ಆ್ಯಪ್ನಗರ

ಮಕ್ಕಳಾಗದಿರಲು ಆಹಾರ ಪದ್ದತಿ ಕಾರಣವೇ? ಬೇರೇನು ಅಡ್ಡಿಗಳಿವೆ?

ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಅಭ್ಯಾಸಗಳು ಕೆಲವೊಮ್ಮೆ ಮಕ್ಕಳಾಗದಿರಲು ಕಾರಣವಾಗುತ್ತವೆ. ಆಹಾರ ಪದ್ಧತಿ, ದೈಹಿಕ ವ್ಯಾಯಾಮ, ಮಾನಸಿಕ ಒತ್ತಾಡ ಇತ್ಯಾದಿಗಳ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ಬಗ್ಗೆ ಐವಿಎಫ್‌ ಫರ್ಟಿಲಿಟಿ ಆಸ್ಪತ್ರೆಯ ತಜ್ಞ ವೈದ್ಯೆ ಡಾ ಅಪೂರ್ವ ಅಮರನಾಥ್‌ ಅವರು ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

Vijaya Karnataka Web 26 Dec 2019, 5:25 pm
ಆಧುನಿಕ ಜೀವನ ಶೈಲಿಯೂ ಸಹ ಫಲವತ್ತತೆ ತಗ್ಗಿಸಲು ಕಾರಣ, ಹಾಗಾಗಿ, ಒಳ್ಳೆಯ ಆಹಾರಾಭ್ಯಾಸದ ಜೊತೆಗೆ ನಡಿಗೆ, ಯೋಗ, ಈಜು, ಧ್ಯಾನದ ಮೂಲಕ ಆರೋಗ್ಯಕರ ಜೀವನ ರೂಢಿಸಿಕೊಂಡರೆ ಒಳ್ಳೆಯದು. ತುಪ್ಪ , ಬೆಣ್ಣೆ ಕಡಿಮೆ ತಿನ್ನಿ. ಮೂಸಂಬಿ, ಕಿತ್ತಳೆ ರಸ ಹೆಚ್ಚು ಸೇವಿಸಬೇಕು. ದೇಹದ ತೂಕ ಇಳಿಸಿಕೊಳ್ಳಬೇಕು. ಧೂಮಪಾನ ಮತ್ತು ಮದ್ಯಪಾನ ಬೇಡವೇ ಬೇಡ.
Vijaya Karnataka Web Fertility Problems


ಮಕ್ಕಳಾಗದಿರಲು ಕಾರಣಗಳೇನು?
ಮಹಿಳೆಯರು: ಗರ್ಭಕೋಶದ ಟ್ಯೂಬ್‌ ಬ್ಲಾಕ್‌ ಆಗಿರುವುದು, ಪಿಸಿಒಡಿ, ಖುತುಚಕ್ರ ವ್ಯತ್ಯಯ, ವಯಸ್ಸು, ಅಂಡಾಣು ಉತ್ಪತಿ ಶಕ್ತಿ, ಕ್ಯಾನ್ಸರ್‌ ಮತ್ತಿತರ ಸಮಸ್ಯೆಗಳು
ಪುರುಷರು: ಸೈಮನ್‌ ಕೌಂಟ್‌ ಕಡಿಮೆ, ವೀರ‍್ಯಕಣ ಇಲ್ಲದಿರುವುದು.

ಸಂತಾನ ಭಾಗ್ಯಕ್ಕೆ ಪ್ರಮುಖ ಅಡ್ಡಿಗಳಿವು
- ಅತಿಯಾದ ಅಲ್ಕೋಹಾಲ್‌, ಧೂಮಪಾನ
- ತಡವಾಗಿ ಮದುವೆ
- ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿ
- ಉದ್ಯೋಗ ಮೊದಲಾದ ಕಾರಣಗಳಿಂದ ಅತಿಯಾದ ಮಾನಸಿಕ ಒತ್ತಡ

ಮಕ್ಕಳಿಲ್ಲವೆಂದು ಕೊರಗಬೇಡಿ, ಇದೆ ಪರಿಹಾರ: ದಂಪತಿಗಳ ದುಗುಡ ನಿವಾರಿಸಿದ ಡಾ. ಅಪೂರ್ವ

ಏನಿದು ಪಿಸಿಒಡಿ?
ಪಿಸಿಒಡಿ - ಪಾಲಿಸೈಟಿಕ್‌ ಓವರಿ ಡಿಸೀಜ್‌, ಇದು ಜೀವನ ಶೈಲಿ ಸಮಸ್ಯೆಯಾಗಿದೆ. ಉತ್ತಮ ಆಹಾರ ಸೇವನೆ ಮಾಡದಿರುವುದೂ ಇದಕ್ಕೆ ಕಾರಣ. ಸಾಮಾನ್ಯವಾಗಿ ಇದನ್ನು 'ನೀರುಗುಳ್ಳೆ'ಎಂದು ಹೇಳಬಹುದು. ಸಾಮಾನ್ಯವಾಗಿ ಹತ್ತು ಮಹಿಳೆಯರ ಪೈಕಿ ಒಬ್ಬರಲ್ಲಿಇದು ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿಸಾಮಾನ್ಯವಾಗಿ 6ರಿಂದ 8 ಅಂಡಾಣು ಉತ್ಪತ್ತಿ ಶಕ್ತಿ ಇರುತ್ತದೆ. ಅದು ಜಾಸ್ತಿಯಾಗಿ 12 ಅಂಡಾಣು ಉತ್ಪತ್ತಿಯಾದಾಗ ಹಾರ್ಮೋನ್‌ ಬೆಳವಣಿಗೆ ಸಮತೋಲನ ಕಳೆದುಕೊಳ್ಳುತ್ತದೆ. ಆಗ ಖುತುಚಕ್ರ ವ್ಯತ್ಯಾಸವಾಗುವುದಲ್ಲದೆ, ಗರ್ಭಧರಿಸುವುದೂ ಕಷ್ಟವಾಗುತ್ತದೆ.

ಏನಿದು ಐವಿಎಫ್‌ ಚಿಕಿತ್ಸೆ? ಇದಕ್ಕೆ ಎಷ್ಟು ಖರ್ಚಾಗುತ್ತದೆ?

ಮಧುಮೇಹ, ಹೃದಯ ಕಾಯಿಲೆ ಇದ್ದರೆ?
ಮಧುಮೇಹ ಮತ್ತು ಹೃದಯ ಕಾಯಿಲೆ ಇದ್ದರೂ ಮಕ್ಕಳನ್ನು ಮಾಡಿಕೊಳ್ಳಲು ಅಡ್ಡಿಯೇನೂ ಇಲ್ಲ. ಆದರೆ ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಗರ್ಭ ಧರಿಸಿದ ನಂತರ ಸಕ್ಕರೆ ಕಾಯಿಲೆ ನಿಯಂತ್ರಿಸಿಕೊಳ್ಳದಿದ್ದರೆ ಅದು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಪುರುಷರಲ್ಲಿಅದು ವೀರಾರ‍ಯಣು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕಂದಿನಲ್ಲಿಯೇ ಹೃದ್ರೋಗ ಸಮಸ್ಯೆ ಇದ್ದರೆ ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು.


ಮಕ್ಕಳಾಗದಿರಲು ಆಹಾರ ಪದ್ದತಿ ಕಾರಣವೇ? ಬೇರೇನು ಅಡ್ಡಿಗಳಿವೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ