ಆ್ಯಪ್ನಗರ

ಹೊಸ ವರ್ಷಕ್ಕೆ ಬಂತು ಗ್ರಾಫಿಕ್‌ ಡಿಸೈನ್‌ನ ಇ-ಗ್ರೀಟಿಂಗ್‌ ಕಾರ್ಡ್‌

ಸಾಮಾಜಿಕ ಜಾಲ ತಾಣಗಳಲ್ಲಿನ್ಯೂ ಯಿಯರ್‌ ಶುಭಾಶಯ ತಿಳಿಸುವ ಹೊಸ ಬಗೆಯ ಗ್ರಾಫಿಕ್‌ ಡಿಸೈನ್‌ ಇರುವಂತಹ ಇ-ಗ್ರೀಟಿಂಗ್‌ ಕಾರ್ಡ್‌ಗಳು ಇದೀಗ ಟ್ರೆಂಡಿಯಾಗಿದೆ. ಕಣ್ಮನ ಸೆಳೆಯುವ ಗ್ರೀಟಿಂಗ್‌ ಕಾರ್ಡ್‌: ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹೊಸ ವರ್ಷದ ಆಗಮನದ ಸಂಭ್ರಮ ಹೆಚ್ಚಾಗಿದೆ.

Agencies 28 Dec 2019, 2:41 pm
ಸಾಮಾಜಿಕ ಜಾಲ ತಾಣಗಳಲ್ಲಿನ್ಯೂ ಯಿಯರ್‌ ಶುಭಾಶಯ ತಿಳಿಸುವ ಹೊಸ ಬಗೆಯ ಗ್ರಾಫಿಕ್‌ ಡಿಸೈನ್‌ ಇರುವಂತಹ ಇ-ಗ್ರೀಟಿಂಗ್‌ ಕಾರ್ಡ್‌ಗಳು ಇದೀಗ ಟ್ರೆಂಡಿಯಾಗಿದೆ. ಕಣ್ಮನ ಸೆಳೆಯುವ ಗ್ರೀಟಿಂಗ್‌ ಕಾರ್ಡ್‌: ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹೊಸ ವರ್ಷದ ಆಗಮನದ ಸಂಭ್ರಮ ಹೆಚ್ಚಾಗಿದೆ. ಸ್ನೇಹಿತರಿಗೆ, ಬಂಧುಗಳಿಗೆ, ಮಕ್ಕಳಿಗೆ, ಪ್ರೀತಿ ಪಾತ್ರರಿಗೆ ಶುಭಾಶಯ ತಿಳಿಸಲು ಇ ಗ್ರೀಟಿಂಗ್ಸ್‌ ಕಾರ್ಡ್‌ ತನ್ನದೇ ಆದ ಕೊಡುಗೆ ನೀಡುತ್ತಿದೆ.
Vijaya Karnataka Web Greeting Cards


'ಮನಸೂರೆಗೊಳ್ಳುವ ಚಿತ್ರಪದಗಳು. ನೋಡಿದ ತಕ್ಷಣ ಮನಸ್ಸಿಗೆ ಮುದ ನೀಡುವ, ಮುಖದಲ್ಲಿಮಂದಹಾಸ ಮೂಡಿಸುವ ಚಿತ್ರಗಳು, ಚಿತ್ರಗಳ ಜತೆ ಬಳಸಿದ ಅರ್ಥಪೂರ್ಣ ಪದಗಳು, ಕಣ್ಮನ ಸೆಳೆಯುವ ಬಣ್ಣ ಬಣ್ಣದ ಬ್ಯಾಕ್‌ಗ್ರೌಂಡ್‌ ವಿನ್ಯಾಸದ ಗ್ರೀಟಿಂಗ್‌ ಕಾರ್ಡ್‌ಗಳು ತುಂಬಾ ಖುಷಿ ನೀಡುತ್ತವೆ. ನೇರವಾಗಿ ಭೇಟಿಯಾದಾಗ ಹೇಳದ ಎಷ್ಟೋ ಸಂದೇಶಗಳನ್ನು, ಶುಭಾಶಯಗಳನ್ನು ಗ್ರೀಟಿಂಗ್‌ ಕಾರ್ಡ್‌ ಗಳ ಮೂಲಕ ಕಳುಹಿಸಿದರೆ ನೋಡಿದವರಿಗೂ ಖುಷಿ ನೀಡುತ್ತದೆ' ಎನ್ನುತ್ತಾರೆ ಇ-ಗ್ರೀಟಿಂಗ್‌ ಕಾರ್ಡ್‌ ಬಳಕೆದಾರರಾದ ಸುಷ್ಮಿತಾ.

ಥೀಮ್‌ಗೆ ತಕ್ಕಂತೆ ಕಾರ್ಡ್ಸ್:
ಬಲೂನ್‌, ಫೈರ್‌ವರ್ಕ್, ಪಾರ್ಟಿ, ಸ್ಟೈಲಿಶ್‌, ಫಂಕಿ ಟೆಕ್ಟ್$್ಸ, ಮ್ಯೂಸಿಕಲ್‌, ಕಾರ್ಟೂನ್‌, ಸ್ಲೈಡ್‌ ಶೋ, ಬ್ಯೂಟಿಫುಲ್‌ ಇಮೇಜ್‌ ವಿತ್‌ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌, ಇನ್‌ಸ್ಪಿರೇಷನಲ್‌ ವಿಶ್‌, ಲವ್‌, ಫ್ಯಾಮಿಲಿ, ಫ್ರೆಂಡ್ಸ್‌, ಬಿಸ್ನೆಸ್‌, ಸೋಷಿಯಲ್‌, ಸೆಲೆಬ್ರೇಷನ್‌, ರೆಸ್ಯೂಲೇಷನ್‌, ಫನ್‌, ಸಕ್ಸಸ್‌, ಚಿಯರ್‌, ನ್ಯೂ ಹೋಪ್‌, ವಾಮ್‌ರ್‍ ಆ್ಯಂಡ್‌ ಹೆಲ್ತ್‌, ಹ್ಯಾಪಿನೆಸ್‌, ಪೀಸ್‌, ಮಿಸ್ಸಿಂಗ್‌ ಸಮ್‌ಒನ್‌, ಸಮ್‌ಒನ್‌ ಸ್ಪೆಷಲ್‌, ಕಿಸ್‌, ಹಗ್‌, ಥ್ಯಾಂಕ್ಯೂ, ಡ್ರೀಮ್‌, ಬ್ಯೂಟಿಫುಲ್‌

ಮೂಮೆಂಟ್ಸ್‌, ರೊಮ್ಯಾಂಟಿಕ್‌, ಟೋಸ್ಟ್‌, ನ್ಯೂ ಯಿಯರ್‌ ಕೋಟ್ಸ್‌ ಹೀಗೆ ಹೃದಯಕ್ಕೆ ಹತ್ತಿರವಾಗುವ ಥೀಮ್‌ನೊಂದಿಗೆ ವೈವಿಧ್ಯಮಯ ಗ್ರಾಫಿಕ್ಸ್‌ ಡಿಸೈನ್‌ನೊಂದಿಗೆ ಇ-ಗ್ರೀಟಿಂಗ್‌ ಕಾರ್ಡ್‌ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಜನಪ್ರಿಯ ತಾಣಗಳಲ್ಲಿಇ-ಗ್ರೀಟಿಂಗ್ಸ್‌ ಹವಾ: ಇ-ಮೇಲ್‌, ವಾಟ್ಸಾಪ್‌, ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾ ಇನ್ನಿತರ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿಇ-ಗ್ರೀಟಿಂಗ್‌ ಕಾರ್ಡ್‌ ಹವಾ ಎಬ್ಬಿಸಿದೆ. ನ್ಯೂ ಯಿಯರ್‌ಗೆ ಸಂಬಂಧಿಸಿದ 2ಡಿ, 3ಡಿ ಮತ್ತು 4ಡಿ

ಹೊಸ ವರ್ಷಕ್ಕೆ ಮನೆಯ ಅಲಂಕಾರ ಹೀಗಿರಲಿ

ಇಮೇಜ್‌ಗಳು, ಮೋಸ್ಟ್‌ ಪಾಪ್ಯುಲರ್‌ ಲೇಟೆಸ್ಟ್‌ ಹಾಗೂ ಹೈ ರೇಟೆಡ್‌ ಇಮೇಜ್‌ಗಳು, ವಿಡಿಯೋಗಳು, ಪಿಎನ್‌ಜಿ, ಜೆಪಿಇಜಿ, ಜಿಫ್‌, ಅನಿಮೇಟೆಡ್‌ ಜಿಫ್‌, ಸೇರಿದಂತೆ ಹಲವಾರು ಫಾರ್ಮೆಟ್‌ಗಳಲ್ಲಿಸುಲಭವಾಗಿ ಕಳುಹಿಸಬಹುದಾದ ಇ-ಗ್ರೀಟಿಂಗ್‌ ಕಾರ್ಡ್‌ಗಳು ಹಲವಾರು ವೆಬ್‌ಸೈಟ್‌ಗಳಲ್ಲಿಫ್ರೀ ಮತ್ತು ಪೇ ಆಪ್ಷನ್‌ಗಳಲ್ಲಿಈಗಾಗಾಲೇ ಸಿದ್ಧಗೊಂಡಿವೆ. ತಮಗೆ ಬೇಕಾದ ಥೀಮ್‌ ಹಾಗೂ ತಮಗೆ ಇಷ್ಟವಾದ ಡಿಸೈನ್‌ ಆಯ್ಕೆ ಮಾಡಿ ಡೌನ್‌ ಲೋಡ್‌ ಮಾಡಿದರೆ ಆಯ್ತು ಎನ್ನುತ್ತಾರೆ ಟೆಕ್‌ ಸ್ಯಾವಿ ಸೂರಜ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ