ಆ್ಯಪ್ನಗರ

ಕಿವಿಗಳ ಹಿಂದೆ ಕಾಣಿಸಿಕೊಳ್ಳುವ ಗುಳ್ಳೆಗಳ ತುರಿಕೆ ನಿವಾರಣೆಗೆ ಮನೆ ಮದ್ದು

ಸತ್ತ ಜೀವಕೋಶಗಳು, ಮುಚ್ಚಿಕೊಂಡ ರಂಧ್ರಗಳು ಸ್ವಚ್ಛತೆಯ ಬಗ್ಗೆ ಸೂಕ್ತ ಕಾಳಜಿ ತೋರದೆ ಇದ್ದಾಗ ಈ ಸಮಸ್ಯೆಗಳು ಊಂಟಾಗುತ್ತವೆ.

Vijaya Karnataka Web 29 Oct 2020, 4:19 pm
ಕಿವಿ ಸೂಕ್ಷ್ಮ ಅಂಗಗಳಲ್ಲಿ ಒಂದು. ಇದರ ಆರೈಕೆ ಹಾಗೂ ಸ್ವಚ್ಛತೆಯ ಬಗ್ಗೆಯೂ ಅಧಿಕ ಕಾಳಜಿ ತೋರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಿವಿಯ ಒಳ ಭಾಗದಲ್ಲಿ ಸೋರಿಕೆ, ತುರಿಕೆ, ನೋವು ಕಾಣಿಸಿಕೊಳ್ಳುವುದು. ಅಂತೆಯೇ ಕಿವಿಯ ಹಿಂದೆಯೂ ಉಬ್ಬಿಕೊಂಡಿರುವಂತಹ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಅದು ತ್ಯಂತ ನೋವು ಹಾಗೂ ತುರಿಕೆಯಿಂದ ಕಿರಿಕಿರಿಯನ್ನು ಉಂಟುಮಾಡುವುದು. ಇಂತಹ ಸಮಸ್ಯೆ ಉಂಟಾದಾಗ ಮನೆಯಲ್ಲಿಯೇ ಕೆಲವು ಆರೈಕೆಯ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
Vijaya Karnataka Web home remedies for pimples behind the ears
ಕಿವಿಗಳ ಹಿಂದೆ ಕಾಣಿಸಿಕೊಳ್ಳುವ ಗುಳ್ಳೆಗಳ ತುರಿಕೆ ನಿವಾರಣೆಗೆ ಮನೆ ಮದ್ದು


​ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆಯಲ್ಲಿ ಉರಿಯೂತದ ಮತ್ತು ಆಂಟಿಮೈಕ್ರೋಬಿಯಲ್ ಗುಣಗಳಿವೆ. ಇದು ಗುಳ್ಳೆಗಳನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಿವಿಯ ಹಿಂದೆ ಉಂಟಾಗುವ ಗುಳ್ಳೆ ಹಾಗೂ ತುರಿಕೆಗೆ ಟೀ ಟ್ರೀ ಎಣ್ಣೆಯನ್ನು ಅನ್ವಯಿಸುವುದರಿಂದ ಬಹುಬೇಗ ಶಮನವನ್ನು ಪಡೆಯಬಹುದು.

ಬಳಸುವ ವಿಧಾನ:

- ಒಂದು ಹತ್ತಿಯ ಉಂಡೆಯನ್ನು ಟೀಟ್ರೀ ಎಣ್ಣೆಯಲ್ಲಿ ಅದ್ದಿ.

- ಎಣ್ಣೆಯನ್ನು ಹೀರಿದ ಹತ್ತಿ ಉಂಡೆಯನ್ನು ಪೀಡಿತ ಪ್ರದೇಶದಲ್ಲಿ ನಿಧಾನವಾಗಿ ಅನ್ವಯಿಸಿ.

- ಪ್ರತಿದಿನ ಮಲಗುವ ಮುನ್ನ ಇದನ್ನು ಅನ್ವಯಿಸಿಕೊಂಡು ಮಲಗಿ.

- ನಿತ್ಯವೂ ಈ ಕ್ರಮವನ್ನು ಅನುಸರಿಸುವುದರಿಂದ ಸಮಸ್ಯೆಯಿಂದ ಪಾರಾಗಬಹುದು.

​ಮೊಸರು ಮತ್ತು ಓಟ್ ಮೀಲ್

ಮೊಸರಿನಲ್ಲಿ ಪ್ರೋಬಯಾಟಿಕ್ ಅಂಶ ಮತ್ತು ಓಟ್ ಮೀಲ್‍ನಲ್ಲಿ ಆಂಟಿಆಕ್ಸಿಡೆಂಟ್‍ಗಳಂತಹ ಉರಿಯೂತವನ್ನು ಕಡಿಮೆ ಮಾಡುವ ಗುಣಗಳಿವೆ. ಇದು ಕೆಂಪು ಗುಳ್ಳೆಗಳ ನಿವಾರಣೆಗೆ ಸಹಾಯ ಮಾಡುವುದು.

ಬಳಸುವ ವಿಧಾನ:

- ಒಂದು ಬೌಲ್ ಅಲ್ಲಿ ಸ್ವಲ್ಪ ಜೇನುತುಪ್ಪ, 1 ಟೀ ಚಮಚ ಮೊಸರು ಮತ್ತು 1/2 ಟೀ ಚಮಚ ಓಟ್ ಮೀಲ್ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

- ಮಿಶ್ರಣವನ್ನು ಗುಳ್ಳೆಗಳ ಮೇಲೆ ಹಾಗೂ ಪೀಡಿತ ಪ್ರದೇಶದಲ್ಲಿ ಅನ್ವಯಿಸಿ.

- ಬಳಿಕ 20-30 ನಿಮಿಷಗಳ ಕಾಲ ಆರಲು ಬಿಡಿ.

- ಪ್ರತಿದಿನ ಹೀಗೆ ಮಾಡುವುದರಿಂದ ಸಮಸ್ಯೆ ನಿವಾರಣೆ ಆಗುವುದು.

ಅಕಾಲಿಕ ಕೇಶ ಉದುರುವ ಸಮಸ್ಯೆಗೆ ದಾಲ್ಚಿನ್ನಿ ಆರೈಕೆ

​ಐಸ್ ಕ್ಯೂಬ್ ಮಸಾಜ್

ಐಸ್‍ನಿಂದ ಮಸಾಜ್ ಮಾಡುವುದರಿಂದ ಕೆಂಪು ಗುಳ್ಳೆ ಮತ್ತು ಮೊಡವೆಯಂತಹ ಸಮಸ್ಯೆಗಳು ಬಹುಬೇಗ ನಿವಾರಣೆಯಾಗುತ್ತವೆ.

ಬಳಸುವ ವಿಧಾನ:

- ಒಂದು ಬಟ್ಟೆಯಲ್ಲಿ ಐಸ್ ಕ್ಯೂಬ್ ಅನ್ನು ಹಾಕಿ ಸುತ್ತಿಕೊಳ್ಳಿ.

- ನಂತರ ಕಿವಿಯ ಹಿಂಭಾಗದ ಗುಳ್ಳೆಗಳ ಮೇಲೆ ಮೃದುವಾಗಿ ಇಡುವುದರ ಮೂಲಕ ಮಸಾಜ್ ಮಾಡಿ.

- ದಿನಕ್ಕೆ ಕನಿಷ್ಠ ಮೂರು ಬಾರಿ ಹೀಗೆ ಮಾಡಿ. ಬಹುಬೇಗ ನಿವಾಗುವುದು.

​ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯಲ್ಲಿ ಇರುವ ಔಷಧೀಯ ಗುಣವು ಗುಳ್ಳೆಗಳನ್ನು ಒಣಗಿಸಲು ಹಾಗೂ ಅದರ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.

ಬಳಸುವ ವಿಧಾನ:

- ಒಂದು ಬೌಲ್ ಅಲ್ಲಿ ಮೊಟ್ಟಯ ಬಿಳಿ ಭಾಗ ಮತ್ತು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಮಿಶ್ರಗೊಳಿಸಿ.

- ಮಿಶ್ರಣವನ್ನು ಗುಳ್ಳೆಗಳ ಮೇಲೆ ಅನ್ವಯಿಸಿ, 20-30 ನಿಮಿಷಗಳ ಕಾಲ ಆರಲು ಬಿಡಿ.

- ಬಹು ಬೇಗ ಶಮನವಾಗುವುದು.

ಚರ್ಮದ ಸೋಂಕು ನಿವಾರಿಸಲು ಸುಲಭ ಪರಿಹಾರಗಳು

​ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಆಂಟಿಮೈಕ್ರೋಬಿಯಲ್ ಮತ್ತು ಉರಿಯೂತದಂತಹ ಗುಣಗಳಿವೆ. ಇದು ಸೋಂಕಿತ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುವುದು. ಜೊತೆಗೆ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು.

ಬಳಸುವ ವಿಧಾನ:

- ಒಂದು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಜಜ್ಜಿ ಕೊಳ್ಳಿ.

- ನಂತರ ಗುಳ್ಳೆಗಳ ಮೇಲೆ ನೇರವಾಗಿ ಅನ್ವಯಿಸಿ.

- ರಾತ್ರ್ರಿ ಮಲಗುವಾಗ ಇದನ್ನು ಅನ್ವಯಿಸಿದರೆ ಬಹು ಬೇಗ ಶಮನವಾಗುವುದು.

- ಬೆಳ್ಳುಳ್ಳಿಯು ಹೆಚ್ಚು ಉರಿಯಾಗುವ ಅನುಭವ ನೀಡುತ್ತಿದೆ ಅನಿಸಿದರೆ ಸ್ವಲ್ಪ ನೀರಿನಿಂದ ದುರ್ಬಲ ಗೊಳಿಸಿ ಅನ್ವಯಿಸಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ