ಆ್ಯಪ್ನಗರ

ಮಗುವನ್ನು ಮಲಗಿಸಲು ಕೆಲವು ಸರಳ ಉಪಾಯಗಳು

ಸಣ್ಣ ಮಗು ಇದ್ದವರ ಮನೆಯಲ್ಲಿ ಮಗುವನ್ನು ಮಲಗಿಸುವುದೇ ಒಂದು ದೊಡ್ಡ ಕೆಲಸವಾಗಿ ಬಿಡುತ್ತದೆ. ಮಗು ಆಗಾಗಾ ಎಚ್ಚೆತ್ತುಕೊಳ್ಳುತ್ತಾ ಮನೆಯವರ ನಿದ್ದೆಗೂ ಅಡ್ಡಿಯುಂಟು ಮಾಡುತ್ತದೆ. ಪುಟ್ಟ ಮಗುವನ್ನು ಮಲಗಿಸಲು ಸುಲಭ ಟಿಪ್ಸ್‌ನ್ನು ನಾವಿಂದು ತಿಳಿಸಲಿದ್ದೇವೆ.

Vijaya Karnataka Web 10 Feb 2021, 12:20 pm
ಮಕ್ಕಳು ಸಾಮಾನ್ಯವಾಗಿ ರಾತ್ರಿ ವೇಳೆ ಎದ್ದೇಳುತ್ತಾರೆ. ಕೆಲವೊಮ್ಮೆ ಹೆಚ್ಚು ಸಮಯಗಳ ಕಾಲ ರಾತ್ರಿಯಿಡೀ ಎದ್ದಿರುತ್ತಾರೆ. ಇಲ್ಲವೇ ಮುಂಜಾನೆ ಐದು ಗಂಟೆಗೆಲ್ಲಾ ಎದ್ದು ಆಡಲು ಪ್ರಾರಂಭಿಸುವರು. ಇದು ತಾಯಿಯ ನಿದ್ರೆಗೆ ಹಾಗೂ ಆರೋಗ್ಯಕ್ಕೆ ಸ್ವಲ್ಪ ತೊಂದರೆಯನ್ನು ಉಂಟುಮಾಡುವುದು. ಹಾಗಾಗಿ ಮಕ್ಕಳು ಸೂಕ್ತ ಅವಧಿಯವರೆಗೆ ನಿದ್ರೆ ಮಾಡುವಂತೆ ಪ್ರಚೋದಿಸಬೇಕಾಗುವುದು. ಅದಕ್ಕಾಗಿ ಕೆಲವು ಮಾರ್ಗವನ್ನು ಅನುಸರಿಸಿದರೆ ಸಮಸ್ಯೆ ನಿವಾರಣೆಯಾಗುವುದು.
Vijaya Karnataka Web some key baby sleep basics that can help you
ಮಗುವನ್ನು ಮಲಗಿಸಲು ಕೆಲವು ಸರಳ ಉಪಾಯಗಳು


​ದಿನಚರಿ

ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅವರ ನಿದ್ರೆಯ ಅವಧಿ ಹಾಗೂ ಪರಿ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಆರಂಭದಲ್ಲಿ ಮಗು ದಿನವಿಡೀ ನಿದ್ರೆ ಮಾಡುವುದು, ರಾತ್ರಿ ಸಮಯದಲ್ಲಿ ಒಂದೆರಡು ಬಾರಿ ಎದ್ದು ಬೇಗ ಮಲಗುವ ಪರಿ ಇರಿತ್ತದೆ. ಹಾಗೆಯೇ ಮಗು ಬೆಳೆದಂತೆ ಹಗಲಿನಲ್ಲಿ ನಿದ್ರೆ ಮಾಡುವುದು ಕಡಿಮೆ ಆಗುವುದು.

ರಾತ್ರಿಯ ಹೊತ್ತು ಒಂದು ಅಥವಾ ಎರಡು ಬಾರಿ ಎದ್ದೇಳುವುದು, ತಡರಾತ್ರಿಯವರೆಗೆ ಎದ್ದಿರುವುದು ಇಲ್ಲವೇ ಮುಂಜಾನೆ ಬಹುಬೇಗ ಎದ್ದುಕೊಳ್ಳುವುದು ಮಾಡುತ್ತಾರೆ. ಅಂತಹ ಸಮಯದಲ್ಲಿ ತಾಯಿ ಮಕ್ಕಳನ್ನು ಸೂಕ್ತ ದಿನಚರಿಯ ಪ್ರಕಾರ ಅವರನ್ನು ಮಲಗಿಸಲು ಪ್ರಯತ್ನಿಸಬೇಕು. ಆಗ ಮಕ್ಕಳ ನಿದ್ರೆಯ ಕ್ರಮ ಬದಲಾಗುವುದು.

ಮೊಮ್ನೀಶಿಯಾ : ತಾಯಿಯ ಸಹಜ ಮರೆವಿನ ಸಮಸ್ಯೆಯನ್ನು ನಿರ್ವಹಿಸುವ ಸಲಹೆಗಳು

​ಕತ್ತಲು ಮತ್ತು ಶಾಂತತೆ

ಮಕ್ಕಳು ನಿದ್ರೆ ಮಾಡುವಾಗ ಶಾಂತವಾದ ಮತ್ತು ಕತ್ತಲಿನಿಂದ ಕೂಡಿರುವ ವಾತಾವರಣ ಇರಬೇಕು. ಜೊತೆಗೆ ಉಷ್ಣತೆಯು ಹಿತವಾಗಿರಬೇಕು. ಆಗ ಮಕ್ಕಳು ಬಹುಬೇಗ ನಿದ್ರೆ ಮಾಡುತ್ತಾರೆ. ಮಲಗುವ ಕೋಣೆಯ ಉಷ್ಣತೆಯು ಅತಿಯಾದ ಸೆಕೆ ಅಥವಾ ಚಳಿಯಿಂದ ಕೂಡಿರಬಾರದು. ಹಿತವಾದ ಉಷ್ಣಾಂಶದಿಂದ ಕೂಡಿದ್ದು, ಗದ್ದಲ ಮುಕ್ತವಾಗಿರಬೇಕು. ನಿದ್ರೆಗೆ ಅಡ್ಡಿ ಮಾಡುವಂತಹ ಮೊಬೈಲ್‍ಗಳ ಬಳಕೆಯನ್ನು ತಪ್ಪಿಸಬೇಕು.

​ಹಗಲಿನ ನಿದ್ರೆ

ಹಗಲಿನ ಸಮಯದಲ್ಲಿ ಮಕ್ಕಳು ಅಧಿಕ ಸಮಯಗಳ ಕಾಲ ನಿದ್ರೆ ಮಾಡಿದರೆ ರಾತ್ರಿ ವೇಳೆ ಬಹುಬೇಗ ನಿದ್ರೆ ಮಾಡದೆ ಇರುವುದು ಸಾಮಾನ್ಯ. ಹಗಲಿನ ಸಮಯದಲ್ಲಿ ನಿದ್ರೆಯನ್ನು ಮಾಡಿದಾಗ ರಾತ್ರಿ ವೇಳೆಯ ನಿದ್ರೆಯ ಅಗತ್ಯತೆಯನ್ನು ಪೂರ್ಣಗೊಳಿಸುತ್ತದೆ. ಆಗ ಮಕ್ಕಳು ರಾತ್ರಿಯಲ್ಲಿ ಎದ್ದೇಳುವುದು, ಬಹುಬೇಗ ನಿದ್ರೆ ಮಾಡದೆ ಇರುವುದು, ರಾತ್ರಿ ಎಚ್ಚರವಾದರೆ ಆಟದಲ್ಲಿ ಹೆಚ್ಚು ಮಗ್ನವಾಗುವ ಪ್ರಕ್ರಿಯೆಯು ಮಕ್ಕಳಲ್ಲಿ ಕಂಡುಬರುವುದು.

ಹಾಗಾಗಿ ಹಗಲಿನ ಸಮಯದಲ್ಲಿ ದೀರ್ಘ ಸಮಯಗಳ ಕಾಲ ನಿದ್ರೆ ಮಾಡಿಸದಿರಿ. ಹಗಲಿನಲ್ಲಿ ಅಲ್ಪ ನಿದ್ರೆಗೆ ಸೀಮಿತಗೊಳಿಸಿ. ಶಾಲೆಗೆ ಹೋಗುವ ಮಕ್ಕಳಾಗಿದ್ದರೆ ದೈಹಿಕವಾಗಿ ಶ್ರಮ ನೀಡುವ ಆಟ, ವ್ಯಾಯಾಮಗಳನ್ನು ಮಾಡಿಸಿ. ಅದು ರಾತ್ರಿ ಉತ್ತಮ ನಿದ್ರೆಗೆ ಪ್ರಚೋದನೆ ನೀಡುವುದು.

ಅಕಾಲಿಕ ಶಿಶುವಿನ ಜನನದ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು

​ಸಂತೋಷ ವಾಗಿರಲಿ

ಮಕ್ಕಳು ಮಲಗ ಬೇಕೆಂದು ಕೆಲವರು ಭಯಾನಕ ಸಂಗತಿಗಳನ್ನು ಹೇಳುವುದು ಅಥವಾ ಹೆದರಿಸುವ ಮೂಲಕ ನಿದ್ರೆ ಮಾಡಿಸುತ್ತಾರೆ. ಈ ಪರಿಯು ಮಗುವಿನ ನಿದ್ರೆಗೆ ಹಾನಿ ಉಂಟುಮಾಡುವುದು. ಜೊತೆಗೆ ರಾತ್ರಿ ಬೆಚ್ಚಿ ಬೀಳುವುದು, ನಿದ್ರೆಯಿಂದ ಎದ್ದಾಗ ದೀರ್ಘ ಸಮಯ ಮಲಗದೆ ಇರುವುದು ಅಥವಾ ಅಳುವುದು ಮಾಡುತ್ತಾರೆ.

ಇದು ಮಗುವಿನ ನಿದ್ರೆಗೆ ಅಡ್ಡಿ ಪಡಿಸುತ್ತವೆ. ಚಿಕ್ಕ ಮಕ್ಕಳಾಗಿದ್ದರೆ ಇಂಪಾದ ಹಾಡನ್ನು ಹೇಳುವುದು, ದೊಡ್ಡ ಮಕ್ಕಳಾಗಿದ್ದರೆ ಸಂತಸ ನೀಡುವ ಕಥೆಯನ್ನು ಹೇಳುವುದರ ಮೂಲಕ ಮಲಗಿಸಬೇಕು. ಆಗ ಮಕ್ಕಳು ಉತ್ತಮ ನಿದ್ರೆಗೆ ಜಾರುತ್ತಾರೆ. ದೀರ್ಘ ಸಮಯಗಳ ಕಾಲ ನಿದ್ರೆ ಮಾಡುವರು. ನಿದ್ರೆಯಲ್ಲಿ ಎದ್ದೇಳುವುದು ತಪ್ಪುತ್ತದೆ.

​ಕೆಲವು ಸಮಯ ತೆಗೆದುಕೊಳ್ಳುವುದು

ಮಕ್ಕಳ ನಿದ್ರೆ ಹಾಗೂ ದಿನಚರಿಯು ಒಂದೇ ದಿನದಲ್ಲಿ ಬದಲಾಗುವುದಿಲ್ಲ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬದಲಾಗಬೇಕು ಎಂದಾಗ ಸ್ವಲ್ಪ ಸಮಯ ಬೇಕಾಗುವುದು. ಒಮ್ಮೆ ಬದಲಾವಣೆಗೆ ಹೊಂದಿಕೊಂಡ ಬಳಿಕ ಉತ್ತಮ ನಿದ್ರೆಯನ್ನು ಮಾಡುವರು. ಹಾಗಾಗಿ ನಿಮ್ಮ ಪ್ರಯತ್ನವು ನಿಧಾನವಾಗಿ ಮಕ್ಕಳನ್ನು ಬದಲಿಸುವಂತೆ ಇರಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ