ಆ್ಯಪ್ನಗರ

ಕಣ್ಣಿನ ಸೋಂಕು ನಿವಾರಣೆಗೆ ಮನೆಮದ್ದು

ಕಣ್ಣಿನ ಸೋಂಕಿನ ಸಮಸ್ಯೆಗೆ ಮನೆ ಮದ್ದುಗಳಿವೆ. ಕೆಲವೊಂದು ಮನೆ ಮದ್ದುಗಳನ್ನು ನೀವು ಟ್ರೈ ಮಾಡಿದರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಕಣ್ಣಿನ ಸೋಂಕು ಕಡಿಮೆಯಾಗುತ್ತದೆ.

Vijaya Karnataka Web 28 Mar 2019, 9:19 pm
ಕಾರಣ ಇಲ್ಲದೆ ಕಣ್ಣಿಗೆ ಸಂಬಂಧಿಸಿದ ಹಲವಾರು ಸೋಂಕು ಉಂಟಾಗುತ್ತದೆ. ಕಣ್ಣು ನೋವು, ಉರಿ, ಕೆಂಪಾಗುವುದು, ಗುಳ್ಳೆಯಾಗುವುದು ಸಾಮಾನ್ಯ. ಈ ಸಮಸ್ಯೆಗಳಿಗೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.
Vijaya Karnataka Web eye infection


ಕೆಲವೊಂದು ಮನೆ ಮದ್ದುಗಳನ್ನು ನೀವು ಟ್ರೈ ಮಾಡಿದರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಕಣ್ಣಿನ ಸೋಂಕು ಕಡಿಮೆಯಾಗುತ್ತದೆ.

ಒಂದು ಕಪ್ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ಹಾಕಿ ನೆನೆಸಿ. ನಂತರ ಆ ನೀರನ್ನು ಕಣ್ಣಿಗೆ ಹಾಕುತ್ತ ಬಂದರೆ ಕಣ್ಣಿನ ಸೋಂಕು ನಿವಾರಣೆಯಾಗುತ್ತದೆ.

ಅರ್ಧ ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಒಂದು ಹಿಡಿಯಷ್ಟು ಅಗಸೆಬೀಜಗಳನ್ನು ಹಾಕಿ 15-20 ನಿಮಿಷಗಳಷ್ಟು ನೆನೆಸಿ ನಂತರ ಆ ನೀರನ್ನು ಸೋಸಿ ನೀರನ್ನು ನಿಮ್ಮ ಕಣ್ಣಿಗೆ ಹತ್ತಿಯಿಂದ ಹಚ್ಚಿಕೊಳ್ಳಿ.

ಜೇನುತುಪ್ಪ ಮತ್ತು ಬಿಸಿನೀರನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಕಲಿಸಿ, ತಣ್ಣಗಾಗಲು ಬಿಡಿ. ನಂತರ ಹತ್ತಿಯ ಉಂಡೆ ಅಥವಾ ತೆಳುವಾದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿ, ನಿಮ್ಮ ಸೋಂಕು ತಗುಲಿದ ಕಣ್ಣಿಗೆ ಹಚ್ಚಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ