ಆ್ಯಪ್ನಗರ

ಡೆಂಗೆ ತಡೆಗಟ್ಟುವ 3 ಪರಿಣಾಮಕಾರಿಯಾದ ಮನೆಮದ್ದು

ಡೆಂಗೆ ಜ್ವರದಿಂದ ಬಳಲುತ್ತಿದ್ದರೆ ಚಿಕಿತ್ಸೆ ಜತೆಗೆ ಈ ಮನೆಮದ್ದು ಮಾಡಿ ಬೇಗನೆ ಚೇತರಿಸಿಕೊಳ್ಳಬಹುದು. ಇಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಯಾವುದೇ ಅಡ್ಡಪರಿಣಾಮವಿಲ್ಲದ 3 ಮನೆಮದ್ದು ಬಗ್ಗೆ ಹೇಳಲಾಗಿದೆ ನೋಡಿ.

Vijaya Karnataka Web 14 Aug 2020, 5:58 pm
ಡೆಂಗೆ ಎಂಬ ಮಹಾಮಾರಿ ಹೆಚ್ಚಾಗಿ ಕಂಡು ಬರುತ್ತಿದೆ. ರಾಜ್ಯದಲ್ಲಿ ತುಂಬಾ ಜನರು ಡೆಂಗೆ ಜ್ವರದಿಂದ ಬಳಲುತ್ತಿರುವುದು ವರದಿಯಾಗಿದೆ, ಈ ಡೆಂಗೆ ತಡೆಯಲು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ.
Vijaya Karnataka Web dengue


ಡೆಂಗೆ ಜ್ವರದ ಅಪಾಯವನ್ನು ತಡೆಗಟ್ಟಲು ಈ ಮನೆಮದ್ದು ಮಾಡುವುದು ಒಳ್ಳೆಯದು

ಮೆಂತೆ ಬೀಜ
1-2 ಚಮಚ ಮೆಂತೆ ಬೀಜ, 1 ಕಪ್ ಬಿಸಿ ನೀರು ಮತ್ತು ಜೇನು
ಒಂದು ಕಪ್‌ ನೀರನ್ನು ಕುದಿಸಿ ಅದರಲ್ಲಿ ಮೆಂತೆ ಹಾಕಿ 5 ನಿಮಿಷದ ಬಳಿಕ ಜೇನು ಹಾಕಿ ಬಿಸಿ ಬಿಸಿಯಾಗಿ ಕುಡಿಯಿರಿ. ಈ ರೀತಿ ದಿನದಲ್ಲಿ 2-3 ಬಾರಿ ಕುಡಿಯಿರಿ.
ಮೆಂತೆಯಲ್ಲಿ ವಿಟಮಿನ್ ಸಿ ಮತ್ತು ಕೆ ಇದ್ದು ಡೆಂಗೆ ಗುಣ ಪಡಿಸುವಲ್ಲಿ ತುಂಬಾ ಸಹಕಾರಿ.

ಅರಿಶಿಣ ಮತ್ತು ಹಾಲು
1 ಚಮಚ ಅರಿಶಿಣ, 1 ಚಮಚ ಜೇನು ಮತ್ತು 1 ಲೋಟ ಹಾಲು
ಒಂದು ಲೋಟ ಬಿಸಿ ಹಾಲಿಗೆ 1 ಚಮಚ ಅರಿಶಿಣ ಮತ್ತು ಜೇನು ಹಾಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ತುಳಸಿ ಎಲೆ ಮತ್ತು ಕಾಳು ಮೆಣಸಿನ ಪುಡಿ
1 ಲೋಟ ನೀರು, ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, 10-12 ತುಳಸಿ ಎಲೆ, 1 ಚಮಚ ಜೇನು
ನೀರಿಗೆ ತುಳಸಿ ಎಲೆ ಹಾಕಿ ಕುದಿಸಿ ಅದ್ಕಕೆ ಕಾಳು ಮೆಣಸಿನ ಪುಡಿ, ಜೇನು ಹಾಕಿ ಕುಡಿಯಿರಿ. ಇದನ್ನು ದಿನದಲ್ಲಿ ಮೂರು ಬಾರಿ ಕುಡಿಯಿರಿ.
ತುಳಸಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ತುಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ದೇಹದಲ್ಲಿರುವ ಬೇಡದ ಬ್ಯಾಕ್ಟಿರಿಯಾಗಳನ್ನು ಕೊಲ್ಲುವಲ್ಲಿ ಸಹಕಾರಿ. ಡೆಂಗೆ ವಿರುದ್ಧ ದೇಹವನ್ನು ರಕ್ಷಣೆ ಮಾಡುವಲ್ಲಿ ಪರಿಣಾಮಕಾರಿ.

ಪಪ್ಪಾಯಿ ಎಲೆಯ ಮದ್ದು
ಡೆಂಗೆ ಜ್ವರವಾದಾಗ ಪ್ಲೇಟ್‌ಲೆಟ್ಸ್‌ ತುಂಬಾ ಕಡಿಮೆಯಾಗುವುದು, ಪ್ಲೇಟ್‌ಲೆಟ್ಸ್‌ ಜಾಸ್ತಿಯಾಗಲು ಔಷಧಿಯ ಜತೆಗೆ ಪಪ್ಪಾಯಿ ಎಲೆಯ ಮನೆಮದ್ದು ನಿಮ್ಮ ಸಹಾಯಕ್ಕೆ ಬರುತ್ತದೆ.
ಪಪ್ಪಾಯಿ ಎಲೆಯ ಮನೆಮದ್ದು ಮಾಡುವುದು ಹೇಗೆ?
ಪಪ್ಪಾಯಿಯ ಕುಡಿ ಎಲೆಯನ್ನು ತಂದು ಅದನ್ನು ಕೈಯಿಂದಲೇ ಕಿವುಚಿ, ಹಿಂಡಿ ರಸ ತೆಗೆದು ಒಂದು ಚಮಚದಂತೆ ಎರಡು ಹೊತ್ತು ಕುಡಿಯಿರಿ.
ಇನ್ನು ಒಂದು ಅಥವಾ ಎರಡು ಪಪ್ಪಾಯಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯಬಹುದು. ಇದರಿಂದ ಕಡಿಮೆಯಾಗಿದ್ದ ಪ್ಲೇಟ್‌ಲೆಟ್ಸ್ ಒಂದು ದಿನದಲ್ಲಿ ಹೆಚ್ಚಾಗುತ್ತದೆ.
ಪಪ್ಪಾಯಿ ಎಲೆಯ ರಸವನ್ನು ತುಂಬಾ ಕುಡಿಯಬೇಡಿ, ಇದರಿಂದ ಅತಿಸಾರ ಉಂಟಾಗುವ ಸಾಧ್ಯತೆ ಇದೆ. ಇದನ್ನು ಕುಡಿಯುವಾಗ ವೈದ್ಯರ ಗಮನಕ್ಕೆ ತನ್ನಿ.

ಎಳನೀರು
ಡೆಂಗೆ ಬಂದ ಮೇಲೆ ದಿನದಲ್ಲಿ 2-3 ಎಳನೀರು ಕುಡಿದರೆ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ. ಇನ್ನು ವಾಂತಿ ಬಂದಂತೆ ಅನಿಸುತ್ತಿದ್ದರೆ ಶುಂಠಿ ಹಾಕಿ ಕಾಯಿಸಿದ ನೀರು ಕುಡಿಯಿರಿ. ಡೆಂಗೆ ಬಂದಾಗ ತಾಜಾ ಹಣ್ಣಿನ ರಸ, ಎಳನೀರು, ನೀರು ಕುಡಿದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

ಕಿವಿಹಣ್ಣು
ಡೆಂಗೆ ಜ್ವರ ಬಂದಾಗ ಬೇಗನೆ ಚೇತರಿಸಿಕೊಳ್ಳಲು ಕಿವಿಹಣ್ಣು ತಿನ್ನಿ. ಇದು ಬೇಗನೆ ಚೇತರಿಸಿಕೊಳ್ಳಲು ಸಹಕಾರಿ ಹಾಗೂ ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಹೆಚ್ಚಿಸುತ್ತದೆ, ಹಾಗೂ ಪ್ಲೇಟ್‌ಲೆಟ್ಸ್ ಹೆಚ್ಚಾಗುವುದು. ಕಿವಿಹಣ್ಣನ್ನು ದಿನದಲ್ಲಿ 3-4 ತಿನ್ನಿ. ಇದರಿಂದ ಜ್ಯೂಸ್‌ ಮಾಡಿಯೂ ಕುಡಿಯಬಹುದು.

ಡೆಂಗೆ ಹರಡುವ ಅಪಾಯಕಾರಿ ಸೊಳ್ಳೆಯನ್ನು ತಡೆಗಟ್ಟುವುದು ಹೇಗೆ?
* ಡೆಂಗೆ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು ಹಾಗೂ ಹೊರಗಡೆ ಹೋಗುವಾಗ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಬೇಕು. ಉದ್ದ ತೋಳಿನ ಸಡಿಲವಾದ ಬಟ್ಟೆಗಳನ್ನು ಮಕ್ಕಳಿಗೆ ಹಾಕಿಕೊಡಿ. ಕಪ್ಪು, ಕಡು ನೀಲಿ ಬಣ್ಣ ಸೊಳ್ಳೆಗಳನ್ನು ಆಕರ್ಷಿಸುತ್ತದೆ, ಬಿಳಿ ಹಾಗೂ ತೆಳು ಬಣ್ಣದ ಬಟ್ಟೆಗಳನ್ನು ಹಾಕಿಕೊಡಿ.
* ಇನ್ನು ಸೊಳ್ಳೆ ನಿವಾರಕಗಳನ್ನು ಬಳಸಿ, ನಿದ್ದೆ ಮಾಡುವಾಗ ಸೊಳ್ಳೆ ಪರದೆಯೊಳಗೆ ಮಲಗಿಸುವುದು ಒಳ್ಳೆಯದು.
* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಅನೇಕ ರೋಗಗಳು ಬರದಂತೆ ತಡೆಯಬಹುದು.
* ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
* ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ.
* ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ.
* ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
* ತೊಟ್ಟಿ, ಬಿಂದಿಗೆ, ಡ್ರಮ್‌ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
* ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
* ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
* ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ