ಆ್ಯಪ್ನಗರ

ಗರ್ಭಿಣಿಯರ ಕೈತುಂಬಾ ಗಾಜಿನ ಬಳೆ ಧರಿಸಿದರೆ, ಹೆರಿಗೆ ಸಮಸ್ಯೆಗಳು ಬರಲ್ವಂತೆ!

ಗರ್ಭಿಣಿಯರು ಕೈತುಂಬಾ ಬಳೆಗಳನ್ನು ಧರಿಸಿದರೆ, ಅದರಿಂದ ಹಲವಾರು ಲಾಭಗಳು ಆಗುವುದು.

Vijaya Karnataka Web 19 Apr 2021, 3:01 pm
ಕೈತುಂಬಾ ಬಳೆಗಳನ್ನು ಧರಿಸಿಕೊಂಡು ಸೀರೆಯುಡುವ ನಾರಿಯು ಭಾರತೀಯ ಸಂಸ್ಕೃತಿಯ ಪ್ರತೀಕ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ, ಎಲ್ಲಾ ಭಾರತೀಯರು ಹೆಚ್ಚಾಗಿ ಬಳೆಗಳನ್ನು ಧರಿಸುವರು. ಹಿಂದೆ ಗ್ರಾಮೀಣ ಭಾಗಗಳಲ್ಲಿ ಮನೆಮನೆಗೆ ಬಳೆ ಮಾರಿಕೊಂಡು ಬರುತ್ತಿದ್ದರು.
Vijaya Karnataka Web scientific health benefits of wearing glass bangles during pregnancy
ಗರ್ಭಿಣಿಯರ ಕೈತುಂಬಾ ಗಾಜಿನ ಬಳೆ ಧರಿಸಿದರೆ, ಹೆರಿಗೆ ಸಮಸ್ಯೆಗಳು ಬರಲ್ವಂತೆ!


ಆದರೆ ಆಧುನಿಕತೆ ಬೆಳೆದಂತೆ ಎಲ್ಲವೂ ಮಾಯವಾಗಿದೆ. ಫ್ಯಾಶನ್ ಯುಗದಲ್ಲಿ ಬಳೆ ಧರಿಸುವಂತಹ ಮಹಿಳೆಯರ ಸಂಖ್ಯೆಯು ತುಂಬಾ ಕಡಿಮೆ ಆಗುತ್ತಲಿದೆ. ಆದರೆ ಗರ್ಭಿಣಿಯರು ಕೈಗಳಿಗೆ ಬಳೆ ಧರಿಸಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ತಿಳಿದುಬಂದಿದೆ.

​ರಕ್ತ ಸಂಚಾರ ಉತ್ತಮ ಮತ್ತು ಶಕ್ತಿಯ ಸಮತೋಲನ

  • ಮೊಣಕೈಯು ಯಾವಾಗಳು ತುಂಬಾ ಕ್ರಿಯಾಶೀಲವಾಗಿರುವಂತಹ ಭಾಗ ಮತ್ತು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಪಲ್ಸ್ ನ್ನು ವೈದ್ಯರು ಇದೇ ಭಾಗದಲ್ಲಿ ಪರೀಕ್ಷೆ ಮಾಡುವರು.
  • ಈ ಭಾಗದಲ್ಲಿ ಬಳೆಗಳನ್ನು ಧರಿಸುವ ಪರಿಣಾಮವಾಗಿ ಅಲ್ಲಿ ಬಳೆಗಳ ಉಜ್ಜುವಿಕೆಯಿಂದ ರಕ್ತ ಸಂಚಾರವು ಸುಗಮವಾಗುವುದು. ಬಳೆಗಳು ದೇಹದ ಉಷ್ಣತೆ ಕಾಪಾಡಲು ಕೂಡ ಸಹಕಾರಿ.
  • ಚರ್ಮದಿಂದ ಹೊರಹೋಗುವಂತಹ ವಿದ್ಯುತ್ ನ್ನು ಅದು ಮರಳಿ ದೇಹಕ್ಕೆ ತರುವುದು. ದೇಹದಿಂದ ಯಾವುದೇ ಶಕ್ತಿಯು ಹೊರಹೋಗದಂತೆ ಮತ್ತು ದೇಹದಲ್ಲೇ ಅದು ಉಳಿಯುವಂತೆ ವೃತ್ತಾಕಾರದ ಬಳೆಗಳು ಮಾಡುವುದು.

​ಭಾವನೆಗಳ ಸಮತೋಲನ

  • ಗಾಜಿನ ಬಳೆಗಳಿಂದ ಹೊರಸೂಸುವ ಕಂಪನಗಳು ತುಂಬಾ ಪ್ರಬಲವಾಗಿರುವುದು ಎಂದು ಅಧ್ಯಯನಗಳು ಹೇಳಿವೆ. ಈ ಕಂಪನಗಳಿಂದ ಮಹಿಳೆಯರಲ್ಲಿ ಭಾವನೆಗಳನ್ನು ನಿಭಾಯಿಸಲು ಸಹಕಾರಿ.
  • ಗಾಜಿನ ಬಳೆಗಳನ್ನು ಧರಿಸುವ ಮಹಿಳೆಯರಲ್ಲಿ, ಬೇರೆ ಬಳೆಗಳನ್ನು ಧರಿಸುವಂತಹ ಮಹಿಳೆಯರಿಗಿಂತಲೂ ಹೆಚ್ಚಿನ ಭಾವನೆಗಳನ್ನು ಸಮತೋಲನದಲ್ಲಿ ಇಡುವ ಶಕ್ತಿಯು ಬರುವುದು.

​ಭ್ರೂಣಕ್ಕೆ ಧ್ವನಿತರಂಗದ ಅನುಭವ

  • ಗರ್ಭಿಣಿಯರು ಗಾಜಿನ ಬಳೆಗಳನ್ನು ಧರಿಸಿದರೆ ಆಗ ಅದು ಕೇವಲ ತಾಯಿಗೆ ಮಾತ್ರವಲ್ಲದೆ, ಭ್ರೂಣದಲ್ಲಿರುವ ಮಗುವಿಗೂ ನೆರವಾಗುವುದು.
  • ಬಳೆಗಳನ್ನು ಧರಿಸಿದರೆ, ಅದರಿಂದ ಭ್ರೂನವು ಧ್ವನಿತರಂಗ ಆಲಿಸಲು ಸಹಕಾರಿ ಆಗುವುದು. ಗಾಜಿನ ಬಳೆಗಳು ಶಮನ ನೀಡುವಂತಹ ಸಂಗೀತದಂತೆ ಕೆಲಸ ಮಾಡುವುದು. ಇದು ಒತ್ತಡ ಕಡಿಮೆ ಮಾಡುವುದು ಹಾಗೂ ಖಿನ್ನತೆ ದೂರ ಮಾಡುವುದು. ಇದರಿಂದ ಮಗುವಿನ ಶ್ರವಣಶಕ್ತಿ ಹೆಚ್ಚಾಗಲಿದೆ.
  • ಗರ್ಭಧಾರಣೆ ವೇಳೆ ಅತಿಯಾಗಿ ಒತ್ತಡಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಗಾಜಿನ ಬಳೆಗಳನ್ನು ಧರಿಸಿದರೆ ತುಂಬಾ ಸಹಕಾರಿ. ಇದರು ಕಡಿಮೆ ತೂಕದ ಮಗು ಮತ್ತು ಅಕಾಲಿಕ ಹೆರಿಗೆ ಸಮಸ್ಯೆಯು ದೂರವಾಗಲಿದೆ.

ಭ್ರೂಣದ ಹೃದಯದ ಬಡಿತವನ್ನು ಮಾನಿಟರಿಂಗ್ ಮಾಡುವುದು ಏಕೆ ಅಗತ್ಯ ಗೊತ್ತಾ?

​ಧನಾತ್ಮಕತೆ

ಗರ್ಭಿಣಿಯರು ಗಾಜಿನ ಬಳೆಗಳನ್ನು ಧರಿಸಬೇಕಾದ ಅತೀ ಮುಖ್ಯ ಕಾರಣವೆಂದರೆ, ಸುತ್ತಲಿನ ವಾತಾವರಣದಲ್ಲಿ ಇರುವಂತಹ ಧನಾತ್ಮಕತೆ ಹಾಗೂ ಪರಿಶುದ್ಧತೆಯನ್ನು ಇದು ಹೀರಿಕೊಳ್ಳುವುದು.

ಇದರಿಂದ ಬರುವಂತಹ ಶಬ್ದವು ಕೂಡ ತುಂಬಾ ಲಾಭಕಾರಿ ಮತ್ತು ಶಮನ ನೀಡುವುದು. ಇದರಿಂದ ಹೊರಬರುವಂತಹ ಶಬ್ದವು ಧನಾತ್ಮಕತೆಯನ್ನು ಉಂಟು ಮಾಡುವುದು.

ಸುತ್ತಲು ಇರುವಂತಹ ನಕಾರಾತ್ಮಕತೆಯನ್ನು ದೂರ ಮಾಡುವಂತಹ ಗುಣವು ಗಾಜಿನ ಬಳೆಗಳಲ್ಲಿ ಇದೆ ಎಂದು ನಂಬಲಾಗಿದೆ. ಸುತ್ತಲಿನ ವಾತಾವರಣದಲ್ಲಿ ಇರುವಂತಹ ನಕಾರಾತ್ಮಕತೆ ಮತ್ತು ದುಷ್ಟಶಕ್ತಿಯ ಅಂಶವನ್ನು ಇದು ದೂರ ಮಾಡಲಿದೆ.

ಗರ್ಭಧಾರಣೆ ವೇಳೆ ಅತಿಯಾಗಿ ಮಾನಸಿಕ ಒತ್ತಡವು ಉಂಟಾದರೆ ಆಗ ಭ್ರೂಣದ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದ ಭ್ರೂಣದ ಬೆಳವಣಿಗೆಗೆ ಅಡ್ಡಿ ಉಂಟಾಗಲಿದೆ. ಒಳ್ಳೆಯ ಆರೋಗ್ಯದ ಜತೆಗೆ ಬಳೆಗಳು ಒತ್ತಡ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

​ಬಣ್ಣದ ಅಸ್ತಿತ್ವ

ಗಾಜಿನ ಬಳೆಗಳಲ್ಲಿ ಹಾಕಿರುವ ಬಣ್ಣವು ಇಲ್ಲಿ ಪ್ರಾಮುಖ್ಯತೆ ಪಡೆಯುವುದು. ಕೆಂಪು ಮತ್ತು ಹಸಿರು ಬಳೆಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತೀಯರು ಹೆಚ್ಚಾಗಿ ಹಸಿರು ಮತ್ತು ಉತ್ತರ ಭಾರತೀಯರು ಕೆಂಪು ಬಳೆಗಳನ್ನು ಧರಿಸುವರು.

ಹಸಿರು ಬಳೆಗಳಲ್ಲಿ ದೈವಿಕ ಶಕ್ತಿಯಿದೆ ಮತ್ತು ಇದು ಶಾಂತಿ ಉಂಟು ಮಾಡುವುದು. ಅದೇ ಕೆಂಪು ಬಳೆಗಳು ತುಂಬಾ ಶಕ್ತಿಶಾಲಿ ಮತ್ತು ಇದು ದುಷ್ಟಶಕ್ತಿ ದೂರ ಮಾಡುವುದು. ಬಂಗಾರದ ಬಣ್ಣದ ಬಳೆಗಳನ್ನು ಧರಿಸಬಾರದು. ಯಾಕೆಂದರೆ ಇದು ಹೆಚ್ಚು ಪರಿಣಾಮಕಾರಿಯಲ್ಲ.

​ಮೊಣಕೈ ತೂಕ

ಲೋಹದ ಬಳೆಗಳು ಹೆಚ್ಚಾಗಿ ಮೊಣಕೈಗೆ ತುಂಬಾ ಭಾರ ಉಂಟು ಮಾಡುವುದು. ಆದರೆ ಗಾಜಿನ ಬಳೆಗಳು ತುಂಬಾ ಹಗುರವಾಗಿರುವುದು.

ಮಹಿಳೆಯರಲ್ಲಿ ಮೂಳೆ ಸಾಂದ್ರತೆಯು ತುಂಬಾ ಕಡಿಮೆ ಇರುವುದು ಮತ್ತು ಪುರುಷರಿಗಿಂತಲೂ ಮಹಿಳೆಯರ ಮೂಳೆಯು ತುಂಬಾ ದುರ್ಬಲವಾಗಿರುವುದು. ಹೀಗಾಗಿ ಗಾಜಿನ ಬಳೆಗಳು ಮೂಳೆ ಮತ್ತು ಸ್ನಾಯುಗಳ ಬಲಪಡಿಸುವುದು.

ಬೇಸಿಗೆ ಕಾಲದಲ್ಲಿ ಗರ್ಭಿಣಿಯರು ಪಾಲಿಸಬೇಕಾದ ಆರೋಗ್ಯದ ಕಾಳಜಿಗಳು

​ಶಬ್ದದ ಥೆರಪಿ

ಬಳೆಗಳು ಒಂದಕ್ಕೊಂದು ಘರ್ಷಿಸಿದ ವೇಳೆ ಅದರ ಕಂಪನದಿಂದ ಉಂಟಾಗುವ ಶಬ್ದವು ಭ್ರೂಣದ ಬೆಳವಣಿಗೆ ಸುಧಾರಣೆ ಮಾಡುವುದು. ಇದು ಭ್ರೂಣದ ಬೆಳವಣಿಗೆ ಸುಧಾರಣೆ ಮಾಡುವುದಲ್ಲದೆ, ಭ್ರೂಣದ ಸಾಮರ್ಥ್ಯವನ್ನು ವೃದ್ಧಿಸುವುದು.

ಮಗು ಕೂಡ ತಾಯಿಯ ಗಾಜಿನ ಶಬ್ದದಿಂದ ತನ್ನ ತಾಯಿಯ ಗುರುತು ಪತ್ತೆ ಮಾಡಬಹುದು. ಇದರಿಂದಾಗಿ ಮಗುವಿಗೆ ಭ್ರೂಣದಲ್ಲಿ ಏಕಾಂಗಿಯಾಗಿರುವ ಭಾವನೆಯು ಬರದು.

ಇದು ಮಗುವಿನಲ್ಲಿ ಸುರಕ್ಷಿತ ಭಾವನೆ ಉಂಟು ಮಾಡುವುದು. ಅಷ್ಟೇ ಅಲ್ಲದೇ ಗಾಜಿನ ಬಳೆಗಳನ್ನು ಧರಿಸುವ ಪರಿಣಾಮವಾಗಿ ಹೆರಿಗೆಯು ಸರಾಗವಾಗಿ ಆಗುವುದು.

ಕೊನೆಗೆ ಮಾತು

ಗರ್ಭಿಣಿಯರು ಗಾಜಿನ ಬಳೆಗಳನ್ನು ಧರಿಸುವ ಕೆಲವು ವೈಜ್ಞಾನಿಕ ಕಾರಣಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಈ ಲಾಭಗಳನ್ನು ಪಡೆಯಬೇಕಾಗಿದ್ದರೆ, ಆಗ ನೀವು ಗಾಜಿನ ಬಳೆಗಳನ್ನು ಧರಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ