ಆ್ಯಪ್ನಗರ

ಗರ್ಭಧಾರಣೆ ಬಗ್ಗೆ ಕೆಲವು ಅಚ್ಚರಿ ಹಾಗೂ ಕುತೂಹಲಕಾರಿ ವಿಚಾರಗಳು!

ಗರ್ಭಧಾರಣೆ ಬಗ್ಗೆ ಪ್ರತಿಯೊಂದು ವಿಚಾರವು ತುಂಬಾ ರೋಚಕ ಹಾಗೂ ಕುತೂಹಲಕಾರಿ ಆಗಿರುವುದು. ಗರ್ಭ ಧರಿಸಿದ ಬಳಿಕ ದೇಹದಲ್ಲಿ ಆಗುವಂತಹ ಬದಲಾವಣೆಯಿಂದ ಹಿಡಿದು, ಅಂತಿಮವಾಗಿ ಹೆರಿಗೆ ತನಕ ಪ್ರತಿಯೊಂದು ರೋಚಕತೆ ಉಂಟು ಮಾಡುವುದು. ಮಹಿಳೆ ತಾನು ಗರ್ಭ ಧರಿಸಿದ ಕೂಡಲೇ ಆಕೆಯ ಜೀವನವೇ ಬದಲಾಗಿ ಹೋಗುವುದು. ಇದರ ಬಳಿಕ ಆಕೆಗೆ ಮಗುವೇ ತನ್ನ ಸರ್ವಸ್ವವಾಗಿರುವುದು. ಗರ್ಭದರಲ್ಲಿರುವಂತಹ ಮಗು ಚೆನ್ನಾಗಿ ಬೆಳೆಯಲು ಮತ್ತು ಆರೋಗ್ಯವಾಗಿ ಇರಲು ಪ್ರತಿಯೊಬ್ಬ ಗರ್ಭಿಣಿ ಕೂಡ ಅತೀ ಹೆಚ್ಚು ಕಾಳಜಿ ವಹಿಸುವರು. ಇದಕ್ಕಾಗಿ ಆಕೆ ಕೆಲವೊಂದು ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವಳು. ಅದೇ ರೀತಿಯಾಗಿ ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡುವಳು.

Vijaya Karnataka Web 11 Dec 2019, 1:12 pm

Vijaya Karnataka Web surprising facts about pregnancy that you never knew
ಗರ್ಭಧಾರಣೆ ಬಗ್ಗೆ ಕೆಲವು ಅಚ್ಚರಿ ಹಾಗೂ ಕುತೂಹಲಕಾರಿ ವಿಚಾರಗಳು!

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಆರೋಗ್ಯಕಾರಿ ಆಹಾರ ಕ್ರಮ ಪಾಲಿಸುವ ಜತೆಗೆ ಮಿತ ವ್ಯಾಯಾಮ, ವೈದ್ಯರ ಬಳಿಗೆ ಪರೀಕ್ಷೆಗೆ ಆಗಾಗ ಹೋಗುತ್ತಲಿರಬೇಕು. ಧೂಮಪಾನ ಮತ್ತು ಮದ್ಯಪಾನ ಇತ್ಯಾದಿಗಳನ್ನು ತ್ಯಜಿಸಲೇಬೇಕು. ಇದೆಲ್ಲವೂ ಗರ್ಭಿಣಿಯರು ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಕೆಲವೊಂದು ಬದಲಾವಣೆಗಳು ಆಗಿವೆ. ಗರ್ಭಧಾರಣೆ ಬಗ್ಗೆ ಇರುವಂತಹ ಕೆಲವೊಂದು ರೋಚಕ ವಿಚಾರ ಮತ್ತು ಅಂಶಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಮಹಿಳೆ ನಾಲ್ಕು ತಿಂಗಳಾದಾಗ

ಇದನ್ನು ಕೇಳಿ ನಿಮಗೆ ತುಂಬಾ ಅಚ್ಚರಿ ಆಗಬಹುದು. ಆದರೆ ನಾಲ್ಕು ತಿಂಗಳ ಗರ್ಭಿಣೆಯಾದ ವೇಳೆ ಗರ್ಭದಲ್ಲಿರುವಂತಹ ಮಗು ದಿನಕ್ಕೆ ಸುಮಾರು ಒಂದು ಲೀಟರ್ ನಷ್ಟು ಮೂತ್ರ ವಿಸರ್ಜನೆ ಮಾಡುತ್ತದೆ ಮತ್ತು ಅದು ತನ್ನದೇ ಮೂತ್ರವನ್ನು ಕುಡಿಯುವುದು!

ಮಹಿಳೆಗೆ ಅನುಭವ

ದೇಹದಲ್ಲಿ ನೀರು ನಿಲ್ಲುವ ಕಾರಣದಿಂದಾಗಿ ಕೆಲವು ಗರ್ಭಿಣಿಯರ ಪಾದವು ಊದಿಕೊಂಡ ಕಾರಣ ಅವರಿಗೆ ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಚಪ್ಪಲಿಯು ಬೇಕಾಗುತ್ತದೆ. ಇದು ಹೆಚ್ಚಿನ ಮಹಿಳೆಯರ ಅನುಭವಕ್ಕೆ ಬರುವುದು.

ಗರ್ಭಕೋಶ

ಗರ್ಭ ನಿಲ್ಲುವ ಮೊದಲ ಹಂತದಲ್ಲಿ ಗರ್ಭಕೋಶ ಸಾಮಾನ್ಯವಾಗಿ ಒಂದು ಪೀಚ್‌ನ ಗಾತ್ರದಲ್ಲಿ ಇರುವುದು. ಆದರೆ ಇದು ಬಳಿಕ ಸಾಮಾನ್ಯ ಕಲ್ಲಂಗಡಿ ಗಾತ್ರದಷ್ಟು ದೊಡ್ಡದಾಗುವುದು.
ಗರ್ಭದಲ್ಲಿರುವ ಮಗು
ಗರ್ಭ ನಿಂತ 9-12 ವಾರದಲ್ಲಿ ಮಗುವಿನ ಎಲ್ಲಾ ಬೆರಳ ಗುರುತುಗಳು ಬೆಳವಣಿಗೆ ಆಗುವುದು.

ಜರಾಯು ಉತ್ಪಾದಿಸಬಹುದು

ಗರ್ಭಧಾರಣೆಯ ಅಂತ್ಯದಲ್ಲಿ ಜರಾಯು ಒಸ್ಟ್ರೊಜನ್ ಎನ್ನುವ ಹಾರ್ಮೋನ್‌ನ್ನು ಕಳೆದ ಮೂರು ವರ್ಷ ಗಳಲ್ಲಿ ಸಾಮಾನ್ಯ ಮಹಿಳೆಯೊಬ್ಬಳು ಉತ್ಪಾದಿಸಿದಷ್ಟು ಉತ್ಪತ್ತಿ ಮಾಡುವುದು.

ಸಂಶೋಧನಾ ವರದಿಗಳು

ಕೆಲವೊಂದು ವರದಿಗಳು ಕಂಡುಕೊಂಡಿರುವ ಪ್ರಕಾರ ಗರ್ಭದಲ್ಲಿ ಇರುವಂತಹ ಮಗು ತನ್ನ ಹೆಬ್ಬೆರಳನ್ನು ಜೀಪಬಹುದು, ನಗಬಹುದು ಎಂದು ಹೇಳಿದೆ.
*ಚರ್ಮದ ಬಣ್ಣದಲ್ಲಿ ಗಣನೀಯ ಬದಲಾವಣೆ
*ಹಾರ್ಮೋನು ವೈಪರಿತ್ಯದಿಂದಾಗಿ 10 ರಲ್ಲಿ 9 ಮಂದಿ ಮಹಿಳೆಯರಿಗೆ ತಮ್ಮ ಚರ್ಮದ ಬಣ್ಣದಲ್ಲಿ ತುಂಬಾ ದೀರ್ಘ ಬದಲಾವಣೆ ಆಗುವುದು ಕಂಡುಬರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ