ಆ್ಯಪ್ನಗರ

ಸ್ಟ್ರೆಚ್ ಮಾರ್ಕ್ಸ್… ಸಂಕೋಚ ಬಿಡಿ, ಹರಳೆಣ್ಣೆ ಹಚ್ಚಿ

ಕೆಲವೊಮ್ಮೆ ಸೀರೆಯುಟ್ಟಾಗ, ಮಿನಿ ಡ್ರೆಸ್ ಹಾಕಿದಾಗ ಈ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣಿಸುತ್ತವೆ. ಇದಕ್ಕೆಲ್ಲಾ ಈಗ ಕ್ರೀಮ್‌ಗಳು ಬಂದಿವೆ, ಆದರೆ ಇದರಿಂದ ಅಡ್ಡಪರಿಣಾಮವೇ ಹೆಚ್ಚಾಗಿರುವುದರಿಂದ, ನೈಸರ್ಗಿಕವಾಗಿ ದೊರೆಯುವ ಹರಳೆಣ್ಣೆ ಹಚ್ಚುವುದೇ ಒಳ್ಳೆಯದು

Agencies 16 Jun 2020, 5:08 pm
ಸ್ಟ್ರೆಚ್ ಮಾರ್ಕ್ಸ್…ಹೆಣ್ಣುಮಕ್ಕಳಿಗೆ ಈಗೀಗ ಕಾಮನ್ ಆಗಿ ಹೋಗಿದೆ. ಉದ್ದುದ್ದ, ಕಿರಿದಾಗಿ, ಪಟ್ಟೆಗಳ ತರಹ ಚರ್ಮದ ಮೇಲೆ ಮೂಡುವ ಗೆರೆಗಳು ಮುಜುಗರಕ್ಕೀಡು ಮಾಡುವುದು ಸತ್ಯ. ಇದು ಹೆಚ್ಚಾಗಿ ಹೊಟ್ಟೆಯ ಭಾಗ, ಸ್ತನದ ಅಕ್ಕಪಕ್ಕ ಅಥವಾ ಕೆಳಗೆ, ತೊಡೆಯ ಭಾಗ, ಸೊಂಟದ ಹಿಂಭಾಗ, ಕೆಳ ಬೆನ್ನು, ಪಾರ್ಶ್ವ, ಪೃಷ್ಠ ಹೀಗೆ ದೇಹದ ಹಲವಾರು ಭಾಗಗಳಲ್ಲಿ ಕಂಡುಬರುತ್ತವೆ.
Vijaya Karnataka Web Castro oil


ವಿಶೇಷವಾಗಿ ಸೀರೆಯುಟ್ಟಾಗ, ಮಿನಿ ಡ್ರೆಸ್ ಹಾಕಿದಾಗ ಈ ಸ್ಟ್ರೆಚ್ ಮಾರ್ಕ್ಸ್ ಎದ್ದು ಕಾಣಿಸುತ್ತವೆ. ಇದಕ್ಕೆಲ್ಲಾ ಈಗ ಕ್ರೀಮ್‌ಗಳು ಬಂದಿವೆ. ಕೆಲವರಿಗೆ ಆ ಸಮಯಕ್ಕೆ ಅದು ಸಹಾಯ ಮಾಡುತ್ತದೆ ಅಷ್ಟೇ. ಸ್ವಲ್ಪ ದಿನಗಳ ನಂತರ ಮತ್ತೆ ಪ್ರಾರಂಭವಾಗುತ್ತವೆ. ನಿಮಗಿದು ಗೊತ್ತೋ, ಇಲ್ಲವೋ…ಆದರೆ ಹಿಂದೆಲ್ಲಾ ಇಂತಹ ಗೆರೆಗಳು (ಸ್ಟ್ರೆಚ್ ಮಾರ್ಕ್ಸ್) ಕಾಣಿಸಿಕೊಂಡಾಗ ಹರಳೆಣ್ಣೆ ಹಚ್ಚುವುದು ರೂಢಿಯಾಗಿತ್ತು. ಹೌದು ಈ ಗೆರೆಗಳನ್ನು ಮಾಯ ಮಾಡಲು ಅತ್ಯುತ್ತಮ ಮನೆ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೇಗೆಂದು ಇಲ್ಲಿ ಕೊಡಲಾಗಿದೆ ನೋಡಿ…



ಯಾವಾಗ, ಯಾರಿಗೆ ಬರುತ್ತದೆ.
ದೇಹದ ಗಾತ್ರ ಇದ್ದಕ್ಕಿದ್ದಂತೆ ಹಿಗ್ಗಿದಾಗ, ಗರ್ಭಧಾರಣೆ, ತೂಕ ಹೆಚ್ಚಾಗುವುದು, ತೂಕ ನಷ್ಟ ಅಥವಾ ಪ್ರೌಢವಸ್ಥೆಯ ಸಮಯದಲ್ಲಿ, ದೀರ್ಘಕಾಲದ ಕಾಯಿಲೆಗಳ ಇದ್ದಾಗ, ಸ್ಥೂಲಕಾಯದ ಮಹಿಳೆಯರಲ್ಲಿಈ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ. ಪುರುಷರಿಗಿಂತ ಮಹಿಳೆಯರ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಶೇ. 50ರಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ಸ್ಟ್ರೆಚ್ ಮಾರ್ಕ್ಸ್ ಗಳು ಸಣ್ಣದಾಗಿ ಕಾಣಿಸಿಕೊಳ್ಳುತ್ತಾ, ದೊಡ್ಡದಾಗಿ ಹಿರಿಹಿಗ್ಗುತ್ತವೆ. ಕೆಲವೊಮ್ಮೆ ಸ್ಟ್ರೆಚ್
ಗುರುತುಗಳು ಚಿಕಿತ್ಸೆಯಿಲ್ಲದೆಯೇ ಕಾಲನಂತರದಲ್ಲಿ ಮಸುಕಾಗುತ್ತವೆ. ಇದರಿಂದ ಖಂಡಿತ ಅಪಾಯವಂತೂ ಇಲ್ಲ. ಆದರೆ ನಮ್ಮ ಚರ್ಮವನ್ನು ವಿರೂಪಗೊಳಿಸಿ ನೋಡುಗರಿಗೆ, ಸ್ವತಃ ನಮಗೆ ಅಸಹ್ಯವಾಗಿ ಕಾಣುತ್ತದೆ.

ಇದೇ ನೋಡಿ… ಬರುವ ಸೂಚನೆ
ಸ್ಟ್ರೆಚ್ ಮಾರ್ಕ್ಸ್ ಮೂಡುವಾಗ ಚರ್ಮದ ಮೇಲೆ ತೆಳ್ಳಗೆ, ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಕಿರಿಕಿರಿ ಅಥವಾ ತುರಿಕೆ ಉಂಟು ಮಾಡುತ್ತದೆ. ಅಂದಹಾಗೆ ಸ್ಟ್ರೆಚ್ ಮಾರ್ಕ್ಸ್ ಚರ್ಮದ ಬಣ್ಣವನ್ನು ಅವಲಂಬಿಸಿರುತ್ತದೆ. ಕೆಂಪು, ನೇರಳೆ, ಗುಲಾಬಿ, ಕೆಂಪು, ಕಂದು ಬಣ್ಣದಲ್ಲಿ ಕಾಣಿಸುತ್ತವೆ. ಹಾಗೆಯೇ ಚರ್ಮ ಸುಕ್ಕುಗಟ್ಟಿ, ಗೆರೆಗಳು ಮೂಡಿ ಗುರುತುಗಳಾಗುತ್ತವೆ. ಕೆಲವರಿಗೆ ಈ ಮಾರ್ಕ್ಸ್ ಬಂದರೆ ಅಷ್ಟು ಸುಲಭವಾಗಿ ಹೋಗುವುದಿಲ್ಲ. ಬಹಳ ಸಮಯ ತೆಗೆದುಕೊಳ್ಳುತ್ತದೆ.

ಹರಳೆಣ್ಣೆ ಹೇಗೆ ಸಹಕಾರಿ?
ಹಾಟ್ ಆಯಿಲ್ ಮಸಾಜ್
  • ಎರಡು ಟೇಬಲ್ ಸ್ಪೂನ್ ಹರಳೆಣ್ಣೆ ತೆಗೆದುಕೊಂಡು ಸ್ವಲ್ಪ ಬೆಚ್ಚಗಾಗುವವರೆಗೆ ಬಿಸಿ ಮಾಡಿ.
  • ಬೆಚ್ಚಗಿನ ಎಣ್ಣೆಯನ್ನು ಸ್ಟ್ರೆಚ್ ಮಾರ್ಕ್ಸ್ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ.
  • ಸುಮಾರು 30 ನಿಮಿಷಗಳ ಕಾಲ ಎಣ್ಣೆಯನ್ನು ಹಾಗೆ ಬಿಡಿ.
  • ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ವಾರದಲ್ಲಿ 3-4 ಬಾರಿ ಹೀಗೆ ಮಾಡಿ.
ಹರಳೆಣ್ಣೆ ಮತ್ತು ಆಲೂಗೆಡ್ಡೆ
  • ಒಂದು ಆಲೂಗೆಡ್ಡೆ ತೆಗೆದುಕೊಂಡು ಅದರಿಂದ ರಸವನ್ನು ತೆಗೆಯಿರಿ. ಎರಡು ಟೇಬಲ್ ಸ್ಪೂನ್ ಹರಳೆಣ್ಣೆ ತೆಗೆದುಕೊಳ್ಳಿ.
  • ಆಲೂಗೆಡ್ಡೆ ರಸ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದೆರಡು ಗಂಟೆಗಳ ಕಾಲ ರೆಫ್ರಿಜರೇಟ್ ಮಾಡಿ.
  • ರೆಫ್ರಿಜರೇಟೆಡ್ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ.
  • ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
  • ವಾರದಲ್ಲಿ 3-4 ಬಾರಿ ಹೀಗೆ ಮಾಡಿ.
ಹರಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ
  • ಒಂದು ಟೇಬಲ್ ಸ್ಪೂನ್ ಕೊಬ್ಬರಿ ಎಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ಹರಳೆಣ್ಣೆಯನ್ನು ಸಮಾನವಾಗಿ ಮಿಶ್ರಣ ಮಾಡಿ.
  • ಈ ಎಣ್ಣೆ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಆಗಿರುವ ಜಾಗದಲ್ಲಿ ಹಚ್ಚಿ. ಚರ್ಮ ಬೆಚ್ಚಗಾಗುವರೆಗೆ ಮಸಾಜ್ ಮಾಡಿ.
  • ಸುಮಾರು 30 ನಿಮಿಷಗಳ ಕಾಲ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ವಾರದಲ್ಲಿ 3-4 ದಿನಗಳ ಕಾಲ ಹೀಗೆ ಮಾಡಿ.
ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು, 'ಮಲಬದ್ಧತೆ' ನಿವಾರಿಸಬಹುದು!


ಹರಳೆಣ್ಣೆ ಮತ್ತು ಲವಂಗ
  • 5-6 ಲವಂಗ ತೆಗೆದುಕೊಂಡು ಪುಡಿಮಾಡಿ ಹರಳೆಣ್ಣೆಗೆ (2 ಟೇಬಲ್ ಸ್ಪೂನ್) ಸೇರಿಸಿ.
  • ಈ ಮಿಶ್ರಣವನ್ನು ಒಂದೆರಡು ನಿಮಿಷಗಳ ಕಾಲ ಬಿಸಿ ಮಾಡಿ. ಬಣ್ಣ ಬದಲಾಯಿಸುತ್ತಿದ್ದ ಹಾಗೆ ತೆಗೆಯಿರಿ.
  • ಎಣ್ಣೆ ತಣ್ಣಗಾಗಲು ಬಿಡಿ. ನಂತರ ಅದನ್ನು ಸ್ಟ್ರೆಚ್ ಮಾರ್ಕ್ಸ್ ಆಗಿರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ.
  • ಸುಮಾರು 15 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ 30 ನಿಮಿಷಗಳ ಕಾಲ ಎಣ್ಣೆಯನ್ನು ಹಾಗೆ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ಸ್ಟ್ರೆಚ್ ಮಾರ್ಕ್ಸ್ ಹೋಗುವ ತನಕ ಪ್ರತಿ ದಿನ ಹೀಗೆ ಮಾಡಿ.
ಹರಳೆಣ್ಣೆ ಮತ್ತು ಅರಿಶಿನ
  • ಒಂದು ಟೇಬಲ್ ಸ್ಪೂನ್ ಹರಳೆಣ್ಣೆ ಮತ್ತು ಅರ್ಧ ಟೀ ಸ್ಪೂನ್ ಅರಿಶಿನ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಆದ ಭಾಗಗಳಿಗೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆ ಅಥವಾ ನಿಮಗೆ
  • ಸಾಧ್ಯವಾದಷ್ಟು ಕಾಲ ಎಣ್ಣೆಯನ್ನು ಹಾಗೆ ಬಿಡಿ.
  • ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿ ದಿನ ಹೀಗೆ ಮಾಡಿ.
ಚರ್ಮದ ಕಾಂತಿ-ಆರೋಗ್ಯವೃದ್ಧಿಗೆ ಒಂದೆರಡು ಚಮಚ ಹರಳೆಣ್ಣೆ ಸಾಕು!

ಹರಳೆಣ್ಣೆ ಮತ್ತು ಸಕ್ಕರೆ
  • ಒಂದು ಟೇಬಲ್ ಸ್ಪೂನ್ ಹರಳೆಣ್ಣೆ ಮತ್ತು ಒಂದು ಟೇಬಲ್ ಸ್ಪೂನ್ ಸಕ್ಕರೆ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಜಾಗದಲ್ಲಿ ಸುಮಾರು 5 ನಿಮಿಷಗಳ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ.
  • 15 ನಿಮಿಷಗಳ ಕಾಲ ಹಾಗೆ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ವಾರಕ್ಕೆ 2-3 ಬಾರಿ ಹೀಗೆ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ