ಆ್ಯಪ್ನಗರ

ಪ್ರಯಾಣ ಮಾಡುವಾಗ ವಾಂತಿ ತಡೆಯಲು ಮನೆ ಮದ್ದು

ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ, ಪಿತ್ತ ಹೆಚ್ಚಾದಾಗ, ಬಸ್ಸಿನಲ್ಲಿ ಹೋಗುವಾಗ, ಗರ್ಭಿಣಿಯಾದಾಗ ಹೀಗೆ ಅನೇಕ ಕಾರಣಗಳಿಗೆ ವಾಂತಿ ಆಗಬಹುದು. ಹೀಗೆ ಪ್ರಯಾಣ ಮಾಡುವಾಗಲೂ ಅನೇಕರಿಗೆ ವಾಂತಿ ಆಗುತ್ತದೆ.

Vijaya Karnataka Web 27 Mar 2019, 8:57 pm
ಪ್ರಯಾಣ ಮಾಡುವಾಗ ವಾಂತಿ ತಡೆಯಲು ಮನೆ ಮದ್ದು ಇಲ್ಲಿದೆ..
Vijaya Karnataka Web vomiting


- ಒಂದು ಕಪ್‌ ನಿಂಬೆ ಜ್ಯೂಸ್‌ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಕುಡಿದ ಬಳಿಕ ಪ್ರಯಾಣ ಆರಂಭಿಸಬೇಕು. ಇದು ಪ್ರಯಾಣದ ಅವಧಿಯಲ್ಲಿ ಎದುರಾಗುವ ತಲೆನೋವು, ವಾಕರಿಕೆ ಮೊದಲಾದವುಗಳನ್ನು ತಡೆಗಟ್ಟುತ್ತದೆ.

- ಪ್ರಯಾಣಕ್ಕೂ ಮುನ್ನ ಒಂದು ಲೋಟ ಬಿಸಿಯಾದ ಪುದೀನಾ ಟೀ ಸೇವಿಸಬೇಕು. ಇನ್ನೂ ಉತ್ತಮವೆಂದರೆ ಕೆಲವು ಪುದೀನಾ ಎಲೆಗಳನ್ನು ಚಿಕ್ಕ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ಕೈಯಲ್ಲಿಯೇ ಹಿಡಿದುಕೊಳ್ಳುವುದು ಒಳ್ಳೆಯದು. ವಾಹನ ಪ್ರಯಾಣ ಆರಂಭಿಸಿದ ತಕ್ಷ ಣ ಒಂದೆರಡು ಪುದೀನಾ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಇದ್ದರೆ ವಾಕರಿಕೆ ಬರುವುದಿಲ್ಲ.

- ಒಂದು ವೇಳೆ ಊಟ ಮಾಡಿದ ಬಳಿಕ ಪ್ರಯಾಣ ಮಾಡುವುದಾದರೆ ಒಂದು ಲೋಟ ಹಸಿಶುಂಠಿಯ ಟೀ ಕುಡಿದು ಹೊರಡಬೇಕು. ಇದು ಜೀರ್ಣಕ್ರಿಯೆಗೂ ಉತ್ತಮವಾಗಿದೆ.

- ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಒಂದು ಚಿಕ್ಕ ಚಮಚ ಚೆಕ್ಕಪುಡಿ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಬೆರೆಸಬೇಕು. ಪ್ರಯಾಣಕ್ಕೂ ಮುನ್ನ ಈ ನೀರನ್ನು ಬಿಸಿಬಿಸಿಯಾಗಿ ಸೇವಿಸಿ ಹೊರಡಬಹುದು. ಇದರಿಂದಲೂ ವಾಕರಿಕೆ ಆಗುವುದಿಲ್ಲ.

- ವಿಶೇಷವಾಗಿ ಬಸ್‌ ಪ್ರಯಾಣದ ಅವಧಿಗೂ ಮುನ್ನ ಒಂದೆರಡು ಲವಂಗಗಳನ್ನು ಬಾಯಿಗೆ ಹಾಕಿ ಜಗಿಯುತ್ತಿರಬೇಕು. ಪೂರ್ಣ ನೀರಾದ ಬಳಿಕ ನುಂಗಬೇಕು.

- ಪ್ರಯಾಣದ ಅವಧಿಯಲ್ಲಿ ವಾಕರಿಕೆ ಉಂಟಾದರೆ ಏಲಕ್ಕಿಯೊಂದನ್ನು ಬಾಯಿಗೆ ಹಾಕಿ ಜಗಿಯಲು ಪ್ರಾರಂಭಿಸಬೇಕು.

- ಕಾಳುಮೆಣಸು ಮತ್ತು ನಿಂಬೆ ತಲೆನೋವು, ಪಿತ್ತ, ತಲೆತಿರುಗುವಿಕೆಯನ್ನು ತಡೆಯುತ್ತದೆ. ಉಪ್ಪು ಅಥವಾ ಕಾಳುಮೆಣಸನ್ನು ಬಿಸಿಯಾದ ನಿಂಬೆ ರಸದೊಂದಿಗೆ ಸೇರಿಸಿ ಪ್ರಯಾಣಕ್ಕೆ ಮೊದಲು ಕುಡಿಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ