಸ್ಯೆಗಳು ನಿಮ್ಮ ಕಾಡುವುದು...

ಪ್ರತಿ ದಿನ ಹಲ್ಲಿನ ಜೊತೆಗೆ ನಾಲಿಗೆಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ನಾವಿಂದು ತಿಳಿಯೋಣ.

Vijaya Karnataka Web 31 Jul 2021, 9:02 am
ನಮ್ಮ ಬಾಯಿಯ ಮೂಲಕವೇ ಆಹಾರ ನಮ್ಮ ಹೊಟ್ಟೆ ಸೇರುತ್ತದೆ. ಪೋಷಕಾಂಶ ಭರಿತ ಆಹಾರಗಳ ಜೊತೆಗೆ ನಮ್ಮ ಬಾಯಿಯ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಗಮನ ನೀಡಬೇಕು. ಬಹುತೇಕ ಜನರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುತ್ತಾರೆ. ಆದರೆ ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡುವುದಿಲ್ಲ.
Vijaya Karnataka Web why tongue scraping is important
ನಾಲಿಗೆ ಸ್ವಚ್ಛತೆಯ ಬಗ್ಗೆ ನಿಮಗೆ ಕಾಳಜಿ ಇಲ್ಲವಾದರೆ ಈ ಸಮಸ್ಯೆಗಳು ನಿಮ್ಮ ಕಾಡುವುದು...


ತಜ್ಞರು ಹೇಳುವ ಪ್ರಕಾರ ನಾಲಿಗೆಯ ಸ್ವಚ್ಛತೆಯ ಬಗ್ಗೆ ಗಮನ ನೀಡದೆ ಇದ್ದಾಗ ಕೆಟ್ಟ ಬ್ಯಾಕ್ಟೀರಿಯಾಗಳು ನಾಲಿಗೆಯಲ್ಲಿ ಉಳಿದುಕೊಳ್ಳುತ್ತವೆ. ಅವು ಬಾಯಿ ವಾಸನೆ, ಬಾಯಿಗೆ ಸಂಬಂಧಿಸಿದ ಕಾಯಿಲೆ, ಮತ್ತು ಕೆಟ್ಟ ಉಸಿರಿನಂತಹ ಸಮಸ್ಯೆಗಳು ಹೆಚ್ಚುವುದು.

​ರುಚಿಯನ್ನು ತಿಳಿಸುವುದು

ದಿನಕ್ಕೆ ಎರಡು ಬಾರಿ ನಾಲಿಗೆಯನ್ನು ಸ್ವಚ್ಛಗೊಳಿಸಿದರೆ ನಾಲಿಗೆಯ ಸಂವೇದನೆಯ ಶಕ್ತಿ ಹೆಚ್ಚುವುದು. ನಾಲಿಗೆಯ ಸ್ವಚ್ಛತೆಯಿಂದ ಸತ್ತ ಜೀವಕೋಶಗಳು ಮತ್ತು ಅನಗತ್ಯವಾದ ವಸ್ತುಗಳನ್ನು ಸ್ವಚ್ಛವಾಗುತ್ತವೆ. ಆಗ ನಾಲಿಗೆಯ ಮೇಲೆ ಇರುವ ರುಚಿಯ ಗುಳ್ಳೆಗಳು ಆರೋಗ್ಯವಾಗಿರುತ್ತವೆ. ಸಿಹಿ, ಹುಳಿ, ಕಹಿಯಂತಹ ರುಚಿಯ ಸಂವೇದನೆಯನ್ನು ಸ್ಪಷ್ಟಗೊಳಿಸುವುದು.

​ಬ್ಯಾಕ್ಟೀರಿಯಾಗಳನ್ನು ತೆಗೆಯುವುದು

ಬಾಯಲ್ಲಿ ದುರ್ವಾಸನೆ, ಸಂತ ಕ್ಷಯ, ಬಾಯಿಯ ಆರೋಗ್ಯ ಹದಗೆಡುವುದು ಎಲ್ಲವೂ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಬಾಯಿ ಮತ್ತು ನಾಳಿಗೆಯ ಸ್ವಚ್ಛತೆ ಇಲ್ಲದೆ ಇರುವಾಗ ಈ ಬ್ಯಾಕ್ಟೀರಿಯಾಗಳ ಉತ್ಪತ್ತಿ ಹೆಚ್ಚುವುದು. ಜೊತೆಗೆ ಸತ್ತ ಜೀವಕೋಶಗಳೊಂದಿಗೆ ಬೆರೆತು ದುರ್ವಾಸನೆ ಬರುವಂತೆ ಮಾಡುವುದು. ಆಹಾರ ಸೇವಿಸಿದ ನಂತರ ಉಳಿದುಕೊಳ್ಳುವ ಅವಶೇಷ ಮತ್ತು ಸತ್ತ ಜೀವಕೋಶಗಳನ್ನು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಲಾಗುವುದು.

ಹಲ್ಲಿಗೆ ಕ್ಲಿಪ್ ಹಾಕಿಸಿದ ಮೇಲೆ ನೀವು ಅನುಸರಿಸಬೇಕಾದ ಕೆಲವು ಕ್ರಮಗಳು

​ಜೀರ್ಣ ಕ್ರಿಯೆ ಸುಧಾರಿಸುವುದು

ಆಹಾರ ಸೇವನೆ ಮತ್ತು ಜೀರ್ಣ ಕ್ರಿಯೆಯು ಬಾಯಿಯಿಂದ ಪ್ರಾರಂಭವಾಗುವುದು. ಲಾಲಾರಸದಲ್ಲಿ ಇರುವ ಕಿಣ್ವಗಳು ಕರುಳಿನ ಜೀರ್ಣಕ್ರಿಯೆಗೆ ಅನುಕೂಲವಾಗುವಂತೆ ಮಾಡುವುದು. ನಾಲಿಗೆ ಸ್ವಚ್ಛತೆಯಿಂದ ಇದ್ದಾಗ ಈ ಕ್ರಿಯೆಯು ಉತ್ತಮವಾಗಿ ನೆರವೇರುವುದು. ಹಾಗಾಗಿ ನಾಲಿಗೆಯನ್ನು ಆದಷ್ಟು ಸ್ವಚ್ಛ ಹಾಗೂ ಆರೋಗ್ಯವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಜೀರ್ಣ ಕ್ರಿಯೆಯು ಆರೋಗ್ಯಯುತವಾಗಿ ನಡೆಯುವುದು.

​ಅಂಗಗಳನ್ನು ಸಕ್ರಿಯಗೊಳಿಸುವುದು

ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ರಾತ್ರಿ ವೇಳೆಯಲ್ಲಿ ಬಾಯಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರ ಹಾಕಲು ಸಹಾಯವಾಗುವುದು. ನಾಲಿಗೆಯ ಸ್ವಚ್ಛತೆಯಿಂದ ಆಂತರಿಕ ಅಂಗಗಳು ನಿಧಾನವಾಗಿ ಸಕ್ರಿಯಗೊಳ್ಳುತ್ತವೆ. ಜೊತೆಗೆ ಜಾಗ್ರತವಾಗಿ ಕೆಲಸ ನಿರ್ವಹಿಸುತ್ತವೆ. ಪ್ರತಿ ದಿನದ ಮುಂಜಾನೆ ನಾಲಿಗೆಯನ್ನು ಸ್ವಚ್ಛಗೊಳಿಸುವುದರಿಂದ ದಿನದ ಆರಂಭವು ಉತ್ತಮ ಭಾವನೆಯಿಂದ ಪ್ರಾರಂಭವಾಗುತ್ತದೆ.

ನಾಲಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ

​ಕೆಟ್ಟ ಉಸಿರನ್ನು ತಡೆಯುವುದು

ನಾಲಿಗೆಯಲ್ಲಿ ಇರುವ ಸತ್ತ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾಗಳು ದುರ್ಗಂಧದಿಂದ ಕೂಡಿರುವ ಉಸಿರಿಗೆ ಕಾರಣವಾಗುತ್ತವೆ. ದಿನಕ್ಕೆ ಎರಡು ಬಾರಿ ನಾಳಿಗೆಯನ್ನು ಸ್ವಚ್ಛಗೊಳಿಸುವುದರಿಂದ ಬಾಯಲ್ಲಿ ಇರುವ ಮ್ಯುಟಾನ್ಸ್ ಸ್ಟ್ರೆಪ್ಟೋಕೊಕಿ ಮತ್ತು ಲ್ಯಾಕ್ಟೋಬಾಸಿಲ್ಲಿ ಬ್ಯಾಕ್ಟೀರಿಯಾಗಳು ನಿಯಂತ್ರಣಕ್ಕೆ ಒಳಗಾಗುತ್ತವೆ. ಆಗ ಕೆಟ್ಟ ಉಸಿರು ಮತ್ತು ಹಲ್ಲು ಕೊಳೆಯುವ ಸಮಸ್ಯೆ ನಿವಾರಣೆಯಾಗುವುದು.

​ರೋಗನಿರೋಧಕ ಶಕ್ತಿ ಹೆಚ್ಚುವುದು

ನಾಲಿಗೆಯನ್ನು ಸ್ವಚ್ಛಗೊಳಿಸುವುದು ಬಾಯಿಯ ನೈರ್ಮಲ್ಯ ಅಥವಾ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಒಂದು ವಿಧಾನ. ಬಾಯಿಯ ಸ್ವಚ್ಛತೆಯನ್ನು ಕಾಯ್ದುಕೊಂಡರೆ ರೋಗನಿರೋಧಕ ಶಕ್ತಿಯು ಹೆಚ್ಚುವುದು. ಬಾಯಲ್ಲಿ ವಿಷಕಾರಿ ಅಂಶ ಉಳಿದಕೊಂಡಾಗ ಬ್ಯಾಕ್ಟೀರಿಯಾಗಳು ಅವುಗಳಿಂದ ಪ್ರಚೋದನೆ ಪಡೆದುಕೊಳ್ಳುತ್ತವೆ. ಅಂತಹ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವುದರಲ್ಲಿಯೇ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಅದೇ ನಾಲಿಗೆಯ ಸ್ವಚ್ಛತೆ ಉತ್ತಮವಾಗಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ