ಆ್ಯಪ್ನಗರ

ಹೆರಿಗೆಯ ನಂತರ ಹೊಟ್ಟೆ ಬಿಗಿಯಾಗಿ ಕಟ್ಟುವುದು ಯಾಕೆ ಗೊತ್ತಾ?

ನೀವು ನಿಮ್ಮ ಮಗುವಿನ ಜನನಕ್ಕೆ ಮೊದಲಿನ ಆಕಾರ ಪಡೆಯಲು ಆರಂಭಿಸುವ ಮೊದಲು- ಅಥವಾ ನಿಮ್ಮ ಹಿಂದಿನ ದಿನಚರಿಗೆ ಮರಳಿದಾಗ ನಿಮ್ಮ ಬಗ್ಗೆ ಕಾಳಜಿ ಇರಲಿ.

Vijaya Karnataka Web 24 Aug 2020, 11:50 am
ನವಜಾತ ಶಿಶುವಿನ ಪರಿಮಳವನ್ನು ಅನುಭವಿಸಲು, ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳಲು, ಮತ್ತು ಇತರರು ನಿಮಗೆ ನೆರವಾಗಲು ಸ್ವಲ್ಪ ಸಮಯ ನೀಡಿ. ನೀವು ಹೆಚ್ಚು ವಿಶ್ರಾಂತಿ ಪಡೆದಷ್ಟೂ, ಮತ್ತು ಪ್ರಸವದ ನಂತರದ ಒಂದೆರಡು ವಾರ ನೀವು ವಿಶ್ರಾಂತಿ ಪಡೆಯುವುದು, ನಿಮಗೆ ಮುಂದಿನ ದಿನಗಳಲ್ಲಿ ಬೇಗ ಚೇತರಿಸಿಕೊಳ್ಳಲು ಮತ್ತು ಉತ್ತಮವಾಗಿರಲು ನೆರವಾಗುತ್ತದೆ.
Vijaya Karnataka Web what are the benefits of stomach binding after delivery
ಹೆರಿಗೆಯ ನಂತರ ಹೊಟ್ಟೆ ಬಿಗಿಯಾಗಿ ಕಟ್ಟುವುದು ಯಾಕೆ ಗೊತ್ತಾ?



​​ಹೊಟ್ಟೆ ಕಟ್ಟುವುದರ ಪ್ರಯೋಜನಗಳು

ಒಮ್ಮೆ ನೀವು ನಿಮ್ಮ ಕಾಲ ಮೇಲೆ ನಿಂತಾಗ , ನಿಮಗೆ ಹೊಟ್ಟೆ ಕಟ್ಟುವ ಅಗತ್ಯ ಬರಬಹುದು, ಇದು ಪ್ರಸವಾ ನಂತರ ನಿಮ್ಮ ಚೇತರಿಕೆ ಸುಲಭವಾಗಲು ಮತ್ತು ನಿಮ್ಮ ಶರೀರ ಬೇಗ ಗುಣವಾಗಲು ನೆರವಾಗಲು ಮಾಡಲಾದ ವಿನ್ಯಾಸವಾಗಿದೆ. ಅನೇಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಪ್ರಭಾವಿ ತಾಯಂದಿರು ತಮ್ಮ ಪ್ರಸವಾನಂತರದ ಶರೀರ ಆಕಾರವನ್ನು ಮರಳಿ ಪಡೆಯಲು ಹೀಗೆ ಮಾಡುತ್ತಾರೆ, ನಾವೂ ಸಹ ಈ ಬಗ್ಗೆ ಸ್ವಲ್ಪ ಆಳವಾಗಿ ಗಮನಿಸಿ, ಹೊಟ್ಟೆ ಕಟ್ಟುವುದರ ಪ್ರಯೋಜನಗಳನ್ನು ತಿಳಿಯೋಣ.

​ಹೊಟ್ಟೆ ಕಟ್ಟುವುದು ಹೇಗೆ ನೆರವಾಗುತ್ತದೆ

ಸಾಮಾಜಿಕ ಮಾಧ್ಯಮ ಹೊಟ್ಟೆ ಕಟ್ಟುವುದು ಹೊಸ ಚಿಕಿತ್ಸಾತ್ಮಕ ಆಯ್ಕೆಯೆಂದು ಪರಿಗಣಿಸುವಂತೆ ಮಾಡಿದೆ, ಆದರೆ ಇದು ಶತಮಾನಗಳಿಂದ ಇರುವ ಪದ್ಧತಿಯಾಗಿದೆ. ಚಿಕ್ಕದಾಗಿ ಹೇಳಬೇಕೆಂದರೆ, ಹೊಟ್ಟೆ ಕಟ್ಟುವುದು ನಿಮ್ಮ ಹೊಟ್ಟೆಯ ಸುತ್ತ ಬಟ್ಟೆ ಕಟ್ಟುವುದನ್ನು ಒಳಗೊಂಡಿದೆ. ಸಾಮಾನ್ಯವಾಗಿ ಬಟ್ಟೆಯನ್ನು ಬಿಗಿಯಾಗಿ ಹೊಟ್ಟೆಯ ಸುತ್ತ ಕಟ್ಟುವುದರಿಂದ ಅದು ನಿಮ್ಮ ಹೊಟ್ಟೆ ಸರಿಯಾದ ಸ್ಥಳದಲ್ಲಿರಲು ಆಧಾರ ನೀಡುತ್ತದೆ.

ಪ್ರಸವಾ ನಂತರ ನಿಮ್ಮ ಶರೀರ ಅನೇಕ ಬದಲಾವಣೆಗಳಿಗೆ ಒಡ್ಡಿಕೊಳ್ಳುವುದರಿಂದ ಇದು ಉಪಯುಕ್ತವಾಗಿದೆ, ಹಾಗೂ ನಿಮ್ಮ ಶರೀರ ಸರಿಯಾಗಿ ಗುಣವಾಗಲು ನೆರವಾಗುತ್ತದೆ. ಹಿಂದಿನ ತಲೆಮಾರಿನ ಜನ ಮಸ್ಲಿನ್ ಬಟ್ಟೆಯ ಮೇಲೆ ಅವಲಂಬಿತರಾಗಿದ್ದರೆ, ಇಂದು ಬಟ್ಟೆ ಕಟ್ಟುವುದು ಸಾಂಪ್ರದಾಯಿಕ ಬಟ್ಟೆಯಿಂದ ಅನೇಕ ವಿಧದ ಬಟ್ಟೆಗಳಿಂದ ತಯಾರಿಸಿದ ಪ್ರಸವಾನಂತರ ಬಟ್ಟೆ ಸುರುಳಿಗಳನ್ನು ಒಳಗೊಂಡಿದೆ.

​ಪ್ರಸವಾ ನಂತರ ಚೇತರಿಸಿಕೊಳ್ಳಲು ಹೊಟ್ಟೆ ಕಟ್ಟುವುದು ಏಕೆ ಮುಖ್ಯ

ನೀವು ಗರ್ಭಿಣಿಯಾಗಿರುವಾಗ, ನಿಮ್ಮ ಶರೀರ ಬೆಳೆಯುತ್ತದೆ ಮತ್ತು ನಿಮ್ಮ ಮಗುವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವಷ್ಟು ಹಿಗ್ಗುತ್ತದೆ. ಅಂಗಗಳು ತಮ್ಮ ಸಾಮಾನ್ಯ ಭಂಗಿಯಿಂದ ಬದಲಾಗುತ್ತದೆ, ಹೊಟ್ಟೆಯ ಸ್ನಾಯುಗಳು ಸಹ ಸ್ಥಳ ನೀಡಲು ಪ್ರತ್ಯೇಕವಾಗಿರುತ್ತವೆ. ಪ್ರಸವಾ ನಂತರ, ನಿಮ್ಮ ಶರೀರ ಆ ಸ್ನಾಯುಗಳನ್ನು ಮರುಸ್ಥಾಪಿಸಲು ಮತ್ತು ಅಂಗಗಳು ತಮ್ಮ ಮೂಲಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಇದನ್ನು ಸರಿಯಾಗಿ ಮಾಡಲು, ಉದರ ಮತ್ತು ಪೃಷ್ಠದ ಸುತ್ತ ಬರುವಂತೆ ನಿಮ್ಮ ಶ್ರೋಣಿಗೆ ಆಧಾರ ನೀಡಲು ಬಟ್ಟೆ ಕಟ್ಟಲಾಗುತ್ತದೆ. ಇದು ಸ್ನಾಯು ಮತ್ತು ಅವಯವಗಳನ್ನು ಮೆಲುವಾಗಿ ಒತ್ತಿ ಸೂಕ್ತ ಸ್ಥಾನಕ್ಕೆ ಮರಳಲು ನೆರವಾಗುತ್ತದೆ.

ಎದೆ ಹಾಲು ಮತ್ತು ಬಾಟಲಿಯ ಹಾಲು ಇವೆರಡರಲ್ಲಿ ಯಾವುದರ ಆಯ್ಕೆ ಉತ್ತಮ?

​ಹೊಟ್ಟೆಗೆ ಸುತ್ತುವುದರ ವಿಧಗಳು

ಹೊಟ್ಟೆಗೆ ಕಟ್ಟಲು ಅನೇಕ ವಿಧದ ಹೊಟ್ಟೆಗೆ ಸುತ್ತುವ ಬಟ್ಟೆಗಳು ಲಭ್ಯವಿದೆ- ನೀವು ಯಾವುದನ್ನು ಆಯ್ಕೆ ಮಾಡಬೇಕೆನ್ನುವುದು ನಿಮ್ಮ ವೈಯಕ್ತಿಕ ಆದ್ಯತೆಯಾಗಿದೆ. ಸಾಂಪ್ರದಾಯಿಕ ಸುತ್ತುವಿಕೆ ಒಂದು ಉದ್ದನೆಯ ಬಟ್ಟೆಯನ್ನು ಕೈಯಿಂದ ಸುರುಳಿ ಮಾಡಿ ಅದನ್ನು ನಿಮ್ಮ ಉದರ ಮತ್ತು ಪೃಷ್ಠದ ಸುತ್ತ ಬರುವಂತೆ ನಿಮ್ಮ ಎದೆಯ ಕೆಳಗಿನಿಂದ ಸುತ್ತಲಾಗುತ್ತದೆ. ಬೆಂಗ್ ಕುಂಗ್ ಹೊಟ್ಟೆ ಕಟ್ಟುವುದು ಮಲೇಷಿಯಾ ಮೂಲದ ಪ್ರಸಿದ್ಧ ವಿಧವಾಗಿದೆ. ಬೆಂಗ್ ಕುಂಗ್ ಹೊಟ್ಟೆ ಕಟ್ಟಲು, ನೀವು ಸಾಮಾನ್ಯವಾಗಿ 9 ಇಂಚು ಅಗಲದ ಮತ್ತು 16 ಮಾರು ಉದ್ದವಿರುವ ಬಟ್ಟೆ ಬಳಸಬೇಕು. ದಿನಕ್ಕೆ ಕನಿಷ್ಟ 12 ಗಂಟೆಗಳವರೆಗೆ ಇದನ್ನು ಸುತ್ತಬೇಕು, ಹಾಗೂ ಕನಿಷ್ಟ 30 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಇದನ್ನು ಸುತ್ತಬೇಕಾಗುತ್ತದೆ.

ಹೆರಿಗೆಯ ನಂತರ ಸೊಂಟ ನೋವು: ಕಾರಣಗಳು ಮತ್ತು ಪರಿಹಾರ ಕ್ರಮಗಳು.

​ಬಜೆಟ್‌ನಲ್ಲಿ ಲಭ್ಯವಾಗುತ್ತದೆ

ನೀವು ಶೀಘ್ರವಾದ ಮತ್ತು ಬಳಸಲು ಸುಲಭವಾದ ವಿಧಾನಕ್ಕೆ ಆದ್ಯತೆ ನೀಡಿದರೆ, ನೀವು ಮೊದಲೇ-ಸಿದ್ಧಪಡಿಸಲಾದ ಪ್ರಸವಾನಂತರದ ಸುರುಳಿಗಳನ್ನು ಆಯ್ಕೆ ಮಾಡಬಹುದು. ಈ ಆಯ್ಕೆಗಳೆಂದರೆ ಹೊಟ್ಟೆಗೆ ಸುತ್ತುವಷ್ಟು ಉದ್ದವಾದ ವಿಧದಲ್ಲಿ ಲಭ್ಯವಿದ್ದು, ಕೆಲವೊಮ್ಮೆ ವೆಲ್ಕ್ರೋ ಅಥವಾ ಹುಕ್ ಹೊಂದಿರುತ್ತದೆ ಮತ್ತು ಭದ್ರವಾಗಿ ಸುತ್ತಲು ಐ ಸ್ಟೈಲ್ ಕ್ಲೋಸರ್ ಹೊಂದಿರುತ್ತದೆ ಇದು ಯಾವುದೇ ಬಜೆಟ್ ಗೆ ಹೊಂದುವ ಬೆಲೆಯಲ್ಲಿ ಲಭ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ