ಆ್ಯಪ್ನಗರ

ಹೊಸ ವರ್ಷದ ಸ್ವಾಗತಕ್ಕೆ ಮನೆಯ ಅಲಂಕಾರ ಹೀಗಿರಲಿ...

ನೀವು ಮನೆಯಲ್ಲೇ ಪಾರ್ಟಿ ಮಾಡುತ್ತಲಿದ್ದರೆ ಆಗ ಮನೆಯ ಅಲಂಕಾರ ಈ ರೀತಿಯಾಗಿ ಮಾಡಿ.

Vijaya Karnataka Web 30 Dec 2021, 2:41 pm
ಹೊಸ ವರುಷವು ನಮಗೆಲ್ಲರಿಗೂ ಹೊಸ ಹುರುಪು, ಹೊಸತನ ಹಾಗೂ ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಈ ಲೇಖನವನ್ನು ಆರಂಭಿಸುತ್ತಿದ್ದೇವೆ. ಕಳೆದ ಒಂದೆರಡು ವರ್ಷಗಳಲ್ಲಿ ಸಾಂಕ್ರಾಮಿಕದಿಂದಾಗಿ ನಾವೆಲ್ಲರೂ ತುಂಬಾ ಕಷ್ಟಪಟ್ಟಿದ್ದು, ಇನ್ನು ಕೂಡ ಅದರಿಂದ ಸಂಪೂರ್ಣವಾಗಿ ಹೊರಗೆ ಬಂದಿಲ್ಲ.
Vijaya Karnataka Web try these themes for new year decoration at home
ಹೊಸ ವರ್ಷದ ಸ್ವಾಗತಕ್ಕೆ ಮನೆಯ ಅಲಂಕಾರ ಹೀಗಿರಲಿ...


ಆದರೂ ನಾವೆಲ್ಲರೂ ಹೊಸ ವರ್ಷವನ್ನು ತುಂಬಾ ಖುಷಿ ಹಾಗೂ ಸಂತೋಷದಿಂದ ಸ್ವಾಗತಿಸುವುದು ಅಗತ್ಯ. ಹೊರಗಡೆ ಹೋಗಲು ಕೆಲವೊಂದು ನಿರ್ಬಂಧಗಳಿದ್ದರೂ ಮನೆಯಲ್ಲೇ ಸ್ನೇಹಿತರು ಹಾಗೂ ಸಂಬಂಧಿಕರ ಜತೆಗೆ ಹೊಸ ವರ್ಷವನ್ನು ಸ್ವಾಗತಿಸಬಹುದು.

ಅದು ಕೂಡ ಹೊಸ ವರ್ಷವು ವಾರಾಂತ್ಯಕ್ಕೆ ಬರುತ್ತಲಿದ್ದು, ಇನ್ನಷ್ಟು ಸಂಭ್ರಮವನ್ನು ಹೆಚ್ಚಿಸಿದೆ. ಮನೆಯಲ್ಲೇ ಹೊಸ ವರ್ಷವನ್ನು ಆಚರಣೆ ಮಾಡುವುದಾದರೆ ಆಗ ಮನೆಯನ್ನು ಯಾವ ರೀತಿಯಿಂದ ಶೃಂಗಾರ ಮಾಡಬಹುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಹಳೆ ವರ್ಷದ ಕಹಿ ನೆನಪು ಮರೆತು, ಹೊಸ ವರ್ಷವನ್ನು ಸ್ವಾಗತಿಸಲು ಮುಂದಾಗಿ.

​ಬಲೂನ್ ಗಳಿಂದ ಅಲಂಕಾರ ಮಾಡಿ

  • ಮಾರುಕಟ್ಟೆಯಲ್ಲಿ ವಿವಿಧ ರೀತಿಯ, ಬಣ್ಣದ ಹಾಗೂ ಗಾತ್ರದ ಬಲೂನ್ ಗಳು ಲಭ್ಯವಿದ್ದು, ಇದನ್ನು ನೀವು ಮನೆಗೆ ತಂದು ಅದರಿಂದ ಮನೆಯ ಅಲಂಕಾರ ಮಾಡಬಹುದು. ಇದು ನೋಡಲು ತುಂಬಾ ಆಕರ್ಷಣೀಯವಾಗಿ ಕಾಣುವುದು.
  • ಕೇವಲ ಸ್ನೇಹಿತರ ಜತೆಗೆ ನೀವು ಹೊಸ ವರ್ಷಾಚರಣೆ ಆಚರಿಸಲು ಇಚ್ಛಿಸಿದ್ದರೆ ಆಗ ನೀವು ಬಲೂನ್ ಗಳಿಂದ ತುಂಬಾ ಸರಳವಾಗಿ ಆಚರಿಸಬಹುದು. ಮುಂದೆ ಕೂಡ ನೀವು ಇದನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದು.
  • ಬಲೂನ್ ನಲ್ಲಿ ಹೊಸ ವರ್ಷದ ಸಂಖ್ಯೆಯನ್ನು ಬರೆದಿದ್ದರೆ ಅದು ಇನ್ನಷ್ಟು ಒಳ್ಳೆಯದು. ಹಳೆ ವರ್ಷದಲ್ಲಿ ನಿಮ್ಮ ಸಂತಸದ ಕ್ಷಣಗಳ ಫೋಟೊಗಳನ್ನು ಈ ಬಲೂನ್ ಗೆ ಹಾಕಬಹುದು.

​ಎಲ್ ಇಡಿ ಲೈಟ್

  • ಕಾರ್ಯಕ್ರಮ ಯಾವುದೇ ಇದ್ದರೂ ಅಲ್ಲಿ ಎಲ್ ಇಡಿ ಲೈಟ್ ಝಗಮಗಿಸದೆ ಇದ್ದರೆ ಆಗ ಅಲ್ಲಿ ಪಾರ್ಟಿಗೆ ಕಳೆ ಬರುವುದಿಲ್ಲ. ಮನೆಯಲ್ಲಿ ನೀವು ಹೊಸ ವರ್ಷದ ಪಾರ್ಟಿ ಆಚರಣೆ ಮಾಡಲು ವಿವಿಧ ಬಣ್ಣದ ಎಲ್ ಇಡಿಗಳನ್ನು ಬಳಕೆ ಮಾಡಬಹುದು.
  • ಇದು ಮುಂದೆ ಕೂಡ ನಿಮಗೆ ಪ್ರಯೋಜನಕ್ಕೆ ಬರುವುದು. ಇದರಲ್ಲಿ ಕೂಡ ನೀವು ಹೊಸ ವರ್ಷಕ್ಕೆ ಸ್ವಾಗತ ಎಂದು ಬರೆಯಬಹುದು. ಎಲ್ ಇಡಿ ಲೈಟ್ ಗಳು ಸುಲಭವಾಗಿ ಲಭ್ಯವಿದ್ದು, ಇದನ್ನು ಅಳವಡಿಸುವುದು ಕಷ್ಟವೇನಲ್ಲ.

​ವಾಲ್ ಕ್ರಾಫ್ಟ್

  • ವಾಲ್ ಕ್ರಾಫ್ಟ್ ನ್ನು ನಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳಬಹುದು ಮತ್ತು ಯಾವುದೇ ಕಾರ್ಯಕ್ರಮವಾದರೂ ಇದನ್ನು ಬಳಸುವುದು ಸುಲಭ. ಕೆಲವೊಂದು ಕಲಾತ್ಮಕ ಅಥವಾ ಬೇರೆ ರೀತಿಯ ವಾಲ್ ಕ್ರಾಫ್ಟ್ ಗಳನ್ನು ನೀವು ನೇತು ಹಾಕಬಹುದು.
  • ಇದರಿಂದ ಪಾರ್ಟಿ ಮಾಡುವ ಜಾಗವು ತುಂಬಾ ಗಮನಸೆಳೆಯುವುದು.
  • ನಿಮ್ಮ ಹತ್ತಿರ ಅಂಗಡಿಗಳಲ್ಲಿ ಇದು ಲಭ್ಯವಿದೆ ಮತ್ತು ಆನ್ ಲೈನ್ ನಿಂದಲೂ ನೀವು ಇದನ್ನು ತರಿಸಿಕೊಳ್ಳಬಹುದು. ಮನೆಯಲ್ಲೇ ನೀವು ಇದನ್ನು ತಯಾರಿಸಬಹುದು. ಪೇಪರ್ ಬಳಸಿಕೊಂಡು ನಿಮ್ಮ ಕಲಾತ್ಮಕತೆಯನ್ನು ತೋರಿಸಬಹುದು.

​ವಾಲ್ ಪೇಪರ್ ಅಲಂಕಾರ

  • ಮನೆಯಲ್ಲಿ ಸ್ನೇಹಿತರ ಜತೆಗೆ ಭರ್ಜರಿ ಪಾರ್ಟಿಯನ್ನು ಆಯೋಜಿಸುತ್ತಿದ್ದರೆ ಆಗ ನೀವು ಗೋಡೆಗೆ ವಾಲ್ ಪೇಪರ್ ಗಳನ್ನು ಅಂಟಿಸಿ. ವಿವಿಧ ಬಗೆಯ ವಾಲ್ ಪೇಪರ್ ಗಳು ಅಂಗಡಿ ಹಾಗೂ ಆನ್ ಲೈನ್ ನಲ್ಲಿ ಲಭ್ಯವಿದೆ. ಹೆಚ್ಚು ಶ್ರಮವಿಲ್ಲದೆ ನೀವು ಮನೆಯನ್ನು ಅಲಂಕಾರ ಮಾಡಬಹುದು.
  • ಪಾರ್ಟಿ ವೇಳೆ ಗೋಡೆಯನ್ನು ರಕ್ಷಣೆ ಮಾಡುವಲ್ಲಿ ವಾಲ್ ಪೇಪರ್ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿವಿಧ ಬಣ್ಣ, ಗಾತ್ರ ಮತ್ತು ಆಕಾರದಲ್ಲಿ ಇದು ಲಭ್ಯವಿದ್ದು, ನಿಮಗೆ ಇಷ್ಟವಿರುವುದನ್ನು ಆಯ್ಕೆ ಮಾಡಿಕೊಂಡು ಅಲಂಕಾರ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ