ಆ್ಯಪ್ನಗರ

ಗರ್ಭಿಣಿಯರ ಆರೋಗ್ಯಕ್ಕೆ ಸೋರೆಕಾಯಿ ಬಹಳ ಒಳ್ಳೆಯದು...

ಸೋರೆಕಾಯಿಯು ಕೂಡ ಪೋಷಕಾಂಶಗಳನ್ನು ಒಳಗೊಂಡಿರುವ ಪ್ರಮುಖ ತರಕಾರಿ.

Vijaya Karnataka Web 17 Aug 2021, 6:30 pm
ಆಹಾರ ಆರೋಗ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎನ್ನುವುದರಲ್ಲಿ ಎರಡು ಮಾತಿಲ್ಲ, ಅದೇ ರೀತಿಯಲ್ಲಿ ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯರು ತಮ್ಮ ಆಹಾರದ ಬಗ್ಗೆ ಜಾಗೃತೆ ವಹಿಸಬೇಕು.
Vijaya Karnataka Web benefits of having bottle gourd during pregnancy
ಗರ್ಭಿಣಿಯರ ಆರೋಗ್ಯಕ್ಕೆ ಸೋರೆಕಾಯಿ ಬಹಳ ಒಳ್ಳೆಯದು...


ಯಾಕೆಂದರೆ ಕೆಲವೊಂದು ಆಹಾರಗಳು ಗರ್ಭಿಣಿ ಹಾಗೂ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೆಲವೊಂದು ತರಕಾರಿಗಳು ಗರ್ಭಿಣಿಯರಿಗೆ ಒಳ್ಳೆಯದಾದರೂ ಇದನ್ನು ಮಿತವಾಗಿ ಸೇವನೆ ಮಾಡಬೇಕು. ಗರ್ಭಧಾರಣೆ ಸಂದರ್ಭದಲ್ಲಿ ಸೋರೆಕಾಯಿ ಸೇವನೆ ಮಾಡುವುದು ಲಾಭಕಾರಿಯೇ ಎಂದು ನೀವು ಈ ಲೇಖನದಲ್ಲಿ ತಿಳಿಯಿರಿ. ಗರ್ಭಿಣಿಯರು ಸೋರೆಕಾಯಿ ಸೇವನೆ ಮಾಡಿದರೆ ಅದರಿಂದ ಸಿಗುವ ಲಾಭಗಳು

​ಮಲಬದ್ಧತೆ ನಿವಾರಣೆ

ಸೋರೆಕಾಯಿಯಲ್ಲಿ ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇದ್ದು, ನಾರಿನಾಂಶವು ಉತ್ತಮ ಪ್ರಮಾಣದಲ್ಲಿದೆ. ಅಧಿಕ ತೂಕ ಹೊಂದಿರುವ ಮಹಿಳೆಯರು ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ಬಳಸಿಕೊಂಡರೆ ಸಹಕಾರಿ.

ಮೊದಲ ಎರಡು ಮೂರು ತಿಂಗಳು, ಗರ್ಭಿಣಿಯರಿಗೆ ಮಲಬದ್ಧತೆ ಕಾಮನ್! ಟೆನ್ಷನ್ ಬೇಡ...

​ದೇಹದ ಉಷ್ಣತೆ ತಗ್ಗಿಸುವುದು

ಗರ್ಭಧಾರಣೆ ಸಂದರ್ಭದಲ್ಲಿ ಸೋರೆಕಾಯಿ ಸೇವನೆ ಮಾಡಿದರೆ, ಅದು ದೇಹದ ಉಷ್ಣತೆ ಕಡಿಮೆ ಮಾಡುವುದು. ಇದನ್ನು ತುಂಡು ಮಾಡಿಕೊಂಡು ಅದನ್ನು ಪಾದದ ಅಡಿಭಾಗದಲ್ಲಿ ಇಟ್ಟರೆ, ಅದು ದೇಹದ ಉಷ್ಣತೆ ತಗ್ಗಿಸುವುದು.

​ಅನಾರೋಗ್ಯಕರ ಆಹಾರ ಸೇವನೆ ತಪ್ಪಿಸುವುದು

  • ಗರ್ಭಧಾರಣೆ ಸಂದರ್ಭದಲ್ಲಿ ನೀವು ಅನಾರೋಗ್ಯಕಾರಿ ಆಹಾರ ಸೇವನೆ ಮಾಡಬಹುದು. ಮುಖ್ಯವಾಗಿ ಐಸ್ ಕ್ರೀಮ್ ಮತ್ತು ಕೇಕ್ ಸೇವನೆ ಬಯಕೆಯು ಬರುವುದು.
  • ಸೋರೆಕಾಯಿಯಲ್ಲಿ ಶೇ.96ರಷ್ಟು ನೀರಿನಾಂಶವಿದ್ದು, ಇದು ಹೊಟ್ಟೆ ತುಂಬುವಂತೆ ಮಾಡುವುದು ಹಾಗೂ ಬಯಕೆ ತಗ್ಗಿಸುವುದು. ಇದರಿಂದ ಅನಾರೋಗ್ಯಕಾರಿ ಆಹಾರ ಸೇವನೆ ತಡೆಯಬಹುದು.

​ಪ್ರಮುಖ ಖನಿಜಾಂಶ

  • ಸೋರೆಕಾಯಿಯಲ್ಲಿ ಉತ್ತಮ ಪ್ರಮಾಣದ ಖನಿಜಾಂಶಗಳಾಗಿರುವಂತಹ ಸೋಡಿಯಂ ಹಾಗೂ ಪೊಟಾಶಿಯಂ ಇದೆ. ಗರ್ಭಧಾರಣೆ ಸಂದರ್ಭದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಆದರೆ, ಅದರಿಂದ ಬಳಲಿಕೆ ಉಂಟಾಗುವುದು.
  • ಇದರಿಂದ ಸೋಡಿಯಂನ್ನು ಮರಳಿ ಪಡೆಯಲು ಸೋರೆಕಾಯಿ ಸೇವನೆ ಮಾಡಿದರೆ, ಅದು ತುಂಬಾ ಸಹಕಾರಿ ಹಾಗೂ ದೇಹಕ್ಕೆ ಸೋಡಿಯಂ ಒದಗಿಸುವುದು. ಸೋರೆಕಾಯಿಯ ಜ್ಯೂಸ್ ಕೂಡ ಕುಡಿಯಬಹುದು.

​ತಲೆನೋವು ನಿವಾರಣೆ

  • ಸೋರೆಕಾಯಿಯಲ್ಲಿ ಕ್ಯಾಲರಿ ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಇದನ್ನು ಗರ್ಭಿಣಿಯರು ಯಾವುದೇ ಚಿಂತೆ ಇಲ್ಲದೆ ಸೇವನೆ ಮಾಡಬಹುದು.
  • ಸೋರೆಕಾಯಿಯ ಬೀಜವು ತಲೆನೋವು ನಿವಾರಣೆ ಮಾಡುವುದು, ಇದು ಮಾರ್ನಿಂಗ್ ಸಿಕ್ನೆಸ್ ದೂರ ಮಾಡುವುದು. ನೀವು ದಿನದಲ್ಲಿ ಒಂದು ಸಲ ಸೋರೆಕಾಯಿ ಸೇವನೆ ಮಾಡಿದರೆ, ಅದರಿಂದ ಗರ್ಭಧಾರಣೆಯ ಕೆಲವು ಸಮಸ್ಯೆಗಳು ದೂರವಾಗುವುದು.

ತಲೆನೋವು ಇದ್ಯಾ? ಹಾಗಾದ್ರೆ ಸಣ್ಣ ತುಂಡು ಶುಂಠಿ ಬಳಸಿ ನೋಡಿ....

​ಆಹಾರ ಕ್ರಮದಲ್ಲಿ ಸೇರ್ಪಡೆ ಹೇಗೆ?

ಸೋರೆಕಾಯಿಯ ಜ್ಯೂಸ್, ಸಿಹಿ ತಿಂಡಿ ಅಥವಾ ಬೇಯಿಸಿ ಇದನ್ನು ಸೇವನೆ ಮಾಡಬಹುದು. ಇದನ್ನು ಸಲಾಡ್ ರೂಪದಲ್ಲಿ ಕೂಡ ಸೇವಿಸಿದರೆ ಒಳ್ಳೆಯದು. ಹಲ್ವಾ ಅಥವಾ ಸ್ವಲ್ಪ ಪ್ರೈ ಮಾಡಿ ಸೇವಿಸಬಹುದು. ಸೋರೆಕಾಯಿಯನ್ನು ಸರಿಯಾಗಿ ತೊಳೆದು, ಸಿಪ್ಪೆ ತೆಗೆದು ಬಳಸಿ.

ಸೋರೆಕಾಯಿ ಜ್ಯೂಸ್

ಮೂತ್ರ ಕೋಶದ ಸೋಂಕು ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ಸೋರೆಕಾಯಿಯು ದೂರ ಮಾಡುವುದು. ಇದು ಆರೋಗ್ಯವನ್ನು ಉತ್ತಮಪಡಿಸಿ, ತ್ವಚೆಯ ಕಾಂತಿ ರಕ್ಷಿಸುವುದು. ಸೋರೆಕಾಯಿಯ ಜ್ಯೂಸ್ ತೆಗೆದುಕೊಂಡು ಅದನ್ನು ತಾಜಾವಾಗಿ ಸೇವನೆ ಮಾಡಿ.

ಏನೆಲ್ಲಾ ಬೇಕು?

  1. ಒಂದು ಸೋರೆಕಾಯಿ
  2. ಅರ್ಧ ಕಪ್ ನೀರು
  3. ಶುಂಠಿ, ಪುದೀನಾ ಎಲೆ ಅಥವಾ ನೆಲ್ಲಿಕಾಯಿ
  4. ಕಲ್ಲುಪ್ಪು
  5. ಐಸ್ ತುಂಡುಗಳು
  6. ಬ್ಲೆಂಡರ್

ತಯಾರಿಸುವ ವಿಧಾನ

  • ಸರಿಯಾಗಿ ಸೋರೆಕಾಯಿಯನ್ನು ತೊಳೆಯಿರಿ.
  • ಇದರ ಬಳಿಕ ಅದರ ಸಿಪ್ಪೆ ತೆಗೆಯಿರಿ.
  • ಇದರ ಬೀಜಗಳನ್ನು ಚಮಚದಿಂದ ತೆಗೆಯಿರಿ.
  • ಸೋರೆಕಾಯಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ.
  • ಇದನ್ನು ಬ್ಲೆಂಡರ್ ಗೆ ಹಾಕಿ ಮತ್ತು ಅರ್ಧ ಕಪ್ ನೀರು ಹಾಕಿ.
  • ಅದಕ್ಕೆ ಶುಂಠಿ, ಪುದೀನಾ ಎಲೆ ಅಥವಾ ನೆಲ್ಲಿಕಾಯಿ ಹಾಕಿ.
  • ಇದನ್ನು ಸರಿಯಾಗಿ ರುಬ್ಬಿಕೊಳ್ಳಿ.
  • ಕೊನೆಗೆ ಕಲ್ಲುಪ್ಪು ಮತ್ತು ಐಸ್ ತುಂಡುಗಳನ್ನು ಹಾಕಿ.
  • ಈಗ ಸೋರೆಕಾಯಿ ಜ್ಯೂಸ್ ತಯಾರಾಗಿದೆ.

ನಂಬುತ್ತೀರೋ ಬಿಡುತ್ತೀರೋ, 'ಸೋರೆಕಾಯಿ ಜ್ಯೂಸ್' ಮಾತ್ರ ತುಂಬಾನೇ ಆರೋಗ್ಯಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ