ಆ್ಯಪ್ನಗರ

ಸಂಧಿವಾತಕ್ಕೆ ಎಲೆಕೋಸು ಬೆಸ್ಟ್‌

ಎಲೆಕೋಸಿನ ಎಲೆಗಳನ್ನು ಬಿಡಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ...

Vijaya Karnataka Web 7 May 2017, 5:30 am

-ಎಲೆಕೋಸಿನ ಎಲೆಗಳನ್ನು ಬಿಡಿಸಿ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಫ್ರೀಜರ್‌ನಲ್ಲಿಡಿ. ಸಂಧಿವಾತದ ತೊಂದರೆ ಆರಂಭವಾಗುವಾಗ ಈ ಎಲೆಗಳನ್ನು ಹೊರ ತೆಗೆದು ತಣ್ಣಗಿರುವಾಗಲೇ ನೋವಿರುವ ಭಾಗಕ್ಕೆ ಇಟ್ಟು ಅದರ ಮೇಲೆ ದಪ್ಪ ಟವೆಲ್‌ ಸುತ್ತಿ ಕೊಂಚ ಕಾಲ ಹಾಗೆಯೇ ಬಿಡಿ.

-ತಣ್ಣನೆಯ ಎಲೆಕೋಸಿನಲ್ಲಿರುವ ಕೆಲವು ಪೋಷಕಾಂಶಗಳು ಚರ್ಮದ ಮೂಲಕ ಹೀರಲ್ಪಡುತ್ತವೆ. ಈ ಪೋಷಕಾಂಶಗಳು ನೋವಿನ ಭಾಗದಲ್ಲಿರುವ ಯೂರಿಕ್‌ ಆಮ್ಲವನ್ನು ಕರಗಿಸಲು ನೆರವಾಗುತ್ತವೆ. ಈ ನೋವು ಕಡಿಮೆಯಾಗಿಸುತ್ತದೆ. ನೋವು ಪೂರ್ಣವಾಗಿ ಹೋಗದಿದ್ದರೂ ಆ ಭಾಗದ ಉರಿ ಕಡಿಮೆಯಾಗುತ್ತದೆ.

-ನಿಮ್ಮ ಪಾದಗಳು ಊದಿಕೊಂಡಿದ್ದರೆ ಎಲೆಕೋಸಿನ ಎಲೆಗಳನ್ನು ಪಾದಗಳು ಪೂರ್ಣವಾಗಿ ಆವರಿಸುವಂತೆ ಮುಚ್ಚಿ ಬಟ್ಟೆಯಿಂದ ಕಟ್ಟಿ ಸುಮಾರು ಅರ್ಧ ಘಂಟೆ ಹಾಗೆಯೇ ಬಿಡಿ. ಇದರಿಂದ ಊದಿಕೊಂಡಿರುವ ಪಾದಗಳು ಸಜಹ ಸ್ಥಿತಿಗೆ ಮರಳುತ್ತದೆ.

-ಕೆಲವರಿಗೆ ಎಲೆಕೋಸಿನಿಂದ ಅಲರ್ಜಿಯಾಗುತ್ತದೆ. ಇದರ ಬಳಕೆಯಿಂದ ದೇಹದಲ್ಲಿ ತುರಿಕೆ ಕಂಡು ಬಂದರೆ ಈ ಎಲೆಗಳಿಂದ ದೂರವಿರಿ.

-ಎಲೆಕೋಸನ್ನು ಸ್ವಲ್ಪ ಬಿಸಿ ಮಾಡಿ ಊದಿದ ಭಾಗದ ಮೇಲೆ ಇಟ್ಟು ಬಟ್ಟೆಯ ಪಟ್ಟಿಯಿಂದ ಜಾರದಂತೆ ಕಟ್ಟಿ, ಮುಕ್ಕಾಲು ಗಂಟೆ ಹಾಗೆಯೇ ಬಿಡಿ. ಇದರಿಂದ ನೋವು ಶೀಘ್ರವೇ ಕಡಿಮೆಯಾಗುತ್ತದೆ.

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ