ಆ್ಯಪ್ನಗರ

ಕೆಲಸದ ಜೊತೆ ಮಗುವಿನ ಆನ್‌ಲೈನ್ ಕ್ಲಾಸ್ ನಿರ್ವಹಿಸುವುದು ಕಷ್ಟವಾಗುತ್ತಿದೆಯೇ?

ನಿಮ್ಮ ಕೆಲಸ ಮತ್ತು ನಿಮ್ಮ ಮಗುವಿನ ಆನ್ ಲೈನ್ ತರಗತಿಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆಯೇ? ಈ ಸಲಹೆಗಳು ನಿಮಗೆ ನೆರವಾಗಬಹುದು.

Vijaya Karnataka Web 25 Aug 2020, 12:02 pm
ಆನ್ ಲೈನ್ ಶಿಕ್ಷಣ ಈ ಕೊರೋನಾವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಹೊಸ ಸಾಧಾರಣ ವಿಷಯವಾಗಿ ಉಗಮಿಸಿದೆ. ಇದು ಕೆಲವು ತಿಂಗಳು ಅಥವಾ ವರ್ಷ ಅಥವಾ ಸಾಂಕ್ರಾಮಿಕ ಕೊನೆಯಾಗುವವರೆಗೆ ಮುಂದುವರೆಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್ಓ) ನಿರ್ದೇಶಕರಾದ ಕೊರೋನಾವೈರಸ್ ಜನರಲ್ ಟೆಡ್ರೋಸ್ ಅಧನೋಮ್ ಗೆಬ್ರೇಸಿಸ್ ಎರಡು ವರ್ಷಗಳಲ್ಲಿ ಕೊರೋನಾವೈರಸ್ ಸಾಂಕ್ರಾಮಿಕವನ್ನು ನಿರ್ಮೂಲನ ಮಾಡುವುದಾಗಿ ಶುಕ್ರವಾರ ಹೇಳಿದ್ದಾರೆ- ಇದು 1918 ರ ಸ್ಪ್ಯಾನಿಶ್ ಫ್ಲೂಗಿಂತ ವೇಗವಾದ ಅವಧಿಯಾಗಿದೆ. ಈ ಸಾಂಕ್ರಾಮಿಕಕ್ಕೆ ಗುಣಕಾರಕ ಅಥವಾ ವ್ಯಾಕ್ಸಿನ್ (ಚುಚ್ಚುಮದ್ದು) ದೊರೆಯುವವರೆಗೆ, ಯಾವುದೂ ಸಾಮಾನ್ಯಸ್ಥಿತಿಗೆ ಮರಳುವುದಿಲ್ಲ.
Vijaya Karnataka Web tips to tackle your job and kids online class
ಕೆಲಸದ ಜೊತೆ ಮಗುವಿನ ಆನ್‌ಲೈನ್ ಕ್ಲಾಸ್ ನಿರ್ವಹಿಸುವುದು ಕಷ್ಟವಾಗುತ್ತಿದೆಯೇ?


​ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು

ಅನೇಕ ಭಾರತೀಯರು ನಿರ್ದಿಷ್ಟ ನಿರ್ಬಂಧನೆಗಳ ಅಡಿಯಲ್ಲಿ ಶಾಲೆಗಳನ್ನು ಮರುಆರಂಭಿಸಲು ಒಲವು ತೋರಿದ್ದರೂ, ಪೋಷಕರಿಗೆ ಈ ಸಾಂಕ್ರಾಮಿಕದ ನಡುವೆ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆನ್ನುವ ಚಿಂತೆ ಇದೆ. ಈ ಎಲ್ಲಾ ಅಂಶಗಳಿಂದ ಆನ್ ಲೈನ್ ತರಗತಿಗಳನ್ನು ಕೋವಿಡ್ 19 ಗೆ ಸಮೂಹ ಚುಚ್ಚುಮದ್ದು ಲಭ್ಯವಾಗುವವರೆಗೆ ಮುಂದುವರೆಸಲು ಕಾರಣವಾಗಿದೆ. ಈ ಮಧ್ಯೆ, ಅನೇಕ ಪೋಷಕರು, ವಿಶೇಷವಾಗಿ ಉದ್ಯೋಗಸ್ಥ ಪೋಷಕರು, ತಮ್ಮ ಕೆಲಸ ಮತ್ತು ಮಕ್ಕಳ ಆನ್ ಲೈನ್ ತರಗತಿಗಳನ್ನು ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಹೊಸ ಸಂಗತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಹೇಗೆ ನಿರ್ವಹಿಸಬೇಕೆನ್ನುವ ಕೆಲವು ಸವಾಲುಗಳು ಇಲ್ಲಿವೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಇಲ್ಲಿದೆ ಎಂಟು ಟಿಪ್ಸ್

ನೀವೀಗ ನಿಮ್ಮ ಸ್ಮಾರ್ಟ್ ಫೋನನ್ನು ನಿಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು

ಆನ್ ಲೈನ್ ತರಗತಿಗಳಿಗೆ ಹಾಜರಾಗಲು, ಮಕ್ಕಳು ಇಂಟರ್ನೆಟ್ ಗೆ ಸಂಪರ್ಕವಾಗುವ ಸಾಧನ ಬಳಸಬೇಕಿದ್ದು, ಅದು ಲ್ಯಾಪ್ ಟಾಪ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ ಫೋನ್ ಆಗಿರಬಹುದು. ಮನೆಯಲ್ಲಿ ಹೆಚ್ಚುವರಿ ಸ್ಮಾರ್ಟ್ ಫೋನ್ ಇದ್ದಲ್ಲಿ, ನಿಮಗೆ ಈ ಸವಾಲುಗಳಿರುವುದಿಲ್ಲ. ಇಲ್ಲದಿದ್ದರೆ, ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ನಿಮ್ಮ ಮಗುವಿನೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ನಿಮ್ಮ ಕ್ಲಯಂಟ್ ಅಥವಾ ಮಾಲೀಕರು ನಿಮ್ಮ ಮಗು ಆನ್ ಲೈನ್ ತರಗತಿಯಲ್ಲಿರುವಾಗ ನಿಮಗೆ ಕರೆ ಮಾಡಬಹುದು. ಪ್ರತೀ ಬಾರಿ ಯಾರ ಅಗತ್ಯ ಮುಖ್ಯ ಎಂದು ನಿರ್ಧರಿಸಲು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ನಿಮ್ಮ ಮಗುವಿಗೆ ಹೊಸ ಸ್ಮಾರ್ಟ್ ಫೋನ್/ಲ್ಯಾಪ್ ಟಾಪ್ ಖರೀದಿಸುವುದು, ಆದರೆ ಎಲ್ಲಾ ಪೋಷಕರು ಹೀಗೆ ಮಾಡಲಾಗುವುದಿಲ್ಲ. ಈ ಸಮಸ್ಯೆಗೆ ಪರ್ಯಾಯ ಪರಿಹಾರವೆಂದರೆ ನಿಮ್ಮ ಉದ್ಯೋಗ ಸಂಬಂಧಿತ ಕರೆಗಳಿಗೆ ಕಡಿಮೆ ಬೆಲೆಯ ಫೋನ್ ಖರೀದಿಸುವುದು ಉತ್ತಮ. ನೀವು ಆನ್ ಲೈನ್ ತರಗತಿಯ ಸಮಯದಲ್ಲಿ ನಿಮ್ಮ ಮಗುವನ್ನು ಗಮನಿಸಲು ಹೆಚ್ಚಿನ ಸಮಯ ಇರುವುದಿಲ್ಲ.

​ಈ ಸಮಸ್ಯೆ ನಿರ್ವಹಿಸಲು ಸುಲಭ ವಿಧಾನ

ನಿಮ್ಮ ಮಗು ಆನ್ ಲೈನ್ ತರಗತಿಗಳ ಬಗ್ಗೆ ಗಮನ ನೀಡುತ್ತಿದೆಯೇ ಎಂದು ತಿಳಿಯುವ ಅಗತ್ಯವಿದೆ. ಪೋಷಕರಿಬ್ಬರೂ ಉದ್ಯೋಗಸ್ಥರಾದರೆ ಇದು ನಿಜಕ್ಕೂ ದೊಡ್ಡ ಸವಾಲು. ಈ ಸಮಸ್ಯೆಯನ್ನು ನಿರ್ವಹಿಸಲು ಉತ್ತಮ ವಿಧಾನವೆಂದರೆ ನಿಮ್ಮ ಮಗುವಿನ ಕಲಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಮಯ ಮಾಡಿಕೊಳ್ಳುವುದು. ನೀವು ಸಂಗಾತಿಯೊಂದಿಗೆ ನಿಮ್ಮ ಮಗುವಿನ ಆನ್ ಲೈನ್ ತರಗತಿಯ ಬಗ್ಗೆ ಇಬ್ಬರಲ್ಲಿ ಒಬ್ಬರು ಗಮನ ಹರಿಸುವ ಬಗ್ಗೆ ನಿರ್ಧರಿಸಬೇಕು. ನೀವು ನಿಮ್ಮ ಮಗುವಿನ ಆನ್ ಲೈನ್ ತರಗತಿಗೆ ಹೊಂದಿಸಲು ನಿಮ್ಮ ವರ್ಕ್ ಫ್ರಂ ಹೋಂ ಸಮಯವನ್ನು ಹೊಂದಿಸಿಕೊಳ್ಳುವ ಬಗ್ಗೆ ನಿಮ್ಮ ಉದ್ಯೋಗದಾತರೊಂದಿಗೆ ಮಾತನಾಡಿ ನಿರ್ಧರಿಸಬಹುದು.

ಮಗುವಿಗೆ ಸ್ನಾನ ಮಾಡಿಸುವಾಗ ಈ ಸಂಗತಿಗಳು ನೆನಪಿರಲಿ

​ದೀರ್ಘಕಾಲ ಸ್ಕ್ರೀನ್ ನೋಡುವುದು

ದೀರ್ಘಕಾಲ ಸ್ಕ್ರೀನ್ ನೋಡುವುದರಿಂದ ನಿಮ್ಮ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮಕ್ಕಳು, ವಿಶೇಷವಾಗಿ ಚಿಕ್ಕ ಮಕ್ಕಳು, ತರಗತಿಗೆ ಬದಲಾಗಿ ಆನ್ ಲೈನ್ ನಲ್ಲಿ ಪಾಠ ಕೇಳುವಾಗ ಹೆಚ್ಚಿನ ಸಮಯ ಸ್ಕ್ರೀನ್ ನೋಡಲು ಗಮನ ಹರಿಸಬೇಕಾಗುತ್ತದೆ. ದೀರ್ಘಕಾಲ ಸ್ಕ್ರೀನ್ ನೋಡುವುದರಿಂದ, ಅದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳನ್ನು ಸರಿಪಡಿಸಲು, ಪೋಷಕರು ಶಿಕ್ಷಕರು ಅಥವಾ ಶಾಲಾ ಪ್ರಾಧಿಕಾರಗಳೊಂದಿಗೆ ಚರ್ಚಿಸಿ, ಮಕ್ಕಳಿಗೆ ಸ್ಕ್ರೀನ್ ಅಥವಾ ಸ್ಮಾರ್ಟ್ ಫೋನ್ ಅಗತ್ಯವಿಲ್ಲದ ಮನೆಯಾಧಾರಿತ ಚಟುವಟಿಕೆಗಳನ್ನು ನೀಡುವ ಬಗ್ಗೆ ನಿರ್ಧರಿಸಬಹುದು. ಪೋಷಕರು ಪಾಠಗಳನ್ನು ರೆಕಾರ್ಡ್ ಮಾಡುವುದರಿಂದ ಮಕ್ಕಳು ತಮ್ಮ ತರಗತಿಯ ಅವಧಿಯಲ್ಲಿ ಹೆಚ್ಚು ಗಮನ ಹರಿಸಲು ನೆರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ