ಆ್ಯಪ್ನಗರ

ಡಿಜಿಟಲ್‌ ಮೀಡಿಯಾದಲ್ಲಿ ಹಳೆ ಸಂಬಂಧದ ಡಿಲೀಟ್

ಬೇಡದ ಸಂಬಂಧವನ್ನು ಬ್ರೇಕ್‌ಅಪ್‌ ಆ್ಯಪ್‌ ಮೂಲಕವೇ ಮುಗಿಸಬಹುದು.

Vijaya Karnataka 19 Dec 2018, 9:30 am
ಬೇಡದ ಸಂಬಂಧವನ್ನು ಬ್ರೇಕ್‌ಅಪ್‌ ಆ್ಯಪ್‌ ಮೂಲಕವೇ ಮುಗಿಸಬಹುದು. ಆದರೆ ಪ್ರೇಮ ಸಂಬಂಧಕ್ಕೆ ಅಂಟಿದ ಪ್ರೀತಿಯನ್ನು ಮನಸ್ಸಿನಲ್ಲಷ್ಟೇ ಅಲ್ಲ, ಡಿಜಿಟಲ್‌ ಮೀಡಿಯಾದಲ್ಲೂ ಉಳಿದು ಹೋಗುವ ಕುರುಹುಗಳನ್ನು ಕೂಡ ಅಳುಹಿಸಿ ಹಾಕಬೇಕು. ಇಲ್ಲವಾದರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ.
Vijaya Karnataka Web how to erase memory of ex forever
ಡಿಜಿಟಲ್‌ ಮೀಡಿಯಾದಲ್ಲಿ ಹಳೆ ಸಂಬಂಧದ ಡಿಲೀಟ್


ಎಲ್ಲವೂ ಚೆನ್ನಾಗಿತ್ತು ಅನ್ನುವಾಗ ಎಕ್ಸ್‌ಚೇಂಜ್‌ ಆದ ಪ್ರೀತಿಯ ಸಂದೇಶ, ಗುಪ್ತವಾಗಿಡಬೇಕಿದ್ದ ಬ್ಯಾಂಕ್‌ ಅಕೌಂಟ್‌, ಖಾಸಗಿ ಫೋಟೋ, ಮೇಲ್‌ ಪಾಸ್‌ವರ್ಡ್‌ ಎಲ್ಲವೂ
ಒಂದೇ ಬಾರಿಗೆ ಎಲ್ಲಾ ಪಸ್‌ವರ್ಡ್‌ ಬದಲಿಸಿಕೊಳ್ಳಬಹುದು. ಎರೆಸ್‌ ಯುವರ್‌ ಎಕ್ಸ್‌ ಆ್ಯಪ್‌ನ ಸಹಾಯದಿಂದ ನೀವು ನಿಮ್ಮ ಫೋನ್‌ನಲ್ಲಿ ಮೊಬೈಲ್‌ ನಂಬರ್‌ ಅಳಸಿ ಹಾಕಬಹುದು. ಬ್ಲಾಕ್‌ ಯುವರ್‌ ಎಕ್ಸ್‌.

ಇದು ಪ್ಲಗ್‌ ಇನ್‌ ರೂಪದಲ್ಲಿ ಕಾರ‍್ಯ ನಿರ್ವಹಿಸುತ್ತದೆ. ಸಾಮಾಜಿಕ ತಾಣ, ಬ್ಲಾಗ್‌ ಯಾವುದೇ ಅಂತರ್ಜಾಲ ಸಂಪರ್ಕಿತವಾಗಿರುವ ನಿಮ್ಮ ಹೆಸರು ಮತ್ತು ಯುಆರ್‌ಎಲ್‌ ಲಿಂಕ್‌ ಅನ್ನು ಹುಡುಕಿದರೂ ಸಿಗುವುದಿಲ್ಲ. ಎಕ್ಸ್‌ ಲವರ್‌ ಬ್ಲಾಕರ್‌ ಮತ್ತೆ ಎಕ್ಸ್‌ಗೆ ಕರೆ ಮಾಡದಂತೆ ಇದು ತಪ್ಪಿಸುತ್ತದೆ. ಕಿಲ್‌ಲವ್‌, ಡ್ರಂಕ್‌ಡಯಲ್‌ ಸೇರಿದಂತೆ ಇನ್ನೂ ಹಲವಾರು ಬ್ರೇಕ್‌ಅಪ್‌ ಆ್ಯಪ್‌ಗಳು ನಿಮ್ಮ ಖಾಸಗಿತನ ಕಾಪಾಡುತ್ತವೆ. ಆದರೆ ತಂತ್ರಜ್ಞಾನ ಎಂದಾಗ ಅದರ ಉಪಯೋಗದಷ್ಟೆ ದುರುಪಯೋಗ ಕೂಡ ಇರುತ್ತದೆ. ಕೆಲವು ಆ್ಯಪ್‌ಗಳು ನಿಮ್ಮ ಖಾಸಗಿತನವನ್ನು ಕದಿಯಬಹುದು. ಆದ್ದರಿಂದ ತಂತ್ರಜ್ಞಾನವನ್ನು ಬಳಸುವಾಗ ಎಚ್ಚರವಹಿಸಿ. ಬ್ರೇಕ್‌ಅಪ್‌ ನಂತರ ಸಾಮಾಜಿಕ ತಾಣಗಳಲ್ಲಿ ಅವರೊಂದಿಗಿನ ಒಡನಾಟವಿರುವ ಫೋಟೋಗಳನ್ನು ತೆಗೆದು ಹಾಕಿ. ತೀರ ಸಹ್ಯವಲ್ಲ ಅಂದರೆ ಬ್ಲಾಕಿಂಗ್‌ ಆಪ್ಷನ್‌ ಪ್ರಯೋಜನ ಪಡೆಯಿರಿ.

ಬ್ರೇಕ್‌ಅಪ್‌ ನಂತರ ಮನಸ್ಸು ನೊಂದಿರುವುದರಿಂದ ಸಾಮಾಜಿಕ ತಾಣಗಳಿಂದ ಸ್ವಲ್ಪ ಸಮಯ ದೂರ ಇರಿ. ಏಕೆಂದರೆ ಇನ್ಯಾರೋ ಸಂಗಾತಿಗಳಿಬ್ಬರ ಇಂಟಿಮೇಟ್‌ ಫೋಟೋಗಳನ್ನು ನೋಡಿದಾಗ ನಿಮಗೆ ಹಳೆಯ ನೆನಪುಗಳು ಮರುಕಳಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ