ಆ್ಯಪ್ನಗರ

ಡಾರ್ಕ್ ಚಾಕಲೇಟ್‌ನಿಂದ ಸೌಂದರ್ಯ‌ವರ್ಧಿಸಲು ಕಲಿಯಿರಿ!

ಸೌಂದರ್ಯ ವರ್ಧನೆಗೆ ಬಳಸುವ ಫೇಸ್ ಪ್ಯಾಕ್ ನಲ್ಲಿ ನೀವು ಡಾರ್ಕ್ ಚಾಕಲೇಟ್ ನ್ನು ಬಳ ಸಿದರೆ ಉತ್ತಮ.

Lipi 27 Nov 2020, 2:01 pm
ಚಾಕಲೇಟ್ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಪ್ರತಿಯೊಬ್ಬರು ಇದನ್ನು ಇಷ್ಟಪಡುವರು. ಮಕ್ಕಳಿಗಿಂತಲೂ ಹೆಚ್ಚು ದೊಡ್ಡವರೇ ಇದನ್ನು ಹೆಚ್ಚಾಗಿ ತಿನ್ನುವ ಅಭ್ಯಾಸ ರೂಢಿಸಿಕೊಂಡಿರುವರು ಎಂದು ಹೇಳಲಾಗುತ್ತಿದೆ.
Vijaya Karnataka Web Chocolate mask


ಡಾರ್ಕ್ ಚಾಕಲೇಟ್ ತಿಂದರೆ ಅದರಿಂದ ಕೆಲವೊಂದು ಆರೋಗ್ಯ ಲಾಭಗಳು ಇವೆ ಎಂದು ನಮಗೆ ತಿಳಿದೇ ಇದೆ. ಇದು ಮನಸ್ಥಿತಿ ಸುಧಾರಣೆ ಮಾಡುವ ಜತೆಗೆ ಇನ್ನಿತರ ಕೆಲವು ಲಾಭಗಳನ್ನು ನೀಡುವುದು.

ಆದರೆ ನಾವಿಲ್ಲ ಹೇಳಲು ಹೊರಟಿರುವುದು ಡಾರ್ಕ್ ಚಾಕಲೇಟ್ ನಿಂದ ಸೌಂದರ್ಯ ವರ್ಧನೆ ಮಾಡುವುದು. ಹೌದು, ಡಾರ್ಕ್ ಚಾಕಲೇಟ್ ನ್ನು ನಿಮ್ಮ ಸೌಂದರ್ಯವರ್ಧಕವಾಗಿ ಬಳಕೆ ಮಾಡಬಹುದು. ಇದನ್ನು ಮುಖಕ್ಕೆ ಹಚ್ಚಿಕೊಂಡರೆ ಆಗ ಅದು ಚರ್ಮಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು.

ಡಾರ್ಕ್ ಚಾಕಲೇಟ್ ನಲ್ಲಿ ಆಂಟಿಆಕ್ಸಿಡೆಂಟ್ ಇದ್ದು, ಚರ್ಮಕ್ಕೆ ಹಾನಿ ಉಂಟು ಮಾಡುವಂತಹ ಪ್ರೀ ರ್ಯಾಡಿಕಲ್ ನಿಂದ ಇದು ರಕ್ಷಣೆ ನೀಡುವುದು. ಹೀಗಾಗಿ ಚರ್ಮಕ್ಕೆ ಮೊಶ್ಚಿರೈಸ್ ಸಿಗುವುದು, ಚರ್ಮವು ನಯ ಹಾಗೂ ಕಾಂತಿಯುತವಾಗುವುದು. ಡಾರ್ಕ್ ಚಾಕಲೇಟ್ ನ್ನು ವಿವಿಧ ರೀತಿಯಿಂದ ಬಳಕೆ ಮಾಡುವುದು ಹೇಗೆ ಎಂದು ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಡಾರ್ಕ್ ಚಾಕಲೇಟ್ ಮತ್ತು ಜೇನುತುಪ್ಪದ ಮಾಸ್ಕ್
ಜೇನುತುಪ್ಪವು ಮೊಶ್ಚಿರೈಸರ್ ನ್ನು ಕಾಪಾಡುವುದು. ಇದನ್ನು ಡಾರ್ಕ್ ಚಾಕಲೇಟ್ ಜತೆಗೆ ಬಳಸಿಕೊಂಡರೆ ಆಗ ಚರ್ಮಕ್ಕೆ ನೈಸರ್ಗಿಕ ಕಾಂತಿ ಸಿಗುವುದು.
ತಯಾರಿಸುವ ವಿಧಾನ
1/4 ಕಪ್ ತೆಳು ಡಾರ್ಕ್ ಚಾಕಲೇಟ್ ಮತ್ತು ಒಂದು ಚಮಚ ಜೇನುತುಪ್ಪ ಹಾಗೂ ಕೆಲವು ಹನಿ ಲಿಂಬೆರಸವನ್ನು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.
ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಬಳಿಕ ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. 15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ.

ಜೇನುತುಪ್ಪ ಉಪಯೋಗಗಳನ್ನು ಎಷ್ಟು ಹೊಗಳಿದರೂ ಸಾಲದು!

ಡಾರ್ಕ್ ಚಾಕಲೇಟ್ ಮತ್ತು ಮಣ್ಣಿನ ಫೇಸ್ ಮಾಸ್ಕ್
ಮಣ್ಣು ಚರ್ಮದಲ್ಲಿನ ಹೆಚ್ಚುವರಿ ಎಣ್ಣೆಯಂಶವನ್ನು ತೆಗೆದುಹಾಕುವುದು. ಇದರಿಂದಾಗಿ ಚರ್ಮದಲ್ಲಿನ ಸತ್ತ ಕೋಶಗಳು ತೆಗೆಯಲ್ಪಡುವುದು ಮತ್ತು ಚರ್ಮಕ್ಕೆ ಕಾಂತಿ ಸಿಗುವುದು.
ಈ ಫೇಸ್ ಮಾಸ್ಕ್ ಚರ್ಮವನ್ನು ಬಿಗಿಯಾಗಿಸುವುದು ಮತ್ತು ಚರ್ಮದ ರಂಧ್ರಗಳನ್ನು ತುಂಬುವಂತೆ ಮಾಡುವುದು.
ಮಾಡುವ ವಿಧಾನ
  • ½ ಕಪ್ ತೆಳು ಚಾಕಲೇಟ್ ಗೆ 2 ಚಮಚ ಮುಲ್ತಾನಿ ಮಿಟ್ಟಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
  • ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಇದರ ಬಳಿಕ ನೀವು ಟವೆಲ್ ನಿಂದ ಇದನ್ನು ಒರೆಸಿ.
  • ಪೇಸ್ಟ್ ಉಳಿದರೆ ಒಂದು ಡಬ್ಬದಲ್ಲಿ ಹಾಕಿಟ್ಟುಕೊಂಡು ಮತ್ತೆ ಬಳಕೆ ಮಾಡಬಹುದು.
  • ಡಾರ್ಕ್ ಚಾಕಲೇಟ್ ಮತ್ತು ಮೊಸರಿನ ಫೇಸ್ ಪ್ಯಾಕ್
  • ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮದ ರಂಧ್ರವನ್ನು ಬಿಗಿಯಾಗಿಸುವುದು. ಚಾಕಲೇಟ್ ಮತ್ತು ಮೊಸರಿನ ಮಾಸ್ಕ್ ತಯಾರಿಸಲು ನೀವು ಹೀಗೆ ಮಾಡಿ.
  • ಕೆಲವು ತುಂಡು ಡಾರ್ಕ್ ಚಾಕಲೇಟ್ ನ್ನು ಕರಗಿಸಿ ಮತ್ತು ಇದಕ್ಕೆ 11/2 ಚಮಚ ಮೊಸರು ಹಾಕಿ.
  • ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದಕ್ಕೆ 1 ಚಮಚ ಕಡಲೆ ಹಿಟ್ಟು ಹಾಕಿ.
  • ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
  • 15 ನಿಮಿಷ ಬಳಿಕ ನೀವು ಸ್ಕ್ರಬ್ ಮಾಡಿಕೊಂಡು ತೊಳೆಯಿರಿ.
ಡಾರ್ಕ್ ಚಾಕಲೇಟ್ ಮತ್ತು ಹಾಲಿನ ಕೆನೆಯ ಫೇಸ್ ಮಾಸ್ಕ್
  • ಹಾಲಿನ ಕೆನೆಯು ಚರ್ಮವನ್ನು ಮೊಶ್ಚಿರೈಸ್ ಮಾಡುವುದು ಮತ್ತು ಒಣ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡುವುದು. ಹಾಲಿನಲ್ಲಿ ಇರುವ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮದ ಕೋಶವನ್ನು ತೆಗೆಯುವುದು. ಇದನ್ನು ತಯಾರಿಸುವ ವಿಧಾನ.
  • ¼ ಕಪ್ ಕರಗಿಸಿದ ಡಾರ್ಕ್ ಚಾಕಲೇಟ್ ಗೆ ಒಂದು ಚಮಚ ಹಾಲಿನ ಕೆನೆಹಾಕಿ ಮತ್ತು ಕೆಲವು ಹನಿ ಜೇನುತುಪ್ಪ ಕೂಡ ಬೆರೆಸಿ.
  • ಮುಖ ಹಾಗೂ ಕುತ್ತಿಗೆಗೆ ಈ ಮಾಸ್ಕ್ ನ್ನು ಹಚ್ಚಿಕೊಳ್ಳಿ ಮತ್ತು 20 ನಿಮಿಷ ಬಿಟ್ಟು ತೊಳೆಯಿರಿ.
  • ಟಿಶ್ಯೂ ಬಳಸಿಕೊಂಡು ಇದನ್ನು ಒರೆಸಿಕೊಳ್ಳಿ. ಚರ್ಮಕ್ಕೆ ತಾಜಾತನ ನೀಡಲು ಟೋನರ್ ಬಳಸಿ.
ಡಾರ್ಕ್ ಚಾಕಲೇಟ್ ಮತ್ತು ಹಣ್ಣಿನ ಫೇಸ್ ಮಾಸ್ಕ್
ಡಾರ್ಕ್ ಚಾಕಲೇಟ್ ನ ಒಳ್ಳೆಯ ಗುಣಗಳ ಜತೆಗೆ ಹಣ್ಣಿನಿಂದ ಕೂಡಿದ ಫೇಸ್ ಮಾಸ್ಕ್ ಚರ್ಮಕ್ಕೆ ಕಾಂತಿ ನೀಡುವುದು. ಸಿಟ್ರಸ್ ಹಣ್ಣುಗಳಾಗಿರುವಂತಹ ಮೂಸಂಬಿ, ಲಿಂಬೆ, ಸ್ಟ್ರಾಬೆರಿಗಳನ್ನು ನೀವು ಬಳಸಬಹುದು. ಡಾರ್ಕ್ ಚಾಕಲೇಟ್ ಹಾಗೂ ಹಣ್ಣುಗಳಿಂದ ಮಾಡುವ ಫೇಸ್ ಮಾಸ್ಕ್
  • ಮೂಸಂಬಿಯ ಎರಡು ತುಂಡು ಅಥವಾ ಸ್ಟ್ರಾಬೆರಿಗಳನ್ನು ರುಬ್ಬಿಕೊಳ್ಳಿ.
  • ಅರ್ಧ ಕಪ್ ಕರಗಿಸಿದ ಚಾಕಲೇಟ್ ತಂಪಾದ ಬಳಿಕ ಅದಕ್ಕೆ ಹಣ್ಣಿನ ಪೇಸ್ಟ್ ಹಾಕಿ.
  • ಇದನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
  • 20 ನಿಮಿಷ ಬಿಟ್ಟು ನೀವು ಬಿಸಿನೀರಿನಿಂದ ತೊಳೆಯಿರಿ ಮತ್ತು ಹಾಗೆ ಒಣಗಲು ಬಿಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ