ಆ್ಯಪ್ನಗರ

ಟೊಮೆಟೋ ಬದಲಿಗೆ ನೀವು ಈ ಪದಾರ್ಥಗಳನ್ನು ಬಳಸಬಹುದಲ್ಲಾ?

ಟೊಮೆಟೋ ಬದಲಿಗೆ ಯಾವ ಪದಾರ್ಥಗಳನ್ನು ಬಳಸಬಹುದು ಎಂಬ ಗೊಂದಲದಲ್ಲಿದ್ದರೆ ಲೇಖನವನ್ನು ಓದಿ.

Vijaya Karnataka Web 30 Nov 2021, 9:24 pm
ಟೊಮೆಟೋ ಚಟ್ನಿ, ಟೊಮೊಟೋ ಗೊಜ್ಜು, ಟೊಮೆಟೋದಿಂದ ತಯಾರಿಸಿದ ಅನೇಕ ಖಾದ್ಯಗಳು ಆಹಾ..! ಎನ್ನುವಂತಿರುತ್ತದೆ. ತನ್ನ ನೈಸರ್ಗಿಕವಾದ ಕೆಂಪು ಬಣ್ಣದಿಂದ ಆಹಾರವನ್ನು ಸುಂದರವಾದ ಬಣ್ಣವಾಗಿ ಪರಿವರ್ತನೆ ಮಾಡುತ್ತದೆ. ಸಾಮಾನ್ಯವಾಗಿ ಟೊಮೆಟೋ ಇಲ್ಲದೇ ಆಹಾರ ತಯಾರು ಮಾಡುವುದು ಕಷ್ಟವೇ ಸರಿ.
Vijaya Karnataka Web substitute for tomato in indian cooking in kannada
ಟೊಮೆಟೋ ಬದಲಿಗೆ ನೀವು ಈ ಪದಾರ್ಥಗಳನ್ನು ಬಳಸಬಹುದಲ್ಲಾ?


ದಿನೇ ದಿನೇ ಗಗನಕ್ಕೇರುತ್ತಿರುವ ಟೊಮೆಟೋ ಜನ ಸಾಮಾನ್ಯರು ಖರೀದಿ ಮಾಡಲು ಹಿಂದೆ ಮುಂದೆ ಮಾಡುತ್ತಿದ್ದಾರೆ. ಎಲ್ಲಾ ಆಹಾರಕ್ಕೂ ಒಂದೆರಡು ಟೊಮೆಟೋ ಬಿದ್ದರೆನೇ ಅದಕ್ಕೆ ವಿಶೇಷವಾದ ರುಚಿ ಬರುವುದು. ಹಾಗಾದರೆ ಟೊಮೆಟೋಕ್ಕೆ ಪರ್ಯಾಯವಾಗಿ ಏನು ಬಳಕೆ ಮಾಡಿದರೆ ಆಹಾರ ರುಚಿಯಾಗಿರುತ್ತದೆ ಎಂಬ ಗೊಂದಲದಲ್ಲಿದ್ದರೆ, ಇಲ್ಲಿ ಓದಿ.

​೧. ಹುಣಸೆ ಹಣ್ಣು ಬಳಸಿ

ಟೊಮೆಟೋ ದಂತೆಯೇ ಹುಣಸೆ ಹಣ್ಣು ಕೂಡ ಉಳಿ ಅಂಶವನ್ನು ಹೊಂದಿದೆ. ನಮ್ಮ ಭಾರತೀಯ ಅಡುಗೆ ಮನೆಯಲ್ಲಿ ಹುಣಸೆ ಹಣ್ಣು ಇಲ್ಲದೇ ಕೆಲವು ಸಾರುಗಳು ತಯಾರಾಗುವುದಿಲ್ಲ. ಈ ಹುಣಸೆ ಹಣ್ಣು ಆಹಾರಕ್ಕೆ ಮಾತ್ರ ಬಳಕೆಯಾಗದೇ ಹಿತ್ತಾಳೆ ಪಾತ್ರೆಗಳನ್ನು ಫಳ ಫಳ ಹೊಳೆಯಲು ಸಹಾಯ ಮಾಡುತ್ತದೆ. ಇದೊಂದು ಜನಪ್ರಿಯವಾದ ಸಾಂಬಾರು ಪದಾರ್ಥ. ಹಾಗಾಗಿ ನೀವು ಟಮೋಟು ಬದಲಿಗೆ ಈ ಹುಣಸೆ ಹಣ್ಣನ್ನು ಬಳಸಬಹುದು. ಇದರಿಂದ ನೀವು ತಯಾರಿಸುವ ಆಹಾರವು ಟೊಮೆಟೋ ಇಲ್ಲದೇ ಅತ್ಯಂತ ರುಚಿಕರವಾಗಿಸುತ್ತದೆ.

​೨. ವಿನೆಗರ್

ಈ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಬಳಸುವ ವಿನೆಗರ್ ನಮ್ಮ ಭಾರತೀಯರಿಗೂ ಚಿರಪರಿಚಿತವಾಗಿದೆ. ಗೋಬಿ ಮಂಚೂರಿ, ಫೈಡ್ ರೈಸ್ ಗಳಲ್ಲಿ ಈ ವಿನೆಗರ್ ಹಾಕುವುದನ್ನು ನೀವು ನೋಡಿರುತ್ತೀರಿ. ಇದು ವಾಸ್ತವವಾಗಿ, ಹುಳಿಯಾಗಿರುತ್ತದೆ.

ಇದು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣವನ್ನು ಹೊಂದಿದೆ. ಮುಖ್ಯವಾಗಿ ಕರುಳಿನ ಸೋಂಕು, ಮಲಬದ್ಧತೆಯಂತಹ ಸಮಸ್ಯೆಯನ್ನು ಹೋಗಲಾಡಿಸುವುದಲ್ಲದೇ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಟ್ಟಾರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟೊಮೆಟೋ ಬದಲಿಗೆ ನೀವು ಈ ವಿನೆಗರ್ ಅನ್ನು ಬಳಸಬಹುದು. ಇದು ನಿಮ್ಮ ಆಹಾರದ ರುಚಿ ಮತ್ತು ಆರೋಗ್ಯ ಎರಡನ್ನೂ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೊಸರು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಇದನ್ನು ಒಟ್ಟಾರೆ ತಿನ್ನಬೇಡಿ!

​೩. ಮೊಸರು

ಟೊಮೆಟೋ ಬದಲಿಗೆ ನೀವು ಹುಳಿ ಮೊಸರನ್ನು ಬಳಕೆ ಮಾಡಬಹುದು. ಇದು ನಿಮ್ಮ ಆಹಾರಕ್ಕೆ ಉತ್ತಮವಾದ ಬಣ್ಣ ಹಾಗು ರುಚಿಯನ್ನು ನೀಡುತ್ತದೆ. ಮೊಸರಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ. ಮುಖ್ಯವಾಗಿ ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೇ, ಪ್ರತಿ ದಿನ ೨೫೦ ರಿಂದ ೬೦೦ ಗ್ರಾಂ ಮೊಸರನ್ನು ಸೇವಿಸುವುದರಿಂದ ಮನುಷ್ಯನು ಆರೋಗ್ಯವಂತನಾಗಿರುತ್ತಾನೆ ಎಂದು ಅಧ್ಯಯನವು ತಿಳಿಸುತ್ತದೆ.

ಮಾವಿನಕಾಯಿ ಕೇವಲ ಚಿತ್ರಾನ್ನಕ್ಕೆ ಮಾತ್ರವಲ್ಲ! ಆರೋಗ್ಯಕ್ಕೂ ಬಹಳ ಒಳ್ಳೆಯದು...

​೪. ಹಸಿ ಮಾವಿನ ಕಾಯಿ

ಟೊಮೆಟೋ ಗೆ ಪರ್ಯಾಯ ಹುಡುಕುತ್ತಿರುವವರಿಗೆ ಹಸಿ ಮಾವಿನ ಕಾಯಿ ಬಳಸಬಹುದು. ಟೊಮೆಟೋದಂತೆಯೇ ಮಾವಿನ ಕಾಯಿಯು ಹುಳಿ ಅಂಶವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಮಾವಿನ ಕಾಯಿ ದೊರೆಯುತ್ತದೆ. ನೀವು ಸ್ವಚ್ಛವಾಗಿ ನೀರಿನಲ್ಲಿ ತುಳೆದು, ತುರಿದು ನಿಮ್ಮ ಆಹಾರಕ್ಕೆ ಸೇರಿಸಬಹುದು. ಇದರಲ್ಲಿ ಪ್ರೋಟೀನ್, ಸೋಡಿಯಂ, ವಿಟಮಿನ್, ನಾರು, ರಂಜಕನಂತಹ ಅಸಂಖ್ಯಾತ ಪೋಷಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಅಗತ್ಯವಾದ ಪೌಷ್ಟಿಕ ಸತ್ವವನ್ನು ಪೂರೈಸಲು ಸಹಾಯ ಮಾಡುತ್ತದೆ.

ಆರೋಗ್ಯದ ಮೇಲೆ ನೆಲ್ಲಿಕಾಯಿ ಮಾಡುವ ಜಾದುಗಳಿವು…!

​೫. ಬೆಟ್ಟದ ನೆಲ್ಲಿಕಾಯಿ

ನೆಲ್ಲಿಕಾಯಿಯು ಅತ್ಯುತ್ತಮವಾದ ಹಣ್ಣಾಗಿದೆ. ಇದನ್ನು ಟೊಮೆಟೋ ಬದಲಿಗೆ ಅಡುಗೆಗೆ ಬಳಸಬಹುದು. ಇದರಲ್ಲಿನ ಸಿಹಿ ಹಾಗು ಉಳಿ ಮಿಶ್ರಿತ ಅಂಶವು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ, ಈ ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತದೆ. ಇಷ್ಟೆಲ್ಲಾ ಪ್ರಯೋಜನಕಾರಿಯಾದ ನೆಲ್ಲಿಕಾಯಿಯನ್ನು ಟೊಮೆಟೋ ಪರ್ಯಾಯವಾಗಿ ಬಳಕೆ ಮಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ