ಆ್ಯಪ್ನಗರ

ನರುಳ್ಳೆ ಸಮಸ್ಯೆ ನಿವಾರಣೆಗೆ ಮನೆಮದ್ದು

ಕುತ್ತಿಗೆ, ಕೆನ್ನೆ, ಕೈಗಳಲ್ಲಿ ಕಂಡು ಬರುವ ನರುಳ್ಳೆ ಗುಳ್ಳೆಯನ್ನು ಸರಳವಾದ ಮನೆಮದ್ದು ಬಳಸಿ ಇಲ್ಲವಾಗಿಸಬಹುದು.

Vijaya Karnataka Web 11 Jul 2018, 10:39 am
Vijaya Karnataka Web wrat
ಕುತ್ತಿಗೆ, ಕೆನ್ನೆ, ಕೈಗಳಲ್ಲಿ ಕಂಡು ಬರುವ ನರುಳ್ಳೆ ಗುಳ್ಳೆಯನ್ನು ಸರಳವಾದ ಮನೆಮದ್ದು ಬಳಸಿ ಇಲ್ಲವಾಗಿಸಬಹುದು.

ಈ ನರುಳ್ಳೆ ಗುಳ್ಳೆಯನ್ನು ನರವಲಿ, ನರುಳಿ, ಚಿಮುಕಲು, ನುಚ್ಚಿನಗುಳ್ಳೆ, ಪುಲ್ಪುರಿ ಗುಳ್ಳೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ತುಳುವಿನಲ್ಲಿ ಕೆಡು ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಸ್ಕಿನ್‌ ಟ್ಯಾಗ್ (wrat) ಎಂದು ಕರೆಯುತ್ತಾರೆ.

ನರುಳ್ಳೆ ಭಯಪಡುವಂಥ ರೋಗವೇನು ಅಲ್ಲ, ಆದರೆ ಇದು ಬಂದರೆ ತ್ವಚೆ ಸೌಂದರ್ಯ ಹಾಳಾಗುವುದು. ಇದನ್ನು ಹೋಗಲಾಡಿಸಲು ಈ ಸರಳ ಮನೆಮದ್ದು ಬಳಸಿ ಹೋಗಲಾಡಿಸಬಹುದು:

ಸುಣ್ಣ ಮತ್ತು ಕೋಲ್ಗೆಟ್‌ ಪೇಸ್ಟ್‌ನ ಚಮತ್ಕಾರ
ತಾಂಬೂಲ ಜಗಿಯಲು ಬಳಸುವ ಸುಣ್ಣ ಅರ್ಧ ಚಮಚ ತೆಗೆದುಕೊಳ್ಳಿ, ಅದಕ್ಕೆ ಅರ್ಧ ಚಮಚ ಕೋಲ್ಗೆಟ್‌ ಹಾಕಿ ಮಿಕ್ಸ್‌ ಮಾಡಿ, ನಂತರ ನರುಳ್ಳೆ ಇರುವ ಕಡೆ ಹಚ್ಚಿ ಒಂದು 15 ಗಂಟೆ ಬಿಡಿ. ನಂತರ ನೋಡಿದರೆ ನರುಳ್ಳೆ ಮಾಯವಾಗಿರುತ್ತದೆ. ಸುಣ್ಣ ಮತ್ತು ಕೋಲ್ಗೆಟ್‌ ಹಚ್ಚಿದಾಗ ಮೊದಲಿಗೆ ಸ್ವಲ್ಪ ಉರಿ ಅನಿಸಿದರೂ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಮುಖಕ್ಕೆ ಹಾಕಿದರೆ ಕಲೆ ಬೀಳಬಹುದು, ಆದರೆ ಆ ಕಲೆ ಸ್ವಲ್ಪ ದಿನಗಳ ಬಳಿಕ ಇಲ್ಲವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ