ಆ್ಯಪ್ನಗರ

ದಿನವನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನಿಂದ ಶುರು ಮಾಡಬೇಕಂತೆ ಯಾಕೆ ಗೊತ್ತಾ?


ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಬೆಚ್ಚಗಿನ ನೀರಿನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಅವು ಯಾವುವು ನೋಡೋಣ.

Vijaya Karnataka Web 17 Sep 2022, 11:27 am
ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಒಂದು ಕಪ್ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯಲ್ಲ ಎನ್ನುತ್ತದೆ ಆಯುರ್ವೇದ. ಆಯುರ್ವೇದದ ಪ್ರಕಾರ ಬೆಳಗ್ಗೆ ಯಾವಾಗಲೂ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು ಎನ್ನಲಾಗುತ್ತದೆ. ಇದು ನಿಮ್ಮ ಕರುಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
Vijaya Karnataka Web why warm water is the best way to start your day
ದಿನವನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನಿಂದ ಶುರು ಮಾಡಬೇಕಂತೆ ಯಾಕೆ ಗೊತ್ತಾ?


​ಬಿಸಿ ನೀರು ಹಾಗೂ ತಣ್ಣಗಿನ ನೀರಿನ ಗೊಂದಲ

ನೀರು ಎಂದರೆ ಅದು ಬಿಸಿ ನೀರೋ, ತಣ್ಣಗಿನ ನೀರೋ ಎನ್ನುವ ಗೊಂದಲ ಹಲವರಲ್ಲಿದೆ. ಆಯುರ್ವೇದ ವೈದ್ಯರು ಮತ್ತು ಆರೋಗ್ಯ ತರಬೇತುದಾರರಾದ ಡಾ. ವರ ಯನಮಂದ್ರ ಅವರ ಪ್ರಕಾರ, ಯಾವಾಗಲೂ ಬೆಚ್ಚಗಿನ ನೀರಿನಿಂದ ತಮ್ಮ ದಿನವನ್ನು ಪ್ರಾರಂಭಿಸಬೇಕು ಏಕೆಂದರೆ ಅದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಇತರ ಬೆಳಗಿನ ಪಾನೀಯಗಳಿಗೆ ಹೋಲಿಸಿದರೆ ನಮ್ಮ ಅಂಗಾಂಶಗಳಲ್ಲಿ ತ್ವರಿತವಾಗಿ ಹೀರಲ್ಪಡುತ್ತದೆ.

ಇದನ್ನೂ ಓದಿ: ದಿನದಲ್ಲಿ ಎಷ್ಟು ಬಾರಿ ಊಟ ಮಾಡುವುದು ಒಳ್ಳೆಯದು ಗೊತ್ತಾ?


​ಆರೋಗ್ಯಕರ ಜ್ಯೂಸ್

ಇಂದು, ಪ್ರತಿಯೊಬ್ಬರೂ ಗೋಧಿ ಕಾಳು ಜ್ಯೂಸ್, ಮೊರಿಂಗಾ ಜ್ಯೂಸ್, ಬೆಚ್ಚಗಿನ ನಿಂಬೆ ಜ್ಯೂಸ್, ಹಾಗಲಕಾಯಿ ಜ್ಯೂಸ್ ಅಥವಾ ಸೋರೆಕಾಯಿ ಜ್ಯೂಸ್ ಅನ್ನು ಕುಡಿಯುತ್ತಾರೆ. ಆಶ್ಚರ್ಯವೇನಿಲ್ಲ, ಈ ರಸಗಳು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿವೆ ಮತ್ತು ಆರೋಗ್ಯಕರವೂ ಹೌದು.

ಈ ಜ್ಯೂಸ್‌ಗಳು ಪೌಷ್ಟಿಕಾಂಶದಿಂದ ತುಂಬಿರುತ್ತವೆ ಆದರೆ ಎಲ್ಲಾ ಜನರಿಗೆ ಸರಿಹೊಂದುವುದಿಲ್ಲ. ಎಲ್ಲರಿಗೂ ಸರಿಹೊಂದುವ ಒಂದು ಪಾನೀಯದ ವಿಷಯಕ್ಕೆ ಬಂದರೆ, ನೀರು ಅತ್ಯುತ್ತಮವಾಗಿದೆ ಮತ್ತು ಆಯುರ್ವೇದದ ಪ್ರಕಾರ, ಮೊದಲ ಪಾನೀಯವಾಗಿ ಯಾವಾಗಲೂ ಬೆಚ್ಚಗಿನ ನೀರನ್ನು ಸೇವಿಸಬೇಕು. ನಿಮ್ಮ ದಿನವನ್ನು ಪ್ರಾರಂಭಿಸಲು ಬೆಚ್ಚಗಿನ ನೀರು ಉತ್ತಮ ಮಾರ್ಗವಾಗಿದೆ.

​ಪಿತ್ತ ದೋಷವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ

ವ್ಯಕ್ತಿಯ ದೇಹದಲ್ಲಿನ ಅತಿಯಾದ ಶಾಖವು ಪಿತ್ತ ದೋಷವನ್ನು ಸೂಚಿಸುತ್ತದೆ. ಇದು ಜೀರ್ಣಾಂಗವನ್ನು ಮತ್ತಷ್ಟು ನಿಯಂತ್ರಿಸುವ ಚಯಾಪಚಯ ಕ್ರಿಯೆಯಲ್ಲಿ ಅಸ್ಥಿರತೆಯನ್ನು ತರುತ್ತದೆ. ಬೆಚ್ಚಗಿನ ನೀರು ವ್ಯಕ್ತಿಯ ಚಯಾಪಚಯ ಕ್ರಿಯೆಗೆ ಸ್ಥಿರತೆಯನ್ನು ತರುತ್ತದೆ. ಇದು ಪಿತ್ತ ದೋಷವನ್ನು ಮತ್ತಷ್ಟು ಸಮತೋಲನಗೊಳಿಸುತ್ತದೆ.

ಪಿತ್ತ ದೋಷವು ಸಮತೋಲಿತವಾಗಿದ್ದಾಗ, ವ್ಯಕ್ತಿಯ ಜೀರ್ಣಕಾರಿ ಬೆಂಕಿ ಆರೋಗ್ಯಕರವಾಗಿರುತ್ತದೆ. ಹೀಗಾಗಿ, ಪಿತ್ತ ದೋಷವನ್ನು ನಿಯಂತ್ರಿಸಲು, ಬೆಳಿಗ್ಗೆ ಪಾನೀಯವಾಗಿ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದನ್ನುಉತ್ತಮ ಎನ್ನಲಾಗುತ್ತದೆ.

ಇದನ್ನೂ ಓದಿ: ಹಾಲು ಮತ್ತು ತುಪ್ಪ ಸೇರಿಸಿ ಕುಡಿಯೋದ್ರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ


​ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ

ದಿನದ ಮೊದಲ ಪಾನೀಯವಾಗಿ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ತೂಕ ನಷ್ಟ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ಬೆಚ್ಚಗಿನ ನೀರು ಅಥವಾ 'ಉಷ್ಣ ಜಲ' ನಿಮ್ಮನ್ನು ಹಗುರಗೊಳಿಸುತ್ತದೆ. ಅಲ್ಲದೆ, ಬೆಚ್ಚಗಿನ ನೀರನ್ನು ಕುಡಿಯುವುದು ಕಫ ದೋಷವನ್ನು ದೇಹದಿಂದ ತೆಗೆದುಹಾಕುವ ಮೂಲಕ ಸುಧಾರಿಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯು ಇಡೀ ದಿನ ಬೆಚ್ಚಗಿನ ನೀರನ್ನು ಸೇವಿಸಿದಾಗ, ಅದು ಹಸಿವಿನ ಸಂಕಟವನ್ನು ನಿಗ್ರಹಿಸುತ್ತದೆ ಮತ್ತು ಕಡಿಮೆ ಜಂಕ್ ಫುಡ್ ಕಡಿಮೆ ತಿನ್ನುವಂತೆ ಮಾಡುತ್ತದೆ.

To Read in English Click:#AyurvedaTips: Here’s why warm water is the best morning drink to start the day


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ