ಆ್ಯಪ್ನಗರ

ಮಳೆಗಾಲದಲ್ಲಿ ಜಾರುವುದು, ಬೀಳುವುದು ಮತ್ತು ಗಾಯಗಳಾಗುವುದನ್ನು ಹೇಗೆ ತಡೆಯಬಹುದು

ಮಳೆಗಾಲದಲ್ಲಿ ಚರ್ಮಸಂಬಂಧಿ ಸಮಸ್ಯೆಗಳಾಗುವುದು, ಜಾರಿ ಬೀಳುವುದು ಎಲ್ಲಾ ಸಾಮಾನ್ಯ. ಈ ಸಮಸ್ಯೆಗಳಿಂದ ಪಾರಾಗಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುವುದು ಅಗತ್ಯ.

Vijaya Karnataka Web 12 Jul 2021, 6:32 pm
ಮಳೆಗಾಲ ಒಂದು ಮಧುರವಾದ ಋತುಮಾನ. ವಾತಾವರಣವು ತಂಪಿನಿಂದ ಕೂಡಿರುತ್ತದೆ. ಆ ಸಮಯದಲ್ಲಿ ಪರಿಸರವು ಹಸಿರು ಬಣ್ಣದಿಂದ ಕಂಗೊಳಿಸುವುದು. ಮಳೆಗಾಲದಲ್ಲಿ ವಾತಾವರಣ ಹಾಗೂ ಮನೆಯ ಹೊರ ಭಾಗದಲ್ಲಿ ಹೆಚ್ಚು ತೇವಾಂಶಗಳಿರುತ್ತವೆ. ಅಂತಹ ಸಮಯದಲ್ಲಿ ಜಾರುವುದು, ಬೀಳುವುದು, ಗಾಯಗಳಾಗುವುದು ಮತ್ತು ಅತಿಯಾದ ತೇವಾಂಶದಿಂದ ಕೆಲವು ಚರ್ಮ ಸಂಬಂಧಿ ಸೋಂಕು ಉಂಟಾಗಬಹುದು. ಅಂತಹ ಸಮಯದಲ್ಲಿ ಕೈಗೊಳ್ಳಬಹುದಾದ ಆರೈಕೆಯ ಕ್ರಮ ಹಾಗೂ ಮುನ್ನೆಚ್ಚರಿಕಾ ವಿಧಾನಗಳನ್ನು ತಿಳಿಯೋಣ.
Vijaya Karnataka Web precautions against slip and fall accidents
ಮಳೆಗಾಲದಲ್ಲಿ ಜಾರುವುದು, ಬೀಳುವುದು ಮತ್ತು ಗಾಯಗಳಾಗುವುದನ್ನು ಹೇಗೆ ತಡೆಯಬಹುದು


​ಮುಂಜಾಗ್ರತೆ ಅಗತ್ಯ

ಮಳೆಗಾಲದಲ್ಲಿ ಬೇಡವೆಂದರೂ ನೆಲ ಒದ್ದೆಯಾಗುವುದು ಮತ್ತು ಪಾಚಿ ಕಟ್ಟಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಮಕ್ಕಳಿಗೆ ಹೇಗೆ ಓಡಾಡಬೇಕು ಎಷ್ಟು ಕಾಳಜಿಯಿಂದ ಇರಬೇಕು ಎನ್ನುವುದರ ಬಗ್ಗೆ ಸೂಕ್ತ ತಿಳಿವಳಿಕೆಯನ್ನು ಮೂಡಿಸಬೇಕು. ಇಲ್ಲವಾದರೆ ಆಗಾಗ ಬೀಳುವುದು, ಗಾಯ ಮಾಡಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಮಕ್ಕಳ ಜೊತೆಗೆ ವಯಸ್ಕರು ಮತ್ತು ವೃದರು ಕೂಡ ಮಳೆ, ನೀರು ಹಾಗೂ ಜಾರಿಕೆಯಂತಹ ಸ್ಥಳದಲ್ಲಿ ನಡೆಯುವಾಗ ಸೂಕ್ತ ಎಚ್ಚರಿಕೆಯಿಂದ ಇರಬೇಕು.

ಬಟ್ಟೆಗಳ ಮೇಲಿನ ಕಠಿಣ ಕಲೆಗಳ ನಿವಾರಣೆಗೆ ಇಲ್ಲಿದೆ ಸುಲಭೋಪಾಯ

​ಸಂಭವಿಸಬಹುದಾದ ಗಾಯಗಳು

ಮಳೆಗಾಲದಲ್ಲಿ ಜಾರಿ ಬೀಳುವುದು ಅಥವಾ ಇನ್ಯಾವುದೋ ಕಾರಣದಿಂದ ಬಿದ್ದಾಗ ಸಾಮಾನ್ಯವಾಗಿ ಕೈ, ಮಣಿಕಟ್ಟು, ಸೊಂಟ ಮುರಿತ, ಉಳುಕುವುದು, ಮೊಣಕಾಲು ಹಾನಿ, ಭುಜದ ನೋವು, ಸ್ನಾಯು ಉಳುಕುವುದು, ನೋವು, ನರಗಳ ಹಾನಿ, ಮಿದುಳಿಗೆ ಗಾಯ, ಗೀರು, ಅಸ್ಥಿ ರಜ್ಜು, ನರಗಳಿಗೆ ಹಾನಿ ಸಂಭವಿಸುತ್ತದೆ. ಹಾಗಾಗಿ ಆದಷ್ಟು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.

​ಒಂದೆಡೆಯಿಂದ ಇನ್ನೊಂದೆಡೆಗೆ

ಮಳೆಗಾಲದಲ್ಲಿ ಮೆಟ್ಟಿಲನ್ನು ಹತ್ತುವಾಗ ಆದಷ್ಟು ಆಧಾರ ಕಂಬಗಳನ್ನು ಹಿಡಿದುಕೊಂಡೇ ಹತ್ತುವುದು ಮತ್ತು ಇಳಿಯುವುದು ಮಾಡಬೇಕು. ಕತ್ತಲಲ್ಲಿ ಓಡಾಡಬೇಕಾದಂತಹ ರಸ್ತೆ ಮಾರ್ಗವನ್ನು ತಪ್ಪಿಸಬೇಕು. ಚೆನ್ನಾಗಿ ಬೆಳಕಿರುವ ರಸ್ತೆ ಅಥವಾ ಜಾಗದಲ್ಲಿಯೇ ಓಡಾಡಬೇಕು. ಮಳೆಗಾಲದಲ್ಲಿ ನಿಮ್ಮ ಜೊತೆಗೆ ಒಂದು ಬ್ಯಾಟರಿಯನ್ನು ಇಟ್ಟುಕೊಂಡೇ ಓಡಾಡುವುದನ್ನು ರೂಢಿಸಿಕೊಳ್ಳಬೇಕು.

ಅಡುಗೆ ಮನೆಯ ಸ್ವಚ್ಛತೆ ಹೀಗಿರಬೇಕು, ನೋಡಿದವರು ನಿಮ್ಮನ್ನು ಹೊಗಳಬೇಕು!

​ಸುರಕ್ಷತೆ ನೀಡುವ ವಸ್ತುಗಳ ಬಳಕೆ

ನೀರಲ್ಲಿ ಜಾರದ ಪಾದರಕ್ಷೆಗಳನ್ನು ಧರಿಸುವುದು, ರೇನ್ ಕೋಟ್ ಬಳಕೆ ಮಾಡುವುದು, ಮಳೆಯಲ್ಲಿ ಫೋನ್‍ಗಳನ್ನು ಬಳಸದೆ ಇರುವುದು, ಆದಷ್ಟು ಪಾದಾಚಾರಿಗಳ ಮಾರ್ಗದಲ್ಲಿಯೇ ನಡೆದು ಹೋಗುವುದು ಸೂಕ್ತ. ಆಗ ಉಂಟಾಗುವ ಅನಿರೀಕ್ಷಿತ ಅಪಾಯಗಳನ್ನು ಸುಲಭವಾಗಿ ತಡೆಯಬಹುದು.

​ವೈದ್ಯರ ಸಲಹೆ

ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರಗಳನ್ನೇ ಸೇವಿಸಿ. ವಿಟಮಿನ್ ಡಿ ಮತ್ತು ಆರೋಗ್ಯ ವೃದ್ಧಿಯ ಜೀವಸತ್ವಗಳನ್ನು ಸೇವಿಸಬೇಕು. ವೈದ್ಯರ ಸಲಹೆಯ ಅನುಸಾರ ಯಾವ ರೀತಿಯ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಬೇಕು ಎನ್ನುವುದರ ಬಗ್ಗೆ ಸೂಕ್ತ ಸಲಹೆಯನ್ನು ಪಡೆಯುವುದನ್ನು ಮರೆಯಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ