ಆ್ಯಪ್ನಗರ

ಹೆತ್ತವರ ಹೆಚ್ಚು ಸಮಯ ಮಕ್ಕಳಿಗೇ ಇರಲಿ! ಏಕೆ ಗೊತ್ತೇ?

ಪೋಷಕರು ಮಕ್ಕಳಿಗೆ ಹೆಚ್ಚು ಸಮಯ ನೀಡುವುದರಿಂದ ಮಕ್ಕಳಲ್ಲಿನ ಗ್ರಹಿಕಾ ಶಕ್ತಿ ಹಾಗೂ ಸಂವಹನ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾಳೆ ಅಲ್ಲದೆ, ಶೈಕ್ಷಣಿಕವಾಗಿಯೂ ಹೆಚ್ಚು ಸಹಾಯ ಮಾಡುವುದರಿಂದ ಈ ಪರಿಣಾಮ ಬೀರುತ್ತದೆ​

Times Now 5 Feb 2019, 5:37 pm
[This story originally published in Times of India on Feb 05,2019]
Vijaya Karnataka Web parents


ವಾಷಿಂಗ್ಟನ್‌ ಡಿಸಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಸಂಶೋಧನೆಯೊಂದು ತಿಳಿಸಿದೆ.
ಮಕ್ಕಳ ವಿದ್ಯಾಭ್ಯಾಸ ಹಾಗೂ ಶೈಕ್ಷಣಿಕ ಸಾಧನೆಗಳಿಗೆ ಪೋಷಕರು ಸರಿಯಾಗಿ ಮಾರ್ಗದರ್ಶನ ನೀಡುವುದು ಅತಿ ಮುಖ್ಯವಾಗುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಅದರಲ್ಲೂ ಪೋಷಕರು ಮಕ್ಕಳಿಗೆ ಹೆಚ್ಚು ಸಮಯ ನೀಡುವುದರಿಂದ ಮಕ್ಕಳಲ್ಲಿನ ಗ್ರಹಿಕಾ ಶಕ್ತಿ ಹಾಗೂ ಸಂವಹನ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಇಸ್ರೇಲ್‌ನ ಹೆಬ್ರ್ಯು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಲಾಗಿದೆ. ಪಾಲಕರನ್ನು ಕಳೆದುಕೊಂಡ 18 ವರ್ಷದೊಳಗಿನ ಸುಮಾರು 22 ಸಾವಿರ ಮಕ್ಕಳಿಗೆ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆ ಕಾಲೇಜಿನಲ್ಲಿ ಸೇರ್ಪಡೆಗೊಳ್ಳಲು ಮಾಡಲಾಗುತ್ತದೆ. ಸುಮಾರು ಶೇ.57ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಕೇವಲ ಪೋಷಕರ ಆರ್ಥಿಕ ವಿಚಾರಗಳು ಮಾತ್ರ ಪಾಲನೆಯಾಗುವುದಿಲ್ಲ. ಅಲ್ಲದೆ ಸ್ಮಾರ್ಟ್‌ನೆಸ್‌ನಿಂದಲೂ ಶೈಕ್ಷಣಿಕವಾಗಿ ಉತ್ತಮವಾಗಲು ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.

ತಂದೆಯನ್ನು ಕಳೆದುಕೊಂಡ ಮಕ್ಕಳಿಗಿಂತ ತಾಯಿಯನ್ನು ಕಳೆದುಕೊಂಡ ಮಕ್ಕಳು ಶೈಕ್ಷಣಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾಳೆ ಅಲ್ಲದೆ, ಶೈಕ್ಷಣಿಕವಾಗಿಯೂ ಹೆಚ್ಚು ಸಹಾಯ ಮಾಡುವುದರಿಂದ ಈ ಪರಿಣಾಮ ಬೀರುತ್ತದೆ. ಒಂದು ವೇಳೆ ಮಗುವಿಗೆ ಮತ್ತೊಂದು ತಾಯಿ(ಮಲತಾಯಿ) ಸಿಕ್ಕರೆ ಈ ಅಭಾವವನ್ನು ಸ್ವಲ್ಪ ಮಟ್ಟಿಗೆ ನೀಗಿಸಲು ಸಾಧ್ಯವಿದೆ ಎಂದು ತಿಳಿದು ಬಂದಿದೆ. ತಾಯಿ ಶಿಕ್ಷಿತಳಾದಲ್ಲಿ ಮಕ್ಕಳ ವಿಧ್ಯಾಭ್ಯಾಸದ ಗುಣಮಟ್ಟವೂ ಚೆನ್ನಾಗಿರುತ್ತದೆ. ಒಂದು ವೇಳೆ ಹೆಣ್ಣು ಮಕ್ಕಳು ಪೋಷಕರಿಂದ ದೂರವಾದಲ್ಲಿ ಶೈಕ್ಷಣಿಕವಾಗಿ ಗಂಡು ಮಕ್ಕಳಿಂದ ಹೆಚ್ಚು ಕುಗ್ಗುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ