ಆ್ಯಪ್ನಗರ

ಗರ್ಭಿಣಿಯರಿಗೆ ಹೊಟ್ಟೆಯ ಮೇಲೆ ಮೂಡುವ 'ಸ್ಟ್ರೆಚ್ ಮಾರ್ಕ್ಸ್‌'‌ಗೆ ಸರಳ ಟಿಪ್ಸ್

ಹೆರಿಗೆ ಬಳಿಕ ಅಥವಾ ಗರ್ಭಧಾರಣೆ ಸಂದರ್ಭದಲ್ಲಿ ಮೂಡುವಂತಹ ಸ್ಟ್ರೆಚ್ ಮಾರ್ಕ್ ನ್ನು ನಿವಾರಣೆ ಮಾಡಲು ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆ ಬದಲಿಗೆ ಕೆಲವು ಮನೆಮದ್ದು ನಿಮಗೆ ಸೂಕ್ತವಾಗಿರುವುದು.

Vijaya Karnataka Web 4 May 2020, 5:25 pm
ಗರ್ಭಧಾರಣೆ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದು ಸಹಜ. ಇದು ಹೆರಿಗೆ ಬಳಿಕ ಕೂಡ ದೇಹದಲ್ಲಿ ತಮ್ಮ ಗುರುತನ್ನು ಬಿಟ್ಟು ಹೋಗಬಹುದು. ಇದರಲ್ಲಿ ಮುಖ್ಯವಾಗಿ ಗರ್ಭಧಾರಣೆ ವೇಳೆ ಹೊಟ್ಟೆ ಮೇಲೆ ಮೂಡುವಂತಹ ಸ್ಟ್ರೆಚ್ ಮಾರ್ಕ್ ಗಳು. ಈ ಸ್ಟ್ರೆಚ್ ಮಾರ್ಕ್ ಗಳು ಸೌಂದರ್ಯವನ್ನು ಕೆಡಿಸುವುದು. ಗರ್ಭಾವಸ್ಥೆಯ ಸಂದರ್ಭದಲ್ಲಿ ಮೂಡುವ ಈ ಸ್ಟ್ರೆಚ್‌ ಮಾರ್ಕ್‌ಗಳು ಡೆಲಿವರಿ ಆದ ನಂತರವೂ ಹಾಗೆಯೇ ಉಳಿದುಬಿಡುತ್ತದೆ.
Vijaya Karnataka Web ಗರ್ಭಿಣಿಯರಿಗೆ ಹೊಟ್ಟೆಯ ಮೇಲೆ ಮೂಡುವ ಸ್ಟ್ರೆಚ್ ಮಾರ್ಕ್ಸ್‌‌ಗೆ ಸರಳ ಟಿಪ್ಸ್


ಯಾಕೆಂದರೆ ಸೀರೆ ಅಥವಾ ಹೊಟ್ಟೆ ಕಾಣುವಂತಹ ಬಟ್ಟೆ ಧರಿಸಿದರೆ ಆಗ ಸ್ಟ್ರೆಚ್ ಮಾರ್ಕ್ ಎದ್ದು ಕಾಣುವುದು. ಇಂತಹ ಸಮಯದಲ್ಲಿ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ತುಂಬಾ ಪರಿಣಾಮಕಾರಿ ಆಗಿ ಬಳಕೆ ಮಾಡಬಹುದು. ಇದು ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡಿ, ಚರ್ಮಕ್ಕೆ ಕಾಂತಿ ನೀಡುವುದು. ಸ್ಟ್ರೇಚ್ ಮಾರ್ಕ್ ನಿಂದ ಸಂಪೂರ್ಣವಾಗಿ ನಿವಾರಣೆ ಪಡೆಯುವುದು ಅಸಾಧ್ಯ. ಆದರೆ ಕೆಲವೊಂದು ಮನೆಮದ್ದುಗಳು ಸ್ಟ್ರೆಚ್ ಮಾರ್ಕ್ ನ್ನು ತಗ್ಗಿಸಲು ನೆರವಾಗುವುದು. ಇದು ಹೇಗೆ ಎಂದು ನೀವು ತಿಳಿಯಿರಿ.

ವಿಟಮಿನ್ ಎ
ವಿಟಮಿನ್ ಎ ಯನ್ನು ರೆಟಿನಾಯ್ಡ್ ಎಂದು ಕರೆಯಲಾಗುತ್ತದೆ. ಇದು ಚರ್ಮವನ್ನು ತುಂಬಾ ನಯ ಮತ್ತು ಮೃಧುವಾಗಿಸಿ, ಯೌವನಯುತ ತ್ವಚೆ ನೀಡುವುದು. ಇದನ್ನು ಹೆಚ್ಚಿನ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ವಿಟಮಿನ್ ಎ ಅಧಿಕವಾಗಿ ಇರುವಂತಹ ಆಹಾರ ಕ್ರಮ ಬಳಸಿಕೊಂಡರೆ ಅದರಿಂದ ಚರ್ಮದ ಆರೋಗ್ಯ ಮತ್ತು ಸಂಪೂರ್ಣ ವಿನ್ಯಾಸವನ್ನು ಸುಧಾರಣೆ ಮಾಡುವುದು. ಸ್ಟ್ರೆಚ್ ಮಾರ್ಕ್ ಗೆ ನೀವು ನೇರವಾಗಿ ವಿಟಮಿನ್ ಬಳಸಿಕೊಳ್ಳಬಹುದು.

ಸ್ಟ್ರೆಚ್ ಮಾರ್ಕ್ಸ್‌ ನಿವಾರಿಸಲು ಇಲ್ಲಿದೆ ಮನೆ ಮದ್ದು


ಸಕ್ಕರೆ ಸ್ಕ್ರಬ್
ಸಕ್ಕರೆ ಸ್ಕ್ರಬ್ ಬಳಸಿಕೊಂಡು ಸ್ಟ್ರೆಚ್ ಮಾರ್ಕ್ ನ ಸುತ್ತಲು ಇರುವಂತಹ ಸತ್ತ ಚರ್ಮವನ್ನು ತೆಗೆಯಬಹುದು. ಈ ಸ್ಕ್ರಬ್ ನ್ನು ಮಾಡಲು ಒಂದು ಕಪ್ ಸಕ್ಕರೆಗೆ ಬಾದಾಮಿ ಎಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿಕೊಳ್ಳಿ. ಇದನ್ನು ಒದ್ದೆ ಸಮುದ್ರದ ಮರಳಿಗೆ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಲಿಂಬೆರಸ ಹಾಕಿಕೊಳ್ಳಿ ಮತ್ತು ಈ ಮಿಶ್ರಣದಿಂದ ಸರಿಯಾಗಿ ಸ್ಕ್ರಬ್ ಮಾಡಿ. ಈ ವಿಧಾನವನ್ನು ನೀವು ವಾರದಲ್ಲಿ ಹಲವಾರು ಸಲ ಬಳಸಿ. ಆಗ ನಿಮಗೆ ಒಳ್ಳೆಯ ಫಲಿತಾಂಶ ಕಂಡುಬರುವುದು.


ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ನಮ್ಮ ದೇಹಕ್ಕೆ ಹಲವಾರು ರೀತಿಯಿಂದ ನೆರವಾಗುವುದು. ತೆಂಗಿನ ಎಣ್ಣೆಯು ಚರ್ಮದಲ್ಲಿನ ಗಾಯ ಒಣಗಿಸಲು ಮತ್ತು ಸ್ಟ್ರೆಚ್ ಮಾರ್ಕ್ ನ್ನು ನಿವಾರಿಸಲು ನೆರವಾಗಲಿದೆ. ಪ್ರತಿನಿತ್ಯವು ನೀವು ತೆಂಗಿನ ಎಣ್ಣೆಯನ್ನು ಸ್ಟ್ರೆಚ್ ಮಾರ್ಕ್ಸ್ ಗೆ ಹಚ್ಚಿಕೊಳ್ಳಿ. ಇದರಿಂದ ಒಳ್ಳೆಯ ಪರಿಹಾರ ಸಿಗುವುದು. ತೆಂಗಿನ ಎಣ್ಣೆಯಲ್ಲಿ ಇರುವಂತಹ ಶಮನಕಾರಿ ಗುಣವು ಹಲವಾರು ಅಧ್ಯಯನಗಳಿಗೆ ಸಾಬೀತಾಗಿದೆ.


ಅಲೋವೆರಾ
ಅಲೋವೆರಾವು ಅದ್ಭುತವಾದ ಚರ್ಮಕ್ಕೆ ಬಣ್ಣ ನೀಡುವ ಗುಣ ಹೊಂದಿದೆ. ಅಲೋವೆರಾದ ಲೋಳೆಯು ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡುವಲ್ಲಿ ಅದ್ಭುತವಾಗಿ ಕೆಲಸ ಮಾಡುವುದು. ಸ್ಟ್ರೆಚ್ ಮಾರ್ಕ್ ಮಾತ್ರವಲ್ಲದೆ ಬೇರೆ ರೀತಿಯ ಕಲೆಗಳನ್ನು ಕೂಡ ಇದು ತೆಗೆಯುವುದು. ತಾಜಾ ಅಲೋವೆರಾದ ಲೋಳೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಬಿಟ್ಟು ಸ್ನಾನ ಮಾಡಿಕೊಳ್ಳಿ.

ಗರ್ಭಿಣಿಯರು ಹೀಗೆ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್‌ ಬೀಳುವುದಿಲ್ಲ

ಹೈಲುರಾನಿಕ್ ಆಮ್ಲ
ಚರ್ಮದಲ್ಲಿ ಇರುವಂತಹ ಕಾಲಜನ್ ಚರ್ಮವನ್ನು ತುಂಬಾ ಆರೋಗ್ಯಕಾರಿ ಹಾಗೂ ಕಾಂತಿಯುತವಾಗಿ ಇಡುವುದು. ವಯಸ್ಸಾಗುತ್ತಾ ಇರುವಂತಹ ಚರ್ಮದಲ್ಲಿನ ಕಾಲಜನ್ ಮಟ್ಟವು ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ ಹೈಲುರಾನಿಕ್ ಆಮ್ಲ ಬಳಸಿಕೊಂಡು ಕಾಲಜನ್ ಉತ್ಪತ್ತಿ ಹೆಚ್ಚಿಸಬಹುದು. ಕ್ಯಾಪ್ಸೂಲ್ ಸೇವನೆ ಮೂಲಕವು ಇದನ್ನು ಪಡೆಯಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ