ಆ್ಯಪ್ನಗರ

ಪ್ರತಿಯೊಬ್ಬ ಗಂಡನಿಗೆ ಹೆಂಡತಿಯಿಂದ ಕೇಳಿ ಬರುವ ಇಂತಹ ಹೊಗಳಿಕೆಯ ಮಾತುಗಳು ತುಂಬಾ ಇಷ್ಟ!!

ಮದುವೆಯಾದ ಬಳಿಕ ಗಂಡ ಹೆಂಡತಿಯನ್ನು ಹೊಗಳುವುದು ಹೆಂಡತಿ ಗಂಡನನ್ನು ಹೊಗಳುವುದು ಸಾಮಾನ್ಯ. ಇಡೀ ಜೀವನ ಇದೇ ರೀತಿ ಇದ್ದರೆ ಅಂತಹ ಸಂಸಾರ ಸ್ವರ್ಗವೇ ಸರಿ

Vijaya Karnataka Web 6 Jan 2021, 11:30 am
ಇಂದು ಜಗತ್ತು ಹೇಗಿದೆ ಎಂದರೆ ತಾವು ಮಾಡಿದ ಪ್ರತೀ ಕೆಲಸಕ್ಕೆ ಪ್ರತಿಯೊಬ್ಬರು ಸಹ ಬೇರೆಯವರಿಂದ ಮೆಚ್ಚುಗೆಯನ್ನು ನಿರೀಕ್ಷೆ ಮಾಡುತ್ತಾರೆ. ಗಂಡ ಹೆಂಡತಿಯ ನಡುವೆ ಕೂಡ ಅಷ್ಟೇ. ಇಡೀ ದಿನ ಮನೆಯಲ್ಲಿದ್ದು ಮನೆಯ ಎಲ್ಲಾ ಜವಾಬ್ದಾರಿಗಳನ್ನು ಮತ್ತು ಕೆಲಸಗಳನ್ನು ವಹಿಸಿಕೊಂಡ ಹೆಂಡತಿ ತನ್ನ ಗಂಡ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಆಸೆ ಪಡುತ್ತಾಳೆ.
Vijaya Karnataka Web compliments men would love to hear from his wife
ಪ್ರತಿಯೊಬ್ಬ ಗಂಡನಿಗೆ ಹೆಂಡತಿಯಿಂದ ಕೇಳಿ ಬರುವ ಇಂತಹ ಹೊಗಳಿಕೆಯ ಮಾತುಗಳು ತುಂಬಾ ಇಷ್ಟ!!


ಅದೇ ರೀತಿ ಗಂಡ ಕೂಡ ಇಡೀ ದಿನ ಆಫೀಸ್ ಕೆಲಸದಲ್ಲಿ ದುಡಿದು ದಣಿವಾಗಿ ಬಂದ ನಂತರದಲ್ಲಿ ತನ್ನ ಹೆಂಡತಿ ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತ ತನಗೆ ಆರೈಕೆ ಮಾಡಬೇಕೆಂದು ಅಪೇಕ್ಷೆ ಪಡುವನು.

ಪರಿಸ್ಥಿತಿ ಹೀಗಿರಬೇಕಾದರೆ ಒಬ್ಬರ ಬಗ್ಗೆ ಒಬ್ಬರು ಕೇವಲ ಟೀಕೆಗಳನ್ನು ಮಾಡಿಕೊಳ್ಳುತ್ತಾ ಜೀವನ ಸಾಗಿಸಲು ಮುಂದಾದರೆ ಅದರಿಂದ ತೊಂದರೆಯೇ ಹೆಚ್ಚು. ಹಾಗಾಗಿ ಯಾವೆಲ್ಲಾ ಒಳ್ಳೆಯ ಮಾತುಗಳು ಗಂಡನಿಗೆ ಹೆಂಡತಿಯಿಂದ ಇಷ್ಟವಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ

​ನೀವು ನೋಡಲು ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದೀರಿ! ನೀವು ಹಾಕಿರುವ ಶರ್ಟ್ ನಿಮ್ಮ ಅಂದವನ್ನು ಹೆಚ್ಚು ಮಾಡುತ್ತಿದೆ!

  • ಪುರುಷರಿಗೆ ದೈಹಿಕ ಸದೃಢತೆ ಜೊತೆಗೆ ಬಾಹ್ಯ ಅಂದ ತುಂಬಾ ಮುಖ್ಯವಾಗುತ್ತದೆ. ಸ್ವಲ್ಪ ಮುತುವರ್ಜಿ ವಹಿಸಿ ತಮ್ಮ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಲು ಒಳ್ಳೆಯ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತಮ್ಮ ಸಂಗಾತಿಯ ಜೊತೆ ಮನೆಯಿಂದ ಎಲ್ಲಾದರೂ ಹೊರಹೋಗುವ ಪ್ಲಾನ್ ಇದ್ದಾಗ ಸಂಗಾತಿಯ ಮನಮುಟ್ಟುವಂತೆ ಸೌಂದರ್ಯವನ್ನು ಹೆಚ್ಚು ಮಾಡುವಂತಹ ಔಟ್ ಫಿಟ್ ಗಳನ್ನು ಧರಿಸಿದರೆ ಖಂಡಿತವಾಗಿ ನಿಮ್ಮ ಸಂಗಾತಿಯಿಂದ ನಿಮಗೆ ಒಳ್ಳೆಯ ಪ್ರಶಂಸೆ ಸಿಗುತ್ತದೆ.
  • ಅದರಲ್ಲೂ ರಾತ್ರಿಯ ನೈಟ್ ಔಟ್ ಡಿನ್ನರ್ ಗೆ ಸಂಗಾತಿಯ ಜೊತೆ ಹೋಗುವಾಗ ಅತ್ಯದ್ಭುತ ರೋಮ್ಯಾಂಟಿಕ್ ಡ್ರೆಸ್ ಮಾಡಿಕೊಂಡು ಹೊರಟರೆ ಅಂತಹ ರೋಮಾಂಚಕ ಕ್ಷಣ ಜೀವನದಲ್ಲಿ ಇನ್ನೆಂದು ಬರುವುದಿಲ್ಲ ಅನಿಸುತ್ತದೆ.

​ನೀವು ನನ್ನನ್ನು ನಗಿಸಲು ಪ್ರಯತ್ನಪಡುವುದು ನನಗೆ ತುಂಬಾ ಇಷ್ಟ

  • ಪ್ರಪಂಚದಲ್ಲಿ ಪ್ರತಿಯೊಬ್ಬರೂ ತಾವು ಖುಷಿಯಾಗಿರುವುದನ್ನು ಆಲೋಚನೆ ಮಾಡುತ್ತಾರೆ. ಮತ್ತೊಬ್ಬರನ್ನು ಖುಷಿಯಾಗಿರುವಂತೆ ನೋಡಿಕೊಳ್ಳುವುದು ತುಂಬಾ ಕಷ್ಟ. ಒಂದು ವೇಳೆ ನೀವು ನಿಮ್ಮ ಸಂಗಾತಿಯನ್ನು ಸದಾ ನಗುನಗುತ್ತಾ ಇರುವಂತೆ ನೋಡಿಕೊಂಡರೆ ನೀವು ಖಂಡಿತವಾಗಿ ಆಕೆಗೆ ಇಷ್ಟವಾಗುತ್ತೀರಿ.
  • ನಿಮ್ಮನ್ನು ಒಂದು ಕ್ಷಣವು ಬಿಟ್ಟಿರದ ಬಗೆಯ ಸಲುಗೆ ಆಕೆಗೆ ನಿಮ್ಮ ಮೇಲೆ ಬರುತ್ತದೆ. ಪ್ರತಿಕ್ಷಣವೂ ನಿಮ್ಮನ್ನು ಪ್ರೀತಿಸಬೇಕು ಎನ್ನುವ ಭಾವನೆ ಆಕೆಯಲ್ಲಿ ಚಿಗುರೊಡೆಯುತ್ತದೆ. ನಿಮ್ಮ ಬಗ್ಗೆ ನಿಮ್ಮ ಸಂಗಾತಿ ಹೊಗಳಿಕೆಯ ಮಾತುಗಳನ್ನು ಆಡಿದಾಗ ಖಂಡಿತವಾಗಿ ನಿಮಗೆ ಖುಷಿ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

​ನಿಮ್ಮ ಮೇಲೆ ನನಗೆ ನಂಬಿಕೆ ಇದೆ. ಈ ಕೆಲಸವನ್ನು ನೀವು ಖಂಡಿತವಾಗಿ ಮಾಡಬಹುದು.

  • ನೀವು ನಿಮ್ಮ ಸಂಗಾತಿಯನ್ನು ಹೆಚ್ಚು ಸಲುಗೆಯಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರೆ, ನಿಮ್ಮ ಬಗ್ಗೆ ಆಕೆಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಮತ್ತು ನಿಮ್ಮ ಮೇಲೆ ಅಪಾರವಾದ ನಂಬಿಕೆ ಹುಟ್ಟುತ್ತದೆ.
  • ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿ ನಿಮ್ಮ ಜೊತೆ ಸದಾ ನಿಲ್ಲಲು ಪ್ರಯತ್ನ ಪಡುತ್ತಾರೆ. ನೀವು ಮಾಡುವ ಯಾವುದೇ ಕಷ್ಟಕರ ಕೆಲಸವನ್ನು ಅತ್ಯಂತ ಗೌರವ ಭಾವನೆಯಿಂದ ನೋಡುತ್ತಾರೆ ಮತ್ತು ನಿಮ್ಮನ್ನು ಅಂತಹ ಕೆಲಸವನ್ನು ಮಾಡಿ ಮುಗಿಸಲು ಪ್ರೇರೇಪಣೆ ನೀಡುತ್ತಾರೆ. ನಿಮ್ಮ ಹೃದಯ ಮುಟ್ಟುವಂತೆ ಪ್ರೀತಿಯ ಮಾತುಗಳನ್ನು ಆಡಿ ಪ್ರತಿ ಹಂತದಲ್ಲೂ ನಿಮ್ಮ ಕೈ ಹಿಡಿದು ನಡೆಸುತ್ತಾರೆ.

ಗಂಡ ಹೆಂಡತಿಯ ನಡುವೆ ನಂಬಿಕೆ ಬಹಳ ಮುಖ್ಯ, ಅದನ್ನು ಹೀಗೆ ಉಳಿಸಿಕೊಳ್ಳಿ

​​ಈ ಕೆಲಸ ಮಾಡಲು ಧೈರ್ಯ ಬೇಕು. ಇದು ನಿಮ್ಮಲ್ಲಿದೆ ಎಂಬುದು ನನಗೆ ಗೊತ್ತು

  • ನಿಮ್ಮ ಸಂಗಾತಿ ನಿಮ್ಮಿಂದ ಬೇರೆ ಏನನ್ನು ನಿರೀಕ್ಷೆ ಮಾಡದೆ ತುಂಬು ಹೃದಯದಿಂದ ನೀವು ಕಷ್ಟಪಡುತ್ತಿರುವ ಕ್ಷಣಗಳಲ್ಲಿ ನಿಮ್ಮ ಜೊತೆ ನಿಲ್ಲಲು ಪ್ರಯತ್ನಪಟ್ಟರೆ ಅದರಲ್ಲಿ ಸಿಗುವ ಆನಂದ ನಿಮಗೆ ಬೇರೆಲ್ಲೂ ಸಿಗುವುದಿಲ್ಲ.
  • ಪ್ರತಿ ಹಂತದಲ್ಲೂ ನಿಮ್ಮ ಸಂಗಾತಿ ನಿಮ್ಮ ಜೊತೆ ಇರಬೇಕೆಂದು ನೀವು ಆಸೆ ಪಟ್ಟಂತೆ ಅವರು ನಡೆದುಕೊಳ್ಳುತ್ತಾರೆ. ಇದರಿಂದ ಎಂತಹ ಕಷ್ಟಕರ ಕೆಲಸವನ್ನು ನೀವು ಬಿಡಲು ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಸಿಗುವ ಒಳ್ಳೆಯ ಪ್ರೇರಣೆಯಿಂದ ನಿಮ್ಮ ದಾರಿ ಸುಲಭವಾಗುತ್ತದೆ.

​ಈ ಅಡುಗೆ ಚೆನ್ನಾಗಿದೆ. ನಿಮ್ಮ ಕೌಶಲ್ಯ ಅಚ್ಚರಿ ಮೂಡಿಸುತ್ತದೆ

  • ಸಾಮಾನ್ಯವಾಗಿ ಒಂದು ಮನೆಯಲ್ಲಿ ಗಂಡ ದುಡಿಯುತ್ತಾನೆ. ಹೆಂಡತಿ ಮನೆ ಕೆಲಸಗಳನ್ನು ನಿರ್ವಹಣೆ ಮಾಡಿಕೊಂಡು ಅಡುಗೆ ಮಾಡುತ್ತಾಳೆ.
  • ಆದರೆ ಅಪರೂಪಕ್ಕೆ ಒಮ್ಮೆ ಗಂಡನಾದವನು ಅಡುಗೆಮನೆಗೆ ಪ್ರವೇಶ ಮಾಡಿ ತನ್ನ ಕೈಚಳಕವನ್ನು ತೋರಿಸಿದಾಗ ಹೆಂಡತಿಯಾದವಳು ಖುಷಿ ಪಟ್ಟು ಅಡುಗೆಯ ಸ್ವಾದವನ್ನು ಇಷ್ಟ ಪಟ್ಟು ಹೊಗಳಿದರೆ ಗಂಡನಿಗೆ ಅದಕ್ಕಿಂತ ಖುಷಿ ಬೇರೊಂದಿಲ್ಲ.
  • ಪ್ರತಿಯೊಬ್ಬ ಪುರುಷ ಕೂಡ ಅಡುಗೆಯಲ್ಲಿ ನೈಪುಣ್ಯತೆ ಹೊಂದಿರುವ ತನ್ನ ಹೆಂಡತಿಯ ಬಳಿ ತನ್ನ ಅಡುಗೆಯ ವಿಚಾರದಲ್ಲಿ ಹೊಗಳಿಕೆಯ ಮಾತುಗಳನ್ನು ಕೇಳಬೇಕು ಎಂದು ಆಸೆ ಪಡುತ್ತಾನೆ. ಒಂದು ವೇಳೆ ತನ್ನ ಅಡುಗೆಗೆ ತನ್ನ ಹೆಂಡತಿಯಿಂದ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾದರೆ ಗಂಡನ ಖುಷಿಗೆ ಪಾರವೇ ಇರುವುದಿಲ್ಲ.

ಗಂಡ-ಹೆಂಡತಿ ಜೊತೆಯಾಗಿ ಅಡುಗೆ ಮಾಡಿದರೆ ಅನ್ಯೋನ್ಯತೆ ಹೆಚ್ಚುತ್ತವೆ!

Read in English: Compliments men would love to hear more often

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ