ಆ್ಯಪ್ನಗರ

ಏನಿದು ಐವಿಎಫ್‌ ಚಿಕಿತ್ಸೆ? ಇದಕ್ಕೆ ಎಷ್ಟು ಖರ್ಚಾಗುತ್ತದೆ?

ಸಹಜವಾಗಿ ಗರ್ಭಧಾರಣೆಯಾಗದಿದ್ದಾಗ ಕೃತಕವಾಗಿ ಗರ್ಭಧಾರಣೆ ನಡೆಸುವ ಬಗ್ಗೆ ಕೇಳಿರುತ್ತೇವೆ. ಆದರೆ ಇದಕ್ಕೆ ದುಬಾರಿ ಖರ್ಚಾಗುತ್ತದೆ ಎಂಬ ಅನುಮಾನದಿಂದ ಹೆಚ್ಚಿನವರು ಈ ಚಿಕಿತ್ಸೆಗೆ ಮುಂದಾಗುತ್ತಿಲ್ಲ. ಐವಿಎಫ್‌ಗೆ ತಗಲುವ ನಿಖರ ಖರ್ಚು ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Vijaya Karnataka Web 26 Dec 2019, 5:23 pm
ಬೆಂಗಳೂರು: 'ನೋವಾ ಐವಿಎಫ್‌ ಫರ್ಟಿಲಿಟಿ'ಯ ಫರ್ಟಿಲಿಟಿ ಕನ್ಸಲ್ಟೆಂಟ್‌ ಡಾ. ಅಪೂರ್ವ ಅಮರ್‌ನಾಥ್ ಅವರು ಐವಿಎಫ್‌ ಚಿಕಿತ್ಸೆ ಬಗ್ಗೆ, ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ, ಎಷ್ಟನೇ ವಯಸ್ಸಿಗೆ ಮಕ್ಕಳು ಮಾಡಿಕೊಳ್ಳಬೇಕು ಎಂಬ ಬಗ್ಗೆ ಮುಕ್ತವಾಗಿ ಸಲಹೆಗಳನ್ನು ನೀಡಿದ್ದಾರೆ. ವಿಜಯ ಕರ್ನಾಟಕ ಕಚೇರಿಗೆ ಆಗಮಿಸಿದ್ದ ಡಾ ಅಪೂರ್ವ ವಿಕ ಫೇಸ್‌ಬುಕ್‌ ಲೈವ್‌ನಲ್ಲೂ ಕಮೆಂಟ್‌ಗಳ ಮೂಲಕ ಬಂದ ಪ್ರಶ್ನೆಗಳಿಗೂ ಉತ್ತರಿಸಿದರು.
Vijaya Karnataka Web Dr Apurva Amarnath


ಏನಿದು ಐವಿಎಫ್‌?
ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ ವಿಟ್ರೊ ಫರ್ಟಿಲೈಸೇಷನ್‌ (ಐವಿಎಫ್‌) ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರಾರ‍ಯಣು ತೆಗೆದು ಪ್ರಯೋಗಾಲಯದಲ್ಲಿಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ.

ಚಿಕಿತ್ಸೆ ತೀರಾ ದುಬಾರಿಯಲ್ಲ
ಸಾಮಾನ್ಯವಾಗಿ ಐಯುಐ ಮತ್ತು ಐವಿಎಫ್‌ ಚಿಕಿತ್ಸೆ ಮೂಲಕ ಮಕ್ಕಳನ್ನು ಮಾಡಿಕೊಳ್ಳಲು ತುಂಬಾ ದುಬಾರಿ ಹಣ ತೆರಬೇಕಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದರೆ ಆ ತಂತ್ರಜ್ಞಾನದ ಚಿಕಿತ್ಸೆ ತೀರಾ ದುಬಾರಿಯಲ್ಲ. ಉತ್ತಮ ಲ್ಯಾಬ್‌ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಸ್ವಲ್ಪ ಹೆಚ್ಚು ಹಣ ಖರ್ಚಾಗಲಿದೆ. ಅಗತ್ಯ ಪರೀಕ್ಷೆಗಳ ನಂತರ ಐಯುಐಗೆ ಸುಮಾರು 10 ಸಾವಿರ ಮತ್ತು ಐವಿಎಫ್‌ಗೆ ಸುಮಾರು 1.75 ರೂ. ವೆಚ್ಚ ತಗುಲಬಹುದು.

ಮಕ್ಕಳಿಲ್ಲವೆಂದು ಕೊರಗಬೇಡಿ, ಇದೆ ಪರಿಹಾರ: ದಂಪತಿಗಳ ದುಗುಡ ನಿವಾರಿಸಿದ ಡಾ. ಅಪೂರ್ವ

ಐವಿಎಫ್‌ ಮೂಲಕ ಮಕ್ಕಳನ್ನು ಮಾಡಿಕೊಂಡರೆ ಮುಂದೆ ತೊಂದರೆ ಆಗಲಿದೆಯೇ?
ಹಾಗೇನೂ ಇಲ್ಲ, ಅವೂ ಮಾಮೂಲಿ ಮಕ್ಕಳಂತೆ ಇರುತ್ತವೆ. ಅದರಲ್ಲಿಪತ್ನಿಯ ಅಂಡಾಣುವಿನಲ್ಲಿಪತಿಯ ವೀರಾರ‍ಯಣು ಸೇರಿಸಿ ಭ್ರೂಣ ಬೆಳೆಸುತ್ತೇವೆ. ಅಂಥ ವ್ಯತ್ಯಾಸವೇನೂ ಇಲ್ಲ. ಐವಿಎಫ್‌ ತಂತ್ರಜ್ಞಾನದ ಮೂಲಕ ಪಡೆಯುವ ಮಕ್ಕಳು ಮಾಮೂಲಿಯಂತೆ ಇರಲಿವೆ, ಅವರಿಗೆ ಭವಿಷ್ಯದಲ್ಲಿಯಾವುದೇ ಆರೋಗ್ಯ ಸಮಸ್ಯೆ ಆಗದು, ಅಡ್ಡ ಪರಿಣಾಮಗಳೇನೂ ಇರುವುದಿಲ್ಲ. ಆ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತಿರುತ್ತವೆ. ಯಾವುದೇ ನ್ಯೂನತೆ ಕಾಣುವುದಿಲ್ಲ.

ಶೇ.15: ಜಾಗತಿಕ ಮಟ್ಟದಲ್ಲಿ ಬಂಜೆತನ ಸಮಸ್ಯೆಯ ಸರಾಸರಿ ಪ್ರಮಾಣ.
ಶೇ.15-20: ಭಾರತದಲ್ಲಿರುವ ಬಂಜೆತನದ ಸರಾಸರಿ ಪ್ರಮಾಣ.
2.5 ಕೋಟಿ: ಸಂತಾಹೀನತೆ ಸಮಸ್ಯೆ ಎದುರಿಸುತ್ತಿರುವ ಭಾರತೀಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ