ಆ್ಯಪ್ನಗರ

ಪ್ರತಿ ತಿಂಗಳು ಹಣ ಉಳಿತಾಯ ಮಾಡುವ ಅದ್ಭುತ ಟಿಪ್ಸ್ ಇಲ್ಲಿವೆ ನೋಡಿ…

ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದು ತುಂಬಾ ಮುಖ್ಯ. ಇಲ್ಲಿವೆ ಹಣ ಉಳಿತಾಯ ಮಾಡುವ ಟಿಪ್ಸ್. ಮುಂದೆ ಓದಿ.

Vijaya Karnataka Web 22 Jan 2022, 3:25 pm
ಹಣ ಉಳಿತಾಯ ಮಾಡುವುದು ನಮ್ಮ ಭವಿಷ್ಯಕ್ಕಾಗಿ ಅಲ್ಲವೇ? ಹೀಗೆ ಕೂಡಿಟ್ಟ ಹಣವು ಒಂದಲ್ಲ ಒಂದು ದಿನ ಉಪಯೋಗಕ್ಕೆ ಬರುತ್ತದೆ. ಬರುವ ಹಣವನ್ನು ಹೇಗೆ ವೆಚ್ಚ ಮಾಡಬೇಕು? ಎಂದು ಯೋಚಿಸುವುದಕ್ಕಿಂತ, ಹೇಗೆ ಉಳಿಸಬೇಕು ಎಂದು ಯೋಚಿಸುವವನು ಬುದ್ದಿವಂತ.
Vijaya Karnataka Web how to save money every month in kannada
ಪ್ರತಿ ತಿಂಗಳು ಹಣ ಉಳಿತಾಯ ಮಾಡುವ ಅದ್ಭುತ ಟಿಪ್ಸ್ ಇಲ್ಲಿವೆ ನೋಡಿ…


ನಾವು ಮಾಡುವ ಸಣ್ಣ ಸಣ್ಣ ಬದಲಾವಣೆಗಳು ಹಣಕಾಸನ್ನು ಅತಿ ಎಚ್ಚರಿಕೆಯಿಂದ ಸಂಗ್ರಹಿಸಬಹುದು. ನಿಮ್ಮ ಪ್ರತಿ ತಿಂಗಳ ಸಂಬಳದಲ್ಲಿ ಸಾಕಷ್ಟು ಹಣವನ್ನು ನೀವು ಉಳಿಸಬಹುದು.

ಹಾಗಾದರೆ ಯಾವುದು ಆ ಟಿಪ್ಸ್ ಅಂತ ಕೇಳ್ತಾ ಇದ್ದೀರಾ? ಮುಂದೆ ಓದಿ…

​೧. ಚಂದಾದಾರಿಕೆಗಳನ್ನು ರದ್ದು ಮಾಡಿ

ನೀವು ಪಾವತಿ ಮಾಡಿ ಬಳಸದೇ ಇರುವ ಅನೇಕ ಅಪ್ಲಿಕೇಶನ್‌ಗಳನ್ನು ರದ್ದುಗೊಳಿಸಿ. ಬಹುತೇಕರು ಪ್ರತಿಷ್ಟೆಗೆ ಅಪ್ಲಿಕೇಶನ್‌ಗಳನ್ನು, ನಿಯತಕಾಲಿಕೆಗಳು ಮತ್ತು ಅಪರೂಪವಾಗಿ ಬಳಸುವುದಕ್ಕೆ ಚಂದಾದಾರರಾಗುತ್ತಾರೆ. ಇದು ನಿಮ್ಮ ಮಾಸಿಕ ಸಂಬಳದ ಮೇಲೆ ಪರಿಣಾಮ ಬೀರುತ್ತದೆ. ನೀವು ಬಳಸುವ ವಸ್ತು ಅಥವಾ ಅಪ್ಲಿಕೇಶನ್‌ಗಳನ್ನು ಮಾತ್ರ ಇಟ್ಟುಕೊಂಡು ಬೇರೆಲ್ಲಾ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿ.

ಇವೇ ನೋಡಿ ಸಣ್ಣ-ಸಣ್ಣ ಸಂಗತಿಗಳು, ಸುಖಿ ಸಂಸಾರದ ಸೀಕ್ರೆಟ್ಸ್!

​೨. ದಿನಸಿ ಖರೀದಿ

ನೀವು ದಿನಸಿ ಖರೀದಿ ಮಾಡುವ ಸಮಯದಲ್ಲಿ ಯಾವುದರ ಅಗತ್ಯವಿದೆಯೋ ಅವುಗಳನ್ನು ಮಾತ್ರ ಖರೀದಿಸಿ. ಮುಖ್ಯವಾಗಿ ರಿಯಾಯಿತಿ ದರದಲ್ಲಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಿ. ಬಳಸದೇ ಇರುವ ವಸ್ತುಗಳನ್ನು ಎಂದಿಗೂ ಖರೀದಿ ಮಾಡಬೇಡಿ. ಈ ಅಭ್ಯಾಸವು ನಿಮ್ಮ ಬಹಳಷ್ಟು ಹಣವನ್ನು ಉಳಿತಾಯ ಮಾಡುತ್ತದೆ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಡೆದರೆ, ಅದುವೇ ಸುಖ ಸಂಸಾರ!

​೩. ಹೂಡಿಕೆ ಮಾಡಿ

ನೀವು ಉಳಿತಾಯ ಮಾಡುತ್ತಿರುವ ಹಣವು ದ್ವಿಗುಣಗೊಳ್ಳಲು ಹೂಡಿಕೆ ಮಾಡುವುದು ಅತ್ಯುತ್ತಮವಾದ ಮಾರ್ಗವಾಗಿದೆ. ನಿಮ್ಮ ಹಣವನ್ನು ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡುವ ಮೊದಲು ಈಗಾಗಲೇ ಹೂಡಿಕೆ ಮಾಡಿರುವ ನಿಮ್ಮ ಸ್ನೇಹಿತರ ಸಲಹೆಯನ್ನು ಪಡೆಯಿರಿ. ಇದರಿಂದ ನೀವು ತ್ವರಿತವಾಗಿ ಪ್ರಗತಿಯನ್ನು ಹೊಂದುವಿರಿ.

ಹೆಂಡತಿ ಬಳಿ, ಆಕೆಯ ಗೆಳತಿಯರ ಬಗ್ಗೆ ಕೇಳಿದರೆ, ಸಿಟ್ಟು ಬರದೇ ಇರುತ್ತಾ?

​೪. ಹೊರಗೆ ತಿನ್ನುವುದನ್ನು ಕಡಿಮೆ ಮಾಡಿ

ನೀವು ಹೊರಗೆ ತಿನ್ನುವುದರಿಂದ ಅಥವಾ ಆರ್ಡರ್ ಮಾಡಿ ಆಹಾರ ತರಿಸುವುದರಿಂದ ನಿಮ್ಮ ಜೇಬಿಗೆ ಸಾಕಷ್ಟು ಕತ್ತರಿ ಬೀಳುತ್ತದೆ. ಮನೆಯಲ್ಲಿ ಮಾಡಿದ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡಿ. ಇದರಿಂದ ನಿಮ್ಮ ಆರೋಗ್ಯ ಹಾಗು ಹಣ ಉಳಿತಾಯವಾಗುತ್ತದೆ. ಪ್ರತಿನಿತ್ಯ ಹೊರಗಿನ ತಿಂಡಿಗಳಿಗೆ ಹಣ ವ್ಯಯಿಸುವ ಬದಲು ವಾರಕ್ಕೊಮ್ಮೆ ತಿನ್ನಿ. ತಾಜಾ ತರಕಾರಿಗಳು ಅಥವಾ ಹಣ್ಣುಗಳನ್ನು ಖರೀದಿ ಮಾಡಿ ಸ್ವತಃ ನೀವು ಆಹಾರ ತಯಾರು ಮಾಡಿ. ನಿಮ್ಮ ಕೈ ರುಚಿ ನೀವೆ ನೋಡಿ. ಇದರಿಂದ ಸಾಕಷ್ಟು ಹಣ ಉಳಿಸಬಹುದು.

ವಿವಾಹದ ಸಮಯದಲ್ಲಿ ಭಾರತೀಯ ವಧುವಿನ ಮನದಾಳದ ಗೊಂದಲಗಳಿವು...

​೫. ಪಿಗ್ಗಿ ಬ್ಯಾಂಕ್ ಖರೀದಿಸಿ

ನಿಮಗೆ ನೆನಪಿದೆಯೇ ಮಣ್ಣಿನಲ್ಲಿ ಮಾಡಿದ ಹುಂಡಿಯಲ್ಲಿ ಹಿರಿಯರು ನೀಡಿದ ಹಣವನ್ನು ಅದರಲ್ಲಿ ಶೇಖರಿಸುತ್ತಿದ್ದೆವು. ಇದು ಕೂಡ ನಿಮ್ಮ ಹಣವನ್ನು ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಮ್ಮ ಮಕ್ಕಳಿಗೆ ಹೇಳಿಕೊಡಿ. ಇದರಿಂದ ಅವರು ಕೂಡ ಭವಿಷ್ಯದಲ್ಲಿ ಹಣವನ್ನು ಹೇಗೆ ಉಳಿತಾಯ ಮಾಡಬೇಕು ಎಂಬುದನ್ನು ಚಿಕ್ಕ ವಯಸ್ಸಿನಿಂದಲೇ ಕಲಿಯುತ್ತಾರೆ.

ಯಶ್ ಹಾಗೂ ರಾಧಿಕಾ ಲವ್ ಸ್ಟೋರಿ: ಈ ಸೀಕ್ರೆಟ್ ನಿಮಗೆ ಗೊತ್ತಿರಲಿಕ್ಕಿಲ್ಲ!

​೬. ನಿಮ್ಮ ಖರ್ಚುಗಳನ್ನು ಹೀಗಿ ಮಾಡಿ

ನೀವು ಖರ್ಚು ಮಾಡಿದ ಪ್ರತಿಯೊಂದು ವಸ್ತುವಿನ ವೆಚ್ಚವನ್ನು ಒಂದು ಪುಸ್ತಕದಲ್ಲಿ ಬರೆದಿಡಿ. ನಮ್ಮ ಹಿರಿಯರು ತಾವು ಮಾಡುತ್ತಿದ್ದ ಖರ್ಚು ಮತ್ತು ಆದಾಯವನ್ನು ನಿರ್ವಹಿಸುತ್ತಿದ್ದ ಮಾರ್ಗವಿದು. ಹೀಗೆ ಮಾಡುವುದರಿಂದ ನೀವು ಬೇಕಾದದ್ದನ್ನು ಮಾತ್ರ ಖರೀದಿ ಮಾಡಲು ಇಷ್ಟ ಪಡುತ್ತೀರಿ. ಇದರಿಂದ ಸಾಕಷ್ಟು ಹಣವನ್ನು ನೀವು ಉಳಿಸಬಹುದು. ಅಲ್ಲದೆ, ಮುಂದಿನ ತಿಂಗಳ ಸಂಬಳದ ಸಮರ್ಪಕವಾದ ಯೋಜನೆಯನ್ನು ಕೂಡ ಮಾಡಬಹುದು.

2022ರಲ್ಲಿ ಸುಖ ಸಂಸಾರಕ್ಕೆ ಹಣಕಾಸು ಪ್ಲಾನಿಂಗ್ ಹೀಗಿರಲಿ…

​೭. ವಿದ್ಯುತ್ ಬಿಲ್

ಅನವಶ್ಯಕವಾಗಿ ವಿದ್ಯುತ್ ದೀಪಗಳನ್ನು ಹಚ್ಚುವುದರಿಂದ ಸಾಕಷ್ಟು ವಿದ್ಯುತ್ ಬಿಲ್ ಅನ್ನು ಪಾವತಿಸಬೇಕಾಗಬಹುದು. ಅನವಶ್ಯಕವಾಗಿ ವಿದ್ಯುತ್ ದೀಪಗಳನ್ನು ಆನ್ ಮಾಡುವುದು, ಹೊರಗೆ ಹೋಗುವ ಸಮಯದಲ್ಲಿ ಫ್ಯಾನ್ಸ್, ದೀಪಗಳನ್ನು ಆರಿಸಿ ಹೋಗುವುದನ್ನು ನೀವು ಮರೆಯಬಾರದು. ಇದರಿಂದ ಸಾಕಷ್ಟು ಹಣವನ್ನು ನೀವು ಉಳಿಸಬಹುದು.

2022ರಲ್ಲಿ ಯಶಸ್ಸಿನ ವೃತ್ತಿ ಜೀವನಕ್ಕಾಗಿ ಇಲ್ಲಿವೆ ತಜ್ಞರ ಮಹತ್ವಪೂರ್ಣ 5 ಸಲಹೆಗಳು..!

​೮. ಜಿಮ್

ಜಿಮ್‌ಗೆ ಹೋಗಿ ಹಣವನ್ನು ವ್ಯಯಿಸುವ ಬದಲು ಮನೆಯಲ್ಲಿ ವ್ಯಾಯಾಮ ಮಾಡಿ. ಮನೆಯಲ್ಲಿನ ಕೆಲವು ಸಲಕರಣೆಗಳು ನಿಮ್ಮ ವ್ಯಾಯಾಮಕ್ಕೆ ಸಹಾಯ ಮಾಡುತ್ತವೆ.

ಅಷ್ಟೇ ಅಲ್ಲ, ಅನವಶ್ಯಕವಾಗಿ ಶಾಪಿಂಗ್ ಎಂಬ ಹೆಸರಿನಿಂದ ಬಟ್ಟೆಗಳನ್ನು ಖರೀದಿ ಮಾಡಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಶಾಪಿಂಗ್ ಮಾಡಿ.

Read In English: 8 ideas to help you save money EVERY MONTH

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ