ಆ್ಯಪ್ನಗರ

ಹೆರಿಗೆ ನಂತರ ಹೊಟ್ಟೆಯ ಮೇಲೆ ಉಳಿದುಕೊಳ್ಳುವ ಗೆರೆಗಳ ನಿವಾರಣೆಗೆ ಸರಳ ಪರಿಹಾರ

ಗರ್ಭಾವಸ್ಥೆಯಲ್ಲಿ ಉಂಟಾದ ಈ ಗುರುತುಗಳನ್ನು ಅಥವಾ ರೇಖೆಗಳನ್ನು ಕೆಲವು ವಿಶೇಷ ಉಪಚಾರಗಳಿಂದ ಗುಣಮುಖಗೊಳಿಸಬಹುದು.

Vijaya Karnataka Web 25 Sep 2020, 9:53 am
ಗರ್ಭಾವಸ್ಥೆ ಹೆಣ್ಣಿಗೆ ಒಂದು ವಿಶೇಷವಾದ ಸಮಯ. ಆ ಸಮಯದಲ್ಲಿ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತವೆ. ಅಂತಹ ಬದಲಾವಣೆಗಳಲ್ಲಿ ಚರ್ಮಗಳು ಬಿರಿದುಕೊಳ್ಳುವುದು ಸಹ ಒಂದು. ಮಗುವಿನ ಬೆಳವಣಿಗೆ ಹಾಗೂ ತಾಯಿಯ ದೇಹದಲ್ಲಿ ತೂಕದ ಹೆಚ್ಚಳದ ಕಾರಣದಿಂದ ಹೊಟ್ಟೆ, ಕಾಲು, ತೋಳು ಮತ್ತು ಎದೆಯ ಭಾಗದಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಗರ್ಭಾವಸ್ಥೆಯ ಆರನೇ ತಿಂಗಳಿಂದ ಈ ಸಮಸ್ಯೆ ಉಂಟಾಗುವುದು. ಪ್ರಾರಂಭದಲ್ಲಿ ಗುಲಾಬಿ ಗೆರೆಯಂತೆ ಕಾಣಿಸಿಕೊಳ್ಳುತ್ತವೆ. ಪ್ರಸವದ ನಂತರ ಬಿಳಿಯ ರೇಖೆಗಳಂತೆ ತೋರುವುದು. ಈ ಗುರುತುಗಳು ಶಾಶ್ವತವಾಗಿ ಉಳಿದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಈ ಸಮಸ್ಯೆಯು ಕೆಲವು ಮಹಿಳೆಯರಿಗೆ ಅತ್ಯಂತ ಸೋಚನೀಯ ಸ್ಥಿತಿಯಾಗಿ ತಿರುಗುವ ಸಾಧ್ಯತೆಗಳು ಇರುತ್ತವೆ.
Vijaya Karnataka Web how to get rid of pregnancy stretch marks
ಹೆರಿಗೆ ನಂತರ ಹೊಟ್ಟೆಯ ಮೇಲೆ ಉಳಿದುಕೊಳ್ಳುವ ಗೆರೆಗಳ ನಿವಾರಣೆಗೆ ಸರಳ ಪರಿಹಾರ


​ತೂಕವನ್ನು ನಿಯಂತ್ರಣದಲ್ಲಿ ಇಡಿ

ಪ್ರಸವದ ಪೂರ್ವದಲ್ಲಿ ಹಾಗೂ ಪ್ರಸವದ ನಂತರ ಮಹಿಳೆಯರ ತೂಕ ಹೆಚ್ಚಾಗುವುದು. ಆ ಸಮಯದಲ್ಲಿ ಚರ್ಮಗಳು ಬಿರಿದುಕೊಳ್ಳುವುದು ಸಾಮಾನ್ಯ. ಪ್ರಸವದ ನಂತರ ತೂಕವನ್ನು ನಿಯಂತ್ರಣದಲ್ಲಿ ಇಡಬೇಕು. ತೂಕ ಇಳಿಸಲು ಲಘುವಾದ ವ್ಯಾಯಾಮ ಮಗುವಿಗೆ ಎದೆಹಾಲು ಉಣಿಸುವ ಕ್ರಿಯೆ ಹಾಗೂ ಕೊಬ್ಬು ರಹಿತ ಆಹಾರವನ್ನು ಸೇವಿಸುವುದರ ಮೂಲಕ ತೂಕವನ್ನು ಇಳಿಸಬಹುದು. ತೂಕವನ್ನು ಇಳಿಸುವುದರ ಮೂಲಕ ಹೊಟ್ಟೆಯ ಮೇಲೆ ಇರುವ ರೇಖೆಯನ್ನು ಕಡಿಮೆ ಮಾಡಬಹುದು. ಬಿರಿದ ಚರ್ಮಗಳು ಪುನಃ ಕಡಿಮೆಯಾಗುವುದರಿಂದ ಬಿರಿದ ರೇಖೆಗಳು ಮಾಯವಾಗುತ್ತವೆ.

​ಹೈಡ್ರೀಕರಿಸಿದಂತೆ ಇರಬೇಕು

ಅಧಿಕ ನೀರನ್ನು ಸೇವಿಸುವುದರಿಂದ ಚರ್ಮವು ತೇವಾಂಶದಿಂದ ಕೂರಿರುತ್ತವೆ. ಚರ್ಮದಲ್ಲಿ ನೀರಿನಂಶ ಇದ್ದಾಗ ಮೃದುತ್ವವನ್ನು ಕಾಪಾಡುವುದು. ಆಗ ಬಿರಿದ ಕಲೆಗಳು ಮಾಯವಾಗುವುದು. ಒಣ ಚರ್ಮಗಳಿದ್ದರೆ ಬಿರಿದ ರೇಖೆಗಳು ಗಾಢತೆಯನ್ನು ಪಡೆದುಕೊಳ್ಳುತ್ತದೆ. ದೇಹ ಹೆಚ್ಚು ತೇವಾಂಶದಿಂದ ಕೂಡಿರುವಂತೆ ಮಾಡಲು ಅಧಿಕ ನೀರು ಹಾಗೂ ತಾಜಾ ಹಣ್ಣಿನ ರಸವನ್ನು ಸೇವಿಸಬೇಕು. ಆಗ ಚರ್ಮವು ಉತ್ತಮ ಪೋಷಣೆಯೊಂದಿಗೆ ಸಮಸ್ಯೆಯಿಂದ ಗುಣಮುಖವಾಗುವುದು.

​ಸಮತೋಲನ ಆಹಾರ ಸೇವನೆ

ದೇಹದ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆತಾಗ ದೇಹವು ಆರೋಗ್ಯಯುತವಾಗಿ ಇರುತ್ತವೆ. ಅಂತೆಯೇ ಚರ್ಮದ ಆರೋಗ್ಯವು ಉತ್ತಮವಾಗಿರಲು ಅಗತ್ಯವಾದ ಪೋಷಕಾಂಶ ಭರಿತ ಆಹಾರವನ್ನು ಸೇವುಸಬೇಕು. ಚರ್ಮದ ಆರೋಗ್ಯ ವೃದ್ಧಿ ಮಾಡುವ ಆಹಾರವನ್ನು ಸೇವಿಸಿದರೆ ಚರ್ಮದಲ್ಲಿ ಇರುವ ಕಲೆಗಳು ಹಾಗೂ ನ್ಯೂನತೆಗಳು ಬಹು ಬೇಗ ನಿವಾರಣೆಯಾಗುತ್ತವೆ. ಹಾಗಾಗಿ ನಿತ್ಯವೂ ಸಮತೋಲಿತ ಆಹಾರದ ಜೊತೆಗೆ ಚರ್ಮದ ಆರೋಗ್ಯಕ್ಕೆ ಅಗತ್ಯವಾದ ಆಹಾರವನ್ನು ಸೇವಿಸಬೇಕು.

ಗರ್ಭಾವಸ್ಥೆಯಲ್ಲಿ ತುಪ್ಪವನ್ನು ಸೇವಿಸುವುದರಿಂದ ಇಷ್ಟು ಲಾಭ ಇದ್ಯಾ..?

​ವಿಟಮನಿನ್ ಸಿ

ವಿಟಮಿನ್ ಸಿ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಳ್ಳಲು ಹಾಗೂ ಕಾಲಜಾನ್‍ಗಳನ್ನು ಪ್ರೇರೇಪಿಸಲು ಸಹಾಯ ಮಾಡುವುದು. ಚರ್ಮದ ಮೇಲೆ ಉಂಟಾಗುವ ರೇಖೆ, ಬಿರುಕು, ಕಲೆ, ಸುಕ್ಕುಗಳನ್ನು ನಿವಾರಿಸಲು ಸಹಾಯ ಮಾಡುವುದು. ವಿಟಮಿನ್ ಸಿ ಸಿಟ್ರಿಕ್ ಆಮ್ಲ ಇರುವ ಹಣ್ಣುಗಳಲ್ಲಿ ಅಧಿಕವಾಗಿರುತ್ತವೆ. ವಿಟಮಿನ್ ಸಿ ಇರುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರ ಮೂಲಕ ಹಿಗ್ಗಿದ ಚರ್ಮ ಹಾಗೂ ಚರ್ಮದ ಮೇಲೆ ಉಂಟಾದ ಬಿರುಕಿನ ರೇಖೆಗಳನ್ನು ಸುಲಭವಾಗಿ ನಿವಾರಿಸಬಹುದು.

​ವಿಟಮಿನ್ ಡಿ

ಚರ್ಮದ ಆರೋಗ್ಯಕ್ಕೆ ಬಲವಾದ ಶಕ್ತಿ ನೀಡುವುದು ವಿಟಮಿನ್ ಡಿ. ಚರ್ಮದ ಆರೋಗ್ಯ ವೃದ್ಧಿಗೆ ವಿಟಮಿನ್ ಡಿ ಅತ್ಯಗತ್ಯ ಎಂದು ಹೇಳಲಾಗುವುದು. ದೇಹದಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಡಿ ಹೊಂದಿದ್ದರೆ ಚರ್ಮವು ಉತ್ತಮ ಆರೋಗ್ಯದಿಂದ ಕೂಡಿರುತ್ತದೆ. ಜೊತೆಗೆ ಚರ್ಮದಲ್ಲಿ ಉಂಟಾಗುವ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಗೆರೆಗಳನ್ನು ನಿವಾರಿಸುವುದು.

ಪದೇ ಪದೇ ಗರ್ಭಪಾತಕ್ಕೆ ಒಳಗಾಗುತ್ತಿರುವವರು ನೆನಪಿಡಬೇಕಾದ ಸಂಗತಿಗಳು

​ವಿಟಮಿನ್ ಇ ಭರಿತ ಎಣ್ಣೆಗಳು

ಗರ್ಭಾವಸ್ಥೆಯಲ್ಲಿ ಉಂಟಾಗುವ ಚರ್ಮದ ಹಿಗ್ಗುವಿಕೆಗೆ ಹಾಗೂ ಇತರ ಚರ್ಮ ಸಮಸ್ಯೆಗೆ ವಿಟಮಿನ್ ಇ ಅತ್ಯುತ್ತಮವಾದ ಆರೈಕೆ ಮಾಡುವುದು. ಗರ್ಭಾವಸ್ಥೆಯಲ್ಲಿ ಉಂಟಾಗುವ ಚರ್ಮದ ಬಿರುಕಿಗೆ ಶಿಯಾ ಎಣ್ಣೆ, ವಿಟಮಿನ್ ಇ ಭರಿತವಾದ ನೈಸರ್ಗಿಕ ತೈಲಗಳು, ಚರ್ಮದ ಆರೈಕೆಗೆ ಇರುವ ವಿಶೇಷವಾದ ವಿಟಮಿನ್ ಇ ಕ್ರೀಮ್‍ಗಳನ್ನು ಬಿರಿದ ಜಾಗದಲ್ಲಿ ಅನ್ವಯಿಸಬೇಕು. ಆಗ ದಿನ ವಿಡೀ ಆ ಪ್ರದೇಶವು ಆಧ್ರ್ರಕ ಮತ್ತು ಹೈಡ್ರೀಕರಿಸುವಂತೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಸ್ಟ್ರೆಚ್‍ನಿಂದ ಉಂಟಾದ ರೇಖೆಯನ್ನು ಮುಚ್ಚುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ