ಆ್ಯಪ್ನಗರ

ಓಮದ ಕಾಳಿನ ಪ್ರಯೋಜನಗಳೇನು, ಡಾಕ್ಟರ್‌ ಪ್ರಕಾರ ಯಾರೆಲ್ಲಾ ಇದನ್ನು ಸೇವಿಸಬಾರದು

ಅಡುಗೆ ಮನೆಯಲ್ಲಿ ಇರುವ ಓಮ ಕಾಳು ಒಂದು ಅದ್ಭುತ ಮನೆಮದ್ದು ಎಂದರೆ ತಪ್ಪಾಗದು. ಇದನ್ನು ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳಿಗೆ ಬಳಸಬಹುದು.

Authored byರಜತಾ | Produced byಸೋಮನಗೌಡ | Vijaya Karnataka Web 5 Apr 2024, 5:00 pm
ಭಾರತೀಯರ ಅಡುಗೆ ಮನೆಯಲ್ಲಿ ಕಂಡುಬರುವ ಓಮ ಕಾಳಿನ್ನು ಹಲವಾರು ಬಗೆಯ ಪದಾರ್ಥಗಳಿಗೆ ಬಳಕೆ ಮಾಡುವರು. ಅದರಲ್ಲೂ ಕರಾವಳಿಯ ಮೀನಿನ ಖಾದ್ಯಕ್ಕೆ ಇದು ಬೇಕೇಬೇಕು. ಓಮ ಕಾಳಿನಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳು ಕೂಡ ಇವೆ. ಇದರ ಓಮ ಸತ್ವ ಎಂದು ಕರೆಯುವ ಇದರಿಂದ ಹೊಟ್ಟೆಯ ಅಜೀರ್ಣ, ವಾಯು, ತೇಗು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಓಮ ಕಾಳು ದೇಹಕ್ಕೆ ಸ್ವಲ್ಪ ಉಷ್ಣವನ್ನು ಉಂಟು ಮಾಡಿದರೂ ಅದು ವಾಯು ನಿವಾರಕವಾಗಿ ಕೆಲಸ ಮಾಡುತ್ತದೆ. ಓಮ ಕಾಳಿನಲ್ಲಿ ಇರುವ ಕೆಲವು ಆರೋಗ್ಯ ಗುಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಹೊಟ್ಟೆ ಸಂಬಂಧಿತ ಸಮಸ್ಯೆಗೆ

ಹೊಟ್ಟೆ ನೋವು: ಮಕ್ಕಳಲ್ಲಿ ಕಂಡುಬರುವ ಹೊಟ್ಟೆ ನೋವಿನ ಸಮಸ್ಯೆಗೆ ಇದನ್ನು ಬಳಕೆ ಮಾಡಬಹುದು.


ಅಜೀರ್ಣ ನಿವಾರಣೆ: ಓಮ ಕಾಳನ್ನು ಸೇವನೆ ಮಾಡಿದರೆ, ಆಗ ಅಜೀರ್ಣ ಸಮಸ್ಯೆಯು ಕಡಿಮೆ ಆಗುವುದು ಮತ್ತು ಹೊಟ್ಟೆಯ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.
ಹೊಟ್ಟೆ ಉಬ್ಬರ ಕಡಿಮೆ: ಓಮ ಕಾಳನ್ನು ಬಳಸಿದರೆ ಆಗ ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಗ್ಯಾಸ್ ಕಡಿಮೆ ಮಾಡುವುದು.

ಇತರ ಪ್ರಯೋಜನಗಳು

ಹೃದಯ ಸ್ನೇಹಿ: ದೇಹದಲ್ಲಿನ ವಿಷಕಾರಿ ಅಂಶಗಳನ್ನು ಕಡಿಮೆ ಮಾಡಿ, ಇದು ಹೃದಯ ಸ್ನೇಹಿಯಾಗಿ ಕೆಲಸ ಮಾಡುವುದು.
ಬೊಜ್ಜು ನಿವಾರಣೆ: ಬೊಜ್ಜು ಕಡಿಮೆ ಮಾಡಿಕೊಳ್ಳುವವರು ಇದ್ದರೆ ಆಗ ಓಮ ಕಾಳನ್ನು ಬಳಸಬಹುದು. ಇದು ಚಯಾಪಚಯ ವೃದ್ಧಿಸಿ, ಕೊಬ್ಬು ಕರಗಿಸಲು ಸಹಕಾರಿ.
ವಾತ ಕಡಿಮೆ ಮಾಡುವುದು: ಇದನ್ನು ಬಳಕೆ ಮಾಡಿದರೆ ಆಗ ದೇಹದಲ್ಲಿನ ವಾತ ಸಮಸ್ಯೆಯು ಕಡಿಮೆ ಆಗುವುದು.
ಇದನ್ನೂ ಓದಿ: ಮಧುಮೇಹಿಗಳು ಬಾದಾಮಿ, ಗೋಡಂಬಿ ತಿನ್ನೋದಕ್ಕಿಂತ ಈ ಬೀಜಗಳನ್ನು ತಿನ್ನೋದು ಒಳ್ಳೆಯದು

ತಯಾರಿಸುವುದು ಹೇಗೆ

2 ರಿಂದ 3 ಗ್ರಾಂ ಓಮ ಕಾಳನ್ನು ಪುಡಿ ಮಾಡಿ. ಅದನ್ನು ಒಂದು ಲೋಟ ನೀರಿಗೆ ಹಾಕಿ ಮತ್ತು ಸ್ವಲ್ಪ ಕಲ್ಲು ಸಕ್ಕರೆ ಹಾಕಿ. ಇದನ್ನು ಸರಿಯಾಗಿ ಕುದಿಸಿ, ಅರ್ಧಕ್ಕೆ ಬಂದ ಬಳಿಕ ತೆಗೆದು ಸೋಸಿಕೊಂಡು ಮಗುವಿಗೆ ಒಂದು ಚಮಚದಷ್ಟು ನೀಡಿದರೆ, ಆಗ ಹೊಟ್ಟೆ ನೋವಿನ ಸಮಸ್ಯೆಯು ಕಡಿಮೆ ಆಗುವುದು.

ಯಾರೆಲ್ಲಾ ಇದನ್ನು ಬಳಸಬಾರದು

ಪುರುಷರು ಇದನ್ನು ಅತಿಯಾಗಿ ಬಳಕೆ ಮಾಡಬಾರದು. ಇದನ್ನು ಬಳಸಿದರೆ ಆಗ ವೀರ್ಯದ ಗಣತಿಯನ್ನು ಕಡಿಮೆ ಮಾಡುವುದು. ಪುರುಷರು ವಾರದಲ್ಲಿ ಒಂದೆರಡು ಸಲ ಇದನ್ನು ಬಳಸಬಹುದು.
ಮಲ, ಮೂಗಿನಲ್ಲಿ ರಕ್ತ ಹೋಗುವ ಸಮಸ್ಯೆ ಇರುವವರು ಓಮ ಕಾಳನ್ನು ಕಡೆಗಣಿಸಿದರೆ ಒಳ್ಳೆಯದು. ಇದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವ ಪರಿಣಾಮ ಮತ್ತಷ್ಟು ಹಾನಿ ಆಗಬಹುದು.

ಲೇಖಕರ ಬಗ್ಗೆ
ರಜತಾ
ರಜತ ಬಂಗೇರ ಅವರು ಒಂದು ದಶಕದ ಅನುಭವ ಹೊಂದಿರುವ ಅನುಭವಿ ಪತ್ರಕರ್ತರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಲೈಫ್‌ಸ್ಟೈಲ್ ಪತ್ರಕರ್ತರಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಆರೋಗ್ಯ , ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿರುವ ಇವರು ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ, ರಜತ ಅವರು ನಮ್ಮ ಲೈಫ್‌ಸ್ಟೈಲ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸ್ಥಾನದಲ್ಲಿ, ಉನ್ನತ-ಗುಣಮಟ್ಟದ ವಿಷಯವನ್ನು ಓದುಗರಿಗೆ ಒದಗಿಸುತ್ತಿದ್ದಾರೆ. ಉದಯೋನ್ಮುಖ ಪ್ರವೃತ್ತಿಗಳನ್ನು ಗುರುತಿಸುವ ಮತ್ತು ಉತ್ತಮ ಲೇಖನಗಳನ್ನು ರಚಿಸುವ ಇವರು ನಮ್ಮ ಸಂಸ್ಥೆಯ ಪ್ರಮುಖ ಲೈಫ್‌ಸ್ಟೈಲ್ ಪತ್ರಕರ್ತರಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಕೆಲಸವನ್ನು ಹೊರತುಪಡಿಸಿ, ರಜತ ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ತನ್ನ ಪ್ರಯಾಣದ ಮೂಲಕ ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವುದನ್ನು ಆನಂದಿಸುತ್ತಾರೆ. ಅವರು ಅತ್ಯಾಸಕ್ತಿಯ ನೃತ್ಯಗಾರ್ತಿಯೂ ಆಗಿದ್ದು, ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಆಸಕ್ತಿಯನ್ನು ಹೊಂದಿದ್ದಾರೆ. ಈ ಹವ್ಯಾಸಗಳು ಅವರ ಬರವಣಿಗೆಯನ್ನು ಪ್ರೇರೇಪಿಸುತ್ತವೆ... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ