ಆ್ಯಪ್ನಗರ

Real Story:ನನ್ನ ಸ್ನೇಹಿತನಿಗೆ ನನ್ನ ಹೆಂಡತಿಯತ್ತ ಆಕರ್ಷಣೆ ಹೆಚ್ಚಾಗಿದೆ ಅದಕ್ಕಾಗಿ ಎಕ್ಸ್‌ಚೇಂಜ್ ಪ್ಲಾನ್‌ನಲ್ಲಿದ್ದಾನೆ

ನನ್ನ ಪತ್ನಿಯತ್ತ ಆಕರ್ಷಿತನಾಗುತ್ತಿರುವ ನನ್ನ ಸ್ನೇಹಿತ ಹೆಂಡತಿಯರನ್ನು ಬದಲಾಯಿಸಿಕೊಳ್ಳುವ ಪ್ಲಾನ್‌ನಲ್ಲಿದ್ದಾನೆ. ಆದರೆ ನನಗೆ ಅದು ಇಷ್ಟವಿಲ್ಲ.

Produced byಕಿಶನ್ | Vijaya Karnataka Web 11 Sep 2022, 9:41 am
ಪ್ರಶ್ನೆ: ನಾನು ವಿವಾಹಿತ ವ್ಯಕ್ತಿ. ನನ್ನ ಮದುವೆಯಲ್ಲಿ ನಾನು ತುಂಬಾ ಖುಷಿಯಾಗಿದ್ದೇನೆ. ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಕೆಲವು ಸಮಯದಿಂದ ನಾನು ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ. ಅದೇನೆಂದರೆ ನನ್ನ ಬಾಲ್ಯದ ಸ್ನೇಹಿತ ನಮ್ಮ ಹೆಂಡತಿಯನ್ನು ಬದಲಾಯಿಸಲು ಯತ್ನಿಸುತ್ತಿದ್ದಾನೆ ಎಂದು ನನಗನಿಸುತ್ತಿದೆ. ನಾನು ನನ್ನ ಹೆಂಡತಿಯ ಜೊತೆ ವಾಸಿಸುವ ಸ್ಥಳದಲ್ಲೇ ಆತನೂ ತನ್ನ ಹೆಂಡತಿಯೊಂದಿಗೆ ನೆಲೆಸಿದ್ದಾನೆ. ನಾವು ಒಂದೇ ಕುಟುಂಬದಂತೆ ಇದ್ದೇವೆ.
Vijaya Karnataka Web my friend has a plan of wife swapping what should i do
Real Story:ನನ್ನ ಸ್ನೇಹಿತನಿಗೆ ನನ್ನ ಹೆಂಡತಿಯತ್ತ ಆಕರ್ಷಣೆ ಹೆಚ್ಚಾಗಿದೆ ಅದಕ್ಕಾಗಿ ಎಕ್ಸ್‌ಚೇಂಜ್ ಪ್ಲಾನ್‌ನಲ್ಲಿದ್ದಾನೆ


​ಒಂದೇ ಕುಟುಂಬದಂತೆ ಇದ್ದೇವೆ

ನಾವು ನಾಲ್ವರೂ ರಜಾದಿನಗಳನ್ನು ಒಟ್ಟಿಗೆ ಕಳೆಯುತ್ತೇವೆ. ಎಲ್ಲಾದರೂ ಪ್ರವಾಸಕ್ಕೆ ಹೋಗುವುದು, ವಾರಾಂತ್ಯಗಳನ್ನು ಒಟ್ಟಾಗಿಯೇ ಕಳೆಯುತ್ತೇವೆ. ನಮ್ಮಿಬ್ಬರ ಹೆಂಡತಿಯರೂ ಹಾಗೆಯೇ ಚೆನ್ನಾಗಿದ್ದಾರೆ. ಹಾಗಾಗಿ ಒಟ್ಟಿಗೆ ಸಮಯ ಕಳೆಯಲು ಇಷ್ಟಪಡುತ್ತೇವೆ.

ಇದನ್ನೂ ಓದಿ: Real Story:ನನ್ನ ತಂಗಿ ಅಮೇರಿಕಾದಿಂದ ಬಂದಾಗಿನಿಂದ ನನ್ನ ಪತಿಗೆ ಆಕೆಯ ಮೇಲೆ ಆಸಕ್ತಿ ಹೆಚ್ಚಾಗಿದೆ


​ಹೆಂಡತಿಯನ್ನು ವಿನಿಮಯ ಮಾಡುವ ಆಲೋಚನೆ

ನನ್ನ ಸ್ನೇಹಿತ ನನ್ನ ಹೆಂಡತಿಯ ಸಮೀಪ ಬರಲು ಯತ್ನಿಸುತ್ತಿದ್ದಾನೆ. ಪತ್ನಿಯನ್ನು ಅದಲು ಬದಲಾಯಿಸುವ ಯೋಚನೆ ಇದೆ ಎಂದು ನನಗನಿಸುತ್ತಿದೆ. ಆತನ ನಡವಳಿಕೆಯನ್ನು ಗಮನಿಸಿದಾಗ ವೈಫ್‌ ಸ್ವಾಪಿಂಗ್‌ ನಂತಹ ಹೊಲಸು ಆಲೋಚನೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗ ನಾನು ಏನು ಮಾಡಲಿ ಎಂದು ತಿಳಿಯುತ್ತಿಲ್ಲ.

​ತಜ್ಞರ ಉತ್ತರ

ಮುಂಬೈ ಮೂಲದ ತತ್ವಂಸಿ ಕೌನ್ಸೆಲಿಂಗ್ ಸೆಂಟರ್‌ನ ಸಂಸ್ಥಾಪಕಿ ಜಂಖಾನಾ ಜೋಶಿ ಹೇಳುವ ಪ್ರಕಾರ, ನಿಮ್ಮ ಆತ್ಮೀಯ ಸ್ನೇಹಿತ ನಿಮ್ಮ ಹೆಂಡತಿಯ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಎಂಬ ಭಾವನೆ ತುಂಬಾ ವಿಚಿತ್ರವಾಗಿದೆ. ನಿಮ್ಮ ಸ್ನೇಹಿತ ಕೆಲವು ಸಂದರ್ಭಗಳಲ್ಲಿ ತಮ್ಮ ಹೆಂಡತಿಯರನ್ನು ವಿನಿಮಯ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ ಎಂದು ನೀವು ಅರಿತುಕೊಂಡಿದ್ದರೆ, ನೀವು ಸ್ವಲ್ಪ ಜಾಗರೂಕರಾಗಿರಬೇಕು.

ಇದನ್ನೂ ಓದಿ: Real Story: ನನ್ನ ಪತಿಯ ಸಂಬಂಧಿ ನನ್ನ ಜೊತೆ ಫ್ಲರ್ಟ್ ಮಾಡುತ್ತಿದ್ದಾನೆ ಆದ್ರೆ ಇದು ಪತಿಗೆ ಅರ್ಥವಾಗ್ತಿಲ್ಲ


​ಲೈಂಗಿಕ ಸಂಬಂಧಕ್ಕಾಗಿ ಅದಲು ಬದಲು ಮಾಡುವುದು ತಪ್ಪು

ಲೈಂಗಿಕ ಸಂಬಂಧಕ್ಕಾಗಿ ತಮ್ಮ ತಮ್ಮ ಹೆಂಡತಿಯರನ್ನು ಅದಲು ಬದಲು ಮಾಡಿಕೊಳ್ಳುವುದು ತುಂಬಾ ತಪ್ಪು. ಇದರಿಂದಾಗಿ ಅನೇಕ ಸಂಬಂಧಗಳು ಸಹ ಪರಿಣಾಮ ಬೀರಬಹುದು.

​ಇದು ಭಾರತೀಯ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ

ನಮ್ಮ ಭಾರತೀಯ ಸಮಾಜದಲ್ಲಿ ವೈಫ್ ಸ್ವಾಪಿಂಗ್ ಇನ್ನೂ ಸ್ವೀಕಾರಾರ್ಹವಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಇದು ಪರಸ್ಪರ ಒಪ್ಪಿಗೆಯನ್ನು ಒಳಗೊಂಡಿರುತ್ತದೆಯೋ ಇಲ್ಲವೋ. ಬಲವಂತದ ಮೇರೆಗೆ ಮಾಡಿರುವ ಈ ಕೃತ್ಯ ಘೋರ ಅಪರಾಧ.

ಇದನ್ನೂ ಓದಿ: Real Story:ನನ್ನ ಮಾಜಿ ಪ್ರೇಯಸಿ ಈಗ ಮೂರು ಮಕ್ಕಳ ತಾಯಿ, ಮತ್ತೆ ನನ್ನ ಹಿಂದೆ ಬಿದ್ದಿದ್ದಾಳೆ ಏನ್ಮಾಡ್ಲಿ?


​ಒತ್ತಾಯಿಸುವವರ ವಿರುದ್ಧ ಪ್ರಕರಣ ದಾಖಲಾಗುತ್ತದೆ

ವಿವಾಹಿತ ಮಹಿಳೆಯನ್ನು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಸಂಬಂಧ ಹೊಂದುವಂತೆ ಒತ್ತಾಯಿಸುವ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 323-328, 376, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ಈ ಅಪರಾಧವೂ ಜಾಮೀನು ರಹಿತವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ನೇಹಿತ ಈ ವಿಷಯದ ಬಗ್ಗೆ ನಿಮ್ಮೊಂದಿಗೆ ಮಾತನಾಡಿದರೆ, ಅವನ ಪ್ರತಿಕ್ರಿಯೆಗೆ ಸ್ವಲ್ಪವೂ ಪ್ರತಿಕ್ರಿಯಿಸಬೇಡಿ ಎಂಬುದು ನನ್ನ ಸಲಹೆ.

​ವಿವಾಹೇತರ ಸಂಬಂಧಗಳಿಗೆ ಕಾರಣವಾಗಬಹುದು

ಹೆಚ್ಚಿನ ಪುರುಷರು ಇತರರ ಹೆಂಡತಿಯರತ್ತ ಆಕರ್ಷಿತರಾಗುವುದು, ಅವರ ಜೊತೆ ಸಂಬಂಧ ಹೊಂದಬೇಕೆಂಬ ಬಯಕೆ ಹೊಂದಿರುವುದು ಸಾಮಾನ್ಯವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಬಹಿರಂಗವಾಗಿ ಪತ್ನಿ ವಿನಿಮಯವನ್ನು ಯಾವುದೇ ರೂಪದಲ್ಲಿ ಸ್ವೀಕರಿಸಲಾಗುವುದಿಲ್ಲ. ಏಕೆಂದರೆ ಅಂತಹ ಆಸಕ್ತಿಯು ವಿವಾಹೇತರ ಸಂಬಂಧಗಳಿಗೆ ಕಾರಣವಾಗುತ್ತದೆ, ನಂತರ ದಂಪತಿಗಳ ಜೀವನವು ಬದಲಾಗುವುದು ನಿಶ್ಚಿತ.

ಇದನ್ನೂ ಓದಿ: Real Story: ಒಳ್ಳೆ ಗಂಡ ಇದ್ರೂ ನನ್ನ ಸ್ನೇಹಿತೆ ಬೇರೆ ಪುರುಷರ ಮೇಲೆ ಕಣ್ಣಾಕ್ತಿದ್ದಾಳೆ


​ಹೆಂಡತಿಯೊಂದಿಗೆ ಮಾತನಾಡಬೇಕು

ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹೆಂಡತಿಯೊಂದಿಗೆ ಈ ವಿಷಯದ ಬಗ್ಗೆ ಮಾತನಾಡಲು ನಾನು ನಿಮ್ಮನ್ನು ಕೇಳುತ್ತೇನೆ. ನಿಮ್ಮ ಸ್ನೇಹಿತರ ಮನಸ್ಸಿನಲ್ಲಿ ಅವರ ಬಗ್ಗೆ ಎಷ್ಟು ಕೆಟ್ಟ ಆಲೋಚನೆಗಳು ಓಡುತ್ತಿವೆ ಎಂದು ಅವರಿಗೆ ತಿಳಿಸಿ. ಏಕೆಂದರೆ ನಿಮ್ಮ ಹೆಂಡತಿಗೆ ಈ ವಿಷಯ ತಿಳಿದಾಗ, ಆಕೆ ಆತನಿಂದ ತನ್ನನ್ನು ತಾನು ರಕ್ಷಿಸಲು ಸಿದ್ಧಳಾಗುತ್ತಾಳೆ. ಎಚ್ಚರಿಕೆ ವಹಿಸುತ್ತಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ