ಆ್ಯಪ್ನಗರ

ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಈ ರೀತಿ ಏಕೆ ಬಳಸಬಾರದು?

ಹಣ್ಣು ತಿಂದು ಸಿಪ್ಪೆ ಬಿಸಾಡುವ ಅಭ್ಯಾಸ ನಮಗಿದೆ. ಆದರೆ ಇನ್ನು ಮುಂದೆ ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ನಮಗೆ ಅನುಕೂಲವಾಗುವಂತೆ ಹಲವು ವಿಧಾನಗಳಲ್ಲಿ ಬಳಕೆ ಮಾಡಿಕೊಳ್ಳಬಹುದು.

Vijaya Karnataka Web 5 Aug 2021, 2:13 pm
ನಮ್ಮ ಆರೋಗ್ಯ ಸುರಕ್ಷತೆಯಾಗಿ ಯಾವುದೇ ತೊಂದರೆ ಇಲ್ಲದಂತೆ ಇರಬೇಕು ಎಂದರೆ ನಮ್ಮ ಆಹಾರ ಪದ್ಧತಿಯಲ್ಲಿ ಹಣ್ಣು ಮತ್ತು ತರಕಾರಿಗಳು ಸೇರಿರಬೇಕು. ಇದುವರೆಗೂ ನಾವು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವಾಗ ಸ್ವಚ್ಛತೆಯನ್ನು ಕಾಯ್ದುಕೊಂಡು ಅವುಗಳ ಮೇಲ್ಭಾಗದ ಸಿಪ್ಪೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಆನಂತರ ಸಿಪ್ಪೆಯನ್ನು ತೆಗೆದು ಹಾಕಿ ಕೇವಲ ಒಳಗಿನ ತಿರುಳನ್ನು ಮಾತ್ರ ಬಳಕೆ ಮಾಡುತ್ತಿದ್ದೇವೆ.
Vijaya Karnataka Web ways to use leftover fruits and vegetable peels
ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಈ ರೀತಿ ಏಕೆ ಬಳಸಬಾರದು?


ಆದರೆ ಅಸಲಿ ವಿಷಯ ಏನೆಂದರೆ ಹಣ್ಣುಗಳ ಸಿಪ್ಪೆಯಲ್ಲಿ ಕೂಡ ಮತ್ತು ತರಕಾರಿಗಳ ಸಿಪ್ಪೆಯಲ್ಲಿ ನಮಗೆ ಅನುಕೂಲವಾಗುವ ಹಲವಾರು ಅಂಶಗಳು ಸಿಗುತ್ತವೆ.

ಕೆಲವೊಂದು ದಿನಬಳಕೆಯ ವಸ್ತುಗಳ ವಿಷಯದಲ್ಲೂ ಕೂಡ ಇವುಗಳ ಸಿಪ್ಪೆಗಳು ಪ್ರಯೋಜನಕ್ಕೆ ಬರಲಿವೆ. ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಯಾವ ರೀತಿ ನಮಗೆ ಉಪಯೋಗವಾಗುವಂತೆ ಬಳಕೆ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

​ಉಳಿದ ಹಣ್ಣು ಮತ್ತು ತರಕಾರಿಗಳ ಸಿಪ್ಪೆಯ ಉಪಯೋಗ

ಕಿತ್ತಳೆ ಹಣ್ಣು ಮತ್ತು ನಿಂಬೆ ಹಣ್ಣಿನ ಸಿಪ್ಪೆಯನ್ನು ನೀವು ಸ್ನಾನ ಮಾಡುವ ಉಗುರುಬೆಚ್ಚಗಿನ ನೀರಿಗೆ ಹಾಕಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಬೆಳಗಿನ ಸಮಯದಲ್ಲಿ ಸ್ನಾನ ಮಾಡಿದರೆ ಸಂಪೂರ್ಣ ತಾಜಾತನ ಮತ್ತು ಹೊಸ ಚೈತನ್ಯ ಇಡೀ ದಿನ ನಿಮ್ಮಲ್ಲಿ ಮನೆಮಾಡುತ್ತದೆ.

ಇನ್ನು ಮುಂದೆ ಈ ಹಣ್ಣು-ತರಕಾರಿಗಳ ಸಿಪ್ಪೆಯನ್ನು ತಪ್ಪಿಯೂ ಬಿಸಾಡಬೇಡಿ!

​ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಮೋಸಂಬಿ ಹಣ್ಣಿನ ಸಿಪ್ಪೆ

ಕಿತ್ತಳೆ ಹಣ್ಣಿನ ಸಿಪ್ಪೆ ಹಾಗೂ ಮೋಸಂಬಿ ಹಣ್ಣಿನ ಸಿಪ್ಪೆ ಯಿಂದ ಹಕ್ಕಿಗಳಿಗೆ ಫೀಡಿಂಗ್ ಕಪ್ ತಯಾರು ಮಾಡಬಹುದು. ಸಂಪೂರ್ಣವಾಗಿ ಒಳಗಿನ ತಿರುಳನ್ನು ತೆಗೆದುಕೊಂಡರೆ ಮತ್ತು ಸರಿಯಾಗಿ ಹಣ್ಣಿನ ಅರ್ಧಭಾಗಕ್ಕೆ ಕಟ್ ಮಾಡಿದರೆ,ಈ

ರೀತಿಯ ಕಪ್ ತಯಾರಾಗುತ್ತದೆ. ನೀವು ನಿಮ್ಮ ಮನೆಯ ಹೊರಗಡೆ ಇದನ್ನು ಇರಿಸಬಹುದು ಮತ್ತು ಹಕ್ಕಿಗಳಿಗೆ ಕಾಳುಗಳನ್ನು ಹಾಕಬಹುದು.

ಇನ್ನು ಮುಂದೆ ಕಿತ್ತಳೆ ಸಿಪ್ಪೆಯನ್ನು ಅಪ್ಪಿತಪ್ಪಿಯೂ ಎಸೆಯಬೇಡಿ!

​ಹಣ್ಣುಗಳ ಹಾಗೂ ತರಕಾರಿಗಳ ಸಿಪ್ಪೆ

ಹಣ್ಣುಗಳ ಹಾಗೂ ತರಕಾರಿಗಳ ಸಿಪ್ಪೆಯಿಂದ ಫೇಸ್ ಮಾಸ್ಕ್ ಕೂಡ ತಯಾರು ಮಾಡಬಹುದು. ಏಕೆಂದರೆ ಹಣ್ಣುಗಳ ಸಿಪ್ಪೆಯಲ್ಲಿ ಚರ್ಮಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕ ಸತ್ವಗಳು ಸಿಗುತ್ತವೆ.

ಫೇಸ್ ಮಾಸ್ಕ್ ತಯಾರು ಮಾಡುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪ ಮತ್ತು ಆಲಿವ್ ಆಯಿಲ್ ಬಳಕೆ ಮಾಡಿ ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಅದನ್ನು ಇದರ ಜೊತೆ ಮಿಶ್ರಣ ಮಾಡಿ ಮುಖದ ಮೇಲೆ ಹತ್ತು ನಿಮಿಷಗಳ ಕಾಲ ಹಚ್ಚಿಕೊಂಡು ನಂತರ ಮುಖವನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬಹುದು.

ಇನ್ನು ಮುಂದೆ ಈ ಹಣ್ಣು-ತರಕಾರಿಗಳ ಸಿಪ್ಪೆಯನ್ನು ತಪ್ಪಿಯೂ ಬಿಸಾಡಬೇಡಿ!

​ಆಲೂಗಡ್ಡೆ ಸಿಪ್ಪೆ

ಆಲೂಗಡ್ಡೆ ಸಿಪ್ಪೆಯಿಂದ ಚಿಪ್ಸ್ ತಯಾರು ಮಾಡಬಹುದು. ಇದು ತಿನ್ನಲು ರುಚಿಯಾಗಿರುತ್ತದೆ ಮತ್ತು ಕ್ರಿಸ್ಪಿ ಆಗಿರುತ್ತದೆ.

ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಳಕೆ ಮಾಡಬಹುದು. ನಿಮ್ಮ ಹಲ್ಲುಗಳ ಮೇಲ್ಭಾಗದಲ್ಲಿ ಚೆನ್ನಾಗಿ ಉಜ್ಜುವುದರಿಂದ ಹಲ್ಲುಗಳ ಬಣ್ಣ ಹೊಳಪಾಗುತ್ತದೆ.

ಪಾತ್ರೆಗಳು ಕರೆಗಟ್ಟಿರುವ ಸಂದರ್ಭ ಇದ್ದರೆ ನಿಂಬೆಹಣ್ಣಿನ ಸಿಪ್ಪೆಯಿಂದ ಅದನ್ನು ಉಜ್ಜಿ ಸರಿಪಡಿಸಬಹುದು. ಸುಮಾರು ಒಂದು ಗಂಟೆಯ ವರೆಗೆ ನಿಂಬೆ ಹಣ್ಣಿನ ಸಿಪ್ಪೆಯ ರಸ ಅದರ ಮೇಲೆ ಇರುವಂತೆ ನೋಡಿಕೊಂಡರೆ ಸಾಕು. ಸಂಪೂರ್ಣವಾಗಿ ಹೊಳೆಯುವ ಸ್ಟೀಲ್ ಪಾತ್ರೆ ನಿಮ್ಮದಾಗುತ್ತದೆ.

ಆಲೂಗೆಡ್ಡೆಗಿಂತಲೂ ಜಾಸ್ತಿ ಆರೋಗ್ಯ ಪ್ರಯೋಜನಗಳು ಅದರ ಸಿಪ್ಪೆಯಲ್ಲಿದೆ!

​ಸೌತೆಕಾಯಿಯ ಸಿಪ್ಪೆ

ಸೌತೆಕಾಯಿಯ ಸಿಪ್ಪೆಯನ್ನು ಮನೆಯಿಂದ ಇರುವೆಗಳನ್ನು ಓಡಿಸಲು ಬಳಸಬಹುದು. ಇರುವೆಗಳ ಗೂಡು ಇರುವ ಜಾಗದಲ್ಲಿ ಸೌತೆಕಾಯಿಯ ಸಿಪ್ಪೆಯನ್ನು ಪುಡಿ ಮಾಡಿ ಹಾಕಿದರೆ ಮತ್ತು ಇಡೀ ರಾತ್ರಿ ಇದನ್ನು ಹಾಗೇ ಬಿಟ್ಟರೆ ಇರುವೆಗಳು

ಸೌತೆಕಾಯಿಯ ಸಿಪ್ಪೆಯ ವಾಸನೆಗೆ ಗೂಡಿನಿಂದ ಹೊರ ಬರುವುದಿಲ್ಲ. ಮನೆಯಲ್ಲಿ ಒಂದು ವೇಳೆ ಮಕ್ಕಳಿದ್ದರೂ ಕೂಡ ಇದರಿಂದ ಯಾವುದೇ ಅಪಾಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ