ಆ್ಯಪ್ನಗರ

ಹಸಿರೆಲೆ ತರಕಾರಿ, ಮೊಟ್ಟೆ, ಸಿಹಿಗೆಣಸು ಇವೆಲ್ಲಾ ಗರ್ಭಿಣಿಯರಿಗೆ ಒಳ್ಳೆಯದು!

ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ ಎಂದಿಗೂ ಸಹ ಇಂತಹ ಆಹಾರಗಳನ್ನು ಮಿಸ್ ಮಾಡಲೇಬಾರದು

Vijaya Karnataka Web 15 Jul 2021, 10:40 am
ಮಹಿಳೆಯರು ಒಮ್ಮೆ ಗರ್ಭಾವಸ್ಥೆಗೆ ತಲುಪಿದ ನಂತರ ಯಾವುದೇ ಕಾರಣಕ್ಕೂ ತಮ್ಮ ಆಹಾರ ಪದ್ಧತಿಯ ಬಗ್ಗೆ ಅಲಕ್ಷ ವಹಿಸಬಾರದು. ಏಕೆಂದರೆ ಈ ಸಮಯದಲ್ಲಿ ಸೇವನೆ ಮಾಡುವ ಪ್ರತಿಯೊಂದು ಆಹಾರ ಕೂಡ ಗರ್ಭಿಣಿ ಮಹಿಳೆಯ ಆರೋಗ್ಯದ ಮೇಲೆ ಮತ್ತು ಗರ್ಭಕೋಶದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿನ ಮೇಲೆ ನೇರವಾದ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
Vijaya Karnataka Web here are superfoods pregnant women must add in her diet
ಹಸಿರೆಲೆ ತರಕಾರಿ, ಮೊಟ್ಟೆ, ಸಿಹಿಗೆಣಸು ಇವೆಲ್ಲಾ ಗರ್ಭಿಣಿಯರಿಗೆ ಒಳ್ಳೆಯದು!


ಆಹಾರಪದ್ಧತಿಯಲ್ಲಿ ಎಂದಿಗೂ ಸಹ ಹೆಚ್ಚುವರಿಯಾಗಿ ವಿಟಮಿನ್ ಅಂಶಗಳು, ಖನಿಜಾಂಶಗಳು ಮತ್ತು ಅಪಾರ ಪ್ರಮಾಣದಲ್ಲಿ ಪೌಷ್ಠಿಕ ಸತ್ವಗಳು ಇರುವಂತೆ ನೋಡಿಕೊಳ್ಳಬೇಕು. ಸಮತೋಲನವಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಅತ್ಯುತ್ತಮ ಆರೋಗ್ಯವನ್ನು ಹೊಂದಬಹುದು.. ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಸೂಕ್ತವಾದ ಆಹಾರಗಳು

​ಪೂರ್ಣಪ್ರಮಾಣದ ಕಾಳುಗಳು

  • ನಿಮಗೆ ಗೊತ್ತಿರಬೇಕು ಸಸ್ಯಧಾರಿತ ಕಾಳುಗಳಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶ, ಫೋಲೆಟ್, ಪ್ರೋಟೀನ್ ಅಂಶ, ಕ್ಯಾಲ್ಸಿಯಂ ಅಂಶ ಜೊತೆಗೆ ನಾರಿನ ಅಂಶ ಕಂಡುಬರುತ್ತದೆ.
  • ಇವುಗಳು ನೇರವಾಗಿ ಗಿಡಗಳಿಂದ ಸಿಗುವ ಕಾರಣದಿಂದ ನೈಸರ್ಗಿಕವಾದ ಪ್ರಯೋಜನಗಳನ್ನು ನಾವು ಇವುಗಳಿಂದ ನಿರೀಕ್ಷೆ ಮಾಡಬಹುದು. ಕಡಲೆಕಾಳು, ಬಟಾಣಿ ಕಾಳು, ಕಡಲೆಬೀಜ, ಬೀನ್ಸ್ ಇತ್ಯಾದಿಗಳು ಗರ್ಭಿಣಿ ಮಹಿಳೆಯ ಆಹಾರ ಪದ್ಧತಿಯಲ್ಲಿ ಸೇರಿದ್ದರೆ ಒಳ್ಳೆಯದು.
  • ಗರ್ಭಾವಸ್ಥೆಯಲ್ಲಿರುವ ಯಾವುದೇ ಮಹಿಳೆಯು ಇಂತಹ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವನೆ ಮಾಡುವುದರಿಂದ ಹುಟ್ಟುವ ಮಗುವಿಗೆ ಅಂಗಾಂಗಗಳಲ್ಲಿ ಯಾವುದೇ ನ್ಯೂನ್ಯತೆ ಇರುವುದಿಲ್ಲ. ಬೆಳವಣಿಗೆಯಾದಂತೆ ಮಗು ಆರೋಗ್ಯಕರವಾಗಿ ಯಾವುದೇ ಕಾಯಿಲೆಗಳಿಗೆ ಮಣಿಯದಂತೆ ಬದುಕುತ್ತದೆ ಎಂದು ಹೇಳಬಹುದು.

​ಡೈರಿ ಉತ್ಪನ್ನಗಳು

  • ಗರ್ಭಿಣಿ ಮಹಿಳೆಯರಿಗೆ ಡೈರಿ ಉತ್ಪನ್ನಗಳು ಬಹು ಅವಶ್ಯಕವಾಗಿ ಬೇಕು ಎಂದು ಹೇಳುತ್ತಾರೆ. ಏಕೆಂದರೆ ಇವುಗಳಲ್ಲಿ ಕ್ಯಾಲ್ಸಿಯಂ ಅಂಶ ಮತ್ತು ಪ್ರೋಟೀನ್ ಅಂಶದ ಪ್ರಮಾಣ ಅತಿ ಹೆಚ್ಚಾಗಿ ಕಂಡುಬರುತ್ತದೆ.
  • ಜೊತೆಗೆ ಗರ್ಭಾವಸ್ಥೆಯ ಸಮಯದಲ್ಲಿ ದೇಹದ ಅವಶ್ಯಕತೆಗೆ ತಕ್ಕಂತೆ ಬೇಕಾದ ಮೆಗ್ನೀಷಿಯಂ, ಫಾಸ್ಪರಸ್, ವಿಟಮಿನ್ ಬಿ ಮತ್ತು ಜಿಂಕ್ ಅಂಶಗಳ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ.
  • ಅದರಲ್ಲೂ ವಿಶೇಷವಾಗಿ ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಎದುರಾಗುವ ಮಲಬದ್ಧತೆ ಸಮಸ್ಯೆಗೆ ಪರಿಹಾರವಾಗಿ ಆಗಾಗ ಮೊಸರು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಅಚ್ಚುಕಟ್ಟಾದ ಜೀರ್ಣಾಂಗ ವ್ಯವಸ್ಥೆ ಸಿಗಲಿದೆ.

ಹಾಲು ಸರಿಯಾಗಿ ಜೀರ್ಣವಾಗುತ್ತಿಲ್ಲವೇ? ಹಾಲಿಗೆ ಬದಲಾಗಿ ಈ ಡೈರಿ ಉತ್ಪನ್ನಗಳನ್ನು ಬಳಸಿ

​ಸಿಹಿ ಗೆಣಸು

  • ಮಳೆಗಾಲ ಹಾಗೂ ಚಳಿಗಾಲ ಬಂದರೆ ಸಿಹಿಗೆಣಸು ಸೇವನೆ ಬೇಡ ಎಂದು ಹಲವರು ಹೇಳುತ್ತಾರೆ. ಆದರೆ ಇದರಿಂದ ಹಲವು ಬಗೆಯ ಪೌಷ್ಟಿಕ ಸತ್ವಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಮರೆತು ಬಿಡುತ್ತಾರೆ.
  • ಮುಖ್ಯವಾಗಿ ಸಿಹಿ ಗೆಣಸು ಅಥವಾ ಸಿಹಿ ಆಲೂಗೆಡ್ಡೆಯಲ್ಲಿ ಪ್ರೋಟೀನ್ ಅಂಶದ ಜೊತೆಗೆ ಬೀಟಾ-ಕ್ಯಾರೋಟಿನ್ ಅಂಶದ ಪ್ರಮಾಣ ದುಪ್ಪಟ್ಟಾಗಿ ಕಂಡುಬರುತ್ತದೆ.
  • ಮಗುವಿನ ಬೆಳವಣಿಗೆಗೆ ತಕ್ಕಂತೆ ಅಗತ್ಯವಾಗಿ ಬೇಕಾದ ವಿಟಮಿನ್ ಎ ಅಂಶ ಸಿಹಿ ಗೆಣಸಿನಲ್ಲಿ ಕಂಡುಬರುತ್ತದೆ. ನಾರಿನ ಅಂಶ ಕೂಡ ಯಥೇಚ್ಛ ಪ್ರಮಾಣದಲ್ಲಿದ್ದು, ಆರೋಗ್ಯಕರವಾದ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಲು ಅನುಕೂಲ ಮಾಡಿಕೊಡುತ್ತದೆ.

ಸಿಹಿ ಗೆಣಸಿನ ಜ್ಯೂಸ್‌ನಲ್ಲಿ ಏನೆಲ್ಲಾ ಲಾಭಗಳಿವೆ ತಿಳಿದಿದೆಯೇ ?

​ಕೋಳಿ ಮೊಟ್ಟೆ

  • ಕೋಳಿ ಮೊಟ್ಟೆಯಲ್ಲಿ ಅಪಾರ ಪ್ರಮಾಣದ ಪ್ರೋಟೀನ್ ಅಂಶ ಸಿಗುತ್ತದೆ. ಜೊತೆಗೆ ದೇಹಕ್ಕೆ ಬೇಕಾದ ಆರೋಗ್ಯಕರವಾದ ಕೊಬ್ಬಿನ ಆಮ್ಲಗಳು ಸಹ ಇದರಲ್ಲಿವೆ.
  • ಇನ್ನು ಖನಿಜಾಂಶಗಳು ಮತ್ತು ವಿಟಮಿನ್ ಅಂಶಗಳ ಮಹಾಪೂರವೇ ಕೋಳಿ ಮೊಟ್ಟೆಯಲ್ಲಿ ಸಿಗುತ್ತದೆ. ಕೋಲನ್ ಅಂಶ ಕೂಡ ಹೆಚ್ಚಾಗಿರುವುದರಿಂದ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿನ ಮೆದುಳಿನ ಅಭಿವೃದ್ಧಿಯಲ್ಲಿ ಇದರ ಪಾತ್ರ ಹೆಚ್ಚಾಗಿರುತ್ತದೆ.
  • ಗರ್ಭಿಣಿ ಮಹಿಳೆಯರು ಸಾಧ್ಯವಾದರೆ ದಿನಕ್ಕೊಂದು ಬೇಯಿಸಿದ ಕೋಳಿ ಮೊಟ್ಟೆಯನ್ನು ದಿನದ ಯಾವುದಾದರೂ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು.

ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿಂದ್ರೆ ಆರೋಗ್ಯವಾಗಿ ಹಾಗೂ ಫಿಟ್ ಆಗಿರುವಿರಿ

​ಹಸಿರೆಲೆ ತರಕಾರಿಗಳು

  • ಹಸಿರೆಲೆ ತರಕಾರಿಗಳು ಸಾಧಾರಣವಾಗಿ ಪ್ರತಿಯೊಬ್ಬರ ಆರೋಗ್ಯಕ್ಕೂ ತುಂಬಾ ಒಳ್ಳೆಯ ಪ್ರಭಾವವನ್ನು ಬೀರುತ್ತವೆ. ಏಕೆಂದರೆ ಇವುಗಳಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶ ಹೆಚ್ಚಾಗಿ ಸಿಗುತ್ತದೆ.
  • ಪೊಟ್ಯಾಶಿಯಂ ಮತ್ತು ಕಬ್ಬಿಣದ ಅಂಶದ ಪ್ರಮಾಣ ಕೂಡ ಇದರಲ್ಲಿ ಹೆಚ್ಚಿದೆ. ಹಸಿರೆಲೆ ತರಕಾರಿಗಳಲ್ಲಿ ನಾರಿನ ಅಂಶದ ಪ್ರಮಾಣ ಕೂಡ ಇದ್ದು, ಕಡಿಮೆ ದೈಹಿಕ ತೂಕ ಹೊಂದಿರುವ ಮಗುವಿನ ದೇಹದ ಅಭಿವೃದ್ಧಿಯನ್ನು ಹಸಿರು ಎಲೆ-ತರಕಾರಿಗಳನ್ನು ಕಂಡುಬರುವ ಪೌಷ್ಟಿಕ ಸತ್ವಗಳು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.

ಕ್ಯಾಪ್ಸಿಕಂ, ಕ್ಯಾರೆಟ್, ಹಸಿರೆಲೆ ತರಕಾರಿಗಳು, ಈರುಳ್ಳಿ, ಇವೆಲ್ಲಾ ಹೃದಯಕ್ಕೆ ಬಹಳ ಒಳ್ಳೆಯದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ