ಇರುವೆ ನೋಡಲು ಚಿಕ್ಕದು ಎನ್ನುವ ಕಾರಣಕ್ಕೆ ಇರುವೆ ಗೂಡಿನ ಮೇಲೆ ಕಾಲಿಟ್ಟರೆ, ಆಗುವುದೇ ಬೇರೆ. ಏಕೆಂದರೆ ಇರುವೆಯ ಮೂರ್ತಿ ಚಿಕ್ಕದಾದರೂ ಅದು ಕಚ್ಚಿದಾಗ ಆಗುವ ನೋವು ಮಾತ್ರ ಎತ್ತರದ ಮನುಷ್ಯನನ್ನು ಬಾಗಿ ಕೆರೆದುಕೊಳ್ಳುವಂತೆ ಮಾಡುತ್ತದೆ.
ಇರುವೆ ಕಚ್ಚಿದ ಜಾಗದಲ್ಲಿ ನೋವು, ಊತ, ಕೆರೆತ ಸಾಮಾನ್ಯ. ಹೆಚ್ಚು ಇರುವೆಗಳು ಕಚ್ಚಿದ ಜಾಗದಲ್ಲಿ ಚರ್ಮ ಕೂಡ ಸಿಪ್ಪೆ ಸುಲಿದು ಹೋಗು ತ್ತದೆ. ಇಂತಹ ಸಂದರ್ಭದಲ್ಲಿ ಸುಲಭವಾಗಿ ಮನೆಯಲ್ಲಿ ಇದರಿಂದ ಮುಕ್ತಿ ಪಡೆದುಕೊಳ್ಳಲು ಏನು ಮಾಡಬಹುದು ಎಂಬ ಆಲೋಚನೆ ತಲೆಗೆ ಬರುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಗಳನ್ನು ಇಲ್ಲಿ ಕೊಡಲಾಗಿದೆ.
ಇರುವೆ ಕಚ್ಚಿದ ಜಾಗದಲ್ಲಿ ನೋವು, ಊತ, ಕೆರೆತ ಸಾಮಾನ್ಯ. ಹೆಚ್ಚು ಇರುವೆಗಳು ಕಚ್ಚಿದ ಜಾಗದಲ್ಲಿ ಚರ್ಮ ಕೂಡ ಸಿಪ್ಪೆ ಸುಲಿದು ಹೋಗು ತ್ತದೆ. ಇಂತಹ ಸಂದರ್ಭದಲ್ಲಿ ಸುಲಭವಾಗಿ ಮನೆಯಲ್ಲಿ ಇದರಿಂದ ಮುಕ್ತಿ ಪಡೆದುಕೊಳ್ಳಲು ಏನು ಮಾಡಬಹುದು ಎಂಬ ಆಲೋಚನೆ ತಲೆಗೆ ಬರುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಗಳನ್ನು ಇಲ್ಲಿ ಕೊಡಲಾಗಿದೆ.
ಐಸ್ ಪ್ಯಾಕ್ ಇಡುವುದು
- ಕೇವಲ ಇರುವೆ ಮಾತ್ರವಲ್ಲ, ಯಾವುದೇ ರೀತಿಯ ಕೀಟ ಕಚ್ಚಿದರೂ ಕೂಡ, ಅದಕ್ಕೆ ಪರಿಣಾಮ ಕಾರಿಯಾಗಿ ಮನೆಮದ್ದಿನ ತರಹ ಐಸ್ ಪ್ಯಾಕ್ ಚೆನ್ನಾಗಿ ಕೆಲಸ ಮಾಡುತ್ತದೆ.
- ನೇರವಾಗಿ ಐಸ್ ಕ್ಯೂಬ್ ಗಳನ್ನು ಚರ್ಮದ ಮೇಲೆ ಇರಿಸಬಾರದು. ಬದಲಿಗೆ ಐಸ್ ಪ್ಯಾಕ್ ಉಪಯೋಗಿ ಸುವುದರಿಂದ ಉರಿಯುತ, ನೋವು ಮತ್ತು ಊತ ಎಲ್ಲವೂ ಕಡಿಮೆಯಾಗುತ್ತದೆ.
ತೆಂಗಿನಕಾಯಿ ಎಣ್ಣೆ
- ಇದನ್ನು ನೈಸರ್ಗಿಕವಾದ ಆಂಟಿ ಇನ್ಫ್ಲಮೇಟರಿ ಗುಣ ಲಕ್ಷಣಗಳನ್ನು ಒಳಗೊಂಡಿರುವ ಮನೆ ಮದ್ದು ಎಂದು ಕರೆಯಬಹುದು.
- ಇದು ಇರುವೆ ಕಚ್ಚಿದ ವಿಷವನ್ನು ಉಪಶಮನ ಮಾಡಬಲ್ಲ ಶಕ್ತಿ ಪಡೆದಿದೆ ಎಂದು ಹೇಳುತ್ತಾರೆ. ಕೆಲವು ಹನಿಗಳಷ್ಟು ತೆಂಗಿನಕಾಯಿ ಎಣ್ಣೆ ತೆಗೆದು ಕೊಂಡು ಅದನ್ನು ಇರುವೆ ಕಚ್ಚಿದ ಭಾಗದಲ್ಲಿ ಊತ ಮತ್ತು ಕೆರೆತ ಇರುವ ಸ್ಥಳದಲ್ಲಿ ಹಚ್ಚಬೇಕು.
ತೆಂಗಿನ ಎಣ್ಣೆಯ ಈ ಅದ್ಭುತ ಪ್ರಯೋಜನಗಳನ್ನು ಮಿಸ್ ಮಾಡಿಕೊಳ್ಳಲೇಬೇಡಿ
ಅಲೋವೆರಾ
- ಚರ್ಮದ ಬಹುತೇಕ ಸಮಸ್ಯೆಗಳಿಗೆ ಇದೊಂದು ಸಾಮಾನ್ಯ ನೈಸರ್ಗಿಕ ಪರಿಹಾರವಾಗಿದೆ. ತ್ವಚೆಗೆ ತಂಪಾದ ಪ್ರಭಾವ ವನ್ನು ನೀಡುವುದರ ಜೊತೆಗೆ ನೋವು ಮತ್ತು ಕೆರೆತವನ್ನು ಸಹ ದೂರ ಮಾಡಬಲ್ಲ ಶಕ್ತಿ ಅಲೋವೆರಾಗೆ ಇದೆ.
- ಇದಕ್ಕಾಗಿ ನೀವು ಅಲೋವೆರಾದ ಸಣ್ಣ ಎಲೆಯನ್ನು ತೆಗೆದು ಕೊಂಡು ಅದನ್ನು ಎರಡು ಹೋಳು ಮಾಡಿ ಅದರಲ್ಲಿ ಮಧ್ಯಭಾಗದಲ್ಲಿ ಬರುವಂತಹ ಜೆಲ್ ತೆಗೆದುಕೊಂಡು ಅದನ್ನು ಇರುವೆ ಕಚ್ಚಿದ ಭಾಗಕ್ಕೆ ಅನ್ವಯಿಸಿ ನೋವು ನಿವಾರಣೆ ಮಾಡಿಕೊಳ್ಳಬಹುದು.
ಟೀ ಬ್ಯಾಗ್ ಗಳು
- ಇವುಗಳಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳ ರೂಪ ದಲ್ಲಿ ಟ್ಯಾನಿಕ್ ಆಸಿಡ್ ಇರಲಿದ್ದು, ನೋವು ನಿವಾರಣೆಯಲ್ಲಿ ಮಾತ್ರವಲ್ಲದೆ, ಕೆರೆತ ಮತ್ತು ಊತ ಸಹ ಕಡಿಮೆ ಮಾಡುವಲ್ಲಿ ಇದು ಕೆಲಸ ಮಾಡುತ್ತದೆ.
- ಇದಕ್ಕಾಗಿ ನೀವು ತೆಗೆದುಕೊಂಡ ಟೀ ಬ್ಯಾಗ್ ಅನ್ನು ನೆನೆಸಿ ಇರುವೆ ಕಚ್ಚಿರುವ ಜಾಗದಲ್ಲಿ ಸ್ವಲ್ಪ ಹೊತ್ತು ಇರಿಸಬೇಕು.
ಆಪಲ್ ಸೈಡರ್ ವಿನೆಗರ್
- ಇದೊಂದು ಪರಿಣಾಮಕಾರಿಯಾದ ಪರಿಹಾರವಾಗಿದ್ದು ಇರುವೆ ಕಚ್ಚಿದ ಜಾಗಕ್ಕೆ ಇದನ್ನು ಅನ್ವಯಿಸುವುದರಿಂದ ಬಹಳ ಬೇಗನೆ ಪರಿಹಾರ ಸಿಗುತ್ತದೆ. ಆಪಲ್ ಸೈಡರ್ ವಿನೆಗರ್ ಸಹ ಇರುವೆ ಕಚ್ಚಿದ ನೋವು, ಊತ ಮತ್ತು ಕೆರೆತವನ್ನು ನಿವಾರಣೆ ಮಾಡುತ್ತದೆ.
- ಅಷ್ಟೇ ಅಲ್ಲದೆ ಸಿಪ್ಪೆ ಸುಳಿದ ಭಾಗವನ್ನು ಸಹ ಸರಿ ಆಗುವಂತೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಕಾಟನ್ ಬಾಲ್ ತೆಗೆದುಕೊಂಡು ಅದರಲ್ಲಿ ವಿನಿಗರ್ ಅದ್ದಿ ಇರುವೆ ಕಚ್ಚಿದ ಜಾಗಕ್ಕೆ ಅನ್ವಯಿಸಿ.