ಆ್ಯಪ್ನಗರ

ತೂಕ ತಗ್ಗಿಸಲು ಸಹಕಾರಿ ಸೂರ್ಯಕಾಂತಿ ಬೀಜ

ಇದರಲ್ಲಿರುವ ಕೊಬ್ಬಿನ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಈ ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ.

Agencies 28 May 2019, 3:39 pm
ಸೂರ್ಯಕಾಂತಿ ಬೀಜದಿಂದ ಎಣ್ಣೆ ತಯಾರಿಸುವುದು ನಿಮಗೆ ಗೊತ್ತೇ ಇರುತ್ತದೆ. ಆದರೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೀಜದ ಆರೋಗ್ಯ ಲಾಭಗಳ ಬಗ್ಗೆ ಗೊತ್ತೇ?

ಹೊರಗಡೆ ಬೂದು ಬಣ್ಣದ್ದಾಗಿರುವ ಸೂರ್ಯಕಾಂತಿ ಬೀಜದ ಒಳಗಡೆ ಬೆಳ್ಳನೆಯ ತಿರುಳಿರುತ್ತದೆ. ಇದರಲ್ಲಿರುವ ಪೈಟೊಕೆಮಿಕಲ್‌ ಎಂಬ ಅಂಶ ತೂಕ ಕಡಿಮೆ
ಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿದೆ.

ಇದರಲ್ಲಿರುವ ಕೊಬ್ಬಿನ ಆಮ್ಲ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲು ನೆರವಾಗುತ್ತದೆ. ಈ ಮೂಲಕ ಹೃದಯ ಸಂಬಂಧಿ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ.

ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಸೂರ್ಯಕಾಂತಿ ಬೀಜದಲ್ಲಿ ಫಾಲೆಟ್‌ ಎಂಬ ಅಂಶವೂ ಯಥೇಚ್ಛವಾಗಿದ್ದು, ಇದು ಮಹಿಳೆಯರಿಗೆ ಅತ್ಯಗತ್ಯವಾಗಿರುವ ಜೀವಸತ್ವವಾಗಿದೆ.

ಈ ಬೀಜ ಕೊಬ್ಬು, ವಿಟಮಿನ್‌ ಇ, ಸೆಲೆನಿಯಂ ಮತ್ತು ಸತುಗಳ ಕಣಜ ಎಂದೇ ಹೇಳಬಹುದು. ಹೃದಯಾಘಾತ, ಕ್ಯಾನ್ಸರ್‌, ಸಂಧಿವಾತ ಮತ್ತು ಜೀವಕೋಶಗಳು ನಶಿಸುವಿಕೆ ಮುಂತಾದ ಸಮಸ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಇದು ತಗ್ಗಿಸುತ್ತದೆ.

ಇದರಲ್ಲಿ ವಿಟಮಿನ್ ಇ ಹಾಗೂ ಆ್ಯಂಟಿ ಆಕ್ಸಿಡೆಂಟ್ ಕೂಡ ಹೇರಳವಾಗಿದ್ದು, ಉರಿಯೂತ ನಿಯಂತ್ರಣ ಮಾಡಲು ಉತ್ತಮ.

ಬೀಜದ ಪುಡಿಯನ್ನು ನಿಮ್ಮ ನಿತ್ಯದ ಸಲಾಡ್, ಜ್ಯೂಸ್, ಮೊಸರು ಮೊದಲಾದವುಗಳ ಮೇಲೆ ಸಿಂಪಡಿಸಿ ಸೇವಿಸಿದರೆ ಆ ಖಾದ್ಯಗಳ ರುಚಿಯೂ ಹೆಚ್ಚುವುದಲ್ಲದೆ, ಪೌಷ್ಟಿಕತೆಯೂ ಹೆಚ್ಚುತ್ತದೆ.

ಇದರಲ್ಲಿರುವ ವಿಟಮಿನ್ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯಲು ಮತ್ತು ಕಪ್ಪಾಗಿರಲು ಸಹಕಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ