ಆ್ಯಪ್ನಗರ

ತಾಯಂದಿರ ದಿನಕ್ಕೆ ಶುಭ ಕೋರಲು ಸಂದೇಶಗಳು ಇಲ್ಲಿವೆ ನೋಡಿ

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ತಾಯಿಯ ಕೊಡುಗೆ ಮತ್ತು ಲೆಕ್ಕವಿಲ್ಲದಷ್ಟು ತ್ಯಾಗವಿದ್ದು, ಹೀಗಾಗಿ ನೀವು ನಿಮ್ಮ ತಾಯಿಯನ್ನು ಮುದ್ದಿಸುವ ಮೂಲಕ ಹಾಗೂ ಅವರ ಕೊಡುಗೆಯನ್ನು ಈ ದಿನವಾದರೂ ಒಪ್ಪಿಕೊಳ್ಳಿ.

TIMESOFINDIA.COM 12 May 2019, 7:53 am
ಇoದು ವಿಶ್ವ ತಾಯoದಿರ ದಿನ. ಅವರಿಗೆ ಪ್ರೀತಿ ಹಾಗೂ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇದು ಸರಿಯಾದ ಸಮಯ. ನಮ್ಮ ಜೀವನದಲ್ಲಿ ತಾಯಿಗಿರುವ ಮಹತ್ವ ಹಾಗೂ ಅವರು ನೀಡುವ ಬೆಂಬಲ ಊಹಿಸುವುದು ಸಾಧ್ಯವಿಲ್ಲ. ವಿಶ್ವಾಸಾರ್ಹ ಸಲಹೆಗಾರ್ತಿ ಮುಂತಾದ ಕಾರಣಗಳಿಗಾಗಿ ಆಕೆ ಕುಟುಂಬದ ರಾಕ್‌ಸ್ಟಾರ್‌ ಎನಿಸಿಕೊಂಡಿದ್ದಾರೆ.
Vijaya Karnataka Web 111


ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ತಾಯಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ತಾಯಿಯ ಕೊಡುಗೆ ಮತ್ತು ಲೆಕ್ಕವಿಲ್ಲದಷ್ಟು ತ್ಯಾಗವಿದ್ದು, ಹೀಗಾಗಿ ನೀವು ನಿಮ್ಮ ತಾಯಿಯನ್ನು ಮುದ್ದಿಸುವ ಮೂಲಕ ಹಾಗೂ ಅವರ ಕೊಡುಗೆಯನ್ನು ಈ ದಿನವಾದರೂ ಒಪ್ಪಿಕೊಳ್ಳಿ.

ಹೀಗಾಗಿ ಅಮ್ಮಂದಿರ ದಿನದ ಶುಭಾಶಯಗಳು, ಸಂದೇಶಗಳು, ಫೋಟೋಗಳು, ಎಸ್‌ಎಂಎಸ್‌, ಉಲ್ಲೇಖಗಳನ್ನು ಈ ಕೆಳಗೆ ನೋಡಿ.

1. ನಿಮ್ಮ ಪ್ರೀತಿ ಹಾಗೂ ತ್ಯಾಗಗಳಿಗೆ ಕೇವಲ ಧನ್ಯವಾದಗಳು ಎಂದು ಹೇಳುವುದು ತುಂಬಾ ಚಿಕ್ಕ ಪದ. ಹೀಗಾಗಿ ನಾನು ಕೇವಲ ಐ ಲವ್‌ ಯೂ ಅಮ್ಮ ಎಂದು ಹೇಳುತ್ತೇನೆ.

2. ದೇವರು ನಿನಗೆ ಕೊಟ್ಟ ಅತಿ ದೊಡ್ಡ ಕೊಡುಗೆ ನಾನು ಎಂದು ಹೇಳುತ್ತೀಯಾ. ಆದರೆ, ನನ್ನ ಜೀವನದಲ್ಲಿ ನೀವೇ ಅತಿ ಅದೃಷ್ಟವಂತ ವ್ಯಕ್ತಿ

3.ನಿನ್ನ ನಗು ಅತಿ ಒಳ್ಳೆಯ ವಸ್ತುವಾಗಿದ್ದು, ಅದು ನನ್ನ ಬೆಳಗ್ಗೆಯನ್ನು ಹೊಳಪಿಸುತ್ತದೆ ಹಾಗೂ ಹೊಸ ಉತ್ಸಾಹದೊಂದಿಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀನು ನನಗೆ ಹಾಗೂ ಕುಟುಂಬಕ್ಕೆ ಮಾಡಿರುವ ಎಲ್ಲದಕ್ಕೂ ನಾನು ಲವ್‌ ಯೂ ಅಮ್ಮ ಎಂದು ಹೇಳಲು ಬಯಸುತ್ತೇನೆ

4.ನೀನು ನನ್ನ ಕಡೆಗಿದ್ದರೆ ಜಗತ್ತಿನ ಎಲ್ಲ ಸಂಪತ್ತನ್ನು ನಾನು ಬಿಟ್ಟುಕೊಡಲು ರೆಡಿಯಾಗಿದ್ದೇನೆ. ಐ ಲವ್ ಯೂ ಅಮ್ಮ !

5. ನೀನು ದೇವರು ನೀಡಿದ ಅತಿ ವಿಶೇಷವಾದ ಉಡುಗೊರೆ. ತಾಯಂದಿರ ದಿನದ ಶುಭಾಶಯಗಳು ಅಮ್ಮ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ