ಆ್ಯಪ್ನಗರ

ಮಧುಮೇಹ ವಿರುದ್ಧ ಹೋರಾಡಲು ಅರಿಶಿನದ ಬಳಕೆ

ಅರಿಶಿನವನ್ನು ಧಾರ್ಮಿಕ ಕೆಲಸಗಳಲ್ಲಿ, ಔಷಧಿ ತಯಾರಿಕೆ ಮತ್ತು ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುವುದು.

Vijaya Karnataka Web 3 May 2021, 9:55 am
ಅರಿಶಿನ ಭಾರತೀಯ ಸಾಂಪ್ರದಾಯಿಕ ಪಾಕವಿಧಾನಗಳಲ್ಲಿ ಬಳಸುವ ಒಂದು ಸಾಂಬಾರು ಪದಾರ್ಥ. ಇದರ ಬಣ್ಣ ಹಳದಿಯಿರುವುದರಿಂದ ಭಾರತೀಯ ಕೇಸರಿ ಮತ್ತು ಚಿನ್ನದ ಮಸಾಲೆ ಎಂತಲೂ ಕರೆಯುತ್ತಾರೆ. ಇದರಲ್ಲಿ 100ಕ್ಕೂ ಹೆಚ್ಚು ಸಂಯುಕ್ತಗಳು ಇರುವುದರಿಂದ ಪವಾಡ ಮಸಾಲೆ ಎನ್ನಲಾಗುವುದು. ಇದನ್ನು ಬಳಸಿ ಮಧುಮೇಹದ ವಿರುದ್ಧ ಹೋರಾಡಬಹುದು. ಹಾಗಾದರೆ ಅದು ಹೇಗೆ? ಎನ್ನುವುದನ್ನು ತಿಳಿಯೋಣ.
Vijaya Karnataka Web can turmeric help manage diabetes
ಮಧುಮೇಹ ವಿರುದ್ಧ ಹೋರಾಡಲು ಅರಿಶಿನದ ಬಳಕೆ


​ಹಾಲು ಮತ್ತು ಅರಿಶಿನ

ಮಧುಮೇಹದ ವಿರುದ್ಧ ಹೋರಾಡಲು ಅರಿಶಿನ ಸಹಾಯ ಮಾಡುವುದು. ಮೊದಲು ಹಾಲನ್ನು ಕುದಿಸಿ, ಅರಿಶಿನವನ್ನು ಸೇರಿಸಿ. ಸ್ವಲ್ಪ ಸಮಯ ತಳಮಳಿಸಿ. ಬಳಿಕ ಬೆಚ್ಚಗೆ ಮಾಡಿಕೊಂಡು ಸೇವಿಸಿ. ಈ ಕ್ರಮದಲ್ಲಿ ಹಾಲನ್ನು ಸೇವಿಸಿದರೆ ಟೈಪ್ 2 ಡಯಾಬಿಟಿಸ್ ಅನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗುವುದು. ಕೆನೆ ತೆಗೆದ ಹಾಲನ್ನು ಮಾತ್ರ ಬಳಸಬೇಕು.

​ಅರಿಶಿನ ಮತ್ತು ಕಾಳು ಮೆಣಸು

- ಮೊದಲಿಗೆ ಒಂದು ಲೋಟ ಹಾಲನ್ನು ಕುದಿಯಲು ಬಿಡಿ.

- ನಂತರ ಅರಿಶಿನ ಸೇರಿಸಿ.

- ಚೆನ್ನಾಗಿ ಕುದಿ ಬಂದ ನಂತರ ಉರಿಯನ್ನು ಆರಿಸಿ, ತಣ್ಣಗಾಗಲು ಬಿಡಿ.

- ಬಳಿಕ ಕಾಳು ಮೆಣಸಿನ ಪುಡಿ ಸೇರಿಸಿ.

- ಅರಿಶಿನ ಮತ್ತು ಕಾಳು ಮೆಣಸಿನಲ್ಲಿ ಇರುವ ಸಂಯುಕ್ತಗಳು ರಕ್ತನಾಳಗಳ ಹಾನಿಯನ್ನು ತಡೆಯುತ್ತವೆ. ಇದು ಮಧುಮೇಹಿಗಳಿಗೆ ಉತ್ತಮ ಪರಿಹಾರ ಆಗುವುದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇವಿಸಿ ನೆಲ್ಲಿಕಾಯಿ ಮತ್ತು ನುಗ್ಗೆಸೊಪ್ಪು

​ಹಾಲು ಮತ್ತು ದಾಲ್ಚಿನಿ ಪುಡಿ

- ಒಂದು ಗ್ಲಾಸ್ ಹಾಲನ್ನು ಕುದಿಸಿ, ಅದಕ್ಕೆ ಅರಿಶಿನ ಮತ್ತು ಒಂದು ಚಿಟಕೆ ದಾಲ್ಚಿನ್ನಿ ಪುಡಿ ಸೇರಿಸಿ.

- ಪ್ರತಿ ದಿನ ಮುಂಜಾನೆ ಈ ಮಿಶ್ರಣದ ಹಾಲನ್ನು ಸೇವಿಸಬೇಕು.

- ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ದೇಹದಲ್ಲಿ ಇರುವ ಕೊಬ್ಬಿನಾಮ್ಲ, ಇನ್ಸುಲಿನ್ ಮತ್ತು ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

ಅರಿಶಿನದ ಬೇರು

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಅರಿಶಿನದ ಬೇರು ಸುಲಭವಾದ ಆರೈಕೆ ಮಾಡುವುದು. ಅರಿಶಿನ ಬೇರಿನ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಬೀಟಾ ಕೋಶಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

​ಜೇನು ಮತ್ತು ಅರಿಶಿನ

ಜೇನುತುಪ್ಪ ಮತ್ತು ಅರಿಶಿನ ಮಿಶ್ರಿತ ಹಾಲು ಅದ್ಭುತ ಆರೋಗ್ಯಕ್ಕೆ ಪ್ರೇರೇಪಿಸುತ್ತದೆ. ಇದು ಎಲ್ಲರಿಗೂ ಒಗ್ಗುವುದಿಲ್ಲ. ಜೇನುತುಪ್ಪದಲ್ಲಿ ಸಿಹಿ ಅಂಶ ಇರುತ್ತದೆ. ಹಾಗಾಗಿ ನೀವು ಅದನ್ನು ಬಳಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ. ಕಡಿಮೆ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ, ಕುಡಿಯಿರಿ. ಮಧುಮೇಹಿಗಳಿಗೆ ಇದು ಉತ್ತಮ ಸಂಯೋಜನೆ ಆಗುವುದು.

ಬೆಳ್ಳುಳ್ಳಿ ಚಹಾ ಮಧುಮೇಹಿಗಳಿಗೆ ಒಳ್ಳೆಯದೇ?

​ಶುಂಠಿ ಮತ್ತು ಅರಿಶಿನ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಾಲಿನೊಂದಿಗೆ ಅರಿಶಿನ ಮತ್ತು ಶುಂಠಿಯನ್ನು ಬೆರೆಸಿ ಕುಡಿಯಬೇಕು. ಒಂದು ಗ್ಲಾಸ್ ಹಾಲಿಗೆ ಒಂದು ಚಿಟಕೆ ಶುಂಠಿ ಪುಡಿಯನ್ನು ಸೇರಿಸಿ ಕುಡಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಆಗುವುದು. ಇದು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುವುದು.

​ನೆಲ್ಲಿಕಾಯಿ ಮತ್ತು ಅರಿಶಿನ

- ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಟೀ ಚಮಚ ನೆಲ್ಲಿಕಾಯಿ ರಸ ಮತ್ತು ಚಿಟಿಕೆ ಅರಿಶಿನವನ್ನು ಸೇರಿಸಿ, ಮಿಶ್ರಗೊಳಿಸಿ.

- ಪ್ರತಿ ದಿನ ಮುಂಜಾನೆ ನೆಲ್ಲಿಕಾಯಿ ಮಿಶ್ರಿತ ಹಾಲನ್ನು ಗಣನೀಯವಾಗಿ ಕುಡಿಯುವುದರಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು.

To Read in English Click: 7 ways turmeric can help you fight against diabetes

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ