ಆ್ಯಪ್ನಗರ

ಗಟ್ಸ್‌ ಬೈಯಿಂಗ್‌ ಎಂಬ ಪ್ರೇಮ ಪರೀಕ್ಷೆ

ಪ್ರೀತಿಯನ್ನು ಪರೀಕ್ಷಿಸಲು ದಾರಿ ಹಲವು. ಸಾರ್ವಜನಿಕವಾಗಿ ತನ್ನ ಪ್ರೇಮಿ ಖಾಸಗಿಯಾಗಿ ಗುರುತಿಸಬೇಕು ಎನ್ನುವುದರ ಇರೋದು ಏನು?

Vijaya Karnataka 12 Dec 2018, 5:00 am
ಸೋಷಿಯಲ್‌ ಮೀಡಿಯಾದಲ್ಲಿ ಆಗುವ ಪೋಸ್ಟ್‌ಗಳ ಹಿಂದೆ ನಿಗದಿತ ಉದ್ದೇಶ ಇರಬಹುದು ಅಥವಾ ಇಲ್ಲದೆಯೂ ಇರಬಹುದು. ಆದರೆ ಆಗಷ್ಟೆ ಪ್ರೀತಿಯಲ್ಲಿ ಬಿದ್ದವರು ಮಾತ್ರ ತಮ್ಮ ಪ್ರೇಮಿಯನ್ನು ಸೆಳೆಯಲಿಕ್ಕಾಗಿಯೇ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡುತ್ತಾರಂತೆ.
Vijaya Karnataka Web gatsbying is the latest dating trend
ಗಟ್ಸ್‌ ಬೈಯಿಂಗ್‌ ಎಂಬ ಪ್ರೇಮ ಪರೀಕ್ಷೆ


ತಮ್ಮ ಪೋಸ್ಟ್‌ಗಳಿಗೆ ಅಥವಾ ಪೋಟೋಗಳನ್ನು ಖಾಸಗಿಯಾಗಿ ಕಳುಹಿಸಬಹುದಾದರೂ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದಾಗ ಅಂದರೆ ಸಾರ್ವಜನಿಕವಾಗಿ ಹಂಚಿಕೊಂಡಾಗ ತನ್ನ ಸಂಗಾತಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲವೇ ಇಲ್ಲಿ ಪ್ರಮುಖವಾಗುತ್ತದೆಯಂತೆ. ಇದು ಗಟ್ಸ್‌ ಬೈಯಿಂಗ್‌ ಡೇಟಿಂಗ್‌ ಎಂದೆನಿಸಿಕೊಳ್ಳುತ್ತದೆಯಂತೆ. ಇದೊಂದು ರೀತಿಯ ಪ್ರೀತಿಯ ಪರೀಕ್ಷಿಸುವ ವಿಧಾನ ಎಂದು ಕರೆಯಲಾಗುತ್ತದೆ. ತಮ್ಮ ಪ್ರೇಮಿಗೆ ತಮ್ಮ ಮೇಲೆ ಎಷ್ಟು ಪ್ರೀತಿ ಇದೆ ಎಂದು ಪರೋಕ್ಷ ವಾಗಿ ತಿಳಿದುಕೊಳ್ಳುವ ವಿಧಾನ.

ಏನಿದು?

ಸಾರ್ವಜನಿಕವಾಗಿ ಗುರುತಿಸಿಕೊಂಡರೂ ಸಾವಿರಾರು ಜನರ ನಡುವೆ ತಮ್ಮನ್ನು ಖಾಸಗಿಯಾಗಿ ಗುರುತಿಸಬೇಕು ಎನ್ನುವ ಉದ್ದೇಶ ಪ್ರೇಮಿಗಳ ಹಿಂದಿರುತ್ತದೆ. ಅಷ್ಟೇ ಅಲ್ಲ, ಪೋಸ್ಟ್‌ ಮಾಡಿದ ಮೇಲೆ ತನ್ನ ಸಂಗಾತಿ ಆ ಫೋಟೋ ನೋಡಿರಬಹುದಾ ಎಂಬ ಕುತೂಹಲ, ಕಾಯುವಿಕೆ ಅಲ್ಲಿ ಶುರುವಾಗುತ್ತದೆ. ತಮ್ಮ ಪ್ರೇಮಿ ತಾವಾಗಿಯೇ ಗಮನಿಸಲಿ ಎಂಬ ಆಸೆ. ಆತ ಅಥವಾ ಆಕೆ ಸದಾ ತನ್ನ ಚಟುವಟಿಕೆ ಗಮನಿಸುತ್ತಿರಲಿ ಎಂಬ ಬಯಕೆ.

ಕುತೂಹಲಕ್ಕಾಗಿ

ಸಂಗಾತಿಗೆ ತನ್ನ ಮೇಲೆ ಎಷ್ಟು ಕುತೂಹಲ, ನಿರೀಕ್ಷೆಗಳಿವೆ ಎಂದು ತಿಳಿಯುವ ಉದ್ದೇಶ ಕೂಡ ಇಲ್ಲಿರಬಹುದು. ಹಾಗಾಗಿ ಸಾಮಾಜಿಕವಾಗಿ ತಮ್ಮ ಫೋಟೋ ಪೋಸ್ಟ್‌ ಮಾಡಿ ಆ ವಿಶೇಷ ವ್ಯಕ್ತಿಯ ಪ್ರತಿಕ್ರಿಯೆಗಾಗಿ ಕಾಯುತ್ತಾರೆ. ತಮ್ಮನ್ನು ಅವರು ನಿಜವಾಗಿ ಪ್ರೀತಿಸುವವರಾಗಿದ್ದರೆ ಆ ಫೋಟೋ ನೋಡಿ ಲೈಕ್‌ ಮಾಡುತ್ತಾರೆ, ಒಂದೊಮ್ಮೆ ಫೋಟೋ ನೋಡದಿದ್ದರೆ ಅವರು ತಮ್ಮ ಪ್ರೀತಿಗೆ ಅರ್ಹರಲ್ಲ ಎಂದೂ ಸಹ ತಿಳಿಯಲಾಗುತ್ತದೆ. ಹಾಗಾಗಿ ಇದನ್ನು ಪ್ರೀತಿಯ ಒಂದು ಪರೀಕ್ಷೆ ಅಂತಲೂ ಕರೆಯಬಹುದು. ಏನೇ ಆದರೂ ಈ ಪರೀಕ್ಷೆಯಲ್ಲಿ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ