ಆ್ಯಪ್ನಗರ

ಫ್ರಿಡ್ಜ್‌ನ ಸ್ವಚ್ಛತೆಗೆ, ಒಮ್ಮೆ ಟ್ರೈ ಮಾಡಿ ನೋಡಿ ಈ ಸಿಂಪಲ್ ಟ್ರಿಕ್ಸ್

ಆಹಾರ, ತರಕಾರಿ, ಹಣ್ಣು ಇತ್ಯಾದಿಗಳು ಕೆಡದಂತೆ ಇಡುವ ಫ್ರಿಡ್ಜ್ ನ್ನು ನಿಯಮಿತವಾಗಿ ಶುಚಿ ಮಾಡಬೇಕು.

Vijaya Karnataka Web 25 Sep 2021, 3:03 pm
ಅಡುಗೆ ಮನೆ ಎನ್ನುವುದು ದೇವರ ಕೋಣೆಯಂತೆ ಇದ್ದರೆ ಆಗ ಖಂಡಿತವಾಗಿಯೂ ಮನೆಯಲ್ಲಿ ಇರುವವರ ಆರೋಗ್ಯವು ಉತ್ತಮವಾಗಿರುವುದು. ಇಲ್ಲವಾದಲ್ಲಿ ಅದು ಹಲವಾರು ಅನಾರೋಗ್ಯಕ್ಕೆ ಕಾರಣವಾಗಬಹುದು. ಅದರಲ್ಲೂ ಆಧುನಿಕ ಜಗತ್ತಿನಲ್ಲಿ ಅನಿವಾರ್ಯವಾಗಿರುವಂತಹ ಫ್ರಿಡ್ಜ್ ನ್ನು ಬಳಕೆ ಮಾಡುವುದು ಹೆಚ್ಚಿನ ಜನರಿಗೆ ತಿಳಿದಿದ್ದರೂ ಅದನ್ನು ಹೇಗೆ ಶುಚಿಯಾಗಿ ಇಡಬೇಕೆಂದು ಖಂಡಿತವಾಗಿಯೂ ತಿಳಿದಿಲ್ಲ.
Vijaya Karnataka Web why deep cleaning your fridge is important to stay healthy
ಫ್ರಿಡ್ಜ್‌ನ ಸ್ವಚ್ಛತೆಗೆ, ಒಮ್ಮೆ ಟ್ರೈ ಮಾಡಿ ನೋಡಿ ಈ ಸಿಂಪಲ್ ಟ್ರಿಕ್ಸ್


ಹೀಗಾಗಿ ಫ್ರಿಡ್ಜ್ ನ್ನು ಸರಿಯಾದ ರೀತಿಯಲ್ಲಿ ಶುಚಿಯಾಗಿಟ್ಟುಕೊಂಡರೆ, ಆಗ ಅರ್ಧ ಆರೋಗ್ಯವನ್ನು ಪಡೆದಂತೆ. ಆರೋಗ್ಯವನ್ನು ಪಡೆಯಲು ಫ್ರಿಡ್ಜ್ ನ್ನು ಆಗಾಗ ಶುಚಿ ಮಾಡುತ್ತಿರಬೇಕು. ಅದು ಹೇಗೆ ಎಂದು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

​ಫ್ರಿಡ್ಜ್ ನ್ನು ಯಾಕೆ ಆಳವಾಗಿ ಶುಚಿ ಮಾಡಬೇಕು?

ಆಹಾರ ವಿಷವಾಗುವುದನ್ನು ತಡೆಯಲು ಆಗಾಗ ಫ್ರಿಡ್ಜ್ ನ್ನು ಶುಚಿ ಮಾಡುವುದು ಅತೀ ಅಗತ್ಯವಾಗಿರುವುದು. ಶುಚಿಯಾಗಿರದ ಫ್ರಿಡ್ಜ್ ಕೀಟಾಣುಗಳಿಗೆ ವಾಸಸ್ಥಾನವಾಘುವುದು. ತರಕಾರಿಗಳು ಹಾಗೂ ಇತರ ಸಾಮಗ್ರಿಗಳನ್ನು ಫ್ರಿಡ್ಜ್ ನಲ್ಲಿ ಇಡುವ ವೇಳೆ ಹಳೆಯದ್ದು ಇದ್ದರೆ ಅದನ್ನು ತೆಗೆದು ಹೊಸತನ್ನು ಇಡಬೇಕು.

ಇಲ್ಲವಾದಲ್ಲಿ ಹಳೆ ತರಕಾರಿ ಹಾಗೂ ಹಣ್ಣುಗಳು ಹಾಗೆ ಕೊಳೆತು ಹೋಗುವುದು ಮತ್ತು ಇದು ಕೀಟಾಣುಗಳನ್ನು ಉಂಟು ಮಾಡುವುದು. ಫ್ರಿಡ್ಜ್ ನಲ್ಲಿ ಯಾವುದೇ ಪದಾರ್ಥ ಅಥವಾ ಸಾಸ್ ಚೆಲ್ಲಿದ್ದರೂ ಅದನ್ನು ಕೂಡ ಬೇಗನೆ ಶುಚಿ ಮಾಡಬೇಕು. ಅಡುಗೆ ಮನೆಯಲ್ಲಿ ಹೆಚ್ಚಿನ ಸಾಮಗ್ರಿಗಳು ಇಡುವಂತಹ ಸ್ಥಳ ಫ್ರಿಡ್ಜ್. ಹೀಗಾಗಿ ಅದನ್ನು ಶುಚಿಯಾಗಿಡುವುದು ಅಗತ್ಯ.

​ಎಷ್ಟು ಸಲ ಶುಚಿ ಮಾಡಬೇಕು?

ವಾರದಲ್ಲಿ ಒಂದು ಸಲ ತರಕಾರಿ ತುಂಬುತ್ತಲಿದ್ದರೆ ಮತ್ತು ಹಳೆ ತರಕಾರಿ ಬದಲಾಯಿಸುತ್ತಿದ್ದರೆ, ಆಗ ತಿಂಗಳಿಗೆ ಒಂದು ಸಲ ಫ್ರಿಡ್ಜ್ ನ್ನು ಶುಚಿ ಮಾಡಬಹುದು. ಬಿಸಿ ನೀರು ಮತ್ತು ಸೋಪ್ ನೀರಿನಿಂದ ಇದನ್ನು ಶುಚಿ ಮಾಡಿ. ಕನಿಷ್ಠ ಎರಡು ತಿಂಗಳಿಗೆ ಒಮ್ಮೆಯಾದರೂ ಫ್ರಿಡ್ಜ್ ನ್ನು ಶುಚಿ ಮಾಡುವುದು ಅತೀ ಅಗತ್ಯ.

​ಫ್ರಿಡ್ಜ್ ಶುಚಿ ಮಾಡುವುದು ಹೇಗೆ?

ಮೊದಲಿಗೆ ಫ್ರಿಡ್ಜ್ ನಲ್ಲಿ ಇರುವಂತಹ ಎಲ್ಲಾ ಸಾಮಗ್ರಿಗಳನ್ನು ಹೊರಗೆ ತೆಗೆಯಿರಿ. ಇದರ ಬಳಿಕ ಫ್ರಿಡ್ಜ್ ನ ಕೆಲವೊಂದು ಶೆಲ್ವ್ಸ್ ನ್ನು ತೆಗೆಯಿರಿ. ಇವುಗಳನ್ನು ಬಿಸಿ ನೀರು ಹಾಕಿದ ಸೋಪ್ ನೀರಿನಿಂದ ತೊಳೆಯಿರಿ. ಫ್ರಿಡ್ಜ್ ನ ಒಳಗಡೆ ಕೂಡ ಬಿಸಿ ನೀರು ಮತ್ತು ಸೋಪ್ ನೀರಿನಿಂದ ತೊಳೆಯಿರಿ.

ಫ್ರಿಡ್ಜ್ ತೊಳೆಯುವ ಮೊದಲು ಅದನ್ನು ಸ್ವಿಚ್ ಆಫ್ ಮಾಡಿಕೊಂಡು ಅದನ್ನು ಅನ್ ಫ್ಲಗ್ ಮಾಡಿಕೊಳ್ಳಿ. ಸರಿಯಾಗಿ ತೊಳೆದ ಬಳಿಕ ಹೆಚ್ಚುವರಿ ನೀರನ್ನು ಒರೆಸಿ. ಈ ವಿಧಾನಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ಫ್ರಿಡ್ಜ್ ಶುಚಿಯಾಗುವುದು. ಯಾವುದೇ ಆಹಾರ ಅಥವಾ ಸಾಮಾಗ್ರಿಯು ಅವಧಿ ಮೀರಿದ್ದರೆ ಆಗ ನೀವು ಅದನ್ನು ತೆಗೆಯಿರಿ. ಹಣ್ಣು ಹಾಗೂ ತರಕಾರಿಗಳು ಕೆಟ್ಟಿದ್ದರೆ ಅದನ್ನು ತೆಗೆಯಿರಿ.

​ಶುಚಿ ಮತ್ತು ಆರೋಗ್ಯಕಾರಿಯಾಗಿಡಲು…

ಫ್ರಿಡ್ಜ್ ನ್ನು ಸರಿಯಾಗಿ ಶುಚಿ ಮಾಡಿದ ಬಳಿಕ ಯಾವಾಗಲೊಮ್ಮೆ ಸ್ಯಾನಿಟೈಸ್ ಮಾಡಿಕೊಳ್ಳಿ ಮತ್ತು ಇದರಿಂದ ಆಹಾರಗಳು ಆರೋಗ್ಯಕಾರಿ ಆಗಿರುವುದು. ಕಾಯಿಲೆಗಳನ್ನು ಉಂಟು ಮಾಡುವಂತಹ ಆಹಾರವನ್ನು ಹೊರಗೆ ತೆಗೆಯಿರಿ.

ಸರಿಯಾದ ತಾಪಮಾನವನ್ನು ಕಾಪಾಡಿಕೊಂಡು ಹೋಗಿ. ಕೀಟಾಣುಗಳು ಹೆಚ್ಚಾಗಿ ಆಹಾರದಲ್ಲಿ ಬೆಳೆಯುತ್ತದೆ. ರೆಫ್ರಿಜರೇಟರ್ ಸಾಮಾನ್ಯವಾಗಿ 4 ಡಿಗ್ರಿ ಸೆ.ನಲ್ಲಿ ಇಡಬೇಕು. ಅದೇ ರೀತಿ ಫ್ರೀಜರ್ -10 ಡಿಗ್ರಿ ಸೆ.ನಲ್ಲಿ ಇರಬೇಕು.

​ಅವಧಿ ಮುಗಿದ ಆಹಾರ ಗಮನಿಸಿ

ಫ್ರಿಡ್ಜ್ ನ್ನು ಶುಚಿಯಾಗಿಡುವ ವೇಳೆ ನೀವು ಅವಧಿ ಮುಗಿದಿರುವಂತಹ ಆಹಾರದ ಕಡೆಗೆ ಹೆಚ್ಚು ಗಮನಹರಿಸಬೇಕು. ಅವಧಿ ಮುಗಿದ ಆಹಾರವು ಹಾನಿಕಾರಕ ಬ್ಯಾಕ್ಟೀರಿಯಾವಾದ ಇ ಕೋಲಿಯಂತಹ ಬ್ಯಾಕ್ಟೀರಿಯಾಗಳನ್ನು ಉಂಟು ಮಾಡುವುದು. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.

​ಅತಿಯಾಗಿ ತುಂಬಬೇಡಿ

ಫ್ರಿಡ್ಜ್ ನಲ್ಲಿ ಆಹಾರ ಮತ್ತು ಸಾಮಗ್ರಿಗಳನ್ನು ಇಡುವ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ ಅತಿಯಾಗಿ ತುಂಬಿಡಬಾರದು. ಸರಿಯಾಗಿ ಗಾಳಿಯಾಡಲು ಅಲ್ಲಿ ಜಾಗವಿರಬೇಕು ಮತ್ತು ಸರಿಯಾದ ತಾಪಮಾನದಲ್ಲಿ ಫ್ರಿಡ್ಜ್ ನ್ನು ಇಡಬೇಕು.

​ಫ್ರೀಜರ್ ಆರೈಕೆ

ಫ್ರೀಜರ್ ನ ತಾಪಮಾನವನ್ನು -10 ಡಿಗ್ರಿ ಸೆ.ಯಲ್ಲಿ ಇಡಬೇಕು. ಇದರಲ್ಲಿ ಆಹಾರಗಳನ್ನು ಇಡುವ ವೇಳೆ ಅದನ್ನು ಸರಿಯಾಗಿ ಪ್ಯಾಕ್ ಮಾಡಿಡಬೇಕು. ನಿಯಮಿತವಾಗಿ ಐಸ್ ಟ್ರೇಯ ನೀರನ್ನು ಬದಲಾಯಿಸುತ್ತಾ ಇರಬೇಕು. ಇಲ್ಲಿ ಯಾವುದೇ ಆಹಾರವು ಬಿದ್ದಿದ್ದರೆ ಅದನ್ನು ಶುಚಿ ಮಾಡಿ ಮತ್ತು ಫ್ರೀಜರ್ ನಲ್ಲಿ ಕೂಡ ಸರಿಯಾದ ಜಾಗವು ಇರಬೇಕು. ಇಲ್ಲವಾದಲ್ಲಿ ಫ್ರೀಜರ್ ಗೆ ಹಾನಿ ಆಗಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ