ಆ್ಯಪ್ನಗರ

ಈ ವಿಚಿತ್ರ ಆಟಿಸಂ ಕಾಯಿಲೆಗೆ ಆಯುರ್ವೇದದಲ್ಲಿ ಪರಿಹಾರಗಳು ಉಂಟು!

ಮಾನಸಿಕವಾಗಿ ತೊಂದರೆಗೆ ಒಳಗಾಗಿರುವ ಆಟಿಸಂ ರೋಗಿಗಳು ಆಯುರ್ವೇದ ಡಾಕ್ಟರ್ ಹೇಳುವ ಹಾಗೆ ಈ ಕೆಳಗಿನ ಗಿಡಮೂಲಿಕೆಗಳನ್ನು ಸೇವಿಸತಕ್ಕದ್ದು.

Produced byಮನೋಹರ್ ಶೆಟ್ಟಿ | Vijaya Karnataka Web 21 Jun 2023, 10:57 am
ನೆನ್ನೆ ಮೊನ್ನೆಯವರೆಗೆ ಚೆನ್ನಾಗಿ ಮಾತನಾಡುತ್ತಿದ್ದ ವ್ಯಕ್ತಿ ಇಂದು ಏಕೋ ಬೇರೆ ತರಹ ಮಾತನಾಡಿದ ಅನುಭವ ವಾಗುತ್ತಿದೆ ಮತ್ತು ಇದು ನಿರಂತರವಾಗಿ ಮುಂದುವರೆಯುತ್ತಿದೆ ಎಂದು ನಿಮಗೇನಾದರೂ ಯಾರ ಬಗ್ಗೆಯಾದರೂ ಅನಿಸಿದರೆ ಅದು ಆಟಿಸಂ ಅಥವಾ ಸ್ವಲೀನತೆ ಸಮಸ್ಯೆ ಇರಬಹುದು!
Vijaya Karnataka Web world autism awareness day here are the herbs for autism problem as per doctors advice
ಈ ವಿಚಿತ್ರ ಆಟಿಸಂ ಕಾಯಿಲೆಗೆ ಆಯುರ್ವೇದದಲ್ಲಿ ಪರಿಹಾರಗಳು ಉಂಟು!


ವಿಪರ್ಯಾಸ ಎಂದರೆ ಇಂದಿನ ದಿನಗಳಲ್ಲಿ ಈ ಮಕ್ಕಳಲ್ಲಿ ಕೂಡ ಕಂಡು ಬರುತ್ತಿರುವುದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ. ಹೇಗೆಂದ್ರೆ ಮಗು ಸುತ್ತಮುತ್ತಲಿನ ಜನರೊಂದಿಗೆ ಅಥವಾ ತನ್ನದೇ ವಯಸ್ಸಿನ ಮಕ್ಕಳೊಂದಿಗೆ ಅವರ ಮಾತುಗಳಿಗೆ ತಕ್ಕಂತೆ ಪ್ರತಿಕ್ರಿಯೆ ನೀಡಲು ಕಷ್ಟ ಪಡುವಂತಾದರೆ ಅದು ಆಟಿಸಂ ಸಮಸ್ಯೆಯ ಲಕ್ಷಣ ಎನ್ನಬಹುದು. ಉದಾಹರಣೆಗೆ ಮಗು ಒಂದೇ ಪದವನ್ನು ಅಥವಾ ಯಾವುದಾದರೂ ಒಂದು ವಾಕ್ಯವನ್ನು ಪದೇ ಪದೇ ಹೇಳುವುದು, ಈ ಕಾಯಿಲೆಯ ಲಕ್ಷಣ ಎನ್ನಬಹುದು ಮುಂದೆ ಓದಿ...

ಏನಿದು ಆಟಿಸಂ ಕಾಯಿಲೆ

  • ಆಟಿಸಂ ಅಥವಾ ಸ್ವಲೀನತೆ ಕಾಯಿಲೆ ಅಂದರೆ ವ್ಯಕ್ತಿ ಮಾನಸಿಕವಾಗಿ ಸಮತೋಲನವಾಗಿಲ್ಲ ಜೊತೆಗೆ ಹೇಳಿದ್ದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದರ್ಥ.
  • ಡಾ. ಸ್ಮಿತಾ ಹೇಳುವ ಹಾಗೆ ಯಾರು ಆಟಿಸಂ ಸಮಸ್ಯೆ ಯಿಂದ ಬಳಲುತ್ತಿರುತ್ತಾರೆ ಅಂತಹವರು ಕೆಲವೊಂದು ಆಯುರ್ವೇದ ಗಿಡಮೂಲಿಕೆ ಗಳನ್ನು ಸೇವಿಸುವುದು ಅವಶ್ಯಕವಾಗಿದೆ. ಅವುಗಳೆಂದರೆ..

ಬ್ರಾಹ್ಮಿ

  • ಇದು ಮರೆತು ಹೋಗುವ ಮೆದುಳಿನ ತೊಂದರೆಯನ್ನು ಹೋಗ ಲಾಡಿಸುತ್ತದೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಇದೊಂದು ಸುರಕ್ಷಿತವಾದ ಮತ್ತು ಅಷ್ಟೇ ಪರಿಣಾಮಕಾರಿ ಯಾದ ಪರಿಹಾರವಾಗಿದೆ. ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಹಾಗೂ ವಯಸ್ಸಾದವರು ಬ್ರಾಹ್ಮಿ ಗಿಡಮೂಲಿಕೆಯನ್ನು ಸೇವಿಸಬಹುದು.
  • ಬ್ರಾಹ್ಮಿ ಎಲೆಯಿಂದ ವಯಸ್ಸಾದ ಕಲೆಯನ್ನು ಬಹುಬೇಗ ನಿವಾರಿಸಬಹುದು

Image Source: Timesofindia

ಶಂಖಪುಷ್ಪ

  • ಇದರ ಗಿಡಮೂಲಿಕೆ ಸತ್ವ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ.
  • ಅಂದರೆ ಮೆದುಳಿನ ಕಾರ್ಯ ಚಟುವಟಿಕೆಗಳಾದ ನೆನಪಿನ ಶಕ್ತಿ, ಬುದ್ಧಿವಂತಿಕೆ, ಚುರುಕುತನ ಇತ್ಯಾದಿಗಳಿಗಾಗಿ ಶಂಖಪುಷ್ಪಿ ನೆರವಾಗುತ್ತದೆ. ಆಟಿಸಂ ಸಮಸ್ಯೆ ಹೊಂದಿರುವ ಜನರಿಗೆ ಇದೊಂದು ಆಯುರ್ವೇದ ಔಷಧಿಯಾಗಿದೆ.​

ಅಶ್ವಗಂಧ

  • ನೆನಪಿನ ಶಕ್ತಿಯ ಕೊರತೆಯನ್ನು ಹೋಗಲಾಡಿಸುವಲ್ಲಿ ಅಶ್ವಗಂಧ ಪ್ರಮುಖ ಪಾತ್ರ ವಹಿಸುತ್ತದೆ.
  • ಉತ್ತಮ ಮೆದುಳಿನ ಆರೋಗ್ಯಕ್ಕೆ ಅಶ್ವಗಂಧ ಒಂದು ಹೇಳಿ ಮಾಡಿಸಿದ ಗಿಡಮೂಲಿಕೆ ಆಗಿದ್ದು, ನಿಮ್ಮ ಹತ್ತಿರದಲ್ಲಿ ಯಾರಾ ದರೂ ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದರೆ, ಆಯುರ್ವೇದ ತಜ್ಞರು ಹೇಳಿದಂತೆ ನೀವು ಇದನ್ನು ಅವರಿಗೆ ಕೊಡಬಹುದು.​

ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ!

ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು..

ಶತಾವರಿ ಬೇರು

  • ಮಾನಸಿಕ ಆತಂಕ ಮತ್ತು ಖಿನ್ನತೆಯನ್ನು ಹೋಗಲಾ ಡಿಸುವ ಶತಾವರಿ ಬೇರು ಆಟಿಸಂ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುವ ಗಿಡಮೂಲಿಕೆ ಆಗಿದೆ.
  • ಮೆದುಳಿನ ನೆನಪಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ ಮತ್ತು ಮೆದುಳಿನ ಚುರುಕುತನವನ್ನು ವೃದ್ಧಿಸುತ್ತದೆ.
ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ